LATEST NEWS
ನೈತಿಕ ಪೊಲೀಸ್‌ಗಿರಿ, ಕೋಮುವಾದಕ್ಕೆ ಕಡಿವಾಣ: ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್
ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅನುಪಮ ಅಗರ್ವಾಲ್ ಗುರುವಾರ ನಿರ್ಗಮನ ಕಮಿಷನರ್ ಕುಲದೀಪ್ ಜೈನ್ ಅವರಿಂದ ಅಧಿಕಾರ ಸ್ವೀಕರಿಸಿಕೊಂಡರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಇದೇ ಮೊದಲ ಬಾರಿಗೆ ನಾನು ಇಲ್ಲಿಗೆ ಬಂದಿದ್ದೇನೆ. ತುಂಬಾ ಸಂತೋಷ ಆಗಿದೆ. ಮಂಗಳೂರು ರಾಜ್ಯದಲ್ಲಿ ಪ್ರಮುಖ ತಾಣವಾಗಿ ಗುರುತಿಸಲ್ಪಟ್ಟಿದೆ. ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ಪೊಲೀಸಿಂಗ್ ವ್ಯವಸ್ಥೆ ಇಲ್ಲಿ ಸವಾಲಿನದ್ದಾಗಿದೆ.
ಇಲ್ಲಿನ ನೈತಿಕ ಪೊಲೀಸ್‌ಗಿರಿ, ಕೋಮುವಾದ ಮಟ್ಟ ಹಾಕುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜುಗಳು ಇರುವುದರಿಂದ ಇಲ್ಲಿ ಮಾದಕ ದ್ರವ್ಯ ಜಾಲವನ್ನು ಮಟ್ಟ ಹಾಕುವುದಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಈ ಹಿಂದಿನ ವರ್ಷದಲ್ಲೂ ಕೂಡಾ ನೈತಿಕ ಪೊಲೀಸ್ ಗಿರಿ, ಕೋಮುವಾದ ಇಲ್ಲಿ ಹಬ್ಬಿರುವುದನ್ನು ಕಂಡಿದ್ದೇವೆ. ಪೊಲೀಸರು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶವನ್ನು ಇನ್ನು ಮುಂದೆಯೂ ನೀಡುವುದಿಲ್ಲ. ನೈತಿಕ ಪೊಲೀಸ್ ಗಿರಿಗೆ ಮುಂದಾಗುವ, ಕುಮ್ಮಕ್ಕು ನೀಡುವ ಕಾಣದ ಕೈಗಳನ್ನೂ ನಾವು ಮಟ್ಟ ಹಾಕಲಿದ್ದೇವೆ ಎಂದರು.
ಗಾಂಜಾ ಮಾರಾಟಗಾರರು, ಸಾಗಾಟ ಮಾಡುವವರಿಗೆ ಬಿಸಿ ಮುಟ್ಟಿಸಲಾಗುವುದು. ಪೊಲೀಸರು ಗರಿಷ್ಠ ಎಚ್ಚರಿಕೆಯಲ್ಲಿದ್ದು ಜನಸ್ನೇಹಿ ಪೊಲೀಸಿಂಗ್ ವ್ಯವಸ್ಥೆಗೆ ಆದ್ಯತೆ ನೀಡಲಿದ್ದೇವೆ ಎಂದರು.
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲಿದ್ದೇವೆ. ಸಂಘಟನಾತ್ಮಕ ಅಪರಾಧಗಳಿಗೆ ನಾವು ಕಡಿವಾಣ ಹಾಕಿದ್ದೇವೆ. ಈ ಹಿಂದಿನ ಪೊಲೀಸ್ ಕಮಿಷನರ್ ಕುಲದೀಪ ಅವರು ಟ್ರಾಫಿಕ್ ಸಮಸ್ಯೆಗಳಿಗೂ ಹೆಚ್ಚು ಒತ್ತು ನೀಡಿದ್ದಾರೆ. ಫೋನ್ ಇನ್ ಕಾರ್ಯಕ್ರಮಗಳ ಮೂಲಕ ಜನಸ್ನೇಹಿ ಕಾರ್ಯಕ್ರಮ ನಾವೂ ಕೂಡಾ ಅದನ್ನು ಮುಂದುವರಿಸಲು ಆದ್ಯತೆ ನೀಡುವುದಾಗಿ ನುಡಿದರು.
LATEST NEWS
Lucknow: ಪುತ್ರಿ ಮದುವೆ ಮಾಡಲು ಎಂದು ಲಾಕರ್ ನಲ್ಲಿಟ್ಟ 18 ಲಕ್ಷ ರೂ. ಗೆದ್ದಲು ಪಾಲು..!
ಲಕ್ನೋ: ಮಗಳ ಮದುವೆಗೆಂದು ತಾಯಿಯೊಬ್ಬರು ರೂಪಾಯಿ-ರೂಪಾಯಿ ಹಣವನ್ನು ಜೋಪಾನವಾಗಿ ಬ್ಯಾಂಕ್‌ನ ಲಾಕರ್‌ನಲ್ಲಿ ಕೂಡಿ ಇಟ್ಟ ಸುಮಾರು 18 ಲಕ್ಷ ರೂ. ಹಣವು ಗೆದ್ದಲು ಹಿಡಿದು ನಾಶವಾಗಿರುವ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ವರದಿಯಾಗಿದೆ.
ಮೊರಾದಾಬಾದ್ ನಿವಾಸಿ ಅಲ್ಕಾ ಪಠಾಕ್ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಶಿಯಾನಾದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ 18 ಲಕ್ಷ ರೂ.ಗಳನ್ನು ಇಟ್ಟಿದ್ದರು.
ಇತ್ತೀಚಿಗೆ ಬ್ಯಾಂಕ್ ಸಿಬಂದಿ ಲಾಕರ್ ಅಗ್ರಿಮೆಂಟ್ ರಿನೀವಲ್‌ಗೆ ಎಂದು ಅಲ್ಕಾ ಅವರಿಗೆ ಕರೆ ಮಾಡಿ ಬರಲು ಹೇಳಿದ್ದಾರೆ.
ಈ ವೇಳೆ ಲಾಕರ್ ತೆರೆದರೆ ನೋಟುಗಳಿಗೆ ಗೆದ್ದಲು ಹಿಡಿದಿರುವುದು ಕಂಡು ಬಂದಿದೆ.
ಈ ಬಗ್ಗೆ ಬ್ಯಾಂಕ್‌ನ ಮುಖ್ಯ ಕಚೇರಿಗೆ ತಿಳಿಸಿರುವುದಾಗಿ ಸಿಬಂದಿ ಹೇಳಿದ್ದಾರೆ.
ತನಗಾದ ನಷ್ಟಕ್ಕೆ ಬ್ಯಾಂಕ್‌ನವರೇ ಪರಿಹಾರ ನೀಡಬೇಕೆಂದು ಮಹಿಳೆ ಪಟ್ಟು ಹಿಡಿದಿರುವುದು ವರದಿಯಾಗಿದೆ.
FILM
ವಯಸ್ಸಲ್ಲಿ ರಾಘವ್ ಚಡ್ಡಾ ಅವರಿಗಿಂತ ಸೀನಿಯರ್ ಪರಿಣಿತಿ ಚೋಪ್ರಾ…!
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಪ್ ಸಂಸದ ರಾಘವ್ ಚಡ್ಡಾ ಅವರ ವಯಸ್ಸಿನ ಅಂತರ ಈಗ ರಿವೀಲ್ ಆಗಿದೆ.
ಮುಂಬೈ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಪ್ ಸಂಸದ ರಾಘವ್ ಚಡ್ಡಾ ಅವರ ವಯಸ್ಸಿನ ಅಂತರ ಈಗ ರಿವೀಲ್ ಆಗಿದ್ದು, ರಾಘವ್ ಚಡ್ಡಾ ಅವರಿಗಿಂತ ಪರಿಣಿತಿ ಚೋಪ್ರಾ ಸೀನಿಯರ್.
ಸೆಪ್ಟೆಂಬರ್ 24ರಂದು ಈ ಜೋಡಿ ಗ್ರ್ಯಾಂಡ್ ಆಗಿ ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಸಪ್ತಪದಿ ತುಳಿದಿದ್ರು.
ರಾಘವ್ ಚಡ್ಡಾ ಅವರು 2022ರಲ್ಲಿ ಪಂಜಾಬ್‌ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.
33ನೇ ವಯಸ್ಸಿಗೆ ರಾಜ್ಯಸಭೆ ಪ್ರವೇಶಿಸಿದ ಅವರು, ಅತ್ಯಂತ ಕಿರಿಯ ರಾಜ್ಯಸಭಾ ಸದಸ್ಯ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.
ಇನ್ನು ನಟಿ ಪರಿಣಿತಿ ಚೋಪ್ರಾ ಅವರು 2011ರಿಂದಲೂ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ.
‘ಶುದ್ಧ್ ದೇಸಿ ರೊಮ್ಯಾನ್ಸ್’, ‘ಹಸೀ ತೊ ಫಸೀ’, ‘ದಾವತ್ ಎ ಇಶ್ಕ್’, ‘ನಮಸ್ತೆ ಇಂಗ್ಲೆಂಡ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯ ಅಕ್ಷಯ್ ಕುಮಾರ್ ಜತೆ ಪರಿಣಿತಿ ನಟಿಸಿರುವ ‘ಮಿಷನ್ ರಾಣಿಗಂಜ್’ ಸಿನಿಮಾ ತೆರೆ ಕಾಣಬೇಕಿದೆ.
ಸದ್ಯಕ್ಕೆ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರ ವಯಸ್ಸಿನ ಅಂತರದ ಸಾಕಷ್ಟು ಬಗ್ಗೆ ಚರ್ಚೆಯಾಗುತ್ತಿದೆ.
ಇಬ್ಬರಿಗೂ ಈಗ 35 ವರ್ಷ ವಯಸ್ಸಾಗಿದ್ದು, ನಟಿ ಪರಿಣಿತಿ ಚೋಪ್ರಾ ಅವರು 22 ಅಕ್ಟೋಬರ್ 1988ರಲ್ಲಿ ಜನಿಸಿದ್ದಾರೆ. ರಾಘವ್ ಚಡ್ಡಾ ಅವರು 11 ನವೆಂಬರ್ 1988ರಲ್ಲಿ ಜನಿಸಿದ್ದಾರೆ.
ವಿಶೇಷ ಎಂದರೆ ನಟಿ ಪರಿಣಿತಿ ಚೋಪ್ರಾ ಅವರು ರಾಘವ್ ಚಡ್ಡಾ ಅವರಿಗಿಂತ 20 ದಿನ ದೊಡ್ಡವರಾಗಿದ್ದಾರೆ.
ವಯಸ್ಸಿನ ಮಿತಿಯನ್ನು ಲೆಕ್ಕಿಸದೇ ಸ್ಟಾರ್ ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಮಾಮೂಲು ಆಗಿದೆ.
BELTHANGADY
ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು- ಕಳ್ಳ ಅರೆಸ್ಟ್..!
ಬೆಳ್ತಂಗಡಿ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ನಿವಾಸಿ ಉಮೇಶ್ ಬಳೇಗಾರ್(47) ಬಂಧಿತ ಆರೋಪಿ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಅಜಿತ್ ನಗರ ಕೆಲ್ಲೆ ನಿವಾಸಿ ಫೆಲಿಕ್ಸ್ ರೋಡ್ರಿಗಸ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಗಲು ಹೊತ್ತಿನಲ್ಲಿ ಮನೆಯ ಬಾಗಿಲು ಮುರಿದು ನುಗ್ಗಿ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಆಗಿದೆ.
ಈ ಕೂಡಲೇ ಮನೆಯವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.
ಆರೋಪಿ ವಿರುದ್ಧ ತಮಿಳುನಾಡು, ಕೇರಳದ ವಿವಿಧ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಿಸಲಾಗಿದೆ.
ಅಲ್ಲದೆ ಕರ್ನಾಟಕದ ಪುತ್ತೂರು, ಬಂಟ್ವಾಳ, ಮಂಗಳೂರು, ಮೂಡಬಿದ್ರೆ ಠಾಣೆಯಲ್ಲಿಯೂ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ.
ಈತನಿಗಾಗಿ ಮೂರೂ ರಾಜ್ಯಗಳ ಪೊಲೀಸರು ಹುಡುಕಾಟ ನಡೆಸುತ್ತಿರುವಾಗಲೇ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈತನಿಂದ ಕಳ್ಳತನ ಮಾಡಲಾದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.