Connect with us

    ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ಉರುಳಾಗಿ ಪರಿಣಮಿಸಿದೆ ವಂಚನೆ ಪ್ರಕರಣ

    Published

    on

    ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ಉರುಳಾಗಿ ಪರಿಣಮಿಸಿದೆ ವಂಚನೆ ಪ್ರಕರಣ

    ದುಬೈ: ವಂಚನೆಯ ಪ್ರಕರಣ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ಉರುಳಾಗಿ ಪರಿಣಾಮಿಸುತ್ತಿದೆ.

    ವಂಚನೆ ಹಾಗೂ ಫೋರ್ಜರಿ ಪ್ರಕರಣಗಳಿಗೆ ಸಂಬಂಧಿಸಿ ಅವರ ಹಾಗೂ ಕುಟುಂಬದವರ ಯು.ಎ.ಇ.ನಲ್ಲಿರುವ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕುವಂತೆ ಸೆಂಟ್ರಲ್ ಬ್ಯಾಂಕ್ ಆಫ್ ಯು.ಎ.ಇ ದೇಶದಲ್ಲಿರುವ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

    ಇದರ ಜೊತೆಗೆ ಬಿ.ಆರ್.ಶೆಟ್ಟಿ ಅವರ ಪಾಲುದಾರಿಕೆಯಿರುವ ಕಂಪೆನಿಗಳ ಖಾತೆಗಳನ್ನು ಸ್ತಂಭನಗೊಳಿಸಬೇಕೆಂದು ಅದು ಆದೇಶಿಸಿದೆ.

    ಬಿ.ಆರ್.ಶೆಟ್ಟಿ ಅವರ ಜೊತೆಗೆ ನಂಟು ಹೊಂದಿರುವ ಹಲವು ಕಂಪೆನಿಗಳನ್ನು ಅವುಗಳ ಹಿರಿಯ ಆಡಳಿತ ವರ್ಗದ ಜೊತೆ ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಲು ಸಿ.ಬಿ.ಯು.ಎ.ಇ ಆದೇಶಿಸಿದೆ.

    ಎನ್.ಎಂ.ಸಿ ಹೆಲ್ತ್ ಕೇರ್ ಸಂಸ್ಥೆಯ ಸಂಸ್ಥಾಪಕರಾಗಿರುವ ಬಿ.ಆರ್.ಶೆಟ್ಟಿ ಸದ್ಯ ಭಾರತದಲ್ಲಿ ಇದ್ದಾರೆ ಎನ್ನಲಾಗಿದೆ.

    ಅವರು ಅಬುಧಾಬಿ ಕಮರ್ಶಿಯಲ್ ಬ್ಯಾಂಕ್ ನಿಂದ ಸಾಲ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಹಾಗೂ ತಾನು ಮರು ಪಾವತಿಸಲು ಬಾಕಿಯಿರುವ ಸಾಲ ವಿವರಗಳನ್ನು ನೀಡದೆ ವಂಚಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.

    ಬಿ.ಆರ್.ಶೆಟ್ಟಿ ಒಡೆತನದ ಎನ್ಎಂಸಿ ಹೆಲ್ತ್ ಕೇರ್ ಸಂಸ್ಥೆಯು, ತನಗೆ 981 ದಶಲಕ್ಷ ಡಾಲರ್  ವಂಚನೆ ನಡೆಸರುವುದಾಗಿ ಅಬುಧಾಬಿ ಕಮರ್ಶಿಯಲ್ ಬ್ಯಾಂಕ್, ಬ್ರಿಟನ್ ನ ನ್ಯಾಯಾಲಯದಲ್ಲಿ ದೂರು ನೀಡಿತ್ತು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮೂಡುಬಿದಿರೆ : ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರ ಬಂಧನ

    Published

    on

    ಮೂಡುಬಿದಿರೆ : ಆತ ಒಬ್ಬ ಖತರ್ನಾಕ್‌ ಕ್ರಿಮಿನಲ್‌ ಆಗಿದ್ದು, ಆತನ ಮೇಲೆ ಹಲವು ಪೊಲೀಸ್ ಠಾಣೆಯಲ್ಲಿ 42 ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿತ್ತು. ಹಲವು ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ವಾರೆಂಟ್ ಇದ್ರೂ ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್‌ ಆಗ್ತಾನೆ ಇದ್ದ. ಇತ್ತೀಚೆಗೆ ಆಗಸ್ಟ್‌ ತಿಂಗಳಲ್ಲಿ ಮೂಡುಬಿದ್ರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆತ ವೃದ್ಧ ಮಹಿಳೆಯರನ್ನು ಗುರಿಯಾಗಿಸಿ ಅವರ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದ.

    ಮೂಡಬಿದ್ರೆಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ನಿರ್ಮಲಾ ಪಂಡಿತ್ ಎಂಬ 70 ವರ್ಷದ ವೃದ್ದೆಯ 24 ಗ್ರಾಂ ಚಿನ್ನದ ಸರ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಮಾರ್ನಾಡು ಗ್ರಾಮದ ಬಸದಿ ಬಳಿ 82 ವರ್ಷ ಪ್ರಾಯದ ಪ್ರೇಮಾ ಎಂಬ ವೃದ್ಧೆಯ 24 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ. ಈ ಎರಡೂ ಪ್ರಕರಣದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಈ ಕೃತ್ಯ ನಡೆಸಿದ ವಿಚಾರ ಪೊಲೀಸರ ಗಮನಕ್ಕೆ ಬಂದಿತ್ತು.

    ಇದನ್ನೂ ಓದಿ :ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾ*ತ; ಸವಾರ ಸಾ*ವು

    ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿದಾಗ ಇದು ಖತರ್ನಾಕ್‌ ಖದೀಮ ಚೆಂಬುಗುಡ್ಡೆಯ ಹಬೀಬ್‌ ಹಸನ್‌ ಕೃತ್ಯ ಎಂಬುದು ಗೊತ್ತಾಗಿದೆ. ಈತನ ಮೇಲೆ ವಿವಿಧ ಠಾಣೆಯಲ್ಲಿ 15 ಕ್ಕೂ ಹೆಚ್ಚು ಬಂಧನದ ವಾರೆಂಟ್ ಇದ್ರೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಇದೀಗ ಮೂಡುಬಿದ್ರೆಯಲ್ಲಿ ಕೊ*ಲೆ ಆರೋಪಿ ಬಂಟ್ವಾಳದ ಉಮ್ಮರ್ ಸಿಯಾಫ್ ಎಂಬಾತನ ಜೊತೆ ಸೇರಿ ಸರ ಕಳ್ಳತನಕ್ಕೆ ಇಳಿದಿದ್ದ. ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ 2.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃ*ತ್ಯಕ್ಕೆ ಬಳಿಸಿದ್ದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ.

    Continue Reading

    LATEST NEWS

    8 ವರ್ಷಗಳ ಬಳಿಕ ಆಗಮಿಸಿದ ಹಿಮಕರಡಿ ಹತ್ಯೆ

    Published

    on

    ಮಂಗಳೂರು/ರೇಕ್ಯವಿಕ್‌; ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ತೋಳಗಳ ಹಿಂಡು ಪುಟ್ಟ ಮಕ್ಕಳನ್ನು ಬೇಟೆಯಾಡುತ್ತಿವೆ. ಆರು ತೋಳಗಳಲ್ಲಿ ಐದನ್ನು ಸೆರೆಹಿಡಿದರೂ, ಈಗ ಒಂಟಿಯಾಗಿರುವ ತೋಳ ದಾಳಿ ನಿಂತಿಲ್ಲ. ಆದರೂ ಅದನ್ನು ಸಾಯಿಸದೆ ಸರ್ಕಾರವು ಎಲ್ಲವನ್ನೂ ಜೀವಂತ ಹಿಡಿಯುವ ಪ್ರಯತ್ನದಲ್ಲಿದೆ. ತೀರಾ ಅಪರೂಪದ್ದಾಗಿರುವ ಹಿಮ ಕರಡಿಗಳು ಅಳಿವಿನ ಅಂಚಿನಲ್ಲಿವೆ. ಐಸ್‌ಲ್ಯಾಂಡ್‌ನಲ್ಲಿ ಮನೆಯೊಂದರ ಸಮೀಪ ಬಂದ ಅಪರೂಪದ ಹಿಮಕರಡಿಯನ್ನು ಪೊಲೀಸರು ಗುಂಡಿಕ್ಕಿ ಕೊಂದ ಘಟನೆ ನಡೆದಿದೆ.

    ಹಿಮ ಪ್ರದೇಶಗಳು ಕರಗುತ್ತಿದ್ದು, ಇಲ್ಲಿ ಮಾತ್ರ ವಾಸಿವ ಪ್ರಾಣಿಗಳು ನಶಿಸುವ ಅಪಾಯಕ್ಕೆ ಸಿಲುಕಿವೆ. ಅಪರೂಪದಲ್ಲಿ ಅಪರೂಪ ಎನಿಸಿರುವ ಈ ಪ್ರಾಣಿಗಳನ್ನು ಕೂಡ ಮನುಷ್ಯ ಆಹುತಿ ಪಡೆಯುತ್ತಿರುವುದು ಆತಂಕ ಮೂಡಿಸಿದೆ. ಐಸ್‌ಲ್ಯಾಂಡ್‌ನ ಕುಗ್ರಾಮವೊಂದರ ಮನೆಯ ಹೊರಗೆ ಬಲು ಅಪರೂಪದ ಹಿಮ ಕರಡಿಯೊಂದು ಕಾಣಿಸಿಕೊಂಡಿದ್ದು,
    ಒಂಟಿ ವೃದ್ಧೆಯ ನಿವಾಸದ ಬಳಿ ಈ ಹಿಮಕರಡಿ ಕಂಡುಬಂದಿದ್ದು, ಭಯಭೀತರಾಗಿ ತಮ್ಮ ಪುತ್ರಿಗೆ ಮಾಹಿತಿ ನೀಡಿದರು.
    ಸ್ಥಳಕ್ಕಾಗಮಿಸಿದ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. 2016 ರ ಬಳಿಕ ಮೊದಲ ಬಾರಿ ಹಿಮಕರಡಿ ಪತ್ತೆಯಾಗಿರುವುದು ಸುದ್ದಿಯಾಗಿದೆ.

    Continue Reading

    LATEST NEWS

    ಭಾರತದ ಪ್ರಾಚೀನ 297 ವಸ್ತುಗಳನ್ನು ಹಿಂದಿರುಗಿಸಿದ ಅಮೆರಿಕಾ; ಕೃತಜ್ಞತೆ ಸಲ್ಲಿಸಿದ ಮೋದಿ

    Published

    on

    ಅಮೆರಿಕಾ/ಮಂಗಳೂರು: ಭಾರತಕ್ಕೆ ಅತ್ಯಮೂಲ್ಯ 297 ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿದ ಅಮೆರಕಾ ಅಧ್ಯಕ್ಷ ಜೋ ಬೈಡನ್‌ ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಧನ್ಯವಾದ ಸಲ್ಲಿಸಿದ್ದಾರೆ.

    ಅಮೆರಿಕಾದಲ್ಲಿ ನಡೆಯುವ ಶೃಂಗಸಭೆಯಲ್ಲಿ ಭಾಗವಹಿಸಲು ನರೇಂದ್ರ ಮೋದಿಯವರು ಮೂರು ದಿನಗಳ ಪ್ರವಾಸವನ್ನು ಕೈಗೊಂಡಿದ್ದರು. ಈ ಮಧ್ಯೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ. ಎರಡು ದೇಶಗಳ ಮಧ್ಯೆ ನಡೆಸಿದ್ದ ಒಪ್ಪಂದಗಳ ಪ್ರಕಾರ ಭಾರತದ ಪ್ರಾಚೀನ ಅಮೂಲ್ಯ ವಸ್ತುಗಳನ್ನು ಮರಳಿ ಭಾರತಕ್ಕೆ ನೀಡುವಂತೆ ಕೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಪ್ರಾಚೀನ 297 ಅಮೂಲ್ಯ ವಸ್ತುಗಳನ್ನು ಭಾರತಕ್ಕೆ ಹಿಂತಿರುಗಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತಾಗಿ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಮೋದಿಯವರು ‘‘ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಮತ್ತು ಸಾಂಸ್ಕೃತಿಕ ಆಸ್ತಿಗಳ ಅಕ್ರಮ ಕಳ್ಳಸಾಗಾಣೆ ವಿರುದ್ಧ ಹೋರಾಟವನ್ನು ದೃಢಗೊಳಿಸುವ ನಿಟ್ಟಿನಲ್ಲಿ ಭಾರತಕ್ಕೆ 297 ಬೆಲೆಬಾಳುವ ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಲಿರುವ ಅಮೆರಿಕ ಸರ್ಕಾರ ಮತ್ತು ಅಧ್ಯಕ್ಷ ಜೋ ಬೈಡನ್‌ ಅವರಿಗೆ ಕೃತಜ್ಞತೆ” ಎಂದು ತಿಳಿಸಿದ್ದಾರೆ.

    ಕ್ಯಾನ್ಸರ್ ತಡೆಗಟ್ಟಲು ಮುಂದಾದ ಕ್ವಾಡ್ ದೇಶಗಳ ನಾಯಕರು

    ಸಾಂಸ್ಕೃತಿಕ ಅಕ್ರಮ ಸಾಗಾಟಣೆಯನ್ನು ತಡೆಗಟ್ಟಲು ಮತ್ತು ಪುರಾತನ ವಸ್ತುಗಳನ್ನು ಮೂಲ ದೇಶಕ್ಕೆ ಹಿಂತಿರುಗಿಸುವ ಸಲುವಾಗಿ ಭಾರತ ಹಾಗೂ ಅಮೆರಿಕಾ ಜುಲೈ ತಿಂಗಳಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು.

    Continue Reading

    LATEST NEWS

    Trending