Connect with us

LATEST NEWS

ಪೋಷಕರೇ ನಿಮ್ಮ ಪುಟ್ಟ ಮಕ್ಕಳ ಬಗ್ಗೆ ಇರಲಿ ಎಚ್ಚರ..! ಶಿವಮೊಗ್ಗದಲ್ಲಿ ವಿಳ್ಯದೆಲೆ ತಟ್ಟೆಯಲ್ಲಿದ್ದ ಅಡಿಕೆ ನುಂಗಿ ಮಗು ಸಾವು…!!

Published

on

ಪೋಷಕರೇ ನಿಮ್ಮ ಪುಟ್ಟ ಮಕ್ಕಳ ಬಗ್ಗೆ ಇರಲಿ ಎಚ್ಚರ..! ಶಿವಮೊಗ್ಗದಲ್ಲಿ ವಿಳ್ಯದೆಲೆ ತಟ್ಟೆಯಲ್ಲಿದ್ದ ಅಡಿಕೆ ನುಂಗಿ ಮಗು ಸಾವು…!!

ಶಿವಮೊಗ್ಗ: ಎಳೆಯ ಮಕ್ಕಳನ್ನು ಎಷ್ಟು ಜಾಗೃತೆ ಮಾಡಿದರೂ ಸಾಕಾಗುವುದಿಲ್ಲ ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆಯಾಗಿದೆ. ಈ ಅಘಾತಕಾರಿ ದಾರುಣ ಸುದ್ದಿ ಪೋಷಕರಿಗೆ ಒಂದು ಎಚ್ಚರಿಕೆಯ ಕರೆ ಘಂಟೆಯಾಗಿದೆ.

ವೀಳ್ಯದೆಲೆ ತಟ್ಟೆಯಲ್ಲಿದ್ದ ಅಡಿಕೆ ನುಂಗಿ ಒಂದು ವರ್ಷದ ಮಗು ಸಾವನಪ್ಪಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹೆದೂರಿನ ಅರ್ಚನಾ ಸಂದೇಶ್ ದಂಪತಿಗಳ ಪುತ್ರ ಒಂದು ವರ್ಷದ ಮಗು ಶ್ರೀಹಾನ್ ಎಂದು ಗುರುತಿಸಲಾಗಿದೆ.

ಸಂದೇಶ್ ದೂರದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ಸಂದರ್ಭ ಮಗು ಮತ್ತು ತಾಯಿಯನ್ನು ಹೆದೂರಿನಲ್ಲಿ ಬಿಟ್ಟಿದ್ದರು. ನಿನ್ನೆಯಷ್ಟೇ ಸಂದೇಶ್ ಫೋನ್ ಮಾಡಿ ಬೆಂಗಳೂರಿಗೆ ಕದುಕೊಂಡು ಹೋಗುತ್ತೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ವಿಧಿಯಾಟ ಮಗು ಅಡಿಕೆ ನುಂಗಿ ಇಂದು ಶನಿವಾರ ಅಸುನಿಗಿದೆ. ಈ ಮಗು ಇತ್ತೀಚೆಗೆ ಆರೋಗ್ಯ ಇಲಾಖೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯವಂತ ಮಗು ಎಂದು ಪ್ರಥಮ ಬಹುಮಾನದ ಜೊತೆಗೆ ನಗದು ಪುರಸ್ಕಾರ ಕೂಡ ಗಳಿಸಿತ್ತು ಎನ್ನಲಾಗಿದೆ.
ಬೆಳಿಗ್ಗೆ ಮನೆಯಲ್ಲಿ ಆಟವಾಡುತ್ತಿದ್ದ ಶ್ರೀಹಾನ್ ಎಲೆ ಅಡಿಕೆ ತಟ್ಟೆಯಲ್ಲಿದ್ ಅಡಿಕೆಯನ್ನು ನುಂಗಿದ್ದಾನೆ.

ಕೂಡಲೇ ಉಸಿರುಕಟ್ಟಿದಂತಾಗಿ ಮುಗು ಒದ್ದಾಡಿದೆ. ಈ ಹಿನ್ನಲೆ ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಓಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನಪ್ಪಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

Mangaluru: ಕಲುಷಿತವಾದ ಫಲ್ಗುಣಿ ನದಿಯ ಒಡಲು-ಕಂಪೆನಿ ವಿರುದ್ಧ ಗ್ರಾಮಸ್ಥರ ಆಕ್ರೋಶ..!

Published

on

ಮಂಗಳೂರು: ಜೋಕಟ್ಟೆ, ಬೈಕಂಪಾಡಿ ಕೈಗಾರಿಕಾ ವಲಯದ ತ್ಯಾಜ್ಯಗಳು ಪಲ್ಗುಣಿ ನದಿ ಸೇರುತ್ತಿದ್ದು, ಫಲ್ಗುಣಿ ನದಿ ಸಂಪೂರ್ಣ ಕಲುಷಿತವಾಗಿದೆ. ಒಂದು ವರ್ಷದ ಹಿಂದೆ ರುಜಿಗೋಲ್ಡ್‌, ಪತಾಂಜಲಿ ಕಂಪೆನಿಗಳ ತ್ಯಾಜ್ಯ ನದಿ ಸೇರುತ್ತಿದ್ದ ವಿಚಾರ ಪತ್ತೆ ಹಚ್ಚಿದ್ದ ತೋಕುರು ಗ್ರಾಮಸ್ಥರು ಕಂಪೆನಿ ಮುಂದೆ ಪ್ರತಿಭಟನೆ ನಡೆಸಿದ್ದರು.

ಈ ಬಗ್ಗೆ ಮಾದ್ಯಮಗಳ ವರದಿ ಬಳಿಕ ಹಸಿರು ಪೀಠ ಸುಮೋಟೊ ಕೇಸ್ ದಾಖಲಿಸಿ ತನಿಕೆಗೆ ಆದೇಶ ನೀಡಿತ್ತು. ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿ ಕಂಪೆನಿಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದ ಬಳಿಕ ತ್ಯಾಜ ನದಿಗೆ ಬಿಡೋದು ನಿಲ್ಲಿಸಲಾಗಿತ್ತು. ಆದರೆ ಇದೀಗ ಮತ್ತೆ ಈ ಭಾಗದ ಬಹುತೇಕ ಕಂಪೆನಿಗಳು ನದಿಗೆ ತ್ಯಾಜ್ಯ ನೀರು ಬಿಡಲು ಆರಂಭಿಸಿದ್ದು, ಫಲ್ಗುಣಿ ನದಿ ಸಂಪೂರ್ಣ ಕಲುಷಿತಗೊಂಡಿದೆ.

ಕಂಪೆನಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡದೇ ನದಿಗೆ ಬಿಡುತ್ತಿರುವ ಕಾರಣ ಪರಿಸರದಲ್ಲಿ ಗಬ್ಬು ವಾಸನೆ ಹರಡಿದ್ದು, ಈ ಪರಿಸರದಲ್ಲಿ ಜನರು ಓಡಾಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಆಕ್ರೊಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಜಿಲ್ಲಾಧಿಕಾರಿಗಳೂ ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಇಲ್ಲಿನ ಕಂಪೆನಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸೋದಾಗಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದಾರೆ.

 

Continue Reading

LATEST NEWS

ಅಜ್ಜಿಯ ಮೇಲೆ ಬಸ್ ಚಲಾಯಿಸಿದ ಚಾಲಕ- ಅಜ್ಜಿಯ ಕಾಲು ಕಟ್…!!

Published

on

ಶಿವಮೊಗ್ಗ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರ ಮೇಲೆ ಕೆಎಸ್ ಆರ್ ಟಿಸಿ ಬಸ್ ಹರಿದ ಘಟನೆ ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದಿದೆ.


ಅಪಘಾತದಲ್ಲಿ ಹಳೆ ಭದ್ರಾವತಿ ಬಳೆಗಾರ ಬೀದಿ ನಿವಾಸಿಯಾದ ಚಂದ್ರಾಬಾಯಿ (52) ಎಂಬುವವರು ಬಲಗಾಲು ಕಳೆದುಕೊಂಡಿದ್ದಾರೆ. ಈ ಘಟನೆ ಫೆ.27ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೃದ್ಧೆಯೂ ಬಸ್​​ ಬರುವುದನ್ನು ಗಮನಿಸದೇ ನಡೆದುಕೊಂಡು ಹೋಗುತ್ತಿದ್ದರು ಈ ವೇಳೆ ಬಸ್​​ ಏಕಾಏಕಿ ವೃದ್ಧೆಯ ಮೇಲೆ ಹರಿದು ಬಿಟ್ಟಿದೆ. ಪರಿಣಾಮ ವೃದ್ಧೆಯು ತನ್ನ ಬಲಗಾಲನ್ನು ಕಳೆದುಕೊಂಡಿದ್ದಾರೆ.

Continue Reading

DAKSHINA KANNADA

Ullala : ಪುರಾಣ ಪ್ರಸಿದ್ಧ ಕೊಂಡಾಣ ಕ್ಷೇತ್ರದ ನಿರ್ಮಾಣ ಹಂತದ ನೂತನ ಭಂಡಾರ ಮನೆ ಧ್ವಂಸ!

Published

on

ಉಳ್ಳಾಲ : ಪುರಾಣ ಪ್ರಸಿದ್ಧ ಕೋಟೆಕಾರು ಗ್ರಾಮದ ಕಾರಣೀಕ ಕೊಂಡಾಣ ಕ್ಷೇತ್ರದಲ್ಲಿ ಶ್ರೀ ಪಿಲಿಚಾಮುಂಡಿ, ಬಂಟ, ವೈದ್ಯನಾಥ ಪರಿವಾರ ದೈವಗಳಿಗೆ ಕ್ಷೇತ್ರಕ್ಕೆ ತಾಗಿಕೊಂಡೇ ನೂತನ ಭಂಡಾರಮನೆ ನಿರ್ಮಾಣಗೊಳ್ಳುತ್ತಿದ್ದು, ನಿರ್ಮಾಣ ಹಂತದ ಕಟ್ಟಡವನ್ನು ಕಿಡಿಗೇಡಿಗಳು ಭಾನುವಾರ ಬೆಳಿಗ್ಗೆ ಜೆಸಿಬಿಯಲ್ಲಿ ನೆಲಸಮಗೊಳಿಸಿ ವಿಕೃತಿ ಮೆರೆದಿದ್ದಾರೆ.


ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಪುರಾಣದ ಭಂಡಾರಮನೆಯು ಖಾಸಗಿ ಗುತ್ತಿನ ಮನೆ ಒಡೆತನದಲ್ಲಿದ್ದು, ಅದರಲ್ಲಿ ಕ್ಷೇತ್ರದ ದೈವಗಳ ಹದಿನೈದು ಕೋಟಿಗೂ ಮಿಕ್ಕಿ ಬೆಲೆ ಬಾಳುವ ಒಡವೆಗಳಿದ್ದು, ಭಂಡಾರಮನೆಯನ್ನು ಮುಜರಾಯಿ ಇಲಾಖೆಗೆ ಸೇರಿಸಲು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಅವರು ಶತಾಯಗತಾಯ ಪ್ರಯತ್ನಿಸಿದ್ದರು. ಆದರೆ, ಇದಕ್ಕೆ ಭಂಡಾರಮನೆಯವರು ಸಮ್ಮತಿ ನೀಡಿರಲಿಲ್ಲ. ಆ ಹಿನ್ನಲೆ ಕ್ಷೇತ್ರದ ದೈವಗಳಿಗೆ ಬೇರೆಯೇ ಭಂಡಾರಮನೆ ನಿರ್ಮಾಣವಾಗಬೇಕೆಂದು‌ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಕಾರಣ, ಕ್ಷೇತ್ರಕ್ಕೆ ತಾಗಿಕೊಂಡ ಜಮೀನನ್ನು ವ್ಯವಸ್ಥಾಪನಾ ಸಮಿತಿಯವರು ಖರೀದಿಸಿದ್ದರು.

ಆ ಜಾಗದಲ್ಲಿ ಕಳೆದ ಜನವರಿ 8 ರಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ತಾಮಾರ್ ಮುಂದಾಳತ್ವದಲ್ಲಿ ನೂತನ ಭಂಡಾರ ಮನೆಗೆ ಶಿಲಾನ್ಯಾಸ ಮಾಡಲಾಗಿತ್ತು. ದಾನಿಗಳ ದೇಣಿಗೆಯಿಂದ ಭಂಡಾರ ಮನೆಯ ಎಂಭತ್ತು ಶೇಕಡಾ ಕಾಮಗಾರಿ ಸಂಪೂರ್ಣಗೊಂಡಿತ್ತು. ಈಗಿನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಗಿದಿದ್ದು, ಸಮಿತಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ತಾಮಾರ್ ಅವರು ಕಳೆದ ಎರಡು ದಿವಸಗಳ ಹಿಂದಷ್ಟೇ ಅಧಿಕಾರವನ್ನು ಇಲಾಖೆಗೆ ಹಸ್ತಾಂತರಿಸಿದ್ದರು.

ಕೃಷ್ಣ ಶೆಟ್ಟಿ ಅಧ್ಯಕ್ಷ ಸ್ಥಾನದಿಂದ ವಿಮುಕ್ತರಾಗುತ್ತಿದ್ದಂತೆ, ಭಾನುವಾರ ಬೆಳಿಗ್ಗೆ ಕಿಡಿಗೇಡಿಗಳು ಜೆಸಿಬಿಯಿಂದ ಏಕಾ ಏಕಿ ನಿರ್ಮಾಣ ಹಂತದ ಭಂಡಾರ ಮನೆಯನ್ನ ನೆಲಸಮ ಮಾಡಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ , ಎಸಿಪಿ ಧನ್ಯಾ ನಾಯಕ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಮತ್ತು ಸ್ಥಳೀಯರು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮುತ್ತಣ್ಣ ಶೆಟ್ಟಿಯೇ ಕಾರಣ : ಆರೋಪ
ಕ್ಷೇತ್ರದ ಭಕ್ತರಾದ ಕೆ.ಪಿ ಸುರೇಶ್ ಮಾತನಾಡಿ, ಭಂಡಾರ ಮನೆ ಒಡೆಯಲು ಗುರಿಕಾರರಾದ ಮುತ್ತಣ್ಣ ಶೆಟ್ಟಿಯೇ ಕಾರಣ ಎಂದು ಎಲ್ಲರಿಗೂ ತಿಳಿದಿದೆ. ಇಲ್ಲಿ ಕಾನೂನು ಪ್ರಕಾರವಾಗಿಯೇ ಭಂಡಾರ ಮನೆ ನಿರ್ಮಿಸಲಾಗಿತ್ತು, ಅದಕ್ಕೆ ಸದಾ ವಿರುದ್ಧವಾಗಿ ಕೋರ್ಟ್ ನಲ್ಲಿ ಧಾವೆ ಹೂಡುತ್ತಿದ್ದು, ಮುತ್ತಣ್ಣ ಶೆಟ್ಟಿಯೇ ಆಗಿದ್ದು ಅವರ ಹಿಂಬಾಲಕರೇ ಈ ಕೃತ್ಯ ಎಸಗಿರಬೇಕೆಂದು ಆರೋಪಿಸಿದ್ದಾರೆ.

ಮೂವರು ವಶಕ್ಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ, ಮುತ್ತಣ್ಣ ಶೆಟ್ಟಿ, ಧೀರಜ್, ಶಿವರಾಜ್ ಎಂಬ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Continue Reading

LATEST NEWS

Trending