Connect with us

    LATEST NEWS

    ರೊಮ್ಯಾನ್ಸ್ ಮೂಡಲ್ಲಿ ಫಸ್ಟ್ ನೈಟ್ ವಿಡಿಯೋ ಹಂಚಿಕೊಂಡ ನವಜೋಡಿ…! ವಿಡಿಯೋ ವೈರಲ್

    Published

    on

    ಮಂಗಳೂರು: ಪ್ರಸ್ತುತ ಜಗತ್ತು ಎಷ್ಟು ಕೆಟ್ಟಿದೆಯೆಂದರೆ, ಜನರು ಸೋಷಿಯಲ್‌ ಮೀಡಿಯಾದಲ್ಲಿ ಲೈಕ್ಸ್‌, ಫಾಲೋವರ್ಸ್‌ ಹೆಚ್ಚಿಸಿ ಫೇಮಸ್ ಆಗಲು ಯಾವ ಕೆಲಸಕ್ಕೂ ಕೈ ಹಾಕುತ್ತಾರೆ. ಅದೇ ರೀತಿ, ನವ ವಿವಾಹಿತ ಜೋಡಿಯು ತಮ್ಮ ಫಸ್ಟ್‌ ನೈಟ್‌ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಜನರು ಈ ಜೋಡಿಯ ಖಾಸಗಿ ವಿಡಿಯೋ ಕಂಡು ಗರಂ ಆಗಿದ್ದು, ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ.

    ಮೊದಲ ರಾತ್ರಿಯು ಹೊಸದಾಗಿ ಮದುವೆಯಾದ ದಂಪತಿಗೆ ಮಧುರ ಕ್ಷಣ. ತಮ್ಮ ಖಾಸಗಿತನದ ವಿಡಿಯೋವನ್ನು ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಆದರೆ ನವಜೋಡಿಯ ಫಸ್ಟ್ ನೈಟ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋವನ್ನು Hasna ZarooriHai ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದು ಮದುವೆಯ ರಾತ್ರಿ ಮಲಗುವ ಕೋಣೆಯ ವಿಡಿಯೋ ಇದಾಗಿದೆ.

    ಇದರಲ್ಲಿ ಇಬ್ಬರೂ ತಮ್ಮ ಮದುವೆಯ ಬಟ್ಟೆಗಳನ್ನು ಬಿಚ್ಚುವ ದೃಶ್ಯ ಸೆರೆಯಾಗಿದೆ. ಹೌದು, ವರನು ನವ ವಧುವಿನ ಆಭರಣ ತೆಗೆಯಲು ಸಹಾಯ ಮಾಡುತ್ತಾನೆ. ವಧುವು ರೊಮ್ಯಾಂಟಿಕ್‌ ಮೂಡ್‌ನಲ್ಲಿ ವರನನ್ನು ಚುಂಬಿಸುತ್ತಾಳೆ. ವಧು ಮತ್ತು ವರರು ಪರಸ್ಪರ ಚುಂಬಿಸಿದ್ದು, ಈ ವಿಡಿಯೋವು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

    ಹೊಸದಾಗಿ ಮದುವೆಯಾದ ಈ ಜೋಡಿಗಳು ತಮ್ಮ ಮದುವೆಯ ರಾತ್ರಿಯ ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಅದನ್ನು Instagramನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇಪ್ಪತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

    ನೆಟ್ಟಿಗರೊಬ್ಬರು, ‘ಈ ನವಜೋಡಿಯು ನೈತಿಕತೆಯ ಗಡಿಯನ್ನು ಮೀರಿದ್ದಾರೆ ‘ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಇತ್ತೀಚಿಗೆ ಜನರು ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ‘ಇದೇನಾ ನಮ್ಮ ಸಂಸ್ಕೃತಿ’ ಎಂದು ಬರೆದುಕೊಂಡಿದ್ದಾರೆ. ಹೀಗೆ ನೆಟ್ಟಿಗರು ಈ ನವಜೋಡಿಯೂ ಖಾಸಗಿ ವಿಡಿಯೋ ಹಂಚಿಕೊಂಡದ್ದಕ್ಕೆ ಟೀಕಿಸಿದ್ದಾರೆ.

     

    ವಿಡಿಯೋ ನೋಡಿ:

    LATEST NEWS

    ಆಳ್ವಾಸ್ ನಲ್ಲಿ ವೇಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರ ಉದ್ಘಾಟನೆ

    Published

    on

    ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ)ದ ವತಿಯಿಂದ ವಿದ್ಯಾಗಿರಿಯ ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ನಿರ್ಮಾಣಗೊಂಡಿರುವ ಕೀರ್ತಿಶೇಷ ಲೋಕನಾಥ ಬೋಳಾರ್ ವೆಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರವು ಸೋಮವಾರ ಉದ್ಘಾಟನೆಗೊಂಡಿತು.

    ಕೇಂದ್ರವನ್ನು ಅರ್ಜುನ ಪ್ರಶಸ್ತಿ ಪುರಸ್ಕೃತ ಒಲಂಪಿಯನ್ ಸತೀಶ್ ರೈ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜೀವನದಲ್ಲಿ ನಿರ್ದಿಷ್ಟ ಗುರಿ ಮತ್ತು ಸ್ಪಷ್ಟತೆ ಇರಲಿ. ಭವಿಷ್ಯದ ಗುರಿಯನ್ನು ಈಡೇರಿಸಲು ಇಂದೇ ಶ್ರಮವಹಿಸಿ ಹೆಜ್ಜೆ ಇಡಬೇಕು. ಪ್ರತಿ ಕ್ರೀಡಾಪಟುವಿನಲ್ಲೂ ಶಿಸ್ತು, ಸಂಯಮ, ಸಮಯಪಾಲನೆ ಅತ್ಯವಶ್ಯಕ. ಕ್ರೀಡಾ ಮನೋಭಾವದಿಂದ ಕ್ರೀಡೆ, ಸಂಸ್ಥೆ ಹಾಗೂ ದೇಶಕ್ಕೂ ಹೆಮ್ಮೆಯ ವಿದ್ಯಾರ್ಥಿಗಳಾಬೇಕು ಎಂದು ನುಡಿದರು.

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಇಚ್ಛಾ ಶಕ್ತಿ ಇದ್ದೆ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿಕೊಂಡರೆ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ನುಡಿದರು.

    ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಉಪಸ್ಥಿತರಿದ್ದು ಮಾತನಾಡಿದರು. ಲೋಕನಾಥ ಬೋಳಾರ್ ಅವರ ಪತ್ನಿ ಡಾ. ದೇವಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ ಎಸ್. ರಮಾನಂದ ಶೆಟ್ಟಿ, ಉದ್ಯಮಿ ಕಿಶೋರ್ ಶೆಟ್ಟಿ, ವೇಯ್ಟ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಆಲ್ವಿನ್ ಪಿಂಟೊ, ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ ಸೋಜಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು.

    Continue Reading

    LATEST NEWS

    ಸುಳ್ಯ: ಶಂಕಿತ ಇಲಿ ಜ್ವರಕ್ಕೆ ಯುವಕ ಮೃತ್ಯು

    Published

    on

    ಸುಳ್ಯ: ಶಂಕಿತ ಇಲಿ ಜ್ವರಕ್ಕೆ ತುತ್ತಾಗಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಜಾಲ್ಸೂರು ಗ್ರಾಮದ ಸೋಣಂಗೇರಿಯ ಸುಡಿಂಕಿರಿ ಮೂಲೆಯಲ್ಲಿ ನಡೆದಿದೆ.

    ಸುಡಿಂಕಿರಿ ಮೂಲೆಯ ಚಂದ್ರಶೇಖರ (36)ರವರು ಶಂಕಿತ ಜ್ವರದ ಹಿನ್ನಲೆ ಕಳೆದ 1 ವಾರದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವನ್ನಪ್ಪಿದ್ದಾರೆ. ಮೃತರಿಗೆ ತಂದೆ, ತಾಯಿ, ತಂಗಿ ಇದ್ದಾರೆ.

    Continue Reading

    DAKSHINA KANNADA

    WATCH : ಓವರ್ ಟೇಕ್ ಮಾಡಲು ಹೋಗಿ ಬೈಕ್ ಗಳ ನಡುವೆ ಅಪಘಾ*ತ; ಭ*ಯಾನಕ ವೀಡಿಯೋ ವೈರಲ್

    Published

    on

    ಬೆಳ್ತಂಗಡಿ : ಗುರುವಾಯನ ಕೆರೆಯ ಬಳಿ ಇರುವ ಶೆಣೈ ಹೊಟೇಲ್ ಮುಂಭಾಗದಲ್ಲಿ ಎರಡು ಬೈಕ್ ನಡುವೆ ಅಪಘಾ*ತ ಸಂಭವಿಸಿದೆ.  ಓವರ್ ಟೇಕ್ ಮಾಡಲು ಹೋಗಿ ಈ ದುರಂ*ತ ನಡೆದಿದೆ.

    ಘಟನೆಯಲ್ಲಿ ಇಬ್ಬರಿಗೆ ಗಾ*ಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾ*ತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

     

    Continue Reading

    LATEST NEWS

    Trending