Connect with us

LATEST NEWS

ನಾರಾಯಣ ಗುರು ಟ್ಯಾಬ್ಲೋ ವಿವಾದ: ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಮಧ್ಯೆ ಹೊಯ್‌ಕೈ

Published

on

ಮಂಗಳೂರು: ಕೇಂದ್ರ ಸರಕಾರವು ನಾರಾಯಣ ಗುರುಗಳ ಟ್ಯಾಬ್ಲೋವನ್ನು ಗಣರಾಜ್ಯೋತ್ಸವದ ಪರೇಡ್‌ಗೆ ನಿರಾಕರಿಸಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆಕ್ರೋಶ ಹೆಚ್ಚುತ್ತಿರುವಂತೆಯೇ

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದವರೆಗೆ ಇಂದು ನಾರಾಯಣ ಗುರುಗಳ ಪಾದಯಾತ್ರೆಯನ್ನು ನಡೆಸಲು ಯೂತ್‌ ಕಾಂಗ್ರೆಸ್ ಸಿದ್ಧತೆ ನಡೆಸಿತ್ತು.


ಆದರೆ ಈ ಪಾದಯಾತ್ರೆಗೆ ಕಾಂಗ್ರೆಸ್ ಪಕ್ಷದೊಳಗೆ ವಿವಾದ ಸ್ವರೂಪ ಪಡೆದುಕೊಂಡಿದ್ದು, ಪಾದಯಾತ್ರೆಗೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ಹಿರಿಕಿರಿಯ ನಾಯಕರ ನಡುವೆ ಮಾತಿನ ಚಕಮಕಿ ನಡೆದು ಹೊಯ್‌ ಕೈ ಹಂತಕ್ಕೆ ಮುಟ್ಟಿದೆ.

ಇಂದು ಬೆಳಿಗ್ಗೆ ಬ್ರಹ್ಮಶ್ರೀ ನಾರಾಯಣ ಗುರು ವಿಚಾರವಾಗಿ ಪಾದಯಾತ್ರೆ ನಿಗದಿಯಾಗಿತ್ತು. ಈ ವೇಳೆ ಪಾದಯಾತ್ರೆಗೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಅನುಮತಿ ಪಡೆಯದೇ ಇದನ್ನು ಮಾಡಲು ಮುಂದಾಗಿದ್ದು,

ಕೆಲವು ಹಿರಿಯ ನಾಯಕರನ್ನು ಅಸಮಧಾನಕ್ಕೆ ಒಳಪಡಿಸಿದೆ ಎಂದು ಹೇಳಲಾಗಿದೆ. ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ.

ರಮಾನಾಥ ರೈಗಳು ವೇದಿಕೆಯಲ್ಲಿ ನಿಂತು ಮಾತನಾಡುತ್ತಿದ್ದ ವೇಳೆ ಮೂಲ್ಕಿ ವಲಯದ ನಾಯಕರೊಬ್ಬರು ರೈಗಳನ್ನು ನಿಂದಿಸಿ ಮಾತನಾಡಿದ್ದೇ ಈ ವಿವಾದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಈ ವೇಳೆ ಹಿರಿಯ ನಾಯಕರಾದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಬಿ ರಮಾನಾಥ ರೈ, ಜೆ ಆರ್ ಲೋಬೋ, ಮಂಜುನಾಥ ಭಂಡಾರಿ, ಯು ಟಿ ಖಾದರ್‌ ಅವರ ಉಪಸ್ಥಿತಿಯಲ್ಲೇ ಈ ಬಗ್ಗೆ ಯುವ ನಾಯಕರೊಂದಿಗೆ ಮಾತಿನ ಚಕಮಕಿ ನಡೆದು ಬಳಿಕ ಸಂಧಾನ ಮಾಡಲಾಗಿದೆ.

ಈ ಸಂದರ್ಭ ಸುದ್ದಿ ಮಾಧ್ಯಮಗಳಿಗೆ ಪ್ರವೇಶ ನೀಡದೇ ದೂರವಿರಿಸಿದೆ. ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್‌ ಅವರು ಉಪಸ್ಥಿತರಿದ್ದು, ಎಲ್ಲರನ್ನೂ ಸಮಾಧಾನ ಪಡಿಸಿದ್ದಾರೆ.

ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಿನಲ್ಲಿ ಇದ್ದೆವೆ ಎಂದ ಯುಟಿ ಖಾದರ್‌
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಯು.ಟಿ ಖಾದರ್‌ ನಮ್ಮ ಕಚೇರಿಯಲ್ಲಿ ಯಾವುದೇ ರೀತಿಯಾಗಿ ಗಲಾಟೆ ನಡೆದಿಲ್ಲ. ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಿನಲ್ಲಿ ಇದ್ದೆವೆ. ಬಿಜೆಪಿ ಜನ ವಿರೋಧಿ ನೀತಿ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ಜನವಿರೋಧಿ ನೀತಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ವಿವಿಧ ಕಾರ್ಯಕರ್ತರು ತಮ್ಮ ಅಭಿಪ್ರಾಯ ಹೇಳಿದ್ದಾರೆ ಎಂದರು.

ರಮಾನಾಥ್‌ ರೈ ಪ್ರತಿಕ್ರಿಯೆ
ಏನು ಗಲಾಟೆ ಇಲ್ಲ. ನಾರಾಯಣ ಗುರುಗಳಿಗೆ ಆದ ಅಪಮಾನ ಬಗ್ಗೆ ಚರ್ಚೆ ಆಗಿದೆ. ಯಾವ ರೀತಿಯಾಗಿ ಪ್ರತಿಭಟನೆ ಮಾಡಬೇಕು ಅನ್ನುವ ಭಿನ್ನ ಅಭಿಪ್ರಾಯ ಬಂದವು.

ಸ್ವಲ್ಪ ಜನರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಬೇಕು ಎಂದರು.ಮಾತನಾಡುವಾಗ ಹಾಗೆ ಮಾಡಬೇಕು ಹೀಗೆ ಮಾಡಬೇಕು ಅನ್ನುವ ಚರ್ಚೆ ಆಯಿತು.

ಕಾರ್ಯಕರ್ತರ ಬಗ್ಗೆ ನಾನು ಏನು ಮಾತನಾಡಿಲ್ಲ. ಕಾರ್ಯಕರ್ತರಿಗೆ ಇಲ್ಲಿ ಗಲಾಟೆ ‌ಮಾಡಬೇಡಿ ಅಂತ ಹೇಳಿದೆ ಅಷ್ಟೇ ಎಂದು ಮಾಜಿ ಸಚಿವ ಬಿ.ರಮಾನಾಥ್‌ ರೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LATEST NEWS

ಅಮೇಥಿಯಲ್ಲಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ.! ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ

Published

on

ಅಮೇಥಿ: ಉತ್ತರ ಪ್ರದೇಶದ ಅಮೇಥಿಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿದ್ದು ಕಾಂಗ್ರೆಸ್ ಕಚೇರಿ ಹೊರಗಡೆ ನಿಲ್ಲಿಸಿದ್ದ ಹಲವಾರು ವಾಹನಗಳನ್ನು ಧ್ವಂಸಗೊಳಿಸಿ ಗದ್ದಲ ಸೃಷ್ಟಿಸಿದೆ.

ಮುಂದೆ ಓದಿ..; ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್‌ಗೆ ಏನಾಗಿದೆ? ಎಂದು ಹೇಳಿದ್ಯಾಕೆ? 

ಸುದ್ದಿ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರದೀಪ್ ಸಿಂಗಲ್ ಪಕ್ಷದ ಕಚೇರಿಗೆ ದೌಡಾಯಿಸಿ ಬಳಿಕ ಪಕ್ಷದ ಕಾರ್ಯಕರ್ತರ ಜತೆಗೂಡಿ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.  ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ರತಿಭಟನೆ ಕಾವು ಹೆಚ್ಚುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾರೀ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು.

ಈ ವೇಳೆ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದ್ದಾರೆ. ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಆದಷ್ಟು ಬೇಗ ದುಷ್ಕರ್ಮಿಗಳನ್ನು ಬಂಧಿಸುವ ಭರವಸೆಯನ್ನು ಹಿರಿಯ ಪೊಲೀಸ್ ಅಧಿಕಾರಿ ನೀಡಿದ್ದಾರೆ. ದುಷ್ಕರ್ಮಿಗಳು ದಾಳಿ ನಡೆಸಿದ ವಿಡಿಯೋ ಅನ್ನು ಸಾಮಾಜಿಕ ಜಾಲತಾಣ x ನಲ್ಲಿ ಹಂಚಿಕೊಂಡ ಕಾಂಗ್ರೆಸ್ ಅಮೇಠಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ವಿರುದ್ಧ ಸೋಲಿನ ಭೀತಿಯಿಂದ ಬಿಜೆಪಿ ಹಿಂಸಾಚಾರ ನಡೆಸುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರನ್ನು ಉಲ್ಲೇಖಿಸಿ ಆರೋಪ ಮಾಡಿದೆ.

Continue Reading

DAKSHINA KANNADA

ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು..!

Published

on

ಬಂಟ್ವಾಳ : ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಬಂಟ್ವಾಳದ ನಾವೂರು ಎಂಬಲ್ಲಿ ಭಾನುವಾರ(ಎ.5) ಸಂಜೆ ನಡೆದಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಮತ್ತು ಇಲಿಯಾಸ್ ಅವರ ಪುತ್ರಿ ಮರಿಯಮ್ ನಾಶೀಯಾ (14 )ಮೃತಪಟ್ಟ ಬಾಲಕಿಯರು.

nethravathi river

ಮುಂದೆ ಓದಿ..; ಬರ್ಬರ ಹತ್ಯೆಯಾದ ಬ್ಯೂಟಿ ಕ್ವೀನ್.!! ಮುಳುವಾಯಿತಾ ಇನ್ಸ್ಟಾಗ್ರಾಮ್ ಪೋಸ್ಟ್‌..! ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ

ಮೂಲತಃ ನಾವೂರ ನಿವಾಸಿಯಾದ ಇಲಿಯಾಸ್ ಅವರು ಇತ್ತೀಚಿಗೆ ಉಳ್ಳಾಲದಲ್ಲಿ ಮನೆ ಕಟ್ಟಿಸಿದ್ದರು. ನಿನ್ನೆ  ನಾವೂರು ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಸಂಜೆ ವೇಳೆ ಮನೆಯವರ ಜತೆಗೆ ನಾವೂರಿನ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿದ್ದರು. ಈ ವೇಳೆ ಮನೆ ಮಂದಿ ಇರುವಾಗಲೇ ಮಕ್ಕಳು ನೀರಿನಲ್ಲಿ ಆಟ ಆಡುತ್ತಾ ಇದ್ದರು. ಈ ಸಂದರ್ಭದಲ್ಲಿ ಇಬ್ಬರು ಮಕ್ಕಳು ಏಕಾ ಏಕಿ ನೀರಿನಲ್ಲಿ ಮುಳುಗಿದ್ದಾರೆ. ನೀರಿನಲ್ಲಿ ಮುಳುಗುವುದನ್ನು ಕಣ್ಣಾರೆ ಕಂಡರೂ ಈಜು ಬಾರದ ಕಾರಣ ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

 

Continue Reading

FILM

ಸೋಶಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ಚಂದನ್ ಗೌಡ-ಕವಿತಾ ದಂಪತಿ

Published

on

ಚಂದನ್ ಗೌಡ – ಕವಿತಾ ದಂಪತಿ ಯಾರಿಗೆ ತಾನೇ ಗೊತ್ತಿಲ್ಲ. ಈ ಜೋಡಿ ‘ಲಕ್ಷ್ಮೀ ಬಾರಮ್ಮಾ’ ಮೂಲಕಾನೇ ಫೇಮಸ್. ಈ ಧಾರಾವಾಹಿಯಲ್ಲಿ ಕೆಲವು ಸಮಯ ನಟಿಸಿದ್ದ ಚಂದನ್ ಹೊರಬಂದಿದ್ದರು. ಕವಿತಾ ಕೂಡಾ ಅಷ್ಟೇ ಈ ಧಾರಾವಾಹಿ ಖ್ಯಾತಿ ನೀಡಿದ್ದರೂ, ನಂತರ ದಿನಗಳಲ್ಲಿ ಹೊರನಡೆದಿದ್ದರು. ಆದ್ರೆ, ಈ ಜೋಡಿ ರಿಯಲ್ ನಲ್ಲಿ ಒಂದಾಗಿ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಇದೀಗ ಚಂದು – ಲಚ್ಚಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಖುಷಿ ಸುದ್ದಿ ಹಂಚಿಕೊಂಡ ದಂಪತಿ :

ನಟ ಚಂದನ್ ಕುಮಾರ್, ಕವಿತಾ ಗೌಡ ಅವರು ಬೇಬಿ ಸ್ಕ್ಯಾನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಂಭ್ರಮ ಹಂಚಿಕೊಂಡಿದ್ದಾರೆ. ನಟಿ ಕವಿತಾ ಗೌಡ ಚಂದನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆಅಭಿಮಾನಿಗಳಿಂದ, ನಟ, ನಟಿಯರಿಂದ ಶುಭ ಹಾರೈಕೆ ಹರಿದು ಬರುತ್ತಿದೆ. ನೇಹಾ ಗೌಡ, ಗೀತಾ ಭಾರತೀ ಭಟ್, ಧನರಾಜ್, ವಿನಯ್ ಗೌಡ, ಪ್ರಿಯಾಂಕಾ ಚಿಂಚೋಳಿ ಮೊದಲಾದವರು ಶುಭಾಶಯ ತಿಳಿಸಿದ್ದಾರೆ. 2021 ಮೇ 14ರಂದು ಲಾಕ್ ಡೌನ್ ಸಂದರ್ಭದಲ್ಲಿ ಈ ಜೋಡಿ ಮದುವೆಯಾಗಿತ್ತು.

ಮುಂದೆ ಓದಿ..; ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್‌ಗೆ ಏನಾಗಿದೆ? ಎಂದು ಹೇಳಿದ್ಯಾಕೆ?

ಬ್ಯುಸಿ ಲೈಫ್ :

ಕೆಲ ತಿಂಗಳುಗಳಿಂದ ಕವಿತಾ ಗೌಡ ಅವರು ಉದ್ಯಮದ ಕಡೆಗೆ ಮುಖ ಮಾಡಿದ್ದರು. ಚಂದನ್ ಜೊತೆ ಸೇರಿ ಒಂದಾದ ಮೇಲೆ ಒಂದರಂತೆ ಹೋಟೆಲ್ ಬ್ರ್ಯಾಂಚ್ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಮೇಕಪ್ ಸ್ಟುಡಿಯೋವನ್ನು ಕೂಡ ಆರಂಭಿಸಿದ್ದಾರೆ.

Continue Reading

LATEST NEWS

Trending