ಮಂಗಳೂರು: ಕೇರಳದಲ್ಲಿ ಮತ್ತೆ ಪತ್ತೆ ಆಗಿರುವ ನಿಫಾ ಕುರಿತು ಗಡಿ ಜಿಲ್ಲೆಗಳಲ್ಲಿ ಅಧಿಕ ಎಚ್ಚರ ವಹಿಸಲಾಗುತ್ತಿದೆ. ರೋಗ ಲಕ್ಷಣ ಪತ್ತೆಗಾಗಿ ಗಡಿ ಪ್ರದೇಶದಲ್ಲಿ ಥರ್ಮಲ್ ಸ್ಕಾನಿಂಗ್ ನಡೆಸಲಾಗುತ್ತಿದೆ. ಈ ಬಗ್ಗೆ, ತಲಪಾಡಿ ಗಡಿಭಾಗದಲ್ಲಿ ಎಸಿಪಿ ರಂಜಿತ್ ಬಂಡಾರು ಹೇಳಿಕೆ ನೀಡಿದ್ದಾರೆ.
ಮಂಗಳೂರು ಹೊರವಲಯದ ತಲಪಾಡಿ ಗಡಿಯಲ್ಲಿ ಸದ್ಯ ಟೆಕ್ನಿಕಲ್ ಆಗಿ ಯಾವುದೇ ತಪಾಸಣೆ ಇಲ್ಲ.
ಸದ್ಯ ಥರ್ಮಲ್ ಸ್ಯಾನಿಂಗ್ ಆರಂಭಿಸುತ್ತೇವೆ. ಹಾಗೂ ಉಳಿದ ತಾಂತ್ರಿಕ ವ್ಯವಸ್ಥೆಗಳನ್ನು ಆರೋಗ್ಯ ಇಲಾಖೆ ವ್ಯವಸ್ಥೆ ಮಾಡುತ್ತದೆ.
ನಿಫಾ ರೋಗ ಲಕ್ಷಣ ಇದ್ದವರನ್ನು ವಾಪಾಸ್ ಕಳಿಸುತ್ತೇವೆ. ಕೊವಿಡ್ ನೆಗೆಟಿವ್ ರಿಪೋರ್ಟ್ ಇದ್ದು ಟೆಂಪರೇಚರ್ ಜಾಸ್ತಿ ಬಂದರೂ ವಾಪಾಸ್ ಕಳಿಸುತ್ತೇವೆ ಎಂದು ರಂಜಿತ್ ಮಾಹಿತಿ ನೀಡಿದ್ದಾರೆ.
ಹಣ್ಣುಗಳನ್ನು ಚೆನ್ನಾಗಿ ತೊಳೆದು ಸೇವಿಸಿ. ಪ್ರಾಣಿ, ಪಕ್ಷಿಗಳು ಕಚ್ಚಿದ ಹಣ್ಣು ಸೇವಿಸಬೇಡಿ. ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಂಡು ಬಂದಲ್ಲಿ ತಪಾಸಣೆ ನಡೆಸಿ ಡಿಹೆಚ್ಒ ವೆಂಕಟೇಶ್ ಹೇಳಿದ್ದಾರೆ.