LATEST NEWS
ಇನ್ನು ಮುಂದೆ ಫೋನ್ ಚಾರ್ಜ್ ಮಾಡಲು ಕರೆಂಟ್ ಬೇಡ.. ಇಲ್ಲಿದೆ ಹೊಸ ವಿಧಾನ
ಇಂದು ಪವರ್ ಬ್ಯಾಂಕ್ಗಳಿಗೆ ಭರ್ಜರಿ ಬೇಡಿಕೆ ಇದೆ. ಕೆಲಸದ ನಿಮಿತ್ತ ಅನೇಕರು ಹೊರಗಡೆಯೇ ಇರುವ ಕಾರಣ ಇದು ತುಂಬಾ ಸಹಕಾರಿ ಆಗಿದೆ. ಇದನ್ನು ಮನಗಂಡು ಪ್ರಮುಖ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಅಂಬ್ರೇನ್ ವಿಶೇಷ ಪವರ್ ಬ್ಯಾಂಕ್ ‘ಸೋಲಾರ್ 10 ಕೆ’ ಅನ್ನು ಬಿಡುಗಡೆ ಮಾಡಿದೆ. ಇದು ಕಂಪನಿಯ ಮೊದಲ ಸೋಲಾರ್ ಪವರ್ ಬ್ಯಾಂಕ್ ಆಗಿದ್ದು, 10,000mAh ಶಕ್ತಿಯನ್ನು ಹೊಂದಿರುತ್ತದೆ. ನಾಲ್ಕು ಪಟ್ಟು ಸೌರ ಫಲಕವನ್ನು ಹೊಂದಿರುವ ಇದರ ವಿನ್ಯಾಸವು ತುಂಬಾ ವಿಶಿಷ್ಟವಾಗಿದೆ.
ಪ್ರಯಾಣ ಮಾಡುವಾಗ ನೀವು ಈ ಪವರ್ ಬ್ಯಾಂಕ್ ಅನ್ನು ಬಳಸಬಹುದು. ಈ ಚಾರ್ಜಿಂಗ್ ಸಾಧನವು 22.5W ವೇಗದ ಚಾರ್ಜಿಂಗ್ ಔಟ್ಪುಟ್ ಅನ್ನು ಬೆಂಬಲಿಸುತ್ತದೆ. ಸೋಲಾರ್ 10ಕೆ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ಅಂಬ್ರೇನ್ ಇಂಡಿಯಾದ ವೆಬ್ಸೈಟ್ಗಳಲ್ಲಿ ರೂ 2,799 ಕ್ಕೆ ಲಭ್ಯವಿರುತ್ತದೆ.
ವಿಶೇಷವಾಗಿ ವಿನ್ಯಾಸಗೊಳಿಸಿದ ಸೌರ ಫಲಕವನ್ನು ಬಳಸಿಕೊಂಡು ಸೋಲಾರ್ 10k ಪವರ್ ಬ್ಯಾಂಕ್ ಅನ್ನು 5 ದಿನಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು (ಸೂರ್ಯನ ಬೆಳಕಿನ ಪರಿಸ್ಥಿತಿಗಳನ್ನು ಅವಲಂಬಿಸಿ). ಇದು ಗರಿಷ್ಠ ದಕ್ಷತೆಯಲ್ಲಿ 8.5W ವರೆಗೆ ಸೌರ ಇನ್ಪುಟ್ ಅನ್ನು ಒದಗಿಸುತ್ತದೆ. ತ್ವರಿತವಾಗಿ ಚಾರ್ಜ್ ಮಾಡಲು 20W PD ಚಾರ್ಜರ್ಗೆ ಬೆಂಬಲವನ್ನು ಸಹ ಒದಗಿಸಲಾಗಿದೆ.
ವಿದ್ಯುತ್ ಇಲ್ಲದೆ ಫೋನ್ ಚಾರ್ಜ್ ಮಾಡಿ:
ಮಡಚಬಹುದಾದ ಸೌರ ಫಲಕದಿಂದಾಗಿ, ನೀವು ಅದನ್ನು ಎಲ್ಲಿ ಬೇಕಾದರೂ ಸುಲಭವಾಗಿ ಇರಿಸಬಹುದು ಮತ್ತು ತೆಗೆದುಕೊಂಡು ಹೋಗಬಹುದು. ಇದಲ್ಲದೆ, ಸೂರ್ಯನ ಬೆಳಕಿನೊಂದಿಗೆ ಸಾಧನವನ್ನು ಚಾರ್ಜ್ ಮಾಡುವ ಪ್ರಯೋಜನವನ್ನು ನೀವು ಪಡೆಯಬಹುದು. ಇದು ಸೌರಶಕ್ತಿಯಿಂದ ಚಾರ್ಜ್ ಆಗುವ ಕಾರಣ, ವಿದ್ಯುತ್ ಅಗತ್ಯವಿರುವುದಿಲ್ಲ. ಇದನ್ನು ವಿಶೇಷವಾಗಿ ಟ್ರಕ್ಕಿಂಗ್ ಹೋಗುವವರಿಗೆ ಮತ್ತು ಸದಾ ಟ್ರಾವೆಲ್ ಮಾಡುತ್ತಿರುವವರಿಗಾಗಿ ವಿನ್ಯಾಸಗೊಳಿಸಲಾಗಿದೆ.
DAKSHINA KANNADA
ಕಡಬ: ಅಲಂಕಾರಿನಲ್ಲಿ ಹುಲಿ ಹೆಜ್ಜೆ
ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಪರಿಸರದಲ್ಲಿ ಮಂಗಳವಾರ (ಅ.22) ಬೆಳಗ್ಗೆ ಹುಲಿಯೊಂದು ಕಂಡುಬಂದಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.
ಅಲಂಕಾರು ಗ್ರಾಮದ ನೆಕ್ಕಿಲಾಡಿ ಬೈಲು ನೈಯಲ್ಗ ನಿವಾಸಿ ಜನಾರ್ದನ ಬಂಗೇರ ಎಂಬವರ ಮನೆಯ ಸಮೀಪ ಹುಲಿ ಕಂಡುಬಂದಿದೆ ಎನ್ನಲಾಗಿದೆ.
ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಜಯಕುಮಾರ್, ಗಸ್ತು ಅರಣ್ಯ ಪಾಲಕ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸ್ಥಳ ಪರಿಶೀಲನೆ ವೇಳೆ ಸ್ಥಳದಲ್ಲಿ ಕಾಡುಪ್ರಾಣಿಯ ಹೆಜ್ಜೆ ಗುರುತು ಕಂಡುಬಂದಿದ್ದು ಅದು ಚಿರತೆಯದ್ದೋ ಅಥವಾ ಹುಲಿಯದ್ದೋ ಅನ್ನುವುದು ಪರಿಶೀಲನೆಯ ಬಳಿಕ ತಿಳಿದು ಬರಬೇಕಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
LATEST NEWS
ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಅವಶೇಷಗಳಡಿ 16 ಕಾರ್ಮಿಕರು ಸಿಲುಕಿರುವ ಶಂಕೆ
ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದಿದೆ. ಈ ಪರಿಣಾಮ ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದಂತ 16 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು ನಗರದಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದೆ. ಮಲ್ಲೇಶ್ವರಂ ಸುತ್ತಾಮುತ್ತ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಮರವೊಂದು ಮುರಿದು ಬಿದ್ದ ಪರಿಣಾಮ ಆಟೋ, ಬೈಕ್ ಜಖಂಗೊಂಡಿದ್ದಾವೆ. ರಸ್ತೆಗಳು ಜಲಾವೃತಗೊಂಡು ಎಲ್ಲೆಲ್ಲೂ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡುತ್ತಿದ್ದಾರೆ.
ಮತ್ತೊಂದೆಡೆ ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದಿದೆ. ಮೊದಲ ಮಹಡಿಯವರೆಗೆ ನಿರ್ಮಿಸಿದ್ದಂತ ಕಟ್ಟದ ಕುಸಿದು ಬಿದ್ದ ಪರಿಣಾಮ, ಅವಶೇಷಗಳ ಅಡಿಯಲ್ಲಿ ಕೆಲ ಕಾರ್ಮಿಕರು ಸಿಲುಕಿರುವಂತ ಶಂಕೆ ವ್ಯಕ್ತವಾಗಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ಕುಸಿದು ಬಿದ್ದಿರುವಂತ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ, ಅದರಡಿಯಲ್ಲಿ ಸಿಲುಕಿರುವಂತ ಕಾರ್ಮಿಕರನ್ನು ರಕ್ಷಣೆ ಮಾಡುವಂತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
LATEST NEWS
ರಾತ್ರಿ ಮಲಗಿದಾಗ ತುಂಬಾ ಬೆವರುತ್ತಿದೆಯಾ ? ಯಾಕೆ ಗೊತ್ತಾ ?
ಮಂಗಳೂರು: ರಾತ್ರಿ ನಿದ್ರಿಸುತ್ತಿರುವಾಗ ಬೆವರುವುದು ಸಾಮಾನ್ಯ ಸಮಸ್ಯೆ ಆದರೂ, ಇದಕ್ಕೆ ಒಂದಲ್ಲ ಹಲವು ಕಾರಣಗಳಿರುತ್ತದೆ. ಅತಿಯಾದ ಬೆವರುವಿಕೆ ಇದ್ದರೆ ಜಾಗರೂಕರಾಗಿರಬೇಕು, ಏಕೆಂದರೆ ಇದು ಅನಾರೋಗ್ಯದ ಸಂಕೇತವಾಗಿದೆ. ರಾತ್ರಿಯಲ್ಲಿ ಅತಿಯಾದ ಬೆವರುವಿಕೆಗೆ ಕಾರಣಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ರಾತ್ರಿಯಲ್ಲಿ ಬೆವರಿಕೆಯ ಮುಖ್ಯ ಕಾರಣಗಳು:
1. ಹಾರ್ಮೋನ್ ಬದಲಾವಣೆ:
ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದಾಗಿ, ರಾತ್ರಿಯಲ್ಲಿ ಅತಿಯಾದ ಬೆವರುವಿಕೆ ಸಂಭವಿಸಬಹುದು. ಇದು 45-55 ವರ್ಷ ವಯಸ್ಸಿನ ಮಹಿಳೆಯರಲ್ಲಿ ಋತುಬಂಧದ ಚಿಹ್ನೆಯಾಗಿರಬಹುದು. ಇದಲ್ಲದೆ, ಥೈರಾಯ್ಡ್ನಂತಹ ಸಮಸ್ಯೆಗಳು ಬೆವರುವಿಕೆಗೆ ಕಾರಣವಾಗಬಹುದು.
2. ಒತ್ತಡ ಮತ್ತು ಆತಂಕ:
ಅತಿಯಾದ ಒತ್ತಡ ಮತ್ತು ಆತಂಕದಿಂದಾಗಿ, ದೇಹದಲ್ಲಿ ಅಡ್ರಿನಾಲಿನ್ ಹಾರ್ಮೋನ್ ಮಟ್ಟವು ಹೆಚ್ಚಾಗುತ್ತದೆ, ಇದು ಬೆವರುವಿಕೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಒತ್ತಡವನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ.
3. ನಿದ್ರೆಯ ಕೊರತೆ:
ನೀವು ರಾತ್ರಿಯಿಡೀ ಎಚ್ಚರವಾಗಿದ್ದರೆ ಅಥವಾ ಕೆಲವು ಕಾರಣಗಳಿಂದ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ, ಅತಿಯಾಗಿ ಬೆವರು ಬರಬಹುದು. ವಾಸ್ತವವಾಗಿ, ನಿದ್ರೆಯ ಕೊರತೆಯಿಂದಾಗಿ ದೇಹದ ಉಷ್ಣತೆಯು ಹೆಚ್ಚಾಗುತ್ತದೆ, ಇದು ಬೆವರುವಿಕೆಯ ಸಮಸ್ಯೆಯನ್ನು ಉಂಟುಮಾಡುತ್ತದೆ.
4. ಕಡಿಮೆ ರಕ್ತದ ಸಕ್ಕರೆ:
ಹೈಪೊಗ್ಲಿಸಿಮಿಯಾ , ಕಡಿಮೆ ರಕ್ತದ ಸಕ್ಕರೆ ಅಥವಾ ಕಡಿಮೆ ರಕ್ತದ ಗ್ಲೂಕೋಸ್ ಎಂದೂ ಕರೆಯಲ್ಪಡುತ್ತದೆ. ಕಡಿಮೆ ರಕ್ತದ ಸಕ್ಕರೆಯ ಸಂದರ್ಭದಲ್ಲಿ ಸಹ, ಬಹಳಷ್ಟು ಬೆವರು ಸಾಮಾನ್ಯ. ಕಡಿಮೆ ರಕ್ತದ ಸಕ್ಕರೆಯ ಮಟ್ಟದಿಂದಾಗಿ, ಅಡ್ರಿನಾಲಿನ್ ಹಾರ್ಮೋನ್ ಬಿಡುಗಡೆಯಾಗುವುದರಿಂದ ದೇಹವು ರಾತ್ರಿಯಲ್ಲಿ ಹೆಚ್ಚು ಬೆವರುತ್ತದೆ, ಏಕೆಂದರೆ ಈ ಕಾರಣದಿಂದಾಗಿ ಬೆವರು ಗ್ರಂಥಿಗಳು ತುಂಬಾ ಸಕ್ರಿಯವಾಗುತ್ತವೆ.
5. ಕ್ಯಾನ್ಸರ್ ನಂತಹ ರೋಗದ ಲಕ್ಷಣ:
ಕೆಲವು ವಿಧದ ಕ್ಯಾನ್ಸರ್ಗಳಲ್ಲಿ ರಾತ್ರಿ ಬೆವರುವಿಕೆ ಸಂಭವಿಸಬಹುದು. ಇದು ಹೆಚ್ಚಾಗಿ ಲಿಂಫೋಮಾ ಅಂದರೆ ರಕ್ತದ ಕ್ಯಾನ್ಸರ್ ನಲ್ಲಿ ಸಂಭವಿಸುತ್ತದೆ. ಇದಲ್ಲದೇ ಮಧುಮೇಹ, ಹೃದ್ರೋಗದಂತಹ ಗಂಭೀರ ಕಾಯಿಲೆಗಳಲ್ಲಿ ರಾತ್ರಿ ವೇಳೆ ದೇಹ ಹೆಚ್ಚು ಬೆವರುತ್ತದೆ.
- BIG BOSS6 days ago
ಲಾಯರ್ ಜಗದೀಶ್ ಹೊರಗೆ, ಪತ್ನಿ ಒಳಗೆ: ಕಲರ್ಸ್ ಶೋನಲ್ಲಿ ಜಗದೀಶ್ ಪತ್ನಿ
- BIG BOSS4 days ago
ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ: ಬಿಗ್ ಬಾಸ್ ನಿಂದ ಹೊರಬಂದ ಜಗದೀಶ್ ಫಸ್ಟ್ ರಿಯಾಕ್ಷನ್!
- BIG BOSS5 days ago
ಕೊನೆಗೂ ಸುದೀಪ್ ಹೇಳಿದ ಬದಲಾವಣೆಯನ್ನು ಜಾರಿಗೆ ತಂದ ಬಿಗ್ ಬಾಸ್; ಏನದು ?
- LATEST NEWS5 days ago
ಕೀಬೋರ್ಡ್ನಲ್ಲಿ ಎಫ್ ಮತ್ತು ಜೆ ಅಕ್ಷರಗಳ ಕೆಳಗೆ ಗೆರೆ ಏಕೆ ಇರುತ್ತದೆ ಗೊತ್ತಾ?