Friday, July 1, 2022

‘ಭೂಮಿಯಲ್ಲಿ ಅನಾಚಾರ ಹೆಚ್ಚಾದಾಗ ರಾಮ ಬಂದಂತೆ ಈಗ ಮೋದಿ ಅವತಾರ ಎತ್ತಿದ್ದಾರೆ’

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮತ್ತು ಕೃಷ್ಣ ದೇವರ ಅವತಾರ ಎಂದು ಮಧ್ಯ ಪ್ರದೇಶದ ಕೃಷಿ ಸಚಿವ ಮತ್ತು ಬಿಜೆಪಿ ನಾಯಕ ಕಮಲ್ ಪಟೇಲ್ ಹೇಳಿದ್ದಾರೆ.


ಕಾಂಗ್ರೆಸ್ ಸೃಷ್ಟಿಸಿರುವ ಭ್ರಷ್ಟಾಚಾರ ಮತ್ತು ಅನಾಚಾರಗಳನ್ನು ತೊಲಗಿಸಲು ಪ್ರಧಾನಿ ಮೋದಿ ಅವತಾರವೆತ್ತಿ ಬಂದಿದ್ದಾರೆ.

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುತ್ತಿದೆ. ಭ್ರಷ್ಟಾಚಾರ ಕೊನೆಯಾಗುತ್ತಿದೆ.

ಇಷ್ಟೊಂದು ಜನರ ಕಲ್ಯಾಣ ಓರ್ವ ಜನಸಾಮಾನ್ಯನಿಂದ ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರು ಅವತಾರ ತಾಳಿ ಬಂದಿದ್ದಾರೆ ಎಂದು ಹೇಳಿದ್ದಾರೆ.

ಭೂಮಿಯಲ್ಲಿ ಅನ್ಯಾಯ ಉಂಟಾದಾಗ, ರಾಮ ದೇವರು ಅವತಾರ ತಾಳಿ ಬಂದಿದ್ದರು. ರಾಕ್ಷಸರ ಸಂಹಾರ ಮಾಡಿ ರಾಮರಾಜ್ಯ ಸ್ಥಾಪಿಸಿದ್ದರು.

ಅದೇ ಮಾದರಿಯಲ್ಲಿ ಈಗ ಪ್ರಧಾನಿ ಮೋದಿ ಜನ್ಮತಾಳಿದ್ದು, ದೇಶದಲ್ಲಿ ನಡೆಯುತ್ತಿರುವ ಎಲ್ಲ ಭ್ರಷ್ಟಾಚಾರ, ಅನಾಚಾರವನ್ನು ಕೊನೆಗೊಳಿಸಲಿದ್ದಾರೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಸುಳ್ಯ: ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ-ಸ್ತಬ್ಧರಾದ ಜನ

ಸುಳ್ಯ: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ನಿನ್ನೆ ತಡರಾತ್ರಿ 1.15ಕ್ಕೆ ಭಾರಿ ಶಬ್ದದೊಂದಿಗೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ.ಸುಳ್ಯದ ಸಂಪಾಜೆ, ಚೆಂಬು, ಕಲ್ಲುಗುಂಡಿ ಗಡಿಭಾಗ ಹಾಗೂ ಕೊಡಗಿನ ಗಡಿಭಾಗಗಳು...

ಬಂಟ್ವಾಳ: ಗೋಕಳ್ಳತನ-ದನದ ಮಾಂಸ ಸಹಿತ ಆರೋಪಿಗಳು ವಶಕ್ಕೆ

ಬಂಟ್ವಾಳ: ಕಳ್ಳತನ ಮಾಡಿದ ದನಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ದನದ ಮಾಂಸ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೋಳ್ತಮಜಲು ಎಂಬಲ್ಲಿ...

ಅಕ್ರಮ ಜಾನುವಾರು ಮಾಂಸ ಸಾಗಾಟ: ತಲಪಾಡಿಯಲ್ಲಿ ಇಬ್ಬರು ವಶಕ್ಕೆ

ಮಂಗಳೂರು: ಕೇರಳ ಕಡೆಯಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಕಾರಿನಲ್ಲಿ ಜಾನುವಾರು ಮಾಂಸ ಸಾಗಾಟ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಠಾಣಾಧಿಕಾರಿ ತಂಡದ ಪೊಲೀಸರು ತಲಪಾಡಿಯಲ್ಲಿ ಬಂಧಿಸಿ, ಅವರಿಂದ ಸಾಗಾಟಕ್ಕೆ ಬಳಸಿದ ಓಮ್ನಿ ಕಾರು...