Friday, August 19, 2022

ಮೂಡುಬಿದಿರೆ: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ-ಕಾಂಗ್ರೆಸ್ ಪ್ರತಿಭಟನೆ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎಂಟು ತಿಂಗಳಿನಿಂದ ವೈದ್ಯಾಧಿಕಾರಿಗಳು ಇಲ್ಲದೆ ಈ ಭಾಗದ ಬಡ ಜನರು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಇಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.


ಈ ಆಸ್ಪತ್ರೆಯ ಕುರಿತು ಇಲಾಖೆಗಳಿಗೂ ಸೂಕ್ತ ಮಾಹಿತಿ ಇದ್ದರೂ ಕೂಡಾ ಈ ಭಾಗಗದ ಜನರನ್ನು ಸಂಪೂರ್ಣವಾಗು ಡೋಂಟ್ ಕೇರ್ ಮಾಡಲಾಗಿದೆ ಎಂಬ ವಿಚಾರಕ್ಕೆ ಪ್ರತಿಭಟನೆ ನಡೆಸಲಾಯಿತು.

ಈ ಪ್ರತಿಭಟನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮೂಡುಬಿದಿರೆ ನಗರ ಕಾಂಗ್ರೆಸ್ ಅಧ್ಯಕ್ಷ ಪುರಂದರ ದೇವಾಡಿಗ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಕಲ್ಲಬೆಟ್ಟು ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರವೀಣ್ ಜೈನ್,

ಚಂದ್ರಹಾಸ ಸನಿಲ್, ರಾಜೇಶ್ ಕಡಲಕೆರೆ, ಸುರೇಶ್ ಕೋಟ್ಯಾನ್, ಆಲ್ವಿನ್ ಮಿನೇಜಸ್, ಅರುಣ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here

Hot Topics

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ಐವರು ಆರೋಪಿಗಳು NIA ವಶಕ್ಕೆ

ಪುತ್ತೂರು: ಬಿಜೆಪಿ ಯುವ ಮುಖಂಡ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿರುವ ಐವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದವರು ವಿಚಾರಣೆಗಾಗಿ 6 ದಿನಗಳ ಕಾಲ ತಮ್ಮ...

ಇಂದು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ: ಭರದ ಸಿದ್ದತೆ-ನಾಳೆ ವಿಟ್ಲ ಪಿಂಡಿ

ಉಡುಪಿ: ಕೃಷ್ಣಮಠದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಆ.20 ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಪರ್ಯಾಯ ಕೃಷ್ಣಾಪುರ ಮಠದ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.ಭಕ್ತರಿಗೆ ಪ್ರಸಾದವಾಗಿ ಹಂಚಲು ಚಕ್ಕುಲಿ ಹಾಗೂ ಬಗೆಬಗೆಯ ಉಂಡೆಗಳ...

1924ರ ನಂತರದ ಹೋರಾಟದಲ್ಲಿ ಸಾವರ್ಕರ್ ಭಾಗವಹಿಸಿದ ಸಾಕ್ಷಿ ಇದ್ರೆ ತೋರ್ಸಿ-ಖಾದರ್ ಸವಾಲ್

ಮಂಗಳೂರು: ಸಾವರ್ಕರ್ 1924 ರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಇತಿಹಾಸ ಇದ್ರೆ , ಇತಿಹಾಸ ಪುಸ್ತಕದಲ್ಲಿ ಅದು ಕಾಣ ಸಿಕ್ಕರೆ ಅಥವಾ ಸಾಕ್ಷಿ ಇದ್ರೆ ನನಗೆ ತೋರಿಸುತ್ತೀರಾ ಎಂದು...