DAKSHINA KANNADA
ಮಂಗಳೂರು: ಪ್ರಧಾನಿ ಮೋದಿ ರೋಡ್ ಶೋ ಗೆ ಕ್ಷಣಗಣನೆ
Published
7 months agoon
By
Adminಲೋಕಸಭಾ ಚುನಾವಣೆಯ ಪ್ರಚಾರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳೂರಿಗೆ ಆಗಮಿಸಿ, ರಾತ್ರಿ ರೋಡ್ ಶೋ ನಡೆಸಲಿದ್ದು, ಈ ಕಾರ್ಯಕ್ರಮಕ್ಕೆ ಮಂಗಳೂರು ನಗರದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.
ಮೈಸೂರಿನ ಕಾರ್ಯಕ್ರಮ ಮುಗಿಸಿ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರು ಕೆಂಜಾರಿನಿಂದ ನೇರವಾಗಿ ಲೇಡಿಹಿಲ್ ಜಂಕ್ಷನಿಗೆ ಆಗಮಿಸಿ ಅಲ್ಲಿನ ವೃತ್ತದಲ್ಲಿರುವ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ರಾತ್ರಿ 7.45 ಕ್ಕೆ ರೋಡ್ ಶೋ ಆರಂಭವಾಗಲಿದೆ. ಲಾಲ್ ಭಾಗ್, ಬಲ್ಲಾಳ್ ಭಾಗ್, ಪಿವಿಎಸ್ ಜಂಕ್ಷನ್ ಮೂಲಕ ರೋಡ್ ಶೋ ಬಂದು ನವಭಾರತ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ. ಅಲ್ಲಿಂದ ಪ್ರಧಾನಿ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ನಿರ್ಗಮಿಸಿ ವಿಶೇಷ ವಿಮಾನ ಮೂಲಕ ಕೊಚ್ಚಿಗೆ ಪ್ರಯಾಣ ಬೆಳೆಸುವರು. ಮೋದಿ ರೋಡ್ ಶೋಗಾಗಿ ಭರ್ಜರಿ ಸಿದ್ಧತೆಗಳು ನಡೆದಿವೆ.
ಬಿಜೆಪಿ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ರೋಡ್ ಶೋ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಹೊರ ಜಿಲ್ಲೆಗಳ ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆ ಹೊಣೆ ಹೊತ್ತ ಎಸ್‌ಪಿಜಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಮಾಡಿದೆ. ಮೋದಿ ರೋಡ್ ಶೋ ನಡೆಸುವ ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಅಳವಡಿಸಲಾಗಿದೆ. ರಸ್ತೆಯ ಬದಿಯಲ್ಲಿನ ತ್ಯಾಜ್ಯಗಳನ್ನು ತೆರವು ಮಾಡಿ ಸ್ವಚ್ಛಗೊಳಿಸಲಾಗಿದೆ.
ಬ್ಯಾನರ್ಗಳು, ಇಂಟರ್‌ನೆಟ್ ಕೇಬಲ್‌ಗಳನ್ನೂ ತೆರವುಗೊಳಿಸಲಾಗಿದೆ. ಆದರೆ ರಸ್ತೆ ಬದಿಯ ಬ್ಯಾರಿಕೇಡ್‌ಗಳುದ್ದಕ್ಕೂ ಬಿಜೆಪಿ ಬಂಟಿಂಗ್ಸ್ ಕಟ್ಟಲಾಗಿದೆ. ರೋಡ್ ಶೋ ನಡೆಯುವ ರಸ್ತೆಯಲ್ಲಿ ಮಧ್ಯಾಹ್ನ 3 ಗಂಟೆ ಬಳಿಕ ವಾಹನಗಳ ಪಾರ್ಕಿಂಗ್ ಮತ್ತು ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. 60 ಮಂದಿ ಶಸ್ತ್ರಸಜ್ಜಿತ ಅಧಿಕಾರಿಗಳು ಮೋದಿಗೆ ಬೆಂಗಾವಲಾಗಿ ಇರಲಿದ್ದಾರೆ. ರೋಡ್ ಶೋ ಪ್ರದೇಶವನ್ನು ಏರಿಯಲ್ ವ್ಯೂ ಮೂಲಕ ಪರಿಶೀಲನೆ ನಡೆಸಲಾಗಿದೆ.
ಶನಿವಾರ ರಾತ್ರಿ ವೇಳೆ ಎಸ್‌ಪಿಜಿ ನೇತೃತ್ವದಲ್ಲಿ ಪೊಲೀಸರು ರಿಹರ್ಸಲ್, ಅಣಕು ರೋಡ್ ಶೋ ನಡೆಸಿದರು. ಈ ಸಂದರ್ಭ ಕೆಂಜಾರು ವಿಮಾನ ನಿಲ್ದಾಣದಿಂದ ಮೋದಿಯವರು ಆಗಮಿಸಿ ನವಭಾರತ ವೃತ್ತದವರೆಗೆ ರೋಡ್ ಶೋ ನಡೆಸುವುದನ್ನು ರಿಯಲ್ ಟೈಂ ರೀತಿಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಪ್ರಯುಕ್ತ ನಿನ್ನೆ ರಾತ್ರಿ ವೇಳೆ ವಿದ್ಯುತ್ ಸರಬರಾಜಿನಲ್ಲಿಯೂ ಏರುಪೇರಾಗಿತ್ತು. ಪ್ರಧಾನಿ ಮೋದಿ ಈ ಹಿಂದೆ 9 ಬಾರಿ ಮಂಗಳೂರಿಗೆ ಭೇಟಿ ನೀಡಿದ್ದು, ಇದು ಅವರ 10 ನೇ ಭೇಟಿಯಾಗಿದೆ.
DAKSHINA KANNADA
ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?
Published
10 hours agoon
21/11/2024By
NEWS DESK3ಮಂಗಳೂರು/ಆಂಧ್ರಪ್ರದೇಶ: ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೀರು, ಚಂದನ ಅಥವಾ ಗಂಧದ ಅಭಿಷೇಕ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಶ್ರೀ ಶಿವದತ್ತ ಸ್ವಾಮಿಜಿ ಭಕ್ತರಿಂದ ಮೆಣಸಿನ ಪುಡಿ ಅಭಿಷೇಕ ಮಾಡಿಸಿಕೊಂಡಿರುವ ಸುದ್ಧಿ ಫುಲ್ ವೈರಲ್ ಆಗುತ್ತಿದೆ.
ಆಂಧ್ರಪ್ರದೇಶದ ಪ್ರತ್ಯಂಗಿರ ಆಶ್ರಮದಲ್ಲಿ ಈ ವಿಶಿಷ್ಟವಾದ ಅಭಿಷೇಕ ನಡೆದಿದ್ದು, ಸುಮಾರು 100 ಕೆಜಿ ಮೆನಸಿನಕಾಯಿಯನ್ನು ಬಳಸಲಾಗಿದ್ದು, ಇದನ್ನು ಮಾಡುವುದರಿಂದ ಭಕ್ತರ ಕಷ್ಟಗಳು ದೂವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ದೇವಿಯ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗಿದ್ದು, ಇದನ್ನು ‘ಕರಂ ಅಭಿಷೇಕ’ ಎಂದು ಕೂಡ ಕರೆಯಲಾಗುತ್ತದೆ.
ಇದನ್ನು ಓದಿ:ಯೂಟ್ಯೂಬ್ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ
ಕಳೆದ 14 ವರ್ಷಗಳಿಂದ ಪ್ರತ್ಯಂಗಿರ ಆಶ್ರಮದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರುತ್ತಿದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮೆಣಸಿನ ಪುಡಿ ಸಮರ್ಪಿಸುತ್ತಾರೆ. ಈ ಕ್ರಮ ಭಕ್ತರ ನಂಬಿಕೆಯೋ, ದೇವರ ಪವಾಡವೋ ಗೋತ್ತಿಲ್ಲ, ಆದರೆ ಇಂತಹ ಆಚರಣೆ ಆಧುನಿಕ ಯುಗದಲ್ಲಿ ಎಷ್ಟು ಸರಿ ಎಂಬುವುದು ಚಿಂತಾದಾಯಕ ವಿಷಯವಾಗಿದೆ.
bangalore
ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?
Published
12 hours agoon
21/11/2024By
NEWS DESK3ಮಂಗಳೂರು/ಬೆಂಗಳೂರು: ಕಾಂಗ್ರೇಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಸ್ಟಾಪ್ ಆಗುತ್ತಾ ಅನ್ನುವಂತಹ ಭಯ ಯಜಮಾನಿಯರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ, ರಾಜ್ಯದಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ.
ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಬಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ರದ್ದಾದರೆ ಅಥವಾ ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ವರ್ಗಾವಣೆಯಾದರೆ 2000 ರೂ. ಬರುತ್ತೋ, ಇಲ್ಲವೋ ಎಂಬುವುದು ರಾಜ್ಯದ ಮಹಿಳೆಯರ ತಲೆನೋವಿಗೆ ಕಾರಣವಾಗಿದೆ.
ಇದನ್ನು ಓದಿ :ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಬಿಪಿಎಲ್ ಗೆ ಅರ್ಹವಲ್ಲದ ಸುಮಾರು 80,000 ಕಾರ್ಡುಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಯಾವುದೇ ರೀತಿಯ ಗೊಂದಲ ಪಡುವುದು ಬೇಡ. ಅಕ್ರಮ ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿಯರ ಖಾತೆಗೆ 2000 ರೂ. ಹಣ ಜಮೆ ಆಗುವುದು. ತೆರಿಗೆ ಪಾವತಿಸುವವರಿಗೆ ಮಾತ್ರ 2000 ರೂ. ಹಣ ಬರುವುದಿಲ್ಲ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾದರೂ ಹಣ ಬರುತ್ತದೆ, ಆದರೆ ಅಂತವರು ತೆರಿಗೆ ಪಾವತಿಸದಿದ್ದರೆ ಮಾತ್ರ ಬರುವುದು ಎಂದು ಹೇಳಿದ್ದಾರೆ.
DAKSHINA KANNADA
ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್
Published
13 hours agoon
21/11/2024By
NEWS DESK3ಮಂಗಳೂರು/ಮಧ್ಯಪ್ರದೇಶ: ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಜತ್ ಪಾಟಿದಾರ್ ಅವರಿಗೆ ನಾಯಕತ್ವ ಒದಗಿ ಬಂದಿದೆ.
ರಜತ್ ಪಟಿದಾರ್ ಆರ್ ಸಿಬಿ ತಂಡದಲ್ಲಿ ಪ್ರಮುಖ ಆಟಗಾರ ಹಾಗೂ ಈ ಬಾರಿ ತಂಡ ಅವರನ್ನು ಬರೋಬ್ಬರಿ 11 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ. ಇದೀಗ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ರಜತ್ ಪಾಟಿದಾರ್ ಗೆ ರಾಜ್ಯ ತಂಡದ ನಾಯಕತ್ವ ನೀಡಲಾಗಿದೆ.
ನವೆಂಬರ್ 23 ರಿಂದ ಶುರುವಾಗಲಿರುವ ಈ ಟೂರ್ನಿಗಾಗಿ 15 ಸದಸ್ಯರ ಮಧ್ಯಪ್ರದೇಶ ತಂಡವನ್ನು ಘೋಷಿಸಲಾಗಿದೆ.
ಇದನ್ನು ಓದಿ: ಎಕ್ಸ್ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ
ಮಧ್ಯಪ್ರದೇಶ ತಂಡದ ನಾಯಕರಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಒಂದು ವೇಳೆ ಮುಂಬರುವ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವು ಫೈನಲ್ ಗೆ ತಲುಪಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ರೇಸ್ ನಲ್ಲಿ ರಜತ್ ಪಾಟಿದಾರ್ ಕೂಡ ತೀವ್ರ ಪೈಪೋಟಿ ಕೊಡಲಿದ್ದಾರೆ.
ಆರ್ ಸಿಬಿ ಪರ 24 ಇನ್ನಿಂಗ್ಸ್ ಆಡಿರುವ ರಜತ್ ಪಾಟಿದಾರ್ 1 ಶತಕ 7 ಅರ್ಧಶತಕಗಳೊಂದಿಗೆ ಒಟ್ಟು 799 ರನ್ ಕಲೆಹಾಕಿದ್ದಾರೆ. ಈಗಗಾಲೇ ಆರ್ ಸಿ ಬಿ ತಂಡದಿಂದ ನಾಯಕ ಫಾಫ್ ಡುಪ್ಲೆಸಿಸ್ ತಂಡದಿಂದ ಹೊರಬಿದಿದ್ದಾರೆ. ಇದರಿಂದ ನಾಯಕತ್ವ ಯಾರ ಪಾಲಾಗಲಿದೆ ಎಂಬುವುದು ತ್ರೀವ್ರ ಕುತೂಹಲ ಮೂಡಿಸಿದೆ.
LATEST NEWS
‘ಓಲಾ ಎಲೆಕ್ಟ್ರಿಕ್ ಕಂಪನಿ’ಯಿಂದ 500 ಉದ್ಯೋಗಿಗಳು ವಜಾ
ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?
ನೀವು ಹೀಗೆ ಮಾಡಿದ್ರೆ ‘ಗೂಗಲ್ ಪೇ’ನಲ್ಲಿ ಸುಲಭವಾಗಿ 1,000 ರೂಪಾಯಿ ಪಡೆಯಬಹುದು
ತಾಯಂದಿರಿಂಲೇ ಮಕ್ಕಳ ಅ*ಪಹರಣ; ಉದ್ದೇಶ ಕೇಳಿದ್ರೆ ನೀವೆ ಶಾಕ್ ಆಗ್ತೀರ !!
ಯೂಟ್ಯೂಬ್ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ
ಎಕ್ಸ್ಪ್ರೆಸ್ ರೈಲು ಡಿ*ಕ್ಕಿ; ವಿದ್ಯಾರ್ಥಿನಿಯ ದು*ರಂತ ಅಂ*ತ್ಯ
Trending
- LATEST NEWS1 day ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS3 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS1 day ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ