ಕೊರೊನಾ ವಾರಿಯರ್ಸ್ ಹಲ್ಲೆ ಪ್ರಕರಣದಲ್ಲಿ ‘ನೋ ಕಾಂಪ್ರಮೈಸ್’: ಸಚಿವ ಬಸವರಾಜ್ ಬೊಮ್ಮಾಯಿ ಖಡಕ್ ಹೇಳಿಕೆ
ಕೊರೊನಾ ವಾರಿಯರ್ಸ್ ಹಲ್ಲೆ ಪ್ರಕರಣದಲ್ಲಿ ‘ನೋ ಕಾಂಪ್ರಮೈಸ್’: ಸಚಿವ ಬಸವರಾಜ್ ಬೊಮ್ಮಾಯಿ ಖಡಕ್ ಹೇಳಿಕೆ
ಉಡುಪಿ: ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ.
ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆರೋಪಿಗಳಿಗೆ ಜಾಮೀನು ಕೊಡಬಾರದೆಂಬ ವಿಚಾರ ಕೂಡ ಇದೆ.
ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಂದಿರುವ ಸುಗ್ರೀವಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉಡುಪಿಯಲ್ಲಿ ಹೇಳಿಕೆ ನೀಡಿದ್ದಾರೆ.
ಅಟ್ಯಾಕ್, ನಿರ್ಬಂಧ ಅಡಚಣೆಯಾದರೂ ಸಹಿಸುವ ಮಾತೇ ಇಲ್ಲ. ಮುಖ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ.
ಅದು ಯಾರೇ, ಎಷ್ಟೇ, ದೊಡ್ಡವರಾದ್ರೂ ಕಠಿಣ ಕ್ರಮ ತೆಗದುಕೊಳ್ಳುತ್ತೇವೆ. ಪ್ರಕರಣದಲ್ಲಿ ರಾಜಿಗೆ ಅವಕಾಶವೇ ಇಲ್ಲ, ‘ದೆರ್ ಈಸ್ ನೋ ಕಾಂಪ್ರಮೈಸ್’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಪಾದರಾಯಣಪುರ ಹಲ್ಲೆ ಪ್ರಕರಣದ 126 ಕ್ಕೂ ಹೆಚ್ಚಿನ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ರಾಮನಗರ ಜೈಲಿನಲ್ಲಿದ್ದಾರೆ. ಒಬ್ಬ ಪ್ರಮುಖ ಆರೋಪಿಯ ಬಂಧನ ಬಾಕಿಯಿದ್ದು ಶೀಘ್ರ ಬಂಧನವಾಗುತ್ತೆ.
ನ್ಯಾಶನಲ್ ಡಿಸಾಸ್ಟರ್ ಆಕ್ಟ್ ಅಡಿ ಬಂಧಿಸಿ ಎಂಟರಿಂದ ಹತ್ತು ಸೆಕ್ಷನ್ ಹಾಕಲಾಗಿದೆ. ಜೊತೆಗೆ ಸರ್ಕಾರಿ ಸೇವೆಗೆ ಅಡ್ಡಿಪಡಿಸಿದ ಪ್ರಕರಣವೂ ದಾಖಲಾಗಿದೆ. ಚಾರ್ಜ್ ಶೀಟ್ ಇನ್ನೂ ಫೈಲ್ ಮಾಡಿಲ್ಲ.
ಈ ನಡುವೆ ನೂತನ ಸುಗ್ರೀವಾಜ್ಞೆ ಜಾರಿಯಾಗಲಿದೆ. ಆದ್ದರಿಂದ ಈ ಪ್ರಕರಣದ ತನಿಖಾ ಹಂತ ನೋಡಿಕೊಂಡು ಸಾಧ್ಯವಿದ್ದರೆ ಅಗತ್ಯ ಸೆಕ್ಷನ್ ಗಳ ಸೇರ್ಪಡೆ ಮಾಡಲಿದ್ದೇವೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ನುಡಿದಿದ್ದಾರೆ.
ಮತ್ತೆ ಮಾತು ಮುಂದುವರಿಸಿದ ಸಚಿವರು, ಉಡುಪಿಯಲ್ಲಿ ಕೋವಿಡ್ ಮ್ಯಾನೇಜ್ಮೆಂಟ್ ಚೆನ್ನಾಗಿ ಆಗಿದೆ.
ಎಲ್ಲಾ ವೈದ್ಯರಿಗೆ ಹಾಗೂ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಇನ್ನು ಜಿಲ್ಲಾಸ್ಪತ್ರೆಯಲ್ಲಿ ಸೆಂಟ್ರಲೈಸ್ಡ್ ಆಕ್ಸಿಜನ್ 50 ಬೆಡ್ ವ್ಯವಸ್ಥೆ ಹಾಗೂ ತಾಲೂಕಲ್ಲಿ 10 ಬೆಡ್ ವ್ಯವಸ್ಥೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಇನ್ನು ಜಿಲ್ಲೆಗೆ 3500 ಪಿಪಿಇ ಕಿಟ್ ಅಗತ್ಯವಿದೆ. ಜೊತೆಗೆ ರಾಜ್ಯದಲ್ಲಿ 27 ಲ್ಯಾಬ್ ಆರಂಭವಾಗಲಿದ್ದು, ಉಡುಪಿಯಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಹೊರ ಜಿಲ್ಲೆಯಿಂದ ಜನರನ್ನು ಸದ್ಯಕ್ಕೆ ಉಡುಪಿ ಜಿಲ್ಲೆಯೊಳಗೆ ಬಿಡಲ್ಲ. ಜಿಲ್ಲೆಯಲ್ಲಿ ನಿರ್ಬಂಧ ಸಡಿಲಿಸುವ ಬಗ್ಗೆ ಬೇಡಿಕೆ ಇದೆಯಾದ್ರೂ,
ಉಡುಪಿ ಗ್ರೀನ್ ಝೋನ್ ವ್ಯಾಪ್ತಿಗೆ ಬಂದಮೇಲೆ ಚಿಂತನೆ ನಡೆಸಲಾಗುವುದು ಎಂದು ಮಣಿಪಾಲದಲ್ಲಿ ಜನಪ್ರತಿನಿಧಿಗಳು ಹಾಗೂ ವೈದ್ಯಾಧಿಕಾರಿಗಳ ಸಭೆಯಲ್ಲಿ ನುಡಿದಿದ್ದಾರೆ.
DAKSHINA KANNADA
ಹಳ್ಳ ಹಿಡಿದ ಸ್ಮಾರ್ಟ್ ಸಿಟಿಯ ಕಾಮಗಾರಿ; ಕುಂಟುತ್ತಾ ಸಾಗಿದ ಮಹಾಕಾಳಿ ಪಡ್ಪು ಅಂಡರ್ ಪಾಸ್
ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಮಹಾಕಾಳಿ ಪಡ್ಪುವಿನ ರೈಲ್ವೇ ಅಂಡರ್ ಪಾಸ್ ಕಾಮಗಾರಿ ಸದ್ಯಕ್ಕಂತು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಕಾಮಗಾರಿ ಕೈಗೆತ್ತಿಕೊಂಡು ವರ್ಷಗಳೇ ಕಳೆದರೂ ಕಾಮಗಾರಿ ಮುಗಿಸಬೇಕು ಅನ್ನೋ ಇಚ್ಚೆ ಸ್ಮಾರ್ಟ್ ಸಿಟಿ ಯೋಜನೆಯವರಿಗೂ ಇದ್ದಂತಿಲ್ಲ.
ಕೆಲ ತಿಂಗಳ ಹಿಂದೆ ಕಳಪೆ ಕಾಮಗಾರಿಯಿಂದಾಗಿ ಇಲ್ಲಿ ಕಾಮಗಾರಿ ಕುಸಿತ ಕೂಡಾ ಉಂಟಾಗಿತ್ತು. ಇದೀಗ ಕೆಲ ದಿನಗಳಿಂದ ಯಾವುದೇ ಕಾಮಗಾರಿ ನಡೆಸದೆ ಕಾರ್ಮಿಕರು ಕೂಡಾ ಕೆಲಸ ಇಲ್ಲದೆ ಸುಮ್ಮನೆ ಕುಳಿತಿರುವ ದೃಶ್ಯ ಇಲ್ಲಿ ಮಾಮೂಲಾಗಿದೆ. ಮಾರ್ಗನ್ ಗೇಟ್ ಮೂಲಕವಾಗಿ ಜೆಪ್ಪಿನ ಮೊಗೆರು ಹೈವೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದೆ. ಸದ್ಯ ಈ ಕಾಮಗಾರಿ ಆರಂಭವಾದ ಬಳಿಕ ಇಲ್ಲಿ ದ್ವಿಚಕ್ರ ವಾಹನಕ್ಕಷ್ಟೇ ಓಡಾಡಲು ವ್ಯವಸ್ಥೆ ಮಾಡಲಾಗಿದೆ.
ಉಪ್ಪಳದಲ್ಲಿ 3.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ; ಓರ್ವ ಬಂಧನ
ಹೀಗಾಗಿ ಈ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕಾಮಗಾರಿ ಯಾವಾಗ ಮುಗಿಸ್ತೀರಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ನಡಿಯುತ್ತಿರುವ ಕಾಮಗಾರಿಯ ವೇಗ ನೋಡಿದರೆ ಇದು 2024 ರಲ್ಲಿ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಇಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ. ಹೀಗಾಗಿ ತಕ್ಷಣ ಅಂಡರ್ ಪಾಸ್ ಕೆಲಸ ಮಗಿಸಿ ಅಂತ ಜನ ಒತ್ತಾಯಿಸಿದ್ದಾರೆ.
LATEST NEWS
11 ವರ್ಷದ ಬಾಲಕ ಹೃದಯಘಾ*ತಕ್ಕೆ ಬ*ಲಿ
ಹಾಸನ : ಹೃದಯಾಘಾ*ತ ಎಂಬುದು ಇತ್ತೀಚೆಗೆ ಸಾಮಾನ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಹೃದಯಾ*ಘಾತಕ್ಕೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಂದು ಕಳವಳಕಾರಿ ಘಟನೆ ನಡೆದಿದ್ದು, 11 ವರ್ಷದ ಬಾಲಕ ಹೃದಯಾ*ಘಾತಕ್ಕೆ ಬ*ಲಿಯಾಗಿದ್ದಾನೆ. ಈ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ. ಸಚಿನ್ ಮೃ*ತ ಬಾಲಕ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಸಚಿನ್, ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಹೃದಯಾ*ಘಾತವಾಗಿದೆ.
ಇದನ್ನೂ ಓದಿ : ಮನೆಯಲ್ಲಿ ಹಲ್ಲಿ ಕಾಟವೇ? ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ
ಟಿವಿ ನೋಡುತ್ತಲೇ ಕುಸಿ*ದು ಬಿದ್ದ ಮಗನನ್ನು ಮಾತನಾಡಿಸಲು ಮನೆಯವರು ಪ್ರಯತ್ನಿಸಿದ್ದು, ಏನು ಮಾತನಾಡದೆ ಇರೋದನ್ನು ಗಮನಿಸಿ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಲೂಕು ಸರ್ಕಾರಿ ಆಸ್ಪತ್ರೆಗೆ ಕರೆತರುವ ಮುನ್ನವೇ ಬಾಲಕ ಸಾ*ವನ್ನಪ್ಪಿದ್ದ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
FILM
ಕನ್ನಡದ ಸೀರಿಯಲ್ನಲ್ಲಿ ಮಿಂಚುತ್ತಿರುವ ಉಡುಪಿಯ ಬೆಡಗಿ
ಬೆಂಗಳೂರು/ಮಂಗಳೂರು: ಸಿನೆಮಾದಲ್ಲಿ ನಟಿಸಬೇಕು ಅನ್ನೋದು ಎಲ್ಲರ ಕನಸು. ಆದರೆ ಇಲ್ಲೊಬ್ಬಾಕೆ ನಟಿಗೆ ಸೀರಿಯಲ್ನಲ್ಲಿ ನಟಿಸಬೇಕು ಎಂಬ ಆಸೆ. ಆದರೆ ಆಕೆಗೆ ಮಾತ್ರ ಮೊದಲು ಒಲಿದು ಬಂದಿದ್ದು ಸಿನೆಮಾದಲ್ಲಿ ನಟಿಸುವ ಅವಕಾಶ. ಇದೀಗ ಆ ನಟಿ ಸುರ್ವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅವನು ಮತ್ತು ಶ್ರಾವಣಿ’ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಈ ಧಾರಾವಾಹಿಯಲ್ಲಿ ಶ್ರಾವಣಿಯಾಗಿ ಕಾಣಿಸಿಕೊಂಡಿರುವ ಇಶಿಕಾ ಶೆಟ್ಟಿಗಾರ್ ಮೂಲತಃ ಉಡುಪಿಯವರಾಗಿದ್ದಾರೆ.
ಶ್ರಾವಣಿ ಪಾತ್ರದ ಇಶಿಕಾ ಶೆಟ್ಟಿಗಾರ್ ಮೂಲತಃ ಉಡುಪಿಯವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈಕೆ 9 ನೇ ತರಗತಿಯಲ್ಲಿದ್ದಅಗಲೇ ಸಿನೆಮಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಊರ್ವಿ, ಗರುಡ, ಮನದ ಮರೆಯಲಿ ಸೇರಿದಂತೆ ನಾಳ್ಕೈದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಕಾನೂನು ಪದವಿ ಮುಗಿಸಿರುವ ಇವರು ಸೀರಿಯಲ್ ನಲ್ಲಿ ಆಭಿನಯಿಸುವತ್ತ ಒಲವು ಮಾಡಿದ್ದಾರೆ. ಹೀಗಾಗಿ ಲುಕ್ ಟೆಸ್ಟ್ ಕೂಡಾ ಕೊಟ್ಟಿದ್ದಾರೆ.
ಜಾನಿ ಮಾಸ್ಟರ್ ಪತ್ನಿಗೂ ಬಂತು ಕಂಟಕ..! ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್..!!
ಇದೇ ವೇಳೆ ‘ಅವನು ಮತ್ತು ಶ್ರಾವಣಿ’ ಧಾರಾವಾಹಿಗೆ ರಿಪ್ಲೇಸ್ಮೆಂಟ್ ಪಾತ್ರಕ್ಕೆ ಕರೆ ಬರುತ್ತದೆ. ರಿಪ್ಲೇಸ್ಮೆಂಟ್ ಪಾತ್ರ ಆಗಿದ್ದರಿಂದ ಜನರಿಗೆ ಇಷ್ಟ ಆಗ್ಬೋದಾ ಅನ್ನುವ ಮೈಂಡ್ ಸೆಟ್ ನಲ್ಲಿ ಇವರು ಕೊನೆಗೂ ಪಾತ್ರಕ್ಕೆ ಸೈ ಎಂದು ಹೇಳಿದ್ದಾರೆ. ಇದೀಗ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಈ ಧಾರಾವಾಹಿಯಲ್ಲಿ ನಟನೆ ಆರಂಭಿಸಿದ ಮೇಲೆ ಆಫರ್ಗಳು ಬರುತ್ತಿದೆ ಎಂದು ಇಶಿಕಾ ಶೆಟ್ಟಿಗಾರ್ ಹೇಳಿದ್ದಾರೆ.