Connect with us

    LATEST NEWS

    ಹಾಸ್ಟೆಲ್‌ನಲ್ಲಿ ನೇ*ಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ

    Published

    on

    ಬೆಂಗಳೂರು: ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್ ಆತ್ಮ*ಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.

    ದಿಯಾ ಮಂಡೋಲ್ ಪಶ್ಚಿಮ ಬಂಗಾಳ‌ ಮೂಲದವಳಾಗಿದ್ದು, ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು. ಮೂರು ದಿನಗಳ ಹಿಂದೆ ಈಕೆ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

    ದಿಯಾ ಕೌಟುಂಬಿಕ ಕಾರಣಕ್ಕೆ ಆತ್ಮ*ಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹಪಾಠಿಗಳು ರೂಮಿಗೆ ಬಂದು ನೋಡಿದಾಗ ಆತ್ಮ*ಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

    LATEST NEWS

    ಮೊಬೈಲ್ ಗೇಮ್ ದುಷ್ಪರಿಣಾಮ; ಸಾಲದಲ್ಲಿ ಮುಳುಗಿ ಮಗನ ಸಮೇತ ಕುಟುಂಬ ಆ*ತ್ಮಹತ್ಯೆಗೆ ಶರಣು

    Published

    on

    ಮಂಗಳೂರು/ತೆಲಂಗಾಣ: ಆನ್‌ಲೈನ್ ಜೂಜಾಟದ ಮೂಲಕ ಮಗ ಮಾಡಿದ 30 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ದಂಪತಿ ಮತ್ತು ಅವರ ಮಗ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.


    ಮೃ*ತರನ್ನು ರಂಗವೇಣಿ ಸುರೇಶ್ (53), ಪತ್ನಿ ಹೇಮಲತಾ (45) ಮತ್ತು ಮಗ ಹರೀಶ್ (22) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಹರೀಶ್ ಆನ್‌ಲೈನ್ ಮೊಬೈಲ್ ಗೇಮ್‌ಗಳಿಗೆ ವ್ಯಸನಿಯಾಗಿದ್ದನು. ಅವನ ಚಟದಿಂದಾಗಿ ಕುಟುಂಬವು ರೂ.30 ಲಕ್ಷ ಸಾಲವನ್ನು ಹೊಂದಿತ್ತು.
    ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಿದರೂ ಸಾಲ ತೀರಿಸಲು ಸಾಕಾಗಲಿಲ್ಲ. ಹೆಚ್ಚುತ್ತಿರುವ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಕಂಗಾಲಾಗಿದ್ದರು. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೋಧನ್ ಏರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.

     

    Continue Reading

    LATEST NEWS

    ಶಿಕ್ಷಕಿಯ ಅ*ಶ್ಲೀಲ ವಿಡಿಯೋ ಹಂಚಿಕೆ; ನಾಲ್ವರು ವಿದ್ಯಾರ್ಥಿಗಳ ಬಂಧನ

    Published

    on

    ಮಂಗಳೂರು/ಆಗ್ರಾ: ಶಿಕ್ಷಕರಿಗೆ ಗುರು ಸ್ಥಾನ ನೀಡಿ ಆರಾಧಿಸುವುದು ನಮ್ಮ ಸಂಸ್ಕೃತಿ. ನಮ್ಮ ತಪ್ಪನ್ನು ತಿದ್ದುತ್ತಾ, ಸದಾ ನಮ್ಮ ಒಳಿತನ್ನೇ ಬಯಸುವ ನಿಸ್ವಾರ್ಥ ಜೀವಕ್ಕೆ ವಿದ್ಯಾರ್ಥಿಗಳು ಚಿರಋಣಿಗಳಾಗಿ ಇರಬೇಕು. ಆದರೆ ಇಲ್ಲಿ,  ವಿದ್ಯಾರ್ಥಿಗಳು ಶಾಲಾ ಶಿಕ್ಷಕಿಯ ಅ*ಶ್ಲೀಲ ವಿಡಿಯೋ ಬಳಸಿ ಬ್ಲಾಕ್‌ಮೇಲ್ ಮಾಡಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆಘಾತಕಾರಿ ಘಟನೆ ನಡೆದಿದೆ.

    ಶಿಕ್ಷಕಿಯು ಮಥುರಾ ಶಾಲೆಯಲ್ಲಿ ಪಾಠ ಮಾಡುತ್ತಿದ್ದು, ಹಿಂದಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಎಲ್ಲಾ ರೀತಿಯ ಸಹಕಾರ ಮಾಡುತ್ತಿದ್ದರು.
    ವಿದ್ಯಾರ್ಥಿಯೊಬ್ಬ ಕಾಲಕ್ರಮೇಣ ಆಕೆಗೆ ಹತ್ತಿರವಾಗಿ ತನ್ನ ಮೊಬೈಲ್ ಫೋನ್‌ನಿಂದ ಅ*ಶ್ಲೀಲ ವಿಡಿಯೋ ಮಾಡಿ, ಬಳಿಕ ತನ್ನೊಂದಿಗೆ ಶಾ*ರೀರಕ ಸಂಬಂಧ ಬೆಳೆಸುವಂತೆ ಬ್ಲಾಕ್‌ಮೇಲ್ ಮಾಡಿದ್ದಾನೆ. ಈ ಹಿನ್ನಲೆಯಿಂದಾಗಿ ಶಿಕ್ಷಕಿಯು ಆತನಿಂದ ಅಂತರ ಕಾಯ್ದುಕೊಂಡಳು. ಸಿಟ್ಟಿನಿಂದ ಆ ಹುಡುಗ ವಿಡಿಯೋವನ್ನು ತನ್ನ ಗ್ರಾಮದ ಮೂವರು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾನೆ. ನಂತರ ವಿದ್ಯಾರ್ಥಿಗಳು ವಾಟ್ಸಾಪ್‌ನಲ್ಲಿ ಇನ್ನೂ ಹಲವರಿಗೆ ವಿಡಿಯೊ ಕಳುಹಿಸಿದ್ದು, ಇನ್ಸ್ಟಾಗ್ರಾಮ್‌ನಲ್ಲಿ ಪೇಜ್ ಕೂಡ ಆರಂಭಿಸಿದ್ದಾರೆ.
    ಇದರಿಂದ ನೊಂದ ಶಿಕ್ಷಕಿಯು ಮಿಶನ್ ಶಕ್ತಿ ಅಭಿಯಾನ್ ಕೇಂದ್ರಕ್ಕೆ ತೆರಳಿ ತಾನು ಆತ್ಮ*ಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ನೊಂದ ಮಹಿಳೆಯನ್ನು ಸಂತೈಸಿ ಕೇಂದ್ರದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ್ರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನಾಲ್ವರನ್ನೂ ಬಂಧಿಸಲಾಗಿದೆ.

    Continue Reading

    DAKSHINA KANNADA

    ಉಪನ್ಯಾಸಕನಿಂದ ದ್ವೇಷದ ಉಪನ್ಯಾಸ.!? ಅರುಣ್ ಉಳ್ಳಾಲ ವಿರುದ್ದ ಕೇಸ್.!

    Published

    on

    ಮಂಗಳೂರು : ಆಗ್ನೆಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ದುಡಿಯುತ್ತಿರುವ ಉಪನ್ಯಾಸಕ ಅರುಣ್ ಉಳ್ಳಾಲ ವಿರುದ್ದ ಮಂಗಳೂರು ಸೆನ್‌ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಳ್ಳಾಲದ ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಮಾಡಿದ ದ್ವೇಷದ ಭಾಷಣಕ್ಕೆ ಸಂಬಂಧಿಸಿ ಈ ದೂರು ದಾಖಲಾಗಿದೆ.

    ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ಉಪನ್ಯಾಸ ನೀಡುತ್ತಿದ್ದ ಅರುಣ್ ಉಳ್ಳಾಲ ಅವರು ಕ್ರೈಸ್ತರು ಹಾಗೂ ಮುಸ್ಲಿಂರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಹಿಂದೂಗಳು ಹಿಂದೂಗಳಿಗೆ ಸೇರಿದ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ಹಿಂದೂಗಳಿಗೆ ಸೇರಿದ ಹಾಲ್‌ಗಳಲ್ಲೇ ಮದುವೆ ಆಗಬೇಕು ಎಂಬಿತ್ಯಾದಿ ರೀತಿಯ ಮಾತುಗಳನ್ನು ಆಡಿದ್ದರು.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾರ್ವಜನಿಕವಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು. ಕ್ರಿಶ್ಚಿಯನ್ ಸಂಸ್ಥೆಯಲ್ಲೇ ವಿದ್ಯಾಭ್ಯಾಸ ಮಾಡಿ, ಕ್ರಿಶ್ಚಿಯನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅರುಣ್ ಉಳ್ಳಾಲ ಅವರ ಈ ಹೇಳಿಕೆ ಎಷ್ಟು ಸರಿ? ಎಂದು ಜನರು ಪ್ರಶ್ನೆ ಮಾಡಿದ್ದರು.  ಅರುಣ್ ಉಳ್ಳಾಲ ಅವರು ಕೆಲಸ ಮಾಡುತ್ತಿರುವ ಆಗ್ನೆಸ್ ಕಾಲೇಜು ಆಡಳಿತ ಮಂಡಳಿ ಇವರನ್ನು ಕೆಲಸದಿಂದ ವಜಾ ಮಾಡಬೇಕೆಂಬ ಒತ್ತಾಯ ಕೂಡ ಮಾಡಲಾಗಿದೆ.  ಇದೀಗ ಅರುಣ್ ಉಳ್ಳಾಲರ ಭಾಷಣ ವಿವಾದವಾಗುತ್ತಿದ್ದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಇದನ್ನೂ ಓದಿ : ಸಂಸದ ಕೋಟ ಹೆಸರಿನಲ್ಲಿ ನಕಲಿ ಖಾತೆ; ಹಣಕ್ಕೆ ಬೇಡಿಕೆ ಇಟ್ಟ ಕಿಡಿಗೇಡಿಗಳು

    ಅರುಣ್ ಉಳ್ಳಾಲ ಅವರ ವಿರುದ್ಧ ಸೆನ್‌ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್‌ ಅರುಣ್ ಗೆ  ಬೆಂಬಲ ಸೂಚಿಸಿದ್ದಾರೆ. ನಾವು ನಿಮ್ಮ ಜೊತೆಗೆ ಇದ್ದೇವೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    Continue Reading

    LATEST NEWS

    Trending