Connect with us

DAKSHINA KANNADA

ಮಂಗಳೂರು: ನಂದಳಿಕೆ ಕೃಷ್ಣರಾಜರಿಗೆ ವಾಗೀಶ್ವರೀ ಸಂಮಾನ

Published

on

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಭಾಗಿತ್ವದಲ್ಲಿ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಸರಣಿಯ 20 ನೆಯ ಕಾರ್ಯಕ್ರಮ ಕುಡ್ತೇರಿ ಮಹಾಮಾಯಾ ದೇವರ ಸನ್ನಿಧಿಯಲ್ಲಿ ಇತ್ತೀಚಿಗೆ ಜರಗಿತು.

ಕೀರ್ತಿಶೇಷ ನಂದಳಿಕೆ ವಾಸುದೇವ ಭಟ್ಟರ ಸಂಸ್ಮರಣೆಯನ್ನು ನಂದಳಿಕೆ ಬಾಲಚಂದ್ರರಾಯರು ಮಾಡಿದರು.

ಯಕ್ಷಗಾನ ಭಾಗವತಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ವಾಸುದೇವ ಭಟ್ಟರು ಉತ್ಸವದ ದೇವರನ್ನು ಹೊರುವ ವಿಚಾರದಲ್ಲೂ ಹೆಸರುವಾಸಿಯಾಗಿದ್ದರು.

ಅತ್ಯಂತ ಸೌಮ್ಯ ಸ್ವಭಾವದ ವಾಸುದೇವ ಭಟ್ಟರು ಅದೇ ಗುಣಗಳುಳ್ಳ ಮಕ್ಕಳನ್ನು ಸಮಾಜಕ್ಕೆ ನೀಡಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಹಾರೈಸಿದರು.

ವಿದ್ವಾನ್ ನಂದಳಿಕೆ ಕೃಷ್ಣರಾಜ ಭಟ್ ಇವರ ಅಭಿನಂದನಾ ಭಾಷಣವನ್ನು ಸಂಘದ ಕೋಶಾಧಿಕಾರಿ ಶಿವಪ್ರಸಾದ್ ಪ್ರಭು ಗೈದರು.

ಗೋಪಾಲಕೃಷ್ಣ ಐಯರ್ ಇವರಿಂದ ಸಂಗೀತ ಶಿಕ್ಷಣ, ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಂದ ಯಕ್ಷಗಾನ ಭಾಗವತಿಕೆ, ಚೆಂಡೆ ಮದ್ದಳೆ ವಾದನ, ಗುರುರಾಜ್ ಅವರಿಂದ ಮೃದಂಗ ವಾದನವನ್ನು ಕಲಿತಿರುವ ಕೃಷ್ಣರಾಜ ಭಟ್, ತಾನು ಕಲಿತದ್ದನ್ನು ಅಪಾರ ಶಿಷ್ಯ ವೃಂದಕ್ಕೆ ಹಂಚುತ್ತಿದ್ದಾರೆ.

ಇವರಿಗೆ ಮಹಾಮಾಯೀ ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸಿದರು.

ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಜಿತೇಂದ್ರ ಕುಂದೇಶ್ವರ,ಹವ್ಯಾಸಿ ಯಕ್ಷಗಾನ ಸಂಘಗಳು ಯಕ್ಷಗಾನ ಕಲೆಗೆ ಬಹು ಮುಖ್ಯ ಆಧಾರ ಸ್ತಂಭಗಳು.

ಹಾಗೆಯೇ ಯಾವುದೇ ಪ್ರಚಾರದ ಬಯಕೆ ಇಲ್ಲದೆ ನಿಸ್ವಾರ್ಥವಾಗಿ ಕಲೆಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಸ್ತಾಂತರಿಸುತ್ತಿರುವ ಕೃಷ್ಣರಾಜ ಭಟ್ಟರಂತಹ ಗುರುಗಳು ನಿಜಕ್ಕೂ ಅಭಿನಂದನಾರ್ಹರು ಎಂದರು.

ಇನ್ನೋರ್ವ ಅತಿಥಿ ಎಲ್ಲೂರು ರಾಮಚಂದ್ರ ಭಟ್, ಕದ್ರಿ ಇವರು ನೂರು ವರ್ಷಗಳ ಐತಿಹ್ಯವುಳ್ಳ ಸಂಘದ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಆಡಿದರು.

ಪ್ರಸಿದ್ಧ ವ್ಯಕ್ತಿಗಳಿಗೆ, ಧನವಂತರಿಗೇ ಸನ್ಮಾನ ಆಗುತ್ತಿರುವ ಈ ಕಾಲದಲ್ಲಿ ಎಲೆಯ ಮರೆಯ ಕಾಯಿಯಂತಿರುವ ಶ ಕೃಷ್ಣರಾಜ ಭಟ್ಟರಿಗೆ ಮಾಡಿದ ಸನ್ಮಾನ ನಿಜಕ್ಕೂ ಅರ್ಥಪೂರ್ಣ ಎಂದರು.

ಸಭಾಧ್ಯಕ್ಷರಾದ ಯೋಗೀಶ್ ಕುಮಾರ್ ಜೆಪ್ಪು,1922 ರಲ್ಲಿ ಈ ಸಂಘ ಸ್ಥಾಪನೆಯಾದಾಗ ವಾಹನ ವ್ಯವಸ್ಥೆ ಇರಲಿಲ್ಲ, ಬೆಳಕಿನ ವ್ಯವಸ್ಥೆ ಇರಲಿಲ್ಲ.

ಆದರೂ ಆಗಿನ ಕಲಾವಿದರು ತ್ಯಾಗ ಬುದ್ಧಿಯಿಂದಯಕ್ಷಗಾನ ಕಲೆಗಾಗಿ ಮಾಡಿದ ಕಾರ್ಯ ಸದಾ ಸ್ಮರಿಸಬೇಕಾದದ್ದು.ಹಾಗೆಯೇ ಮಹಾಮಾಯಾ ದೇವಿಯ ಸನ್ನಿಧಿಯೂ ಇದಕ್ಕೆ ಕಾರಣವಾಗಿರಬಹುದು ಎಂದರು.

ಸೇರಾಜೆ ಪ್ರೀತಮ್ ಭಟ್ ಸನ್ಮಾನ ಪತ್ರ ವಾಚಿಸಿದರು.

ಅಧ್ಯಕ್ಷ ಶ್ರೀನಾಥ್ ಪ್ರಭು, ಕೋಶಾಧಿಕಾರಿ ಶಿವಪ್ರಸಾದ್ ಪ್ರಭು, ಉಪಾಧ್ಯಕ್ಷೆ ಶ್ರೀಮತಿ ಪ್ರಫುಲ್ಲ ನಾಯಕ್, ಪ್ರಭಾಕರ ಕಾಮತ್, ಶ್ರೀ ಮಧುಸೂದನ ಅಲೆವೂರಾಯ, ಪೆರ್ಲ ಗಣಪತಿ ಭಟ್, ಅಶೋಕ ಬೋಳೂರ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಪಿ. ಸಂಜಯ ಕುಮಾರ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ “ಸೇತು ಬಂಧನ” ತಾಳಮದ್ದಳೆ ಜರಗಿತು.

Click to comment

Leave a Reply

Your email address will not be published. Required fields are marked *

DAKSHINA KANNADA

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ: ಮೇ 19, 20ರಂದು ಆರೆಂಜ್ ಅಲರ್ಟ್‌

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೇ 18 ರಿಂದ 21 ರವರೆಗೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 19 ಮತ್ತು 20 ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಆರೆಂಜ್ ಅಲರ್ಟ್‌ ಇರುವ ದಿನಗಳಲ್ಲಿ ಮಿಂಚು, ಗುಡುಗು, ಸಿಡಿಲುಗಳಿಂದ ಕೂಡಿದ ಭಾರಿ ಮಳೆಯಾಗಲಿದೆ. ಜಿಲ್ಲೆಯ ಕೆಲವೆಡೆ 11.55 ಸೆಂ.ಮೀ ನಿಂದ 20.44 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇದೇ 18 ಮತ್ತು 21ರಂದು ಜಿಲ್ಲೆಯಲ್ಲಿ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಕೆಲವೆಡೆ 6.45 ಸೆಂ.ಮೀ ನಿಂದ 11.55 ಸೆಂ.ಮೀವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Continue Reading

DAKSHINA KANNADA

ಕಾರಿನಲ್ಲಿ ಮಗುವನ್ನು ಮರೆತು ಹೋದ ತಾಯಿ..! ಕಾರಿನಲ್ಲೇ ಮಗುವಿನ ಅಂತ್ಯ…!

Published

on

ಮಂಗಳೂರು ( ರಾಜಸ್ಥಾನ ) :  ಮಕ್ಕಳ ಬಗ್ಗೆ ಪೋಷಕರು ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಆದ್ರೆ, ತಂದೆ ಮತ್ತು ತಾಯಿಯ ನಿರ್ಲಕ್ಷಕ್ಕೆ ಮೂರು ವರ್ಷದ ಬಾಲಕಿ ಅಸುನೀಗಿದ್ದಾಳೆ. ಹೌದು, ಮಗು ಕಾರಿನಲ್ಲಿ ಉಸಿರುಗಟ್ಟಿ ಸಾ*ವನಪ್ಪಿದ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ. ಮೃ*ತ ಮಗುವನ್ನು ಕೋಟಾದ ಇಂದ್ರ ಕಾಲೋನಿಯ ನಿವಾಸಿ ಪ್ರದೀಪ್ ಅವರ ಮಗಳು ಗರ್ವಿ (3) ಎಂದು ಗುರುತಿಸಲಾಗಿದೆ.

ಮದುವೆ ಸಂಭ್ರಮದಲ್ಲಿ ಕಳೆದುಹೋದ ದಂಪತಿ :

ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಕಿ ತನ್ನ ಪೋಷಕರೊಂದಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ತಾಯಿ ತನ್ನ ಇನ್ನೊಬ್ಬ ಮಗಳ ಜೊತೆ ಕಾರಿನಿಂದ ಇಳಿದಿದ್ದಾರೆ. ಆದರೆ, ಬಾಲಕಿ ಗರ್ವಿ ಮಾತ್ರ ಕಾರಿನಲ್ಲೇ ಇದ್ದಳು. ಇತ್ತ ತಂದೆ ಕಾರನ್ನು ಪಾರ್ಕ್ ಮಾಡಿ, ಮಗು ಗರ್ವಿ ಕೂಡ ಅವಳ ತಾಯಿಯ ಜೊತೆಗಿದ್ದಾಳೆ ಎಂದು ಭಾವಿಸಿ, ಕಾರನ್ನು ಲಾಕ್ ಮಾಡಿ ತೆರಳಿದ್ದರು.

ಮದುವೆ ಸಮಾರಂಭದಲ್ಲಿ ಗಂಡ ಹೆಂಡತಿ ಇಬ್ಬರು ಮೈಮರೆತಿದ್ದರು. ಬ್ಯುಸಿಯಲ್ಲಿ ಯಾರೂ ತಮ್ಮ ಇನ್ನೊಂದು ಮಗುವಿನ ಬಗ್ಗೆ ಆಲೋಚಿಸಲೇ ಇದೆ. ಸುಮಾರು ಎರಡು ಗಂಟೆಗಳ ಬಳಿಕ ಪೋಷಕರಿಗೆ ಮಗು ಇಲ್ಲದ ಬಗ್ಗೆ ತಿಳಿದು ಬಂದಿದೆ. ಈ ವೇಳೆ ಇಡೀ ಮದುವೆ ಸಭಾಂಗಣ ಹುಡುಕಾಡಿದ್ದಾರೆ. ಬಳಿಕ ಕಾರಿನ ಬಳಿ ಬಂದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಗು ಅಷ್ಟರಲ್ಲೇ ಸಾ*ವನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ಸಂಭ್ರಮದಲ್ಲಿ ಮೈಮರೆತ ತಂದೆ – ತಾಯಿಯಿಂದಾಗಿ ಪುಟ್ಟ ಜೀವವೊಂದು ಬ*ಲಿಯಾಗಿದೆ.

Continue Reading

DAKSHINA KANNADA

ಪುಷ್ಪ 2 ರಿಲೀಸ್ ಡೇಟ್ ಬದಲು…? ಸ್ಪಷ್ಟನೆ ನೀಡಿದ ಚಿತ್ರ ತಂಡ

Published

on

ಮಂಗಳೂರು  : ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ಬಹು ನಿರೀಕ್ಷಿತ ಪುಷ್ಪ 2 ಚಿತ್ರ ಯಾವಾಗ ತೆರೆಗೆ ಬರುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಸಿನೆಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಆಗಸ್ಟ್‌ 15 ರಂದು ನಿಗದಿಯಾಗಿದ್ದ ಬಿಡುಗಡೆಯ ದಿನವನ್ನು ಬದಲಾಯಿಸಲಾಗಿದೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ಎಡಿಟಿಂಗ್ ಸಮಸ್ಯೆಯಿಂದ ಪುಷ್ಪ 2 ರಿಲೀಸ್ ವಿಳಂಬವಾಗಲಿದೆ ಎಂಬ ಊಹಾಪೋಹಗಳು ಹರಡಿದೆ. ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಆಂಟೋನಿ ರೂಬೆನ್‌ ಪುಷ್ಪ 2 ತಂಡದಿಂದ ಹೊರಬಂದಿದ್ದಾರೆ ಎಂದು ಹೇಳಿತ್ತು.
ಆಂಟೋನಿ ರೂಬೆನ್‌ ಜಾಗಕ್ಕೆ ನವೀನ್ ನೂಲಿ ಬರಲಿದ್ದು, ಪುಷ್ಪ 2 ಬಿಡುಗಡೆ ವಿಳಂಬವಾಗಲಿದೆ ಎಂದು ಹೇಳಿತ್ತು. ಇದು ಎಲ್ಲೆಡೆ ಸುದ್ದಿಯಾಗಿದ್ದು, ಸಿನೆಮಾ ರಿಲೀಸ್‌ನ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಆದ್ರೆ, ಇದೊಂದು ಸುಳ್ಳು ಸುದ್ದಿಯಾಗಿದ್ದು, ನಿಗದಿತ ದಿನಾಂಕ ಆಗಸ್ಟ್‌ 15 ರಂದೇ ಸಿನೆಮಾ ರಿಲೀಸ್ ಆಗಲಿದೆ ಎಂದು ಸಿನೆಮಾ ತಂಡ ಸ್ಪಷ್ಟನೆ ನೀಡಿದೆ. ಅಲ್ಲೂ ಅರ್ಜುನ್‌ ಅವರ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಈ ಜೂನ್ ಅಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಹೀಗಾಗಿ ಎಡಿಟಿಂಗ್ ಕೂಡಾ ನಿರಾಂತಕವಾಗಿ ನಡೆಯಲಿದ್ದು, ಈಗಾಗಲೇ ಟೀಸರ್‌ ಕೂಡಾ ಭಾರೀ ಸದ್ದು ಮಾಡಿದೆ. ರಿಲೀಸ್ ಜೊತೆಗೆ ಬಾಕ್ಸ್‌ ಆಫೀಸಿನಲ್ಲಿ ಚಿಂದಿ ಉಡಾಯಿಸಲಿರುವ ಪುಷ್ಪಾ 2 ನಿಗದಿಯಾದ ದಿನದಂತೆ ಬಿಡುಗಡೆ ಆಗಲಿದೆ ಅಂತ ಸ್ಪಷ್ಟನೆ ನೀಡಿದ್ದಾರೆ.

Continue Reading

LATEST NEWS

Trending