Connect with us

    LATEST NEWS

    ಒಂದು ಕೋಟಿ ಮನೆ.. Audi ಕಾರ್..ಅಬ್ಬಬ್ಬಾ..!! ಶ್ರೀಮಂತ ಕಳ್ಳನ ಬಂಧಿಸಿ ಬೆಚ್ಚಿ ಬಿದ್ದ ಪೊಲೀಸರು..!

    Published

    on

    ಮುಂಬೈ: ಒಂದು ಲಕ್ಷ ರೂಪಾಯಿ ಕಳ್ಳತನ ಮಾಡಿದ್ದಾನೆಂದು ಕಳ್ಳನನ್ನು ವಿಚಾರಣೆ ಮಾಡುತ್ತಿದ್ದ ವೇಳೆ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಅದಕ್ಕೆ ಕಾರಣ ಈತನ ಲಕ್ಷುರಿ ಲೈಫ್ ಸ್ಟೈಲ್. ಅಲ್ಲದೇ ವಿಚಾರಣೆ ವೇಳೆ 19 ದರೋಡೆ ಕೇಸ್‌ಗಳಲ್ಲಿ ಭಾಗಿಯಾಗಿವುದಾಗಿ ಒಪ್ಪಿಕೊಂಡಿದ್ದಾನೆ. ತನಿಖೆ ವೇಳೆ ಈತ ಮುಂಬೈನಲ್ಲಿ ಒಂದು ಕೋಟಿಗೂ ಹೆಚ್ಚು ಮೌಲ್ಯದ ಮನೆಯನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಒಂದು ಆಡಿ ಕಾರನ್ನೂ ಕೂಡಾ ಈತ ಹೊಂದಿದ್ದಾನೆ.

    ಎಲ್ಲೆಲ್ಲಿ ರಾಬರಿ ಗೊತ್ತಾ?

    ಪೊಲೀಸ್ ತನಿಖೆ ವೇಳೆ ಈತ ರಾಬರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.  ಪೋರಬಂದರ್,  ಸೆಲ್ವಾಲ್ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಂದು ಬಾರಿ, ವಲ್ಸದ್‌ನಲ್ಲಿ ಮೂರು ಬಾರಿ, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶದಲ್ಲಿ ತಲಾ ಎರಡು ಬಾರಿ ರಾಬರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ  ಆರಕ್ಕೂ ಹೆಚ್ಚು ಕಡೆಗಳಲ್ಲಿ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಲಂಚ ಪಡೆದಿರುವ ಬಗ್ಗೆಯೂ ಬಾಯಿ ಬಿಟ್ಟಿದ್ದಾನೆ.

    ರಾಜ್ಯವೇ ಬೆಚ್ಚಿ ಬೀಳಿಸೋ ಸುದ್ದಿ ಕೊಟ್ಟ ದಿವ್ಯಾ ವಸಂತ

    ಈತನ ಕ್ರಿಮಿನಲ್ ಚಟುವಟಿಕೆಗಳು ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದ್ದು, ಈತ ಒಬ್ಬ ಶ್ರೀಮಂತ ಕಳ್ಳನೆಂದೇ ಹೇಳಬಹುದಾಗಿದೆ. ಹೆಸರು ಬದಲಾಯಿಸಿಕೊಂಡು ಓಡಾಡುತ್ತಿದ್ದ ಈತ ಓರ್ವ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ. ಇನ್ನು ಈತ ಓಡಾಡಲು ಬಸ್‌ಗಳನ್ನು ಬಳಸುತ್ತಿರಲಿಲ್ಲ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಫ್ಲೈಟ್‌ಗಳನ್ನು ಬುಕ್ ಮಾಡುತ್ತಿದ್ದ. ಸದಾ ಪಾರ್ಟಿಗಳಲ್ಲಿ ಎಂಜಾಯ್‌ ಮಾಡುತ್ತಿದ್ದ ಈತ ಮುಂಬೈನ ನೈಟ್‌ಕ್ಲಬ್, ಬಾರ್‌ಗಳಲ್ಲಿ ಪಾರ್ಟಿ ಡ್ಯಾನ್ಸ್ ಗಳಲ್ಲಿ ಭಾಗಿಯಾಗುತ್ತಿದ್ದ. ಇನ್ನು ಡ್ರಗ್ಸ್‌ ವ್ಯಸನಿಯಾಗಿದ್ದ ಈತ ಪ್ರತೀ ತಿಂಗಳಿಗೆ ಒಂದೂವರೆ ಲಕ್ಷ ಖರ್ಚು ಮಾಡುತ್ತಿದ್ದ ಎಂದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    LATEST NEWS

    ಟೀ ಕುಡಿದ್ರೆ ತಲೆನೋವು ನಿಜವಾಗ್ಲೂ ಕಮ್ಮಿ ಆಗುತ್ತಾ? ಚಹಾ ಪ್ರಿಯರೇ ನೀವು ಓದಲೇಬೇಕಾದ ಸ್ಟೋರಿ!

    Published

    on

    ಬೆಳಗ್ಗೆ ನಿದ್ರೆಯಿಂದ ಎದ್ದ ಕೂಡಲೇ ಹಲವರಿಗೆ ಟೀ ಬೇಕೆ ಬೇಕು. ಟೀ ಸೇವಿಸಿದ ಮೇಲೆಯೇ ಅವರ ದಿನಚರಿ ಮುಂದುವರೆಯುತ್ತದೆ. ಟೀ ಎಷ್ಟರ ಮಟ್ಟಿಗೆ ಹೆಸರು ಮಾಡಿದೆ ಎಂದರೆ ಪಾಶ್ಷಿಮಾತ್ಯ ದೇಶಗಳಲ್ಲೂ ಇದನ್ನು ತುಂಬಾ ಇಷ್ಟಪಡುವವರಿದ್ದಾರೆ. ಟೀ ಕುಡಿಯದೇ ಇದ್ದರೆ ತುಂಬಾ ತಲೆಕೆಡಿಸಿಕೊಳ್ಳುವ ಜನರೂ ಇದ್ದಾರೆ. ಅದು ಏಕೆ ಗೊತ್ತಾ? ಇದಕ್ಕೆ ಏನಿರಬಹುದು ಕಾರಣ?

    ಯಾವಾಗ ಟೀ ಕುಡಿದರೆ ಉತ್ತಮ ಗೊತ್ತಾ? ಮನೆಯಲ್ಲಿ ಟೀ ಕುಡಿಯಲು ಸಾಧ್ಯವಾಗದಿದ್ದರೆ ಕೊನೆಗೆ ರಸ್ತೆ ಅಂಚಿನಲ್ಲಿರುವ ಚಿಕ್ಕ ಗೂಡಂಗಡಿಯಲ್ಲಿ ಟೀ ಕುಡಿದು ಹೋಗುವವರೂ ಇದ್ದಾರೆ. ಒಟ್ಟಿನಲ್ಲಿ ನಮಗೆ ಟೀ ಬೇಕು ಅಷ್ಟೆ. ಹಲವರು ದೈನಂದಿನ ಟೀ ಕಳೆದುಕೊಳ್ಳುವುದರಿಂದ ಮನಸ್ಸಿಗೆ ತುಂಬಾ ತೊಂದರೆಯಾಗುತ್ತೆ. ಮುಖ್ಯವಾದುದನ್ನು ಏನೂ ಬಿಟ್ಟಂತೆ ಅನುಭವವಾಗುತ್ತೆ ಎಂದು ಹೇಳುತ್ತಾರೆ. ಅಷ್ಟರಮಟ್ಟಿಗೆ ಟೀಗೆ ಜನ ಎಡಿಕ್ಟ್ ಆಗಿದ್ದಾರೆ.

    ಟೀ ಸೇವನೆಯಿಂದ ನಮ್ಮ ದೇಹಕ್ಕೆ ವಿವಿಧ ಪ್ರಯೋಜನಗಳು ಇದೆ ಹಾಗೆಯೇ ಕೆಲ ಸಮಸ್ಯೆಗಳು ಇದೆ. ಒಂದು ನಿಗದಿತ ಸಮಯದಲ್ಲಿ ಟೀ ಕುಡಿಯುವುದು ಉತ್ತಮ. ಫ್ರೀ ಇದ್ದಾಗಲೆಲ್ಲ ಟೀ ಕುಡಿದರೆ ನಿಮ್ಮ ಆರೋಗ್ಯ ಕೆಡುವುದು ಪಕ್ಕಾ.

    ಚಹಾ ಬಗ್ಗೆ ವೈದ್ಯರು ಹೇಳುವುದೇನು? ಇನ್ನು ಕೆಲ ನುರಿತ ವೈದ್ಯರು ಟೀ ಸೇವನೆಯಿಂದ ತಲೆ ನೋವು ಕಡಿಮೆ ಆಗಲ್ಲ ಎಂದು ವರದಿ ಮಾಡಿದ್ದಾರೆ. ಅತೀಯಾದ ಟೀ ಸೇವನೆ ಹಾನಿಕಾರಕ. ಟೀ ಸೇವಿಸುವುದರಿಂದ ತಲೆ ನೋವಿಗೆ ಸಂಬಂಧಿಸಿ ಯಾವ ಪರಿಣಾಮವೂ ಬೀರಲ್ಲ ಎಂದು ವೈದ್ಯರು ಹೇಳುತ್ತಾರೆ. ಟೀನಲ್ಲಿ ಹಲವು ವಿಧವಿದೆ. ಬ್ಲ್ಯಾಕ್ ಮತ್ತು ಗ್ರೀನ್ ಟೀ ಕುಡಿದರೆ ಹಲವು ಪ್ರಯೋಜನಗಳಿವೆ.

    ಬ್ಲ್ಯಾಕ್ ಟೀ ಹೆಚ್ಚು ಕೆಫೀನ್ ಅನ್ನು ಹೊಂದಿರುತ್ತದೆ, ಇದು ನಿಮಗೆ ತಲೆನೋವುಗೆ ಸಹಾಯ ಮಾಡುತ್ತದೆ. ಹಾಗೂ ಕೆಫೀನ್ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ವಿಶೇಷವಾಗಿ ಕೆಫೀನ್ ಅನ್ನು ತಲೆನೋವು ಅನುಭವಿಸುವವರು ಸ್ವೀಕರಿಸುತ್ತಾರೆ.

    ಹಲವರ ಫೇವರೇಟ್ ಈ ಮಸಾಲೆ ಟೀ :

    ಸಾಮಾನ್ಯವಾಗಿ ಮಸಾಲಾ ಟೀ ನಲ್ಲಿ ಬಳಸುವ ಶುಂಠಿ, ಏಲಕ್ಕಿ ಮತ್ತು ದಾಲ್ಚಿನ್ನಿಗಳಂತಹ ಮಸಾಲೆಗಳು ಹಲವು ಬಗೆಯ ಉತ್ತಮ ಗುಣಲಕ್ಷಣಗಳನ್ನು ಹೊಂದಿದ್ದು ಇದು ತಲೆ ನೋವು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ ಮೈಗ್ರೇನ್ ರೋಗಿಗಳಿಗೆ ಚಿಕಿತ್ಸೆ ನೀಡಲು ಶುಂಠಿ ಪರಿಣಾಮಕಾರಿ ಎಂದು ವೈದ್ಯರು ದೃಢಪಡಿಸಿದ್ದಾರೆ. ಮಸಾಲೆ ಟೀ ತಲೆನೋವನ್ನು ಗುಣಪಡಿಸುತ್ತದೆ ಎಂದು ಸಾಬೀತುಪಡಿಸಲು ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ ಕೆಲವು ತಜ್ಞರು ಟೀನಲ್ಲಿರುವ ಮಸಾಲೆಗಳು ಹಿತವಾದ ಪರಿಣಾಮವನ್ನು ಬೀರಬಹುದು ಮತ್ತು ಮಾನಸಿಕ ಒತ್ತಡ ಸಂಬಂಧಿತ ತಲೆನೋವುಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ.

    ಚಹಾವನ್ನು ಸೇವಿಸಲು ಇದು ಸರಿಯಾದ ಸಮಯವಲ್ಲ:

    ಊಟಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಮತ್ತು ನಂತರ ಚಹಾ ಸೇವಿಸುವುದನ್ನು ತಡೆಯಲು ಸಂಶೋಧನಾ ಸಂಸ್ಥೆ ಸಲಹೆ ನೀಡಿದೆ. ಏಕೆಂದರೆ ಇದರಲ್ಲಿ ಟ್ಯಾನಿನ್ ಎಂಬ ಅಂಶವು ಕೆಫೀನ್‌ನಂತೆ ಇರುತ್ತದೆ. ಈ ಟ್ಯಾನಿನ್‌ಗಳು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯ ಮೇಲೆ ಅಡ್ಡಿ ಪರಿಣಾಮಪಡಿಸಬಹುದು. ದೇಹದಲ್ಲಿ ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

    Continue Reading

    LATEST NEWS

    Viral Video: ಪ್ರೀತಿಯಿಂದ ಮನದರಸಿಯ ದೃಷ್ಠಿ ತೆಗೆದ ಅರಸ; ಪ್ರತಿ ವಧುವಿನ ಕಲರ್‌ಫುಲ್ ಕನಸು.. ಯಾವುದು ಗೊತ್ತಾ ??

    Published

    on

    ಎರಡು ಮನಸ್ಸುಗಳ ಬೆಸೆಯುವ ಪವಿತ್ರ ಬಂಧವೇ ಮದುವೆ. ಹಾಗಾಗಿ ನವ ಜೋಡಿಯು ತಮ್ಮ ಮದುವೆ ಕ್ಷಣಗಳನ್ನು ಸುಂಧುರವಾಗಿಸಲು ಬಯಸುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ವಧುವು ಮಂಟಪಕ್ಕೆ ಬರುತ್ತಿದ್ದಂತೆ ದೃಷ್ಟಿ ತೆಗೆದು ಆಕೆಯ ಕೈಹಿಡಿದು ವರನೇ ಕರೆದುಕೊಂಡು ಬಂದಿದ್ದಾನೆ.


    Zoopgo ಹೆಸರಿನ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ  ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಧುವು ಗುಲಾಬಿ ಬಣ್ಣದ ಲೆಹೆಂಗಾ ತೊಟ್ಟಿದ್ದಾಳೆ. ಆಕೆಯನ್ನು ನೋಡಿದ ವರನು, ಕೈಯಲ್ಲಿ ಹಣವನ್ನು ಹಿಡಿದು ಆಕೆಯ ದೃಷ್ಟಿ ತೆಗೆದಿದ್ದಾನೆ. ಈ ವೇಳೆ ವಧುವು ವರನನ್ನು ನೋಡುತ್ತಾ ನಗುತ್ತಾ ನಿಂತಿದ್ದಾಳೆ. ಆ ಬಳಿಕ ಕೈಹಿಡಿದು ಆಕೆಯನ್ನು ಮಂಟಪಕ್ಕೆ ಕರೆದುಕೊಂಡು ಬಂದಿದ್ದಾನೆ.

    ಈ ವಿಡಿಯೋಗೆ “ಪ್ರತಿಯೊಬ್ಬ ವಧು ತನ್ನ ವರನು ತನ್ನನ್ನು ಹೀಗೆ ಸ್ವಾಗತಿಸಬೇಕೆಂದು ಕನಸು ಕಾಣುತ್ತಾಳೆ.” ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ. 31 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡು ಕೊಂಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರೂ ಪ್ರತಿಕ್ರಿಯೆ ನೀಡಿದ್ದು, ‘ಆ ಹುಡುಗಿಗೆ ಒಳ್ಳೆಯ ವರ ಸಿಕ್ಕಿದ್ದಾನೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ‘ಆ ಹುಡುಗನನ್ನು ಮದುವೆಯಾಗುತ್ತಿರುವ ಆಕೆಯು ನಿಜಕ್ಕೂ ಅದೃಷ್ಟವಂತಳು’ ಎಂದಿದ್ದಾರೆ. ಇನ್ನೊಬ್ಬರು ‘ವರನು ಹಣವನ್ನು ವ್ಯರ್ಥ ಮಾಡಲಿಲ್ಲ, ಅದನ್ನು ಯಾರಿಗೂ ನೀಡಲಿಲ್ಲ‘ ಎಂದಿದ್ದಾರೆ.

     

    ವಿಡಿಯೋ ನೋಡಿ:

    Continue Reading

    LATEST NEWS

    ಇನ್ಮುಂದೆ 7 ದಿನದಲ್ಲೇ ಸಿಗಲಿದೆ ಜನನ ಪ್ರಮಾಣ ಪತ್ರ..!

    Published

    on

    ಬೆಂಗಳೂರು: ಶಾಲಾ ದಾಖಲಾತಿ, ಉದ್ಯೋಗ, ವಿವಾಹ ನೋಂದಣಿ ಸೇರಿದಂತೆ ವಿವಿಧ ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಕೂಡ ಜನನ ಪ್ರಮಾಣ ಪತ್ರ ಅಗತ್ಯ ದಾಖಲೆಯಾಗಿದೆ. ಆದರೆ ಮಗು ಜನಿಸಿದ ನಂತರದಲ್ಲಿ ಜನನ ಪ್ರಮಾಣ ಪತ್ರ ಪಡೆಯಲು ತಿಂಗಳವರೆಗೂ ಕಾಯಬೇಕಾದ ಪರಿಸ್ಥಿತಿಯಿದ್ದು, ಇದೀಗ ಆರೋಗ್ಯ ಇಲಾಖೆ ಇ-ಜನ್ಮ ತಂತ್ರಾಂಶದ ಸಕಾಲ ಮಿತಿಯನ್ನು 15ರಿಂದ 7 ದಿನಕ್ಕೆ ಇಳಿಸಲು ಮುಂದಾಗಿದೆ.

    ಸಾಕಷ್ಟು ಕಡೆಗಳಲ್ಲಿ ಈ ಜನನ ಪ್ರಮಾಣ ಪತ್ರವನ್ನು ಪಡೆಯಲು ಪೋಷಕರು ಅಲೆದಾಡುವ ಪರಿ ಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಸರಕಾರ 7 ದಿನಗಳಲ್ಲಿ ಜನನ ಪ್ರಮಾಣ ನೀಡಲು ಕ್ರಮವಹಿಸಿದೆ.

    ಇದಕ್ಕಾಗಿ ಇ – ಜನ್ಮ ತಂತ್ರಾಂಶದ ಸಕಾಲ ಮಿತಿಯನ್ನು 15ರಿಂದ 7 ದಿನಕ್ಕೆ ಇಳಿಸಿದ್ದು, ಸೇವಾ ಸಿಂಧು ತಂತ್ರಾಂಶದಲ್ಲಿ ಜನನ ಪ್ರಮಾಣ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಜತೆಗೆ ಅರ್ಜಿದಾರರ ದಾಖಲೆಗಳನ್ನು ಸುರಕ್ಷಿತವಾಗಿಡುವಂತೆ ಸೂಚನೆ ನೀಡಿದೆ.

    ಸಕಾಲದಲ್ಲಿ ಜನನ, ಮರಣ ಪ್ರಮಾಣ ಪತ್ರಗಳನ್ನು ಪಡೆಯಲು 7 ದಿನಗಳ ಕಾಲಾವಧಿ ನಿಗದಿಪಡಿಸಲಾಗಿದೆ. ಅರ್ಜಿದಾರರು ಒದಗಿಸಿದ ದಾಖಲೆಗಳನ್ನು ಸುರಕ್ಷಿತವಾಗಿಡಬೇಕು ಹಾಗೂ ಮತ್ತೆ ದಾಖಲೆಗಳನ್ನು ಕೇಳಬಾರದು. ಈ ಕುರಿತಂತೆ ಎಲ್ಲಾ ಅಧಿಕಾರಿಗಳಿಗೂ ಸೂಕ್ತ ನಿರ್ದೇಶನ ನೀಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಕೆಬಿ ಶಿವಕುಮಾರ್ ಹೇಳಿದ್ದಾರೆ.

    Continue Reading

    LATEST NEWS

    Trending