Connect with us

LATEST NEWS

ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ : ಕಟೀಲಿನ ತಸ್ಮಯಿಗೆ ದ್ವಿತೀಯ ಸ್ಥಾನ

Published

on

ಬೆಂಗಳೂರಿನಲ್ಲಿ ಡಿಸೆಂಬರ್ 11 ರಿಂದ 22 ರ ತನಕ ನಡೆದ 60 ನೇ ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಬೆಂಗಳೂರು – 2022 ಸ್ಪರ್ಧೆಯಲ್ಲಿ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ ತಸ್ಮಯಿ ಮಂಜುನಾಥ್ ಶೆಟ್ಟಿ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಮಂಗಳೂರು : ಬೆಂಗಳೂರಿನಲ್ಲಿ ಡಿಸೆಂಬರ್ 11 ರಿಂದ 22 ರ ತನಕ ನಡೆದ 60 ನೇ ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಬೆಂಗಳೂರು – 2022 ಸ್ಪರ್ಧೆಯಲ್ಲಿ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ ತಸ್ಮಯಿ ಮಂಜುನಾಥ್ ಶೆಟ್ಟಿ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇವರು ಕಟೀಲು ಮಿತ್ತಬೈಲು ಗುತ್ತು ಚಿತ್ರ ಶೆಟ್ಟಿ ಹಾಗೂ ಐಕಳ ಬಾವ ಮಂಜುನಾಥ್ ಶೆಟ್ಟಿಯವರ ಸುಪುತ್ರಿಯಾಗಿದ್ದಾಳೆ.

ತಸ್ಮಯಿಗೆ  ಅಂತರಾಷ್ಟ್ರೀಯ ಖ್ಯಾತಿಯ ಸ್ಕೇಟರ್ ಮಹೇಶ್ ಕುಮಾರ್ ತರಬೇತಿ ನೀಡಿದ್ದಾರೆ.

LATEST NEWS

ಈ ಸರ್ವಾಧಿಕಾರಿಗೆ ಬೇಕಂತೆ ವರ್ಷಕ್ಕೆ 25 ಕನ್ಯೆಯರು..!! ಏನಿದು ಕರ್ಮಕಾಂಡ?

Published

on

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನ ಕರ್ಮಕಾಂಡವನ್ನು ಅಲ್ಲಿನ ಯುವತಿಯೊಬ್ಬಳು  ಬಯಲಿಗೆಳೆದಿದ್ದಾಳೆ. ಉತ್ತರ ಕೊರಿಯಾದಿಂದ ಪರಾರಿಯಾಗಿ ತನ್ನ ದೇಶದ ಸರ್ವಾಧಿಕಾರಿಯ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾಳೆ. ಇಯೋನ್ಮಿ ಪಾರ್ಕ್ ಎಂಬ ಯುವತಿ ದೇಶದ ನಾಯಕ ಕಿಮ್ ಜಾಂಗ್ ಉನ್ ಬಗ್ಗೆ ಸಂವೇದನಾಶೀಲ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಕಿಮ್ ಜೊಂಗ್-ಉನ್ ತನ್ನ “ಸಂತೋಷದ ತಂಡ(Pleasure Squad)” ಗಾಗಿ ಪ್ರತಿ ವರ್ಷ 25 ಕನ್ಯೆಯರನ್ನು ಆರಿಸಿಕೊಳ್ಳುತ್ತಾನಂತೆ.

kim jong un

ಇನ್ನು ಕನ್ಯೆಯರನ್ನು ಅವರ ನೋಟ ಮತ್ತು ರಾಜಕೀಯ ನಿಷ್ಠೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಕಿಮ್‌ನ “ಪ್ಲೆಶರ್ ಸ್ಕ್ವಾಡ್‌” ಗಾಗಿ ತಾನು ಎರಡು ಬಾರಿ ಸ್ಕೌಟ್ ಮಾಡಲ್ಪಟ್ಟಿದ್ದೇನೆ ಆದರೆ ತನ್ನ ಕುಟುಂಬದ ಸ್ಥಾನಮಾನದ ಕಾರಣದಿಂದ ಆಯ್ಕೆಯಾಗಲಿಲ್ಲ ಎಂದು ಪಾರ್ಕ್‌ ಬಹಿರಂಗಪಡಿಸಿದ್ದಾರೆ.

ಹುಡುಗಿಯರ ಆಯ್ಕೆ ಹೇಗಾಗುತ್ತೆ ಗೊತ್ತಾ?

ಇನ್ನು ಕನ್ಯೆಯರನ್ನು ಅವರ ಸೌಂದರ್ಯ ನೋಡಿ ಆಯ್ಕೆ ಮಾಡಲಾಗುತ್ತದೆ. ಅಧಿಕಾರಿಗಳ ತಂಡ ಶಾಲಾ ಮೈದಾನಕ್ಕೆ, ಶಾಲೆಗಳಿಗೆ ಭೇಟಿ ಕೊಡ್ತಾರೆ. ಈ ವೇಳೆ ಸುಂದರವಾದ ಹುಡುಗಿಯರು ಕಂಡರೆ ಮೊದಲು ಹುಡುಗಿಯ ಮನೆಯ ಬ್ಯಾಕ್‌ಗ್ರೌಂಡ್ ವಿಚಾರಣೆ ಮಾಡ್ತಾರೆ. ನಂತರ ಕುಟುಂಬದ ಸ್ಥಿತಿ ಹಾಗೂ ರಾಜಕೀಯ ಸ್ಥಿತಿಯನ್ನು ಪರಿಶೀಲನೆ ಮಾಡ್ತಾರೆ.  ಬಳಿಕ ಇದರಲ್ಲಿ ಆಯ್ಕೆ ಆದ ಹುಡುಗಿಯರನ್ನು ಕಿಮ್ ಜಾಂಗ್ ಉನ್ ತಂಡ ಬಳಸಿಕೊಳ್ಳುತ್ತದೆ. ಇದಕ್ಕೂ ಮೊದಲು ಕನ್ಯೆಯರನ್ನು ಕನ್ಯತ್ವ ಪರೀಕ್ಷೆಗೆ ವೈದ್ಯಕೀಯ ಪರಿಕ್ಷೆಯನ್ನು ಮಾಡಲಾಗುತ್ತದೆ. ಪರೀಕ್ಷೆಯ ಸಮಯದಲ್ಲಿ ಹುಡುಗಿಯರ ಮೈ ಮೇಲೆ ಸಣ್ಣ ಗಾಯದಂತಹ ಸಣ್ಣ ದೋಷ ಕಂಡ ಬಂದರೂ ರಿಜೆಕ್ಟ್ ಮಾಡಲಾಗುತ್ತೆ.  ಇನ್ನೂ ಕಠಿಣ ಪರೀಕ್ಷೆ ಬಳಿಕ ಆಯ್ಕೆ ಆದ ಹುಡುಗಿಯರನ್ನು ಪೊಂಗ್ಯಾಂಗ್‌ಗೆ ಕಳುಹಿಸಲಾಗುತ್ತದೆ. ಅವರ ಏಕೈಕ ಉದ್ದೇಶ ಅಲ್ಲಿನ ಸರ್ವಾಧಿಕಾರಿಯ ಆಸೆಗಳನ್ನು ಪೂರೈಸುವುದಾಗಿದೆ ಎಂದು ಪಾರ್ಕ್ ಹೇಳಿದ್ದಾರೆ.

ಮುಂದೆ ಓದಿ..; ಎರಡು ಬಾರಿ ಅಕ್ರಮವಾಗಿ ಗರ್ಭಿಣಿಯಾದ ಅಪ್ರಾಪ್ತೆ..! ಪೋಷಕರ ವಿರುದ್ಧ ದೂರು.!!ಮುಂದೇನಾಯ್ತು?

ಮೂರು ತಂಡಗಳಾಗಿ ವಿಂಗಡಣೆ:

ಹುಡುಗಿಯರನ್ನು ಮೂರು ತಂಡಗಳಾಗಿ ವಿಂಗಡಿಸಲಾಗುತ್ತದೆ. ಒಂದು ತಂಡದಲ್ಲಿ ಮಸಾಜ್ ತರಬೇತಿ ನೀಡಿದರೆ ಇನ್ನೊಂದು ತಂಡದಲ್ಲಿ ಹಾಡುಗಳನ್ನು ಹಾಗೂ ನೃತ್ಯಗಳನ್ನು ಮಾಡಲು ಇವರನ್ನು ತಯಾರು ಮಾಡ್ತಾರೆ. ಇನ್ನೊಂದು ತಂಡದಲ್ಲಿ ಸರ್ವಾಧಿಕಾರಿ ಹಾಗೂ ಇತರ ಪುರುಷರಿಗೆ ಲೈಂಗಿಕವಾಗಿ ಖುಷಿ ನೀಡುವುದನ್ನು ಕಲಿಸಲಾಗುವುದು. ಈ ಕುರಿತಾಗಿ ಅವರಿಗೆ ಟ್ರೈನ್ ಮಾಡಲಾಗುತ್ತದೆ ಎಂದು ಪಾರ್ಕ್ ಹೇಳಿದ್ದಾರೆ.

ಇದರಲ್ಲಿ ಅತ್ಯಂತ ಅಕರ್ಷಕ ಕನ್ಯೆಯರನ್ನು ಸರ್ವಾಧಿಕಾರಿಯ ಸೇವೆ ಮಾಡಲು ನೇಮಿಸಿದರೆ, ಇನ್ನೂ ಕೆಳ ಶ್ರೇಣಿಯ ಹುಡುಗಿಯರನ್ನು ರಾಜಕಾರಣಿಗಳು, ಕೆಲ ಜನರನ್ನು ತೃಪ್ತಿ ಪಡಿಸಲು ನಿಯೋಜನೆ ಮಾಡಲಾಗುತ್ತದೆ. ಇನ್ನು ಹುಡುಗಿಯರಿಗೆ 20 ವರ್ಷ ದಾಟಿದ ಬಳಿಕ ಅವರನ್ನು ಈ ತಂಡದಲ್ಲಿ ಉಳಿಸಿಕೊಳ್ಳುವುದಿಲ್ಲ. ಇದರಲ್ಲಿ ಕೆಲವು ಹುಡುಗಿಯರು ನಾಯಕರ ಅಂಗರಕ್ಷರನ್ನು ಮದುವೆಯಾಗುತ್ತಾರೆ. ಈ  ‘ಪ್ಲೆಶರ್ ಸ್ಕ್ವಾಡ್’ ಅನ್ನೋದು ಕಿಮ್ ಜಾಂಗ್-ಉನ್ ತಂದೆಯ ಕಾಲದಿಂದಲೂ ಹೀನ ಕೃತ್ಯ ನಡೆದುಕೊಂಡು ಬಂದಿದೆ ಎಂದು ಪಾರ್ಕ್ ಉತ್ತರ ಕೊರಿಯಾ ಸರ್ವಾಧಿಕಾರಿಯ ಕರ್ಮಕಾಂಡವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.

Continue Reading

LATEST NEWS

ತಿಮ್ಮಪ್ಪನ ಸನ್ನಿಧಾನದಲ್ಲಿ ಮಾಂಗಲ್ಯ ಮಾರಾಟ; ಮಾಂಗಲ್ಯ ಪಡೆಯುವುದು ಹೇಗೆ?

Published

on

ಮಂಗಳೂರು : ತಿರುಪತಿ ದೇವಸ್ಥಾನ ಈಗಾಗಲೇ ಭಕ್ತರಿಗಾಗಿ ಮಾಂಗಲ್ಯವನ್ನು ಮಾರಾಟ ಮಾಡುವ ನಿರ್ಣಯದ ಮೂಲಕ ಈಗಾಗಲೇ ಶುಭ ಸುದ್ದಿ ನೀಡಿತ್ತು. ಈ ಮೂಲಕ ಮನೆಯಲ್ಲಿ ಮದುವೆ ಕಾರ್ಯ ಇದ್ದಲ್ಲಿ ತಿರುಮಲ ತಿರುಪತಿ ದೇವಸ್ಥಾನದಿಂದ ಮಾಂಗಲ್ಯವನ್ನು ಖರೀದಿಸಬಹುದು. ಅಲ್ಲದೇ, ತಿಮ್ಮಪ್ಪನ ದರ್ಶನವನ್ನು ಉಚಿತವಾಗಿ ಪಡೆಯಬಹುದಾಗಿದೆ.


ಕಾಣಿಕೆಯಿಂದ ಮಾಂಗಲ್ಯ ತಯಾರಿ :

ತಿರುಮಲ ತಿರುಪತಿ ದೇವಸ್ಥಾನ ಕಳೆದ ಫೆಬ್ರವರಿಯಲ್ಲಿ ಭಕ್ತರಿಗೆ ಮಾಂಗಲ್ಯ ಸರ ಒದಗಿಸಬೇಕೆಂಬ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ತಿರುಪತಿಗೆ ಕಾಣಿಕೆಯಾಗಿ ನೀಡುವ ಚಿನ್ನದಿಂದ 5 ಮತ್ತು 10 ಗ್ರಾಂ ತೂಕದ ಮಾಂಗಲ್ಯವನ್ನು ತಯಾರಿಸಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

ಪಡೆಯುವುದು ಹೇಗೆ?

* ನವದಂಪತಿ ತಮ್ಮ ಮದುವೆ ಕಾರ್ಡ್‌ನೊಂದಿಗೆ ತಿರುಪತಿ ವಿಳಾಸಕ್ಕೆ ಪೋಸ್ಟ್ ಕಳುಹಿಸಬಹುದು.
* ತಿರುಪತಿಯಲ್ಲಿಯೂ ಮಾಂಗಲ್ಯ ಖರೀದಿ ಮಾಡಬಹುದು.
* ನವ ದಂಪತಿ ಸ್ವತ: ತಿರುಪತಿಗೆ ಹೋಗಿ ಮಾಂಗಲ್ಯ ಖರೀದಿ ಮಾಡಬಹುದು.
* ಜೊತೆಗೆ ತಿಮ್ಮಪ್ಪನ ದರ್ಶನವನ್ನೂ ಪಡೆಯಬಹುದು

ಇದನ್ನೂ ಓದಿ : ಏನಾಶ್ಚರ್ಯ! ರೋಬೋಟ್ ಜೊತೆ ಮದುವೆಯಾಗುತ್ತಿದ್ದಾನೆ ಈ ಯುವಕ! 

ವಿಶಿಷ್ಟ ಕಲ್ಯಾಣಮಸ್ತು ಕಾರ್ಯಕ್ರಮ :

ಈಗಾಗಲೇ ತಿರುಪತಿ ದೇವಸ್ಥಾನಂ ಟ್ರಸ್ಟ್ ತನ್ನ ವಿಶಿಷ್ಟ ಕಲ್ಯಾಣಮಸ್ತು ಕಾರ್ಯಕ್ರಮದ ಮೂಲಕ 32,000 ಬಡ ಜೋಡಿಗಳಿಗೆ ವಿವಾಹ ಮಾಡಿದೆ. ಇವರಿಗೆ ದೇವಸ್ಥಾನದ ಆಡಳಿತ ಮಂಡಳಿ 2 ಗ್ರಾಂ ಚಿನ್ನದ ತಾಳಿಯನ್ನು ನೀಡಿದೆ. ಇದೀಗ ಮಾಂಗಲ್ಯ ಮಾರಾಟವನ್ನು ಪರಿಚಯಿಸುವ ಮೂಲಕ, ನವ ದಂಪತಿಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುತ್ತದೆ. ಸಂತೋಷದ ದಾಂಪತ್ಯ ಜೀವನಕ್ಕೆ ಸಹಾಯ ಮಾಡುತ್ತದೆ ಎಂದು ದೇವಸ್ತಾನಂ ಅರ್ಚಕರು ಹೇಳುತ್ತಾರೆ.

ಈ ಮಂಗಲ ಸೂತ್ರಗಳು 5 ಗ್ರಾಂ ಮತ್ತು 10 ಗ್ರಾಂ ಗಾತ್ರದಲ್ಲಿ ನಾಲ್ಕೈದು ವಿನ್ಯಾಸಗಳಲ್ಲಿ ಬೆಲೆಗೆ ಅನುಗುಣವಾಗಿ ಲಭ್ಯವಿರುತ್ತದೆ. ಇವುಗಳ ಜತೆಗೆ ಲಕ್ಷ್ಮೀ ಕಾಸನ್ನೂ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ದೇವಸ್ತಾನದ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಆಡಳಿತ ಮಂಡಳಿ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ.

Continue Reading

LATEST NEWS

ಏನಾಶ್ಚರ್ಯ! ರೋಬೋಟ್ ಜೊತೆ ಮದುವೆಯಾಗುತ್ತಿದ್ದಾನೆ ಈ ಯುವಕ!

Published

on

ಮಂಗಳೂರು : ಜಗತ್ತು ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಿಕೊಳ್ಳುತ್ತದೆ. ಹೊಸ ಆವಿಷ್ಕಾರಗಳು ಜನರ ಹುಬ್ಬೇರಿಸುವಂತೆ ಮಾಡುತ್ತದೆ. ರೋಬೋಟ್ ತಂತ್ರಜ್ಞಾನವೇನೋ ಹಳತು. ಆದ್ರೆ, ಈಗ ಈ ರೊಬೋಟ್ ಬಗ್ಗೆ ನಾವು ಹೇಳುತ್ತಿರುವ ಸುದ್ದಿ ಹೊಸತು. ಹೌದು, ಇಲ್ಲೊಬ್ಬ ರೋಬೋಟ್ ಅನ್ನೇ ಮದುವೆಯಾಗುತ್ತಿದ್ದಾನೆ. ಇದು ಸಾಧ್ಯನಾ ಅನ್ಬೇಡಿ! ಇದು ಸಾಧ್ಯ ಎಂದು ಯುವಕ ಸಾರಲು ಹೊರಟಂತಿದೆ.


ಎಲ್ಲಿ ನಡೆಯಲಿದೆ ಈ ಅಚ್ಚರಿಯ ಘಟನೆ?

ರೋಬೋಟ್ ತಂತ್ರಜ್ಞಾನ ಆವಿಷ್ಕಾರ ಆದಂದಿನಿಂದಲೂ ಅಚ್ಚರಿ ಹುಟ್ಟು ಹಾಕುತ್ತಿರುವುದೇನೋ ಸರಿ. ಆದ್ರೆ ಮದುವೇನೂ ಆಗ್ಬೋದಾ!? ಈ ಹಿಂದೆ ಸಿನಿಮಾವೊಂದರಲ್ಲಿ ರೋಬೋಟ್ ನ್ನು ಮದುವೆಯಾಗಿದ್ದ ಕಥೆ ಹೆಣೆಯಲಾಗಿತ್ತು. ‘ತೇರೆ ಬಾತೋಮೆ ಅಯ್ಸಾ ಉಲ್ಜಾದಿಯಾ’ ಅನ್ನೋ ಈ ಹಿಂದಿ ಸಿನೆಮಾದಲ್ಲಿ ಹೀರೋ ರೋಬೋಟ್ ಅನ್ನು ಮದುವೆಯಾಗಿ, ಸಂಸಾರ ಮಾಡುವ ಕಥೆ ಇದೆ.


ಇದೀಗ ರಾಜಸ್ಥಾನದಲ್ಲಿ ಯುವಕನೊಬ್ಬ ರೋಬೋಟ್‌ ಜೊತೆ ಮದುವೆ ಆಗಲು ಮುಂದಾಗಿದ್ದಾನೆ. ಅಂದಹಾಗೆ, ಈ ಯುವಕ ಸಾಫ್ಟ್ ವೇರ್ ಇಂಜಿನಿಯರ್. ಆತನ ಹೆಸರು ಸೂರ್ಯಪ್ರಕಾಶ್ ಸುಮೋತಾ. ಸಿಕರ್ ಎಂಬ ಗ್ರಾಮವೊಂದರ ಸೂರ್ಯಪ್ರಕಾಶ್ ಸುಮೋತಾ ರೋಬೋಟ್ ಜೊತೆ ಮದುವೆಯಾಗಲು ಮುಂದಾಗಿದ್ದಾರೆ.

ಮದುವೆ ದಿನಾಂಕ ಫಿಕ್ಸ್ ಆಗಿಲ್ಲ :


ಮಾರ್ಚ್ 22 ರಂದು ರೋಬೋಟ್ ಜೊತೆ ಎಂಗೇಜ್ ಮೆಂಟ್ ಮುಗಿಸಿಕೊಂಡಿದ್ದು, ಮದುವೆಯ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ರೋಬೋಟ್‌ ಜೊತೆ ಮದುವೆಗೆ ಮುಂದಾಗಿರುವ ಸೂರ್ಯಪ್ರಕಾಶ್ ಸುಮೋತಾ ಮೂಲತಃ ಬಡ ಕೃಷಿ ಕುಟುಂಬದಿಂದ ಬಂದವರು. ತಂದೆ – ತಾಯಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಗ ರೋಬೋಟ್ ಜೊತೆ ಸಂಸಾರ ಮಾಡುತ್ತೇನೆ ಅಂದ್ರೆ ತಂದೆ – ತಾಯಿ ಒಪ್ತಾರೆಯೇ ? ಸೂರ್ಯಪ್ರಕಾಶ ತಂದೆ – ತಾಯಿ ಈ ಮದುವೆಗೆ ಸಮ್ಮತಿ ಸೂಚಿಸಿಲ್ಲ. ಕುಟುಂಬದ ಸದಸ್ಯರು ಸೂರ್ಯಪ್ರಕಾಶ್‌ಗೆ ಓಕೆ ಅಂದಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ತಂದೆ ತಾಯಿ ಕೂಡಾ ಈ ರೋಬೋಟ್ ಜೊತೆಗಿನ ಮದುವೆಯನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ರೋಬೋ ತಯಾರಿಗೆ 19 ಲಕ್ಷ ಖರ್ಚು :

ಎನ್‌ಎಮ್‌ಎಸ್‌ 5.0 ಗಿಗಾ ಎಂದು ರೋಬೋಟ್‌ಗೆ ಹೆಸರಿಟ್ಟಿದ್ದು, ಈ ರೋಬೋಟ್ ತಯಾರು ಮಾಡಲು ಸೂರ್ಯಪ್ರಕಾಶ್ 19 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರಂತೆ. ರೋಬೋಟನ್ನು ತಮಿಳನಾಡು ಹಾಗೂ ನೋಯ್ಡಾದ ಕಂಪೆನಿಗಳು ಜಂಟಿಯಾಗಿ ತಯಾರು ಮಾಡುತ್ತಿದೆ. ಇನ್ನು ರೋಬೋಟ್‌ಗೆ ಬೇಕಾದ ಸಾಫ್ಟ್‌ವೇರ್‌ ಹಾಗೂ ಅದರ ಕಮಾಂಡ್‌ಗಳನ್ನು ಖುದ್ದು ಸೂರ್ಯಪ್ರಕಾಶ್ ರೆಡಿ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ರೋಬೋಟ್‌ಗಳನ್ನು ಕೃಷಿಯಲ್ಲಿ ಬಳಕೆ ಮಾಡಿ ಅವುಗಳ ವರ್ತನೆಯನ್ನು ಸೂರ್ಯಪ್ರಕಾಶ ಅಧ್ಯಯನ ಮಾಡಿದ್ದಾನೆ.

ಇದೇ ವೇಳೆ ಮನೆಯವರು ಮದುವೆಗೆ ಒತ್ತಾಯಿಸಿದಾಗ ಈ ರೀತಿ ರೋಬೋಟ್‌ ಜೊತೆ ಮದುವೆ ಆಗುವ ಇಚ್ಚೆ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಕಳೆದ ಎರಡು ವರ್ಷದಿಂದ ಪರಿಪೂರ್ಣ ಮನುಷ್ಯರಂತೆ ವರ್ತಿಸೋ ರೋಬೋಟ್ ತಯಾರಿಯಲ್ಲಿ ಸೂರ್ಯಪ್ರಕಾಶ್ ತೊಡಗಿಸಿಕೊಂಡಿದ್ದರು.

Continue Reading

LATEST NEWS

Trending