Connect with us

    BANTWAL

    ಬಂಟ್ವಾಳ: ವೇಷ ಹಾಕಲು ಇದೆ ಎಂದು ಮನೆಯಿಂದ ತೆರಳಿದ ವ್ಯಕ್ತಿ ನಾಪತ್ತೆ

    Published

    on

    ಬಂಟ್ವಾಳ: ವೇಷ ಹಾಕಲು ಇದೆ ಎಂದು ಮನೆಯಲ್ಲಿ ಹೇಳಿ ಹೋದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿಟ್ಲ ಕಸಬಾ ಗ್ರಾಮದ ಪಳಿಕೆ ಅಣ್ಣಮೂಲೆ ನಿವಾಸಿ ಸುಂದರ ನಾಯ್ಕ್‌ (55) ನಾಪತ್ತೆಯಾದವರು.ಸುಂದರ ನಾಯ್ಕ್‌ ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಸರಾ ಹಬ್ಬದ ಪ್ರಯುಕ್ತ ವೇಷ ಹಾಕುತ್ತಿದ್ದರು. ಅದೇ ರೀತಿ ಅ.1 ರಂದು ಬೆಳಿಗ್ಗೆ ಪತ್ನಿಯಲ್ಲಿ ,ನಾಳೆ ನಾನು ದಸರಾ ಹಬ್ಬದ ವೇಷ ಹಾಕಲು ಇದೆ ನಾನು ವಿಟ್ಲ ಠಾಣೆಗೆ ಹೋಗಿ ಅನುಮತಿ ಪಡೆಯಲು ಇದೆಯಂದು ಹೇಳಿದ್ದರು. ಸುಂದರ ನಾಯ್ಕ ಅವರ ಪತ್ನಿ ಸಂಜೆ ಮನೆಗೆ ಬಂದಾಗ ಪತಿ ಇರಲಿಲ್ಲ.

    ದಸರಾ ಹಬ್ಬ ಇರುವುದರಿಂದ ಹಬ್ಬದಲ್ಲಿ ವೇಷ ಹಾಕಿ ಹಬ್ಬ ಮುಗಿದ ನಂತರ ಮನೆಗೆ ಬರಬಹುದೆಂದು ಭಾವಿಸಿದ್ದು ಆದರೆ ಈವರೆಗೂ ಗಂಡ ಮನೆಗೆ ಬಾರದೇ ಇರುವುದರಿಂದ ಸಂಭಂದಿಕರಲ್ಲಿ, ನೆರೆಕರೆಯವರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿದ್ದಾರೆ ಎಂದು ಪತ್ನಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    BANTWAL

    ಬಂಟ್ವಾಳ : ರೈಲ್ವೇ ಹಳಿ ಬದಿ ರುಂ*ಡ – ಮುಂ*ಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃ*ತದೇಹ ಪ*ತ್ತೆ

    Published

    on

    ಬಂಟ್ವಾಳ: ರೈಲು ಡಿಕ್ಕಿಯಾಗಿ ಸಾ*ವನ್ನಪ್ಪಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಬಿಸಿರೋಡಿನ ರೈಲ್ವೇ ಹಳಿಯಲ್ಲಿ ಪ*ತ್ತೆಯಾಗಿದೆ. ಬಂಟ್ವಾಳ ಕಾಮಾಜೆ ನಿವಾಸಿ ಕರುಣಾಕರ (35) ಸಾ*ವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ.


    ಕಳೆದ 2 ವರ್ಷಗಳ ಹಿಂದೆಯಷ್ಟೇ ಇವರಿಗೆ ಮದುವೆಯಾಗಿದ್ದು, ಒಂದು ವರ್ಷದ ಹೆಣ್ಣು ಮಗುವಿದೆ.

    ಸುಮಾರು 11 ಗಂಟೆಯ ವೇಳೆ ಬಿಜಾಪುರದಿಂದ ಮಂಗಳೂರಿಗೆ ಆಗಮಿಸುವ ರೈಲು ಡಿ*ಕ್ಕಿಯಾಗಿದೆ. ಬಿಸಿರೋಡಿನ ರೈಲ್ವೇ ಸ್ಟೇಷನ್‌ನ ಸಮೀಪದಲ್ಲಿ ಕುತ್ತಿಗೆ ಹಾಗೂ ದೇಹ ಎರಡು ಮಾರ್ಪಾಡು ಆಗಿರುವ ಸ್ಥಿತಿಯಲ್ಲಿ ಮೃ*ತದೇಹ ಪತ್ತೆಯಾಗಿದೆ. ಸಾ*ವಿನ ಕಾರಣ ಇನ್ನೂ ನಿಗೂಢವಾಗಿದ್ದು ನಿಖರ ಮಾಹಿತಿ ಲಭ್ಯಯವಾಗಿಲ್ಲ.

    ಕಾಮಾಜೆಯಿಂದ ಬಿಸಿರೋಡಿಗೆ ಕೆಲಸಕ್ಕೆ ಹೋಗುವ ವೇಳೆ ಇದೇ ರೈಲ್ವೇ ಹಳಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಎಂಬ ವಿಚಾರವನ್ನು ಕುಟುಂಬಿಕರು ತಿಳಿಸಿದ್ದಾರೆ. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸ್ ಹಾಗೂ ರೈಲ್ವೇ ಇಲಾಖೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    BANTWAL

    ಚಾಲಕನಿಗೆ ಮೂರ್ಛೆ ರೋಗ..! ಕಂಬಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್‌ : ವಿದ್ಯಾರ್ಥಿಗಳು ಪಾರು

    Published

    on

    ಬಂಟ್ವಾಳ : ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ, ಬಸ್ ಚಾಲಕನಿಗೆ ಮೂರ್ಛೆ ರೋಗ ಕಾಣಿಸಿಕೊಂಡು ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪೊಳಲಿ ಸಮೀಪದ ಬಡಕಬೈಲಿನಲ್ಲಿ ಇಂದು (ಅ.14) ಬೆಳಿಗ್ಗೆ ನಡೆದಿದೆ.


    ಬಡಕಬೈಲು ಸೈಂಟ್ ಡೊಮಿನಿಕ್ ಆಂಗ್ಲ ಮಾಧ್ಯಮ ಶಾಲೆಯ ಬಸ್ ಚಾಲಕ ಅಡ್ಡೂರು ನಿವಾಸಿ ಸುರೇಶ್ ಎಂಬುವವರಿಗೆ ಮೂರ್ಛೆ ರೋಗ ಬಾಧಿಸಿದ ಪರಿಣಾಮ ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದಿದೆ.

     

    ಇದನ್ನೂ ಓದಿ : ಸಂಪಾಜೆ : ಕಾರು ನಿಯಂತ್ರಣ ತಪ್ಪಿ ತೋಟಕ್ಕೆ ಪಲ್ಟಿ

     

    ಘಟನೆಯಲ್ಲಿ ಯಾವುದೇ ಅಪಾಯವಿಲ್ಲದೆ ಚಾಲಕ ಸಹಿತ ವಿದ್ಯಾರ್ಥಿಗಳು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    BANTWAL

    ಬಂಟ್ವಾಳ: ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬಿದ್ದ ಕಾರು; ಮಹಿಳೆ ಮೃ*ತ್ಯು, ಚಾಲಕ ಗಂಭೀರ

    Published

    on

    ಬಂಟ್ವಾಳ: ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಅಡಿಕೆ ತೋಟಕ್ಕೆ ಉರುಳಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಬಿ.ಸಿ ರೋಡ್ – ಬೆಳ್ತಂಗಡಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ಎಂಬಲ್ಲಿ ಈ ಅಪಘಾತ ನಡೆದಿದೆ.

    ಕಾರಿನಲ್ಲಿ ಒಂದೇ ಕುಟುಂಬದ ಮೂವರು ಪ್ರಯಾಣಿಸುತ್ತಿದ್ದು, ಭಾಗೀರಥಿ(58) ಎಂಬವರು ಮೃತ ಪಟ್ಟಿದ್ದಾರೆ. ಮಂಗಳೂರಿನ ಕೊಡಿಯಾಲ್ ಬೈಲ್ ನಿವಾಸಿಗಳಾದ ಇವರು ಶಿವಮೊಗ್ಗಕ್ಕೆ ತೆರಳಿ ವಾಪಾಸಾಗುವಾಗ ಬೆಳಗಿನ ಜಾವ 4.30 ಗಂಟೆಗೆ ಈ ಅಪಘಾತ ನಡೆದಿದೆ. ಕಾರಿನಲ್ಲಿ ಭಾಗೀರಥಿ ಅವರ ಪುತ್ರಿ ಸುಚಿತ್ರ ಮತ್ತು ಅಳಿಯ ರೂಪೇಶ್ ಪ್ರಯಾಣಿಸುತ್ತಿದ್ದು ರೂಪೇಶ್ ಕಾರು ಚಲಾಯಿಸುತ್ತಿದ್ದರು. ದಸರಾ ರಜೆಗೆ ಶಿವಮೊಗ್ಗಕ್ಕೆ ತೆರಳಿ ವಾಪಾಸಾಗುವಾಗ ಈ ಅಪಘಾತ ನಡೆದಿದ್ದು, ರೂಪೇಶ್‌ ಗಂಭೀರ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಚಿತ್ರಾ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿದೆ.

    ಬಾಂಬಿಲ ಬಳಿಯಲ್ಲಿ ಈ ಹಿಂದೆಯೂ ಹಲವು ಅಪಘಾತಗಳು ನಡೆದು ಜೀವ ಹಾನಿ ಸಂಭವಿಸಿದೆ. ಇಲ್ಲಿನ ತಿರುವು ಹಾಗೂ ಇಳಿಜಾರಿನಿಂದ ಕೂಡಿದ ರಸ್ತೆ ನಿರಂತರ ಅಪಘಾತದಿಂದಾಗಿ ಅಪಘಾತ ವಲಯ ಆಗಿ ಬದಲಾಗಿದೆ. ಇಲ್ಲಿ ಅಪಘಾತ ತಡೆಯಲು ಹೆದ್ದಾರಿ ಇಲಾಖೆ ಸೂಕ್ತ ಸೂಚನ ಫಲಕಗಳನ್ನು ಅಳವಡಿಸುವ ಜೊತೆ ರಸ್ತೆಯಲ್ಲಿ ಹಂಪ್ ಅಳವಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    Continue Reading

    LATEST NEWS

    Trending