Connect with us

    LATEST NEWS

    ಹೊಸ ಒಪ್ಪಂದ : ಭಾರತೀಯ ಸೇನೆಗೆ ಅಮೆರಿಕದ MQ-9B ಪ್ರಿಡೆಟರ್ ಡ್ರೋನ್ ಸೇರ್ಪಡೆ

    Published

    on

    ಮಂಗಳೂರು/ನವದೆಹಲಿ: ಭಾರತದ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ ಸೌಲಭ್ಯಕ್ಕಾಗಿ ವಿದೇಶಿ ಮಿಲಿಟರಿ ಮಾರಾಟ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಒಪ್ಪಂದವನ್ನು ಅಧಿಕೃತಗೊಳಿಸಲು ಅಮೆರಿಕ ಮಿಲಿಟರಿ ಮತ್ತು ಕಾರ್ಪೊರೇಟ್ ಪ್ರತಿನಿಧಿಗಳು ಈಗಾಗಲೇ ಭಾರತದಲ್ಲಿ ನೆಲೆಯೂರಿದ್ದಾರೆ. ಸಮಾರಂಭದಲ್ಲಿ ನೌಕಾ ವ್ಯವಸ್ಥೆಗಳ ಜಂಟಿ ಕಾರ್ಯದರ್ಶಿ ಮತ್ತು ಸ್ವಾಧೀನ ವ್ಯವಸ್ಥಾಪಕರು ಸೇರಿದಂತೆ ಉನ್ನತ ಭಾರತೀಯ ರಕ್ಷಣಾ ಅಧಿಕಾರಿಗಳು ಉಪಸ್ಥಿತರಿದ್ದರು.

    ಏನಿದು ಒಪ್ಪಂದ? 

    ಭಾರತ ಮತ್ತು ಅಮೆರಿಕ 31 ಪ್ರಿಡೇಟರ್ ಡ್ರೋನ್‌ಗಳಿಗಾಗಿ 32,000 ಕೋಟಿ ರೂ.ಗಳ ಒಪ್ಪಂದವನ್ನು ಅಂತಿಮಗೊಳಿಸಿವೆ. ಇದು ಭಾರತೀಯ ಸೇನೆಯ ಕಣ್ಗಾವಲು ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಭದ್ರತಾ ಕ್ಯಾಬಿನೆಟ್ ಸಮಿತಿ ಇಂದು (ಅ.15) ಇದನ್ನು ಸ್ವಾಧೀನಪಡಿಸಿಕೊಳ್ಳಲು ಅನುಮೋದನೆ ನೀಡಿತು. ನೌಕಾಪಡೆಗೆ 15 ಡ್ರೋನ್‌ಗಳನ್ನು ಪೂರೈಸಲಾಗುತ್ತದೆ. ಉಳಿದವುಗಳನ್ನು ಭಾರತೀಯ ಸೇನೆ ಮತ್ತು ವಾಯುಪಡೆಯ ನಡುವೆ ಸಮಾನವಾಗಿ ಹಂಚಲಾಗುತ್ತದೆ.

    ದೀರ್ಘಾವಧಿಯ ಒಪ್ಪಂದವು ಕೆಲವು ವಾರಗಳ ಹಿಂದೆ ರಕ್ಷಣಾ ಸ್ವಾಧೀನ ಮಂಡಳಿಯ ಸಭೆಯಲ್ಲಿ ಚರ್ಚೆಗೊಳಗಾಯಿತು. ಚೆನ್ನೈ ಬಳಿಯ ಐಎನ್‌ಎಸ್ ರಾಜಾಲಿ, ಗುಜರಾತ್‌ನ ಪೋರಬಂದರ್ ಮತ್ತು ಸರ್ಸಾವಾ ಮತ್ತು ಉತ್ತರ ಪ್ರದೇಶದ ಗೋರಖ್‌ಪುರದಂತಹ ಸ್ಥಳಗಳಿಗೆ ಭಾರತ ಡ್ರೋನ್‌ಗಳನ್ನು ನಿಯೋಜಿಸಲಿದೆ. ಮಿಲಿಟರಿ ಅಗತ್ಯಗಳ ವೈಜ್ಞಾನಿಕ ವಿಶ್ಲೇಷಣೆಯ ಆಧಾರದ ಮೇಲೆ ತ್ರಿ-ಸೇವಾ ಒಪ್ಪಂದದ ಮೂಲಕ ಡ್ರೋನ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

    ಡೆಲವೇರ್‌ನಲ್ಲಿ ನಡೆದ ಕ್ವಾಡ್ ಲೀಡರ್ಸ್ ಶೃಂಗಸಭೆಯ ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬೈಡೆನ್ ಡ್ರೋನ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ಮಾತುಕತೆ ನಡೆಸಿದ ಒಂದು ತಿಂಗಳ ನಂತರ ಈ ಬೆಳವಣಿಗೆಯಾಗಿದೆ. ಈ ಯೋಜನೆಗೆ ಕಳೆದ ವಾರ ಭದ್ರತೆಯ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಅನುಮತಿ ನೀಡಿತ್ತು.

    LATEST NEWS

    ಗೂಂಡಾ ರಾಜಕಾರಣ ಮಾಡುವ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿಯುತ್ತಿತ್ತು : ಡಿ.ವಿ.ಸದಾನಂದಗೌಡ

    Published

    on

    ಉಡುಪಿ : ಕಾಂಗ್ರೆಸ್ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಮತ್ತು ಡಾನ್ ಮುತ್ತಪ್ಪ ರೈ ಗಳಸ್ಯ ಕಂಟಸ್ಯರಾಗಿದ್ದರು. ಗೂಂಡಾ ರಾಜಕಾರಣ ಮಾಡುವ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿಯುತ್ತಿತ್ತು ಎಂದು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಉಡುಪಿಯಲ್ಲಿ ಆಯೋಜಿಸಲಾದ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದಲ್ಲಿ ವಿಧಾನ ಪರಿಷತ್ ಉಪಚುನಾವಣೆ ಅಭ್ಯರ್ಥಿ ಕಿಶೋರ್ ಕುಮಾರ್ ಪರ ಮಾತನಾಡಿದ ಡಿ.ವಿ.ಸದಾನಂದ ಗೌಡ ಈ ಹೇಳಿಕೆ ನೀಡಿದ್ದಾರೆ.

    ಅಭ್ಯರ್ಥಿ ಕಿಶೋರ್ ಕುಮಾರ್ ಅವರು ನಮ್ಮ ಪುತ್ತೂರಿನವರು. ಇವರ ತಂದೆ ರಾಮಣ್ಣ ಭಂಡಾರಿ. ಕಾಂಗ್ರೆಸ್ ಮಾಜಿ ಸಚಿವರಾಗಿದ್ದ ವಿನಯ್ ಕುಮಾರ್ ಸೊರಕೆಯವರ ಪಕ್ಕದ ಮನೆಯವರು ಕಿಶೋರ್ ಅವರಾಗಿದ್ದಾರೆ. ಒಂದು ಕಾಲಘಟ್ಟದಲ್ಲಿ ಗೂಂಡಾ ರಾಜಕಾರಣ ನಡೆಯುತ್ತಿದ್ದ ಸಮಯವದು. ಕಾಂಗ್ರೆಸ್ ಗೂಂಡಾ  ರಾಜಕಾರಣದ ಮೂಲಕ ಅಧಿಪತ್ಯವನ್ನ ರಾಜ್ಯದಲ್ಲಿ ಸ್ಥಾಪಿಸಿತ್ತು.

    ಇದನ್ನೂ ಓದಿ : ಯುವತಿಯರೆ ಎಚ್ಚರ : ‘ಮ್ಯಾಟ್ರಿಮೊನಿ’ಯಲ್ಲಿ ಚೆಂದದ ಹುಡುಗಿಯರೇ ಈ ಸರ್ಕಾರಿ ನೌಕರನಿಗೆ ಟಾರ್ಗೆಟ್!

    ಭೂಗತ ದೊರೆ ಮುತ್ತಪ್ಪ ರೈ ಮತ್ತು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಒಂದೇ ಗ್ರಾಮದವರಾಗಿದ್ದು, ಇವರ ನಡುವೆ ಗಳಸ್ಯ ಕಂಠಸ್ಯವಿತ್ತು. ಯಾವುದೇ ಚುನಾವಣೆ ಇದ್ದರೂ ಕೂಡ ಗೂಂಡಾ ರಾಜಕಾರಣದ ಮೂಲಕ ಅಧಿಪತ್ಯ ಸ್ಥಾಪನೆ ಮಾಡಲಾಗುತ್ತಿತ್ತು. ಅಂತಹ ಸಮಯದಲ್ಲಿ ಕಿಶೋರ್ ಕುಮಾರ್ ಅವರ ತಂದೆ ರಾಮಣ್ಣ ಭಂಡಾರಿಯವರು ಅದ್ಭುತ ಜನಸಂಘದ ಕಾರ್ಯಕರ್ತರಾಗಿ ಹೊರಹೊಮ್ಮಿದರು ಎಂದು ಅವರು ಶ್ಲಾಘಿಸಿದರು.

    Continue Reading

    LATEST NEWS

    ನೈಜೀರಿಯಾ: ತೈಲ ಟ್ಯಾಂಕರ್ ಸ್ಫೋಟಗೊಂಡು 94 ಮಂದಿ ಸಾ*ವು

    Published

    on

    ನೈಜೀರಿಯಾದಲ್ಲಿ ಸಂಭವಿಸಿದ ಭೀಕರ ದುರಂತ ಸಂಭವಿಸಿದ್ದು, ಇಂಧನ ಟ್ಯಾಂಕರ್ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಕನಿಷ್ಠ 94 ಜನರು ಸಾ*ವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ವಿಶ್ವವಿದ್ಯಾಲಯದ ಸಮೀಪವಿರುವ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಟ್ಯಾಂಕರ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡ ನಂತರ ಜಿಗಾವಾ ರಾಜ್ಯದಲ್ಲಿ ಮಧ್ಯರಾತ್ರಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ವಕ್ತಾರ ಲಾವನ್ ಆಡಮ್ ತಿಳಿಸಿದ್ದಾರೆ. “ಸ್ಫೋಟ ಸಂಭವಿಸಿದಾಗ ನಿವಾಸಿಗಳು ಪಲ್ಟಿಯಾದ ಟ್ಯಾಂಕರ್ನಿಂದ ಇಂಧನವನ್ನ ತೆಗೆದುಕೊಳ್ಳುತ್ತಿದ್ದರು, ಆಗ ಭಾರಿ ಬೆಂಕಿ ಹೊತ್ತಕೊಂಡಿದ್ದು, 94 ಜನರು ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ” ಎಂದು ಆಡಮ್ ಹೇಳಿದರು.

    Continue Reading

    LATEST NEWS

    ಪುತ್ತೂರು: ಆಟೋರಿಕ್ಷಾದಲ್ಲಿ ಅಕ್ರಮ ಗೋ ಸಾಗಾಟ; ಬಜರಂಗದಳ ಕಾರ್ಯಕರ್ತರಿಂದ ದಾಳಿ

    Published

    on

    ಪುತ್ತೂರು: ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ ಮಾಡುತ್ತಿದ್ದುದನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿದ ಘಟನೆ ಪುತ್ತೂರಿನಲ್ಲಿ ಅ.16ರ ಬುಧವಾರ ನಡೆದಿದೆ.

    ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಬಜರಂಗದಳದ ಕಾರ್ಯಕರ್ತರು ಆಟೋ ರಿಕ್ಷಾವನ್ನು ತಡೆದು ಗೋವಿನ ರಕ್ಷಣೆ ಮಾಡಿದ್ದಾರೆ.

    ಗೋವನ್ನು ಅಕ್ರಮವಾಗಿ ಪುತ್ತೂರು ಬೈಪಾಸ್ ರಸ್ತೆಯ ಮೂಲಕ ವ್ಯಕ್ತಿಯೋರ್ವ ಆಟೋ ರಿಕ್ಷಾದಲ್ಲಿ ಮಹಿಳೆಯರ ಕಾಲಡಿಯಲ್ಲಿ ಇಟ್ಟು ಸಾಗಿಸುತ್ತಿರುವುದರ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

    ಹಿಂಸಾತ್ಮಕ ರೀತಿಯಲ್ಲಿ ಜಾನುವಾರನ್ನು ಮಹಿಳೆಯರ ಕಾಲಡಿಯಲ್ಲಿ ಇಟ್ಟು ಸಾಗಿಸಲಾಗುತ್ತಿತ್ತು. ಅಲ್ಲದೆ ರಿಕ್ಷಾದ ಸೀಟಿನ ಎಡೆಯಲ್ಲಿ ಸಿಲುಕಿಕೊಂಡ ಜಾನುವಾರಿನ ಒಂದು ಕಾಲು ಕೂಡಾ ತುಂಡಾಗಿದ್ದು, ಸಂಘಟನೆ ಕಾರ್ಯಕರ್ತರು ಅತ್ಯಂತ ಜಾಗೃತೆ ವಹಿಸಿ ಅದನ್ನು ರಿಕ್ಷಾದಿಂದ ಹೊರಕ್ಕೆ ಎಳೆದು ತೆಗೆದಿದ್ದಾರೆ.

    ಆ ಬಳಿಕ ಜಾನುವಾರು ಸಹಿತ ಆಟೋ ರಿಕ್ಷಾ ಹಾಗೂ ಮಹೆಳೆಯರನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    Trending