DAKSHINA KANNADA
ಹರುಷದ ಹೊನಲಿಗೆ ಯುಗಾದಿಯ ಬೇವು-ಬೆಲ್ಲ…
Published
8 months agoon
By
Adminಪ್ರಕೃತಿಯ ಸಿರಿಮುಡಿಗೆ ಕಳೆ ಕಟ್ಟಿದೆ. ಹಸುರಿತ್ತಲ್, ಹಸುರತ್ತಲ್ ಎಂಬ ಭಾವ ಮೈ ಮನಗಳಲ್ಲಿ ಹಚ್ಚಹಸಿರಾಗಿದೆ. ನವೋಲ್ಲಾಸ, ನವ ಚೈತನ್ಯ ತುಂಬಿಕೊಂಡಿದೆ.ಇದಕ್ಕೆಲ್ಲಾ ಕಾರಣ ಹಬ್ಬಗಳ ರಾಜ ಯುಗಾದಿಯ ಆಗಮನ.
ಎತ್ತನೋಡಿದರತ್ತ ಮಾವು ಬೇವುಗಳು ಹಚ್ಚ ಹಸಿರನ್ನು ಹೊತ್ತು ಸ್ವಾಗತ ಕೂರುತಿವೆ. ನವ ವಸಂತನ ಆಗಮನಕ್ಕೆ ದುಂಬಿಯು ಝೇಂಕಾರಗೈಯುತಿದೆ. ಪ್ರಕೃತಿಯೇ ತೋರಣ ಕಟ್ಟಿ ಸಜ್ಜಾಗಿ ನಿಂತಿದೆ… ಇದುವೇ ವಸಂತ ಋತುವಿನಲ್ಲಿ ಹೊಸತನ್ನು ತರುವ ಸಂಭ್ರಮದ ಹಬ್ಬ.. ಹೊಸ ವರುಷ.. ಅದುವೇ “ಸಂಭ್ರಮದ ಯುಗಾದಿ” ಹೊಸ ಯುಗದ ಆರಂಭವಾಗುವುದೇ ಯುಗಾದಿ ಹಬ್ಬದಿಂದ.. ಇದು ಚೈತ್ರ ಮಾಸದಲ್ಲಿ ಬರುವ ಮೊದಲ ಹಬ್ಬ.. ಪ್ರಕೃತಿಯ ಮಡಿಲಲ್ಲಿ ಮೂಡುವ ಹೊಸ ಚಿಗುರು ಮನುಷ್ಯರಲ್ಲಿ ಹೊಸ ಹುರುಪನ್ನು ತರಿಸುತ್ತದೆ. ಮನೆಯಲ್ಲಿ ಎಲ್ಲರೂ ಒಟ್ಟಾಗಿ ಹರಿ ಧ್ಯಾನವನ್ನು ಮಾಡಿ, ಬೇವು-ಬೆಲ್ಲ ತಿಂದು ಯುಗಾದಿ ಹಬ್ಬವನ್ನು ಆರಂಭಿಸುತ್ತಾರೆ.
ಸಿಹಿ-ಕಹಿಯ ಸಮ್ಮಿಲನದ ಹಬ್ಬ:
ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸವರುಷಕೆ-ಹೊಸಹರುಷವ ಹೊಸತು ಹೊಸತು ತರುತಿದೆ’ ಅನ್ನೋ ದ.ರಾ.ಬೇಂದ್ರೆಯವರ ಹಾಡಿನ ಸಾಲಿನಂತೆ ಪ್ರತೀ ವರ್ಷದಂತೆ ಮತ್ತೆ ಸಿಹಿ-ಕಹಿ ಸಮ್ಮಿಲನದ ಯುಗಾದಿ ಹಬ್ಬ ಮತ್ತೆ ಬಂದಿದೆ. ವಸಂತ ಋತುವಿನ ಚೆಲುವು, ಮೋಹಕತೆಗೆ ಜನತೆ ಪುಳಕಿತರಾಗಿದ್ದಾರೆ. ಇದರ ನಡುವೆ ಬಿಸಿಲ ಬೇಗೆಯ ನಿವಾರಣೆಗೆ ಮದ್ದೆಂಬಂತೆ ಹೊಂಗೆಯ ನೆರಳು, ತುಂಗೆಯ ಕಂಪು, ಬೇವು-ಮಾವುಗಳ ಗೊಂಚಲು- ಗೊಂಚಲುಗಳ ತೊನೆದಾಟ ಬಸವಳಿದ ಮನಕ್ಕೆ ಉಲ್ಲಾಸ ನೀಡುವಂತಿದೆ..ಯುಗಗಳಲ್ಲಿ ಮೊದಲ ಯುಗ ಸತ್ಯಯುಗ. ಇಂತಹ ಮೊದಲ ಯುಗದ ಆರಂಭದ ದಿನವೇ ಯುಗಾದಿ. ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸ್ತಾರೆ. ಈ ಹಬ್ಬದ ಸಮಯದಲ್ಲಿ ವಸಂತ ಋತುವು ಆರಂಭವಾಗೋದ್ರಿಂದ ತಂಪಾದ ವಾತಾವರಣದ ಜೊತೆಗೆ ಎಲೆ ಹಸಿರು ಮೂಡುವ ಕ್ಷಣ. ಚಿಗುರಿದ ಎಲೆಗಳು ಹಚ್ಚ ಹಸಿರು ಸೀರೆಯುಟ್ಟು ಮದುವಣಗಿತ್ತಿಯಂತೆ ಕಂಗೊಳಿಸುವ ಪ್ರಕೃತಿ.., ತೂಗಾಡುವ ಬಣ್ಣ ಬಣ್ಣದ ಹೂಗಳಿಂದ ತುಂಬಿ ತುಳುಕುವ ಉದ್ಯಾನ, ತೋಟಗಳು, ಸುಗಂಧಭರಿತ ಆಹ್ಲಾದಕರ ಗಾಳಿ, ಕಂಪು ಬೀರುವ ಹೂವಿನ ಮಕರಂದಕ್ಕೆ ಮುತ್ತಿಡೋ ದುಂಬಿಗಳು, ಚಿಟ್ಟೆಗಳ ನರ್ತನ, ಹೂದೋಟದ ತುಂಬ ಕಲರವದಲ್ಲಿ ತಲ್ಲೀನವಾಗಿರುವ ಅದೆಲ್ಲಿಂದಲೋ ವಲಸೆ ಬಂದ ಬಣ್ಣ ಬಣ್ಣದ ಹಕ್ಕಿಗಳು… ಇವೆಲ್ಲವುಗಳ ಜೊತೆ ಮೈಮನದಲ್ಲಿ ನವೋಲ್ಲಾಸ, ನವ ಚೈತನ್ಯದ ಸಂಚಲನ ಮೂಡಿಸಿ ಕಚಗುಳಿಯ ಅನುಭವವಾಗುತ್ತಿದ್ದರೆ ಅದುವೇ ನೂತನ ವರ್ಷಾದ ಆರಂಭ …
ಅದೃಷ್ಟ ಹೊತ್ತು ತರುವ ನವ ಯುಗಾದಿ
ಯುಗದ ಆದಿ ಎಂದು ಕರೆಯುವ ಈ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಅದ್ದೂರಿಯಾಗಿ ಆಚರಣೆ ಮಾಡ್ತಾರೆ. ಯುಗ ಎಂದರೆ ಹೊಸ, ಆದಿ ಎಂದರೆ ಆರಂಭ. ಒಂದು ಹೊಸ ಪರ್ವದ ಆರಂಭ ಅಂತಾನೂ ಈ ಹಬ್ಬವನ್ನು ಕರೀತಾರೆ. ಧಾರ್ಮಿಕ ಆಚರಣೆಯ ಪ್ರಕಾರ ಸೌರಮಾನ ಯುಗಾದಿ ಆಚರಣೆ ಹಿಂದೂಗಳ ಪವಿತ್ರ ಆಚರಣೆಯಲ್ಲಿ ಒಂದು.. ಕೆಲವೆಡೆ ಚಾಂದ್ರಮಾನ ಯುಗಾದಿಯನ್ನು ಆಚರಿಸಿದ್ರೆ ಕೆಲವೆಡೆ ಸೌರಮಾನ ಯುಗಾದಿಯನ್ನು ಆಚರಿಸ್ತಾರೆ. ಯುಗಾದಿ ಹಬ್ಬ ನಮ್ಮೆಲ್ಲರಿಗೂ ಅದೃಷ್ಟದ ಹಬ್ಬ.. ಸಂಪತ್ತು ಮತ್ತು ಸಮೃದ್ಧಿಯನ್ನು ಹೊತ್ತು ತರುತ್ತದೆ ಎನ್ನುವ ನಂಬಿಕೆಯಿದೆ. ಯುಗಾದಿ ಹಬ್ಬವನ್ನು ಮಂಗಳಕರವೆಂದೂ ಹೇಳ್ತಾರೆ. ಹೀಗಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಗಾದಿಯ ದಿನದಂದು ನೂತನ ಅಂಗಡಿಗಳ ಶುಭಾರಂಭ, ಕಟ್ಟಡ ನಿರ್ಮಾಣದ ಕೆಲಸ ಕಾರ್ಯಗಳನ್ನು ಆರಂಭ ಮಾಡ್ತಾರೆ.
ಐತಿಹಾಸಿಕ ಪುರಾಣವೇನು..?
ಹಿಂದೂ ಪುರಾಣಗಳ ಪ್ರಕಾರ, ಇಂದು ಬ್ರಹ್ಮ ದೇವ ಬ್ರಹ್ಮಾಂಡವನ್ನು ಸೃಷ್ಠಿಸಿರುವುದರಿಂದ ಈ ದಿನವನ್ನು ಹೊಸತನದ ಯುಗಾದಿ ಹಬ್ಬ ಎಂದು ಆಚರಣೆ ಮಾಡಲಾಗ್ತಿದೆ ಅಂತೆ.. ವೇದಗಳ, ಧರ್ಮಗ್ರಂಥಗಳ ಪ್ರಕಾರ ಯುಗಾದಿ ಹಬ್ಬ ಹಲವು ಮಹತ್ತರಗಳಿಗೆ ಸಾಕ್ಷಿ ಕೂಡ ಹೌದು.
ಯುಗಾದಿ ಹಬ್ಬ ನಮ್ಮೆಲ್ಲರಿಗೂ ಹೊಸ ವರ್ಷದ ಆರಂಭ. ಇದಕ್ಕೆ ತನ್ನದೇ ಆದ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ… ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಶಬ್ದಗಳಿಂದ ಯುಗಾದಿ ಎಂಬುದು ಆರಂಭಗೊಂಡಿದೆ. ಚೈತ್ರಶುದ್ಧ ಪಾಡ್ಯದ ಸೂರ್ಯೋದಯ ಸಮಯಕ್ಕೆ ಬ್ರಹ್ಮ ವಿಶ್ವವನ್ನು ಸೃಷ್ಟಿ ಮಾಡ್ತಾನೆ, ಅಂದೇ ಸತ್ಯ ಯುಗವೂ ಆರಂಭವಾಯಿತು. ರಾವಣನನ್ನು ಸಂಹರಿಸಿ ವಿಜಯಿಯಾಗಿ ಹಿಂದಿರುಗಿದ ಶ್ರೀರಾಮನ ಪಟ್ಟಾಭಿಷೇಕದ ದಿನವೆಂದೂ ಪುರಾಣವಿದೆ. ರವಿಯ ಮೊದಲ ಕಿರಣ ಭುವಿಯನ್ನು ಸ್ಪರ್ಶಿಸಿದ ದಿನವೆಂತಲೂ ಪ್ರತೀತಿ ಇದೆ. ಹಾಗೆನೆ ರಾಮನು ವಾಲಿಯನ್ನು ವಧಿಸಿದ ದಿನವೆಂದೂ, ಮಹಾ ವಿಷ್ಣು ಮತ್ಸ್ಯಾವತಾರ ತಾಳಿದ ದಿನವೆಂದೂ ಹೇಳುತ್ತದೆ ಪುರಾಣ. ಅಂದೇ ಶಾಲಿವಾಹನ ಶಕೆ ಆರಂಭಗೊಂಡಿತೆಂಬ ಒಂದು ಕತೆಯೂ ಇದೆ. ಇಂತಹ ಹಲವು ಶುಭ ಘಟನೆಗಳು ಸಂಭವಿಸಿದ ದಿನದಂದು ಚಂದ್ರಮಾನ ‘ಯುಗಾದಿ’ ಆಚರಣೆಗೆ ಬಂದಿದೆ.
ಹಿಂದೂಗಳಿಗೆ ವರ್ಷದಲ್ಲಿ ಬರುವ ಮೂರುವರೆ ದಿನಗಳು ಬಹಳ ಮುಖ್ಯವಾದ ದಿನವಿದೆ. ಅದು ಯುಗಾದಿ, ದೀಪಾವಳಿ, ವಿಜಯದಶಮಿ, ಮತ್ತು ಅಕ್ಷಯ ತದಿಗೆಯ ಅರ್ಧ ದಿನ ಈ ಮೂರುವರೆ ದಿನಗಳು ಮೂರುವರೆ ವಜ್ರದಷ್ಟೇ ಪವಿತ್ರವಾದ ದಿನವಂತೆ. ದಕ್ಷಿಣ ಭಾರತದಲ್ಲಿ ಚಂದ್ರನ ಚಲನೆಯನ್ನು ಗುರುತಿಸಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಹಾಗೆನೆ ಸೂರ್ಯ ದೇವ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುತ್ತಾರೆ. ಇನ್ನೂ ಉಡುಪಿ, ಮಂಗಳೂರು ಕಡೆ, ಉತ್ತರ ಭಾರತದ ಹಲವು ಕಡೆಗಳಲ್ಲಿ ಸೌರಮಾನ ಯುಗಾದಿ ಅಂದ್ರೆ ‘ಬಿಸು’ ಹಬ್ಬವನ್ನು ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ ಎಂದು, ಪಂಜಾಬ್‌ನಲ್ಲಿ ಬೈಸಾಖಿ ಎಂದು, ಸಿಂಧಿಗಳಲ್ಲಿ ಚೈತಿ ಚಂದ್ ಎಂದು, ತಮಿಳುನಾಡಿನಲ್ಲಿ ಪುತಾಂಡು ಮತ್ತು ರಾಜಸ್ಥಾನದಲ್ಲಿ ಥಾಪನಾ ಎಂಬ ಹೆಸರಿನಿಂದ ಯುಗಾದಿ ಹಬ್ಬವನ್ನು ಆಚರಿಸ್ತಾರೆ.
ರೈತರಿಗೆ ಎಷ್ಟು ವಿಶೇಷ ಈ ಹಬ್ಬ..!
“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಈ ಹಾಡನ್ನು ಕೇಳಿದ್ದೀರಿ ಅಲ್ವಾ..ಯುಗಾದಿ ಬಂತು ಅಂದ್ರೆನೇ ನಮ್ಮೆಲ್ಲರ ತುಟಿಯಂಚಿನಲ್ಲಿ ಈ ಹಾಡನ್ನು ಗುಣುಗುಟ್ತೇವೆ… ಹಬ್ಬ ಅಂದ್ರೇನೆ ಖುಷಿ ಅದರಲ್ಲೂ ಹೊಸ ವರುಷವನ್ನು ಹೊತ್ತು ತರುವ ಯುಗಾದಿ ಯಂದಂತೂ ಎಲ್ಲಿಲ್ಲದ ಸಂಭ್ರಮ ಸಡಗರ. ಈ ಹಬ್ಬ ರೈತರ ಪಾಲಿಗೂ ವಿಶೇಷ ದಿನ. ಹೊಸ ಬೆಳೆಯ ಖುಷಿಯಲ್ಲಿಯೂ ಈ ಹಬ್ಬದ ಸಂಭ್ರಮ ರೈತಾಪಿ ವರ್ಗದಲ್ಲಿ ಇಮ್ಮಡಿಯಾಗಿರುತ್ತದೆ. ರೈತರು ತಾವು ಬೆಳೆದಿರುವ ಮೊದಲ ಬೆಳೆಯ ಕಟಾವು ಮಾಡಿ ಯುಗಾದಿ ಹಬ್ಬಂದು ವಿಶೇಷ ಪೂಜೆಯನ್ನು ಮಾಡ್ತಾರೆ.
ಯುಗಾದಿ ಬಂತೆಂದರೆ ಪ್ರಕೃತಿಯಲ್ಲಿ ನವೋಲ್ಲಾಸದ ಸಡಗರ. ಹಾಗೆನೇ ರೈತರು ಸಡಗರದಿಂದ ಕೃಷಿ ಚಟುವಟಿಕೆ ಆರಂಭಿಸುವ ಮೊದಲ ಹೆಜ್ಜೆಯೂ ಹೌದು,, ಯುಗಾದಿಯಂದು ಭೂಮಿಯನ್ನು ಉಳುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಇನ್ನೂ ನಾಗರಿಕತೆ ಬೆಳೆದಂತೆ ಗ್ರಾಮೀಣ ಪ್ರದೇಶಗಳಲ್ಲಿನ ಅದೆಷ್ಟೋ ಸಂಪ್ರದಾಯಗಳು ಕಣ್ಮರೆಯಾಗಿದೆ. ಅದರಲ್ಲೂ ದೇಶಕ್ಕೆ ಅನ್ನ ನೀಡುವ ರೈತರು ಯುಗಾದಿ ಹಬ್ಬದ ದಿನ ನಡೆಸುವ ರಾಶಿಪೂಜೆ, ಭೂಮಿ ಪೂಜೆ, ಕಾಣಲು ಸಿಗುವುದು ಇತ್ತೀಚೆಗೆ ಬಲು ಅಪರೂಪ… ಹಳ್ಳಿಗಳಲ್ಲಿ ಯುಗಾದಿ ಹಬ್ಬವನ್ನ ಹೊಸ ವರ್ಷದ ಜೊತೆಗೆ ಕೃಷಿ ಚಟುವಟಿಕೆಗೆ ಮುನ್ನುಡಿ ಬರೆಯುವ ದಿನ ಅಂತಾನೂ ಹೇಳ್ತಾ ಇದ್ರು..
ಸೂರ್ಯೋದಯಕ್ಕೂ ಮುನ್ನವೇ ರೈತರು ಹೊನ್ನೇರನ್ನು ಕಟ್ಟಿ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಜಮೀನುಗಳಿಗೆ ಹೊರಡ್ತಾರೆ. ಬ್ರಾಹ್ಮಿ ಮುಹೂರ್ತದಲ್ಲಿ ಎತ್ತುಗಳನ್ನು ತೊಳೆದು ಕೊಂಬುಗಳಿಗೆ ಹೊಂಬಾಳೆ, ಕೊರಳಿಗೆ ಬಿಳಿಕಣಗಿಲೆ ಹೂವು, ಮಂಡೆ ಹುರಿ ಕಟ್ಟುತ್ತಾರೆ. ಜೊತೆಗೆ ಎತ್ತಿನಗಾಡಿಯನ್ನು ಬಾಳೆಕಂದು, ಮಾವಿನ ಸೊಪ್ಪಿನಿಂದ ಅಲಂಕರಿಸುತ್ತಾರೆ. ಗದ್ದೆಗೆ ಗೊಬ್ಬರ ಸಿಂಪಡಿಸಿ, ಹೊಸ ವರ್ಷದ ಮೊದಲ ದಿನ ಕೃಷಿಯನ್ನು ಆರಂಭಿಸಿ ಕಾಲ ಕಾಲಕ್ಕೆ ಮಳೆ ಬೆಲೆ ಚೆನ್ನಾಗಿ ಬರಲಿ.. ರೋಗ-ರುಜಿನ ಮಾಯವಾಗಿ ನೆಮ್ಮದಿಯ ಜೀವನ ಸಿಗಲೆಂದು ಬೇಡಿಕೊಳ್ತಾರೆ. ಯುಗಾದಿ ಆರಂಭವಾಗುತ್ತಿದ್ದಂತೆ ಮಳೆಯ ಸಿಂಚನ ಭುವಿಯನ್ನು ತಂಪೆರೆಯಲು ಆರಂಭವಾಗುತ್ತೆ.. ಇದು ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು ಗ್ರಾಮೀಣ ಭಾಗದಲ್ಲಿ ಈ ವಿಶೇಷ ಆಚರಣೆ ಇಂದಿಗೂ ಕೆಲವೆಡೆ ಜೀವಂತವಾಗಿದೆ.
ಹೊಸ ಉಡುಪು.. ಘಮ-ಘಮಿಸುವ ಖಾದ್ಯ..!!
ಉಳಿದೆಲ್ಲ ಹಬ್ಬಗಳಿಗಿಂತ ಯುಗಾದಿ ಆಚರಣೆ ಕೊಂಚ ಬೇರೆ. ಹೊಸ ವರ್ಷದ ಹಬ್ಬವೆಂದರೆ ಹೊಸತನ ಇರಲೇಬೇಕಲ್ವಾ… ಈ ದಿನ ಮನೆಯವರೆಲ್ಲರಿಗೂ ಧರಿಸಲು ಹೊಸ ಉಡುಪುಗಳು.. ಅಡುಗೆ ಕೋಣೆಯಲ್ಲಿ ಘಮ ಘಮಿಸುವ ತರತರದ ಯುಗಾದಿ ಸ್ಪೆಷಲ್ ಖಾದ್ಯಗಳು.. ಅಬ್ಬಾ ಯಾರಿಗೆ ಇಷ್ಟ ಇಲ್ಲಾ ಹೇಳಿ ಈ ಹಬ್ಬ.. ಹಬ್ಬ ಹರಿದನಗಳಲ್ಲಿ ತಯಾರಿಸುವ ತಿಂಡಿ ತಿನಿಸುಗಳ ಬಗ್ಗೆ ಮಾತೇ ಇಲ್ಲ.., ಹಬ್ಬ ಅಂದ್ರೇನೆ ಬಗೆಬಗೆಯ ತಿಂಡಿ ತಿನಿಸುಗಳು ತಯಾರಾಗುತ್ತೆ. ಯುಗಾದಿಗೆ ಕರ್ನಾಟಕದಲ್ಲಿ ಹೋಳಿಗೆ ಅಂದಿನ ವಿಶೇಷ ಖಾದ್ಯ.. ಬೆಲ್ಲದ ಪಾನಕ, ಶಾವಿಗೆ ಕೂಡ ಅಂದಿನ ಸ್ಪೆಷಲ್.. ಮಹಾರಾಷ್ಟ್ರದಲ್ಲಿ ಹೋಳಿಗೆಯನ್ನೇ ಹೋಲುವ ಪೂರಣ್ ಪೋಳಿ ತಯಾರಿಸುತ್ತಾರೆ. ಆಂಧ್ರ, ತೆಲಂಗಾಣದಲ್ಲಿ ಬೇವು- ಬೆಲ್ಲ, ಮಾವಿನ ಕಾಯಿ, ಉಪ್ಪು, ಮೆಣಸು, ಹುಣಸೆ ಹಣ್ಣುಗಳ ಮಿಶ್ರಣ ಮಾಡಿ ‘ಪಚ್ಚಡಿ’ಯನ್ನ ತಯಾರಿಸುತ್ತಾರೆ. ಈ ಆರೂ ಪದಾರ್ಥಗಳು ಆರು ಗುಣಗಳನ್ನು ಸಾರುತ್ತವೆ ಎಂಬುದು ಅಲ್ಲಿಯವರ ನಂಬಿಕೆ. ಬೆಲ್ಲ ಸುಖ-ಸಂತೋಷಕ್ಕೆ, ಬೇವು ದುಃಖ ಮತ್ತು ನೋವನ್ನು ಸಹಜತೆಯಿಂದ ಸ್ವೀಕರಿಸಲು, ಮಾವು -ಉತ್ಸಾಹಕ್ಕೆ, ಕಾಳುಮೆಣಸು ಕೋಪ ನಿಗ್ರಹಕ್ಕೆ, ಉಪ್ಪು- ನಮ್ರತಾ ಭಾವಕ್ಕೆ, ಹುಣಸೆ – ಸ್ವೀಕರಣಾ ಭಾವದ ಸಂಕೇತವಾಗಿದೆ. ಹಲವು ಪ್ರಾಂತ್ಯಗಳಲ್ಲಿ, ಹೊಸ ಮಾವಿನ ಮಿಡಿಯ ಉಪ್ಪಿನ ಕಾಯಿ ತಯರಿಸುವುದೂ ಇದೆ.
ಯುಗಾದಿಯನ್ನು ಹೇಗೆ ಆಚರಣೆ ಮಾಡ್ತಾರೆ?
ಈ ಹೊಸ ವರ್ಷವನ್ನು ಹೊಸತಾಗಿ ಆರಂಭಿಸಲು ನಾನಾ ಯೋಜನೆಗಳನ್ನು ಹಾಕುತ್ತಾರೆ. ಇನ್ನೂ ಕೆಲವರು ದೇವಾಲಯಗಳಿಗೆ ಭೇಟಿ ನೀಡಿ ಭಗವಂತನ ಆಶೀರ್ವಾದವನ್ನು ಪಡಿತಾರೆ. ಈ ದಿನ ಬಡವರಿಗೆ ದಾನ ಧರ್ಮವನ್ನು ಮಾಡಿದರೆ ಲಕ್ಷ್ಮೀ ದೇವಿ ಒಲಿಯುತ್ತಾಳೆ ಎಂಬ ನಂಬಿಕೆಯೂ ಇದೆ. ಈ ವರ್ಷವನ್ನು ಸ್ವಾಗತಿಸಲು ಮನೆಯನ್ನು ಸ್ವಚ್ಛವಾಗಿಟ್ಟು, ಮನೆಯ ಮುಂದೆ ಬಣ್ಣ-ಬಣ್ಣದ ಕಣ್ಮನ ಸೆಳೆಯುವ ರಂಗೋಲಿಯನ್ನು ಹಾಕ್ತಾರೆ. ಯುಗಾದಿಯ ದಿನ ಬೆಳ್ಳಂಬೆಳಿಗ್ಗೆ, ಮನೆಯವರೆಲ್ಲಾ ಅಭ್ಯಂಜನ ಸ್ನಾನ ಮಾಡಿ, ನವ ವಸ್ತ್ರ ಧರಿಸಿ ಹೊಸ ವರ್ಷ ಸ್ವಾಗತಿಸುವ ಸಂಭ್ರಮ. ಮಾವಿನ ಎಲೆಗಳನ್ನು ದೇವರ ಮನೆಯ ಕಲಶದಲ್ಲಿ ಅದ್ದಿ, ಮನೆಯ ಮೂಲೆ ಮೂಲೆಗೂ ನೀರನ್ನು ಸಿಂಪಡಿಸಿ, ಮನೆಯ ಶುಚೀಕರಣ ಮಾಡಿ ,ಮನೆ ದೇವರ ಪೂಜೆಯನ್ನು ಮಾಡಲಾಗುತ್ತದೆ. ಬೇಯಿಸಿದ ಕಡಲೆ ಕಾಳುಗಳ ಪ್ರಸಾದ ತಯಾರಾಗುತ್ತದೆ. ಹಿರಿಯರನ್ನು ನಮಸ್ಕರಿಸಿ, ಆಶೀರ್ವಾದ ಪಡೆಯುವಾಗ ಕಿರಿಯರಲ್ಲಿ ಧನ್ಯತಾಭಾವ. ವರ್ಷವಿಡೀ ನೋವು, ನಲಿವನ್ನು ಸಮನಾಗಿ ಸ್ವೀಕರಿಸೋಣ ಎನ್ನುತ್ತಾ ಬೇವು ಬೆಲ್ಲ ಹಂಚಿ ನಲಿಯುವುದು ಯುಗಾದಿ ಆಚರಣೆಯ ಇನ್ನೊಂದು ವಿಶೇಷನೇ ಸರಿ…
ಯುಗಾದಿ ಹಬ್ಬ ಸಮೀಪಿಸುತ್ತಿರುವಾಗಲೇ ಪ್ರಕೃತಿಯ ಮಡಿಲಲ್ಲಿ ಗಿಡ-ಮರಗಳು ಹಣ್ಣೆಲೆಯನ್ನು ಕಳಚಿಕೊಂಡು, ಹೊಸ ಚಿಗುರುಗಳಿಂದ ಕಂಗೊಳಿಸುತ್ತವೆ. ಹಾಗೆನೇ ನಮ್ಮ ಜೀವನದಲ್ಲೂ ಹೊಸತನವನ್ನು ಆರಂಭಿಸಲು ಹೊಸ ವರುಷವನ್ನು ಸ್ವಾಗತಿಸಲಾಗುವುದು. ಯುಗಾದಿ ಹಬ್ಬದಂದು ವಿಶೇಷವಾಗಿ ಸೇವಿಸುವ ಬೇವು – ಬೆಲ್ಲ ನಮ್ಮ ಜೀವನದ ಸುಖ- ದುಃಖ ಹಾಗೂ ನೋವು-ನಲಿವಿನ ಸಮತೋಲನವನ್ನು ಸೂಚಿಸುತ್ತದೆ. ಯುಗಾದಿ ದಿನ ನಾವು ಬೇವು ಬೆಲ್ಲವನ್ನು ಸೇವಿಸುವುದರಿಂದ ನಮ್ಮ ಜೀವನದ ಸುಖ – ದುಃಖ ಸಮಾನಾಗಿ ಹಂಚಿಹೋಗಬೇಕು. ವೈಜ್ಞಾನಿಕವಾಗಿ ಹೇಳ್ಬೇಕಂದ್ರೆ ಬೇವು ತಿನ್ನುವುದರಿಂದ ಮನುಷ್ಯನ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ವ್ಯಕ್ತಿಯ ದೇಹವನ್ನು ಬಲಪಡಿಸುತ್ತದೆ ಎನ್ನುವ ನಂಬಿಕೆಯಿದೆ. ಬೆಲ್ಲವನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆಯು ಸಮತೋಲನವಾಗುತ್ತದೆ ಮತ್ತು ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕೂಡ ಕರಗಿಸುತ್ತದೆ ಎಂದು ಹೇಳಲಾಗುತ್ತೆ. ವರ್ಷದ ಮೊದಲ ದಿನದಂದು ನಾವು ಜೀವನದ ಕಹಿಯನ್ನು ಸ್ವೀಕರಿಸಬೇಕು ಅಂತ ಹೇಳ್ತಾರೆ. ಯಾಕಂದ್ರೆ ವರ್ಷದ ಆರಂಭದಲ್ಲಿ ಕೇವಲ ಸಿಹಿಯಿದ್ದರೆ ಮುಂದೆ ಕಹಿಯನ್ನು ಎದುರಿಸುವ ಶಕ್ತಿ ಸಿಗುವುದಿಲ್ಲ. ಸಿಹಿ-ಕಹಿ ಅಂದರೆ.. ಬೇವು-ಬೆಲ್ಲ ಎರಡೂ ಸಮಾನವಾದರೆ ಜೀವನದಲ್ಲಿ ಎಷ್ಟೇ ತೊಂದರೆಗಳು, ಕಷ್ಟಗಳು ಇದ್ದರೂ ನಾವು ಅದನ್ನು ಗಾಢವಾಗಿ ತೆಗೆದುಕೊಳ್ಳದೆ ಸಮಸ್ಯೆಗಳನ್ನು ಎದುರಿಸುವ ಶಕ್ತಿ ನಮ್ಮದಾಗುತ್ತೆ.
DAKSHINA KANNADA
ಅತ್ಯಂತ ಉದ್ದದ ಮಾನವ ಸರಪಳಿ: ದ.ಕ.ಜಿಲ್ಲೆಗೆ ದ್ವಿತೀಯ ಸ್ಥಾನ
Published
14 hours agoon
24/11/2024By
NEWS DESK2ಮಂಗಳೂರು: ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15ರಂದು ಬೀದರ್‌ನಿಂದ ಚಾಮರಾಜ ನಗರದವರೆಗೆ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಜಿಲ್ಲೆಗಳಿಗೆ ಒಟ್ಟು ಐದು ವಿಭಾಗಗಳಲ್ಲಿ ತಲಾ 3 ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿತ್ತು. ಈ ವಿಭಾಗಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯು ಅತ್ಯಂತ ಉದ್ದದ ಮಾನವ ಸರಪಳಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ನ.26ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರಿಂದ ದ.ಕ.ಜಿಲ್ಲಾಧಿಕಾರಿ ಮುಲೈ ಮುಗಿಲನ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
BIG BOSS
ಉಪಚುನಾವಣೆಯಲ್ಲಿ ಗೆಲುವು; ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ
Published
1 day agoon
23/11/2024ಮಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು, ಮಲ್ಲಿಕಟ್ಟೆಯಲ್ಲಿರುವ ಕಚೇರಿಯೆದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಪರ ಘೋಷಣೆ ಕೂ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿ, ‘ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗೆಲುವಿನ ನಿರೀಕ್ಷೆ ಇತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದ ಫಲಿತಾಂಶ ತಲೆಕೆಳಗಾಗಿದೆ’ ಎಂದರು.
‘ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಚುನಾವಣೆಯಲ್ಲಿ ಸೋತಿದ್ದಾರೆ. ಇದು ರಾಜ್ಯದ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬಿಜೆಪಿ ಮೈತ್ರಿಕೂಟದ ಬಗೆಗಿರುವ ಅಪನಂಬಿಕೆಗೆ ಸಾಕ್ಷಿಯಾಗಿದೆ. ಇನ್ನಾದರೂ ಬಿಜೆಪಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಬಿಟ್ಟು, ಅಭಿವೃದ್ಧಿ ಬಗ್ಗೆ ಯೋಚಿಸಲಿ’ ಎಂದು ಹೇಳಿದರು
ಮಂಗಳೂರು: ಕಂಬಳ ಕರಾವಳಿ ಕರ್ನಾಟಕದ ಜನಪದ ಕ್ರೀಡೆ. ಈ ಹಿಂದೆ ನಿಷೇಧಕ್ಕೆ ಒಳಪಟ್ಟರೂ ನಂತರ ಕಂಬಳ ನಡೆಸುವುದಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಈಗ ಸರ್ಕಾರಿ ಪ್ರಾಯೋಜಿತ ಮೊದಲ ಕಂಬಳಕ್ಕೆ ಪ್ರಾಣಿ ಪ್ರಿಯರ ವಿರೋಧ ವ್ಯಕ್ತವಾಗಿದೆ. ಇದರ ನಡುವೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕಳೆದ ಹತ್ತು ವರ್ಷಗಳಿಂದ ನಿಂತು ಹೋಗಿದ್ದ ಪಿಲಿಕುಳದ ಸರ್ಕಾರಿ ಕಂಬಳ ಈ ಬಾರಿ ಮತ್ತೆ ಆಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ ಪಿಲಿಕುಳದ ಗುತ್ತಿನ ಮನೆಯ ಮುಂದೆ ಕಂಬಳ ಕರೆ ನಿರ್ಮಾಣ ಮಾಡಿ ಕಂಬಳದ ದಿನಾಂಕ ಕೂಡಾ ಘೋಷಣೆ ಮಾಡಿತ್ತು. ನವೆಂಬರ್ 9 ರಂದು ನಿಗದಿಯಾಗಿದ್ದ ಈ ಕಂಬಳ, ಪಂಚಾಯತ್ ಉಪಚುನಾವಣೆಯ ನೀತಿ ಸಂಹಿತೆ ಕಾರಣದಿಂದ ಮುಂದೂಡಲಾಗಿತ್ತು.
ಇದನ್ನೂ ಓದಿ: 30 ವರ್ಷಕ್ಕೆ ಮದುವೆಯಾಗುವ ಯೋಚನೆ ಮಾಡಿದ್ರೆ ಇದನ್ನು ಓದಲೇ ಬೇಕು !!
ಈ ನಡುವೆ ಪೆಟಾದವರು ಬೆಂಗಳೂರು ಕಂಬಳ ಹಾಗೂ ಪಿಲಿಕುಳ ಕಂಬಳದ ಆಯೋಜನೆಯ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಬೆಂಗಳೂರು ಕಂಬಳ ಇನ್ನೂ ದಿನ ನಿಗದಿಯಾಗದೇ ಇದ್ದರೂ ಕಂಬಳ ನಡೆಸಲು ಅನುಮತಿ ನೀಡಬಾರದೆಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪೆಟಾ ಸಲ್ಲಿಸಿದ ಈ ಅರ್ಜಿಗೆ ಬೆಂಗಳೂರು ಕಂಬಳ ಆಯೋಜಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಕೀಲರ ಮೂಲಕ ವಾದ ಮಂಡಿಸಿದ್ದಾರೆ. ಆದ್ರೇ ಪಿಲಿಕುಳದ ಸರ್ಕಾರಿ ಕಂಬಳದ ವಿಚಾರವಾಗಿ ಯಾವುದೇ ಅರ್ಜಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿಲ್ಲ.
ಹೀಗಾಗಿ ಪಿಲಿಕುಳ ಕಂಬಳ ನಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡಿದೆ. ಮಂಗಳೂರು ನಗರದಲ್ಲಿ ಕಂಬಳ ನಡೆಯದೇ ಇದ್ದ ಸಂದರ್ಭದಲ್ಲಿ ಪಿಲಿಕುಳದಲ್ಲಿ ಸರ್ಕಾರದ ವತಿಯಿಂದ ಕಂಬಳ ಆರಂಭಿಸಲಾಗಿತ್ತು. ಕಾರಣಾಂತರಗಳಿಂದ ನಿಂತು ಹೋಗಿದ್ದ ಕಂಬಳ ಮತ್ತೆ ಆರಂಭವಾದ ಕಾರಣ ಕಂಬಳ ಪ್ರೇಮಿಗಳು ಸಂತಸಗೊಂಡಿದ್ದರು. ಆದ್ರೆ ಇದೀಗ ಪೆಟಾ ಪಿಲಿಕುಳ ಕಂಬಳಕ್ಕೆ ಅಪಸ್ವರ ಎತ್ತಿದ್ದು, ಇಲ್ಲಿ ನಡೆಯುವ ಗದ್ದಲದಿಂದ ಪಿಲಿಕುಳದ ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಪ್ರಾಣಿಗಳಿಗೆ ತೊಂದರೆ ಆಗಲಿದೆ ಎಂಬ ವಾದವನ್ನು ನ್ಯಾಯಾಲಯದ ಮುಂದೆ ಇಟ್ಟಿದೆ.
LATEST NEWS
ಪತ್ನಿಗೆ ಬೆಂ*ಕಿ ಹಚ್ಚಿ ತಲೆಮರೆಸಿಕೊಂಡಿದ್ದ ವ್ಯಕ್ತಿ 12 ವರ್ಷಗಳ ಬಳಿಕ ಅರೆಸ್ಟ್
ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಖ್ಯಾತ ಕ್ರಿಕೆಟಿಗನ ಪತ್ನಿ
ಬಿಗ್ಬಾಸ್ ಮನೆಯಲ್ಲಿನ ಸ್ಪರ್ಧಿಗಳ ವಯಸ್ಸೆಷ್ಟು ಗೊತ್ತಾ..?
ಮಂಗಳೂರಲ್ಲಿ ಸಮುದ್ರಕ್ಕೆ ಜಿಗಿದು ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆಗೆ ಯತ್ನ
ಚಲಿಸುತ್ತಿರುವ ಬಸ್ಸಿನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟ ಯುವಕ
ನಿದ್ದೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ: ನಿಮಗೆ ಗೊತ್ತಾ!
Trending
- LATEST NEWS4 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru2 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION4 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- LATEST NEWS6 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!