Connect with us

DAKSHINA KANNADA

ಇಂದು ಮತ್ತು ನಾಳೆ ಮಂಗಳೂರಿನಲ್ಲಿ ಹಲವೆಡೆ ವಿದ್ಯುತ್ ವ್ಯತ್ಯಯ

Published

on

ಮಂಗಳೂರು: ಎಸ್.ಆರ್.ಎಸ್ ಕಾವೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕೂಳೂರು ಮತ್ತು ಚಿಲಿಂಬಿ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ಇಂದು ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಗಾಂಧಿನಗರ, ಶಾಂತಿನಗರ, ವಿದ್ಯಾನಗರ, ಕೂಳೂರು ಜಂಕ್ಷನ್, ರಾಯಿಕಟ್ಟೆ, ಬಂಗ್ರಕೂಳೂರು, ಕೊಟ್ಟಾರ ಚೌಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.


ಅದೇ ರೀತಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಜೆಪ್ಪಿನ ಮೊಗರು ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ನಡೆಸಲಾಗುತ್ತದೆ.

ಕಾರಣ ನಾಳೆ ಕೂಡಾ ಬೆಳಿಗ್ಗೆ 10 ರಿಂದ 5ರ ವರೆಗೆ ಬಜಾಲ್, ಪಡೀಲ್, ವೀರನಗರ, ಫೈಸಲ್ನಗರ, ಕಲ್ಲಕಟ್ಟೆ, ತುಂಗನಗರ, ಹೇಮಾವತಿ ನಗರ, ಪಲ್ಲಕೆರೆ, ಕರ್ಮಾರ್, ಜೆ.ಎಂ. ರೋಡ್, ಪಕ್ಕಲಡ್ಕ, ಕುಡ್ತಡ್ಕ, ಸಾಲಿಯನ್ ರೈಸ್ ಮಿಲ್, ತೋಫಿಲ, ಜಲ್ಲಿಗುಡ್ಡೆ, ಜಯನಗರ, ವಿಜಯನಗರ, ಕಟ್ಟಪುಣಿ, ದರ್ಬಾರ್ ಗುಡ್ಡೆ, ಭಟ್ರಬೆಟ್ಟು, ಪ್ರಗತಿನಗರ, ಕೆ.ಹೆಚ್.ಬಿ ಕಾಲೋನಿ, ಎಕ್ಕೂರು, ಬಜಾಲ್ ಬೊಲ್ಲ, ಬಜಾಲ್ ಚರ್ಚ್, ಆದರ್ಶನಗರ, ಆದರ್ಶಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಚೇಳಾರು ಮತ್ತು ತಡಂಬೈಲ್ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ಮೇ.26 ರಂದು ಬೆಳಿಗ್ಗೆ 10 ರಿಂದ 5ರವರೆಗೆ ಚೊಕ್ಕಬೆಟ್ಟು, ಮಧ್ಯ, ಚೇಳಾರು, ಮುಕ್ಕ, ಸಸಿಹಿತ್ಲು, ಶ್ರೀನಿವಾ, ದಾಂಡಿ, ಅಯ್ಯಪ್ಪ ಗುಡಿ, ಮೂಡುಕೊಪ್ಪಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

DAKSHINA KANNADA

ಹೆಬ್ರಿ ಮಠದ ಬೆಟ್ಟು ಬಳಿ ಸಾರ್ವಜನಿಕರ ಪ್ರತಿಭಟನೆ-ಧರ್ಮಸ್ಥಳ ಕೊಲ್ಲೂರು ರಾಜ್ಯ ಹೆದ್ದಾರಿ ಬಂದ್

Published

on

ಹೆಬ್ರಿ : ಹೆಬ್ರಿ ತಾಲೂಕಿನ ಮಠದ ಬೆಟ್ಟು ಎಂಬಲ್ಲಿ ಹಾದು ಹೋಗುವ ಕೊಲ್ಲೂರು ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿರುವ ಹಿನ್ನಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ. ಅಗಲ ಕಿರಿದಾಗಿರುವ ಕೊಲ್ಲೂರು ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿದೆ.

ಇತ್ತೀಚಿನ ವರ್ಷದಲ್ಲಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ ಕಾರಣ ಪದೇ ಪದೇ ಅಪಘಾತಗಳೂ ಕೂಡಾ ಸಂಭವಿಸ್ತಾ ಇದೆ. ಕೆಲ ದಿನಗಳ ಹಿಂದೆಯೂ ಸ್ಥಳೀಯ ದ್ವಿಚಕ್ರವಾಹನಕ್ಕೆ ಪ್ರವಾಸಿ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಯುವಕನೊಬ್ಬ ಗಂಭೀರ ಗೊಂಡಿದ್ದ. ಹೀಗಾಗಿ ಅರಣ್ಯ ಇಲಾಖೆಯೇ ರಸ್ತೆ ಅಭಿವೃದ್ದಿಗೆ ಅಡ್ಡಿ ಪಡಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ರಸ್ತೆಯ ಇಕ್ಕೆಲೆಯಲ್ಲಿ ಇರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು, ಅರಣ್ಯ ಇಲಾಖೆ ರಸ್ತೆ ಅಗಲೀಕರಣಕ್ಕೆ ಮರ ಕಡಿಯಲು ಹಾಗೂ ಅರಣ್ಯ ಭೂಮಿ ನೀಡಲು ಒಪ್ಪಿಗೆ ನೀಡಿಲ್ಲ.

ಹೀಗಾಗಿ ಹಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಸ್ಥಳೀಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪೊಲೀಸರು ಪ್ರತಿಭಟನಾಕಾರರ ಮನ ಒಲಿಸುವ ಪ್ರಯತ್ನ ನಡೆಸಿದ್ದರಾದ್ರೂ ಪ್ರಯೋಜನವಾಗಿಲ್ಲ. ಹಿರಿಯ ಅರಣ್ಯ ಅಧಿಕಾರಿಗಳು ಬರುವ ತನಕ ರಸ್ತೆ ತೆರವು ಮಾಡೋದಿಲ್ಲ ಎಂದು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಲಾಗುತ್ತಿದೆ.

Continue Reading

DAKSHINA KANNADA

ಮಂಗಳೂರು: ಕಟ್ಟಡದಿಂದ ಬಿದ್ದು ಕರ್ತವ್ಯ ನಿರತ ಪೈಂಟರ್‌ ಸಾವು

Published

on

ಮಂಗಳೂರು : ಪೈಂಟ್ ಮಾಡುವ ವೇಳೆ ಕಟ್ಟಡವೊಂದರ ಎರಡನೇ ಮಹಡಿಯಿಂದ ಬಿದ್ದ ಯುವಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ. ಏಣಿಯನ್ನು ಬಳಸಿ ಪೈಂಟಿಂಗ್ ಮಾಡುತ್ತಿದ್ದ 26 ವರ್ಷ ಪ್ರಾಯದ ಮೋಹಿತ್ ಪೂಜಾರಿ ಮೃತ ದುರ್ದೈವಿ.

ಕುಡುಪು ಕೊಂಚಾಡಿ ನಿವಾಸಿಯಾಗಿದ್ದ ಮೋಹಿತ್ ಪೂಜಾರಿ ಶಕ್ತಿನಗರದ ಮನೆಯೊಂದರಲ್ಲಿ ಕಳೆದ 15 ದಿನಗಳಿಂದ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ದೀಪಕ್ ಎಂಬ ಇನ್ನೊಬ್ಬರ ಜತೆ ಮಹಡಿಯ ಹೊರಭಾಗದಲ್ಲಿ ಪೈಂಟಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಮೋಹಿತ್ ನಿಂತಿದ್ದ ಏಣಿ ಗೋಡೆಯಿಂದ ಜಾರಿದ್ದು, ಮೋಹಿತ್ ಮನೆಯ ಹೊರಭಾಗದ ರಸ್ತೆಗೆ ಎಸೆಯಲ್ಪಟ್ಟಿದ್ದರು. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆದಿತ್ತಾದ್ರೂ ಈ ವೇಳೆಗಾಗಲೇ ಮೋಹಿತ್ ಇಹಲೋಕ ತ್ಯಜಿಸಿದ್ದರು. ಈ ಕುರಿತು ಮೋಹಿತ್ ಪೈಂಟಿಂಗ್ ಮಾಡುತ್ತಿದ್ದ  ಶಕ್ತಿನಗರದ ಶಿವ ಡೆಕೊರೇಟರ್ಸ್‌ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Continue Reading

DAKSHINA KANNADA

ಅಯೋಧ್ಯಾ ರಾಮನಿಗೆ ವಿಶಿಷ್ಟ ದೀಪಸೇವೆ ಸಲ್ಲಿಸಿದ ಉದ್ಯಮಿ ನಾಗೇಂದ್ರ ಆಚಾರ್ಯ ದಂಪತಿ

Published

on

ಉಡುಪಿ ಪೇಜಾವರದ ನಾಗೇಂದ್ರ ಆಚಾರ್ಯ- ಅರುಣಾ ಆಚಾರ್ಯ ದಂಪತಿ ಅಯೋಧ್ಯಾ ರಾಮ ಲಲ್ಲಾನಿಗೆ ವಿಶಿಷ್ಟ ದೀಪಸೇವೆ ಸಲ್ಲಿಸಿದ್ದಾರೆ.

ಇವರು ಮೂಲತಃ ಉಡುಪಿಯವರಾಗಿದ್ದರೂ ಮುಂಬೈ ಉದ್ಯಮಿಯಾಗಿದ್ದಾರೆ.

ಎರಡು ಬೆಳ್ಳಿಯ ಎರಡು ಬೃಹತ್ ಕಾಲುದೀಪಗಳನ್ನು ಅಯೋಧ್ಯೆಗೆ ಅರ್ಪಿಸಿದ್ದು, ದಂಪತಿ ರಾಮ ಸೇವೆ ಮಾಡುವ ಸಂಕಲ್ಪವನ್ನು ಈಡೇರಿಸಿಕೊಂಡಿದ್ದಾರೆ. ಈ ದೀಪಗಳು ತಲಾ ಮೂರೂವರೆ ಅಡಿ ಎತ್ತರವಿದ್ದು, ತಲಾ 13.5 ಕೆ.ಜಿ.ತೂಕವಿವೆ.

Continue Reading

LATEST NEWS

Trending