Connect with us

    LATEST NEWS

    ಅಕ್ಟೋಬರ್ 30 ರಂದು ಕುದ್ರೋಳಿಯಲ್ಲಿ 25ನೇ ವರ್ಷದ ‘ನಮ್ಮಕುಡ್ಲ’ ಗೂಡುದೀಪ ಸ್ಪರ್ಧೆ

    Published

    on

    ಮಂಗಳೂರು: ಆಧುನಿಕತೆಯೊಂದಿಗೆ ಬದಲಾಗುತ್ತಿರುವ ಸಮಾಜದಲ್ಲಿ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿದ್ದ ಹಲವು ಹಳೆಯ ಸಂಪ್ರದಾಯ ಮರೆಯಾಗುತ್ತಿದ್ದು, ಅದರಲ್ಲಿ ದೀಪಾವಳಿಯ ಹಬ್ಬದ ಆಚರಣೆಯೂ ಒಂದಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಮನೆಯವರೆಲ್ಲರೂ ಸೇರಿ ತಯಾರಿಸುತ್ತಿದ್ದ ಗೂಡುದೀಪದ ಜಾಗವನ್ನು ಅಂಗಡಿಯಲ್ಲಿ ಸಿಗುವ ಗೂಡು ದೀಪಗಳು ಆವರಿಸಿಕೊಂಡಿವೆ. ಹೀಗಾಗಿ ಗೂಡುದೀಪ ರಚಿಸುವ ಕಲೆಯನ್ನು ಉಳಿಸುವ ಜೊತೆ ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 25 ವರ್ಷಗಳ ಹಿಂದೆ ‘ನಮ್ಮ ಕುಡ್ಲ’ ವಾಹಿನಿ ಗೂಡುದೀಪ ಸ್ಪರ್ಧೆಯನ್ನು ಆಯೋಜನೆ ಮಾಡಲು ಆರಂಭಿಸಿತ್ತು. ಇದೀಗ 25ನೇ ವರ್ಷದ ಗೂಡುದೀಪದ ಸ್ಪರ್ಧೆಯು ದಿನಾಂಕ 30-10-2024,ಬುಧವಾರ ರಂದು ಕುದ್ರೋಳಿ ಶ್ರೀಕ್ಷೇತ್ರ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

    ಸಾಂಪ್ರದಾಯಿಕ, ಆಧುನಿಕ ಮತ್ತು ಪ್ರತಿಕೃತಿ ಎಂಬ ಮೂರು ವಿಭಾಗದಲ್ಲಿ ಗೂಡುದೀಪ ಸ್ಪರ್ಧೆ ನಡೆಸಲಾಗುತ್ತಿದೆ. ಈ ಮೂರು ವಿಭಾಗದಲ್ಲಿ ನಡೆಯುವ ಗೂಡುದೀಪ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಉತ್ತಮ ರೀತಿಯಲ್ಲಿ ಭಾಗವಹಿಸಿದ್ದಾರೆ. ಈ ಬಾರಿಯೂ ಈ ಮೂರೂ ವಿಭಾಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಕೆಲವೊಂದು ನಿಯಮಗಳಿದ್ದು, ಅವುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗುತ್ತದೆ. ಮೂರು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಚಿನ್ನದ ಪದಕ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಬೆಳ್ಳಿಯ ಪದಕ ನೀಡಲಾಗುತ್ತದೆ.

    ‘ನಮ್ಮಕುಡ್ಲ’ ಗೂಡುದೀಪ ಸ್ಪರ್ಧೆಯ ನಿಯಮಗಳು ಇಂತಿವೆ :

    ಸಾಂಪ್ರದಾಯಿಕ ವಿಭಾಗ : ಬಣ್ಣದ ಕಾಗದ, ಗ್ಲಾಸ್ ಪೇಪರ್ ಅಥವಾ ಬಟ್ಟೆಯಿಂದ ಗೂಡುದೀಪ ತಯಾರು ಮಾಡಿರಬೇಕು. ಗೂಡುದೀಪಕ್ಕೆ ಬಾಲ ಇರಬೇಕು ಹಾಗೂ ಅದು ನೇತು ಹಾಕುವಂತಿರಬೇಕು. ಗೂಡುದೀಪದ ಒಳಗಿನ ಬೆಳಕು ಹೊರಗೆ ಕಾಣುವಂತೆ ತಯಾರಿಸಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಅಥವಾ ಯಾವುದೇ ಆಧುನಿಕ ಪರಿಕರಗಳನ್ನು ಬಳಸುವಂತಿಲ್ಲ. ಬೇಗಡೆಯನ್ನು ಉಪಯೋಗಿಸಲು ಅವಕಾಶ ಇದೆ. ಗೂಡುದೀಪ ಶುದ್ಧವಾಗಿ ಸಾಂಪ್ರದಾಯಿಕವಾಗಿಯೇ ಇರಬೇಕು.

    ಆಧುನಿಕ ವಿಭಾಗ : ಆಧುನಿಕ ಗೂಡುದೀಪದಲ್ಲಿ ಯಾವುದೇ ಆಧುನಿಕ ಪರಿಕರಗಳನ್ನು ಬಳಸಬಹುದಾಗಿದೆ. ಆದರೆ, ಸಾಂಪ್ರದಾಯಿಕ ಗೂಡುದೀಪದಂತೆ ಇದೂ ಕೂಡ ನೇತು ಹಾಕುವಂತೆ ಇರಬೇಕು. ಗೂಡುದೀಪದಲ್ಲಿ ಗೂಡು ಇರುವುದು ಕಡ್ಡಾಯವಾಗಿದ್ದು, ಪ್ರತಿಕೃತಿಯ ಹೋಲಿಕೆ ಇರಬಾರದು.

    ಪ್ರತಿಕೃತಿ ವಿಭಾಗ : ಇದರಲ್ಲಿ ಯಾವುದೇ ಕಲಾತ್ಮಕ ರಚನೆಗೆ ಅವಕಾಶವಿದೆ. ಯಾವುದೇ ಆಧುನಿಕ ಪರಿಕರಗಳನ್ನು ಇದರಲ್ಲಿ ಬಳಕೆ ಮಾಡಬಹುದಾಗಿದೆ. ಆದಷ್ಟು ಹೊಸತನವನ್ನು ಅಳವಡಿಸಿಕೊಂಡು ಪ್ರತಿಕೃತಿಯ ರಚನೆ ಇರಬೇಕು.

    Click to comment

    Leave a Reply

    Your email address will not be published. Required fields are marked *

    LATEST NEWS

    ಹೃದಯಾಘಾತದಿಂದ 5 ವರ್ಷದ ಬಾಲಕಿ ಸಾ*ವು

    Published

    on

    ಇಂದಿನ ದಿನಮಾನಗಳಲ್ಲಿ ವಯಸ್ಸಿನ ಬೇಧವಿಲ್ಲದೆ ಕಾಯಿಲೆಗಳು ಕಾಡುತ್ತಿವೆ. ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಹೃದಯಾಘಾ*ತವಾಗುತ್ತಿತ್ತು ಆದರೆ ಈಗ ಮಕ್ಕಳಿಗೂ ಹದಿಹರೆಯದವರಿಗೂ ಹೃದಯಾಘಾ*ತವಾಗುತ್ತಿದೆ.

    ಈ ನಡುವೆ ತೆಲಂಗಾಣದಲ್ಲಿ 5 ವರ್ಷದ ಬಾಲಕಿ ಹೃದಯಾಘಾ*ತದಿಂದ ಸಾವನ್ನಪ್ಪಿದ್ದಾಳೆ. ಜಂಟಿ ಕರೀಂನಗರ ಜಿಲ್ಲೆಯ ಜಮ್ಮಿಕುಂಟಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

    ಸ್ಥಳೀಯ ವರದಿಗಳ ಪ್ರಕಾರ, ರಾಜು-ಜಮುನಾ ಅವರ ಪುತ್ರಿ ಉಕ್ಕುಲು (5) ಮಂಗಳವಾರ ಬೆಳಿಗ್ಗೆ ತೀವ್ರ ಅಸ್ವಸ್ಥಳಾಗಿದ್ದಳು, ಆಕೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗು ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ತಿಳಿದು ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಆಕೆಗೆ ಹೃದಯ ಸಂಬಂಧಿ ಕಾಯಿಲೆ ಇರಬಹುದೆಂದು ಶಂಕಿಸಿದ್ದರು. ಒಬ್ಬಳೇ ಮಗಳು ತೀರಿ ಹೋಗುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

    Continue Reading

    LATEST NEWS

    ಚಲಿಸುತ್ತಿದ್ದ ರೈಲು ಕಿಟಕಿಯಿಂದ ಜಾರಿ ಬಿದ್ದ ಮಗು; ರಕ್ಷಿಸಿದ ತಂದೆ

    Published

    on

    ಮಂಗಳೂರು/ಉತ್ತರ ಪ್ರದೇಶ: ವೇಗವಾಗಿ ಚಲಿಸುತ್ತಿದ್ದ ರೈಲಿನ ಎಮರ್ಜೆನ್ಸಿ ಕಿಟಕಿಯಿಂದ ಪುಟ್ಟ ಮಗಳು ಹೊರಗೆ ಜಾರಿಬಿದ್ದ ಕೂಡಲೇ ಅಪ್ಪ ರೈಲು ನಿಲ್ಲಿಸಿ 16 ಕಿಲೋಮೀಟರ್‌ ಹಿಂದಕ್ಕೆ ಓಡಿಹೋಗಿ ಆಕೆಯನ್ನು ಪತ್ತೆಹಚ್ಚಿ ಉಳಿಸಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.


    ಮಗಳ ಪಾಲಿಗೆ ತಂದೆಯೇ ಮೊದಲ ರಿಯಲ್ ಹೀರೊ ಆಗಿರ್ತಾನೆ ಅನ್ನೋದಕ್ಕೆ ಈ ಘಟನೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

    ಮಥುರಾದ ಅರವಿಂದ ತನ್ನ ಮಗಳು ಗೌರಿಯೊಂದಿಗೆ ಕುರುಕ್ಷೇತ್ರದಿಂದ ಮಥುರಕ್ಕೆ ವಾಪಾಸ್​ ಆಗುತ್ತಿದ್ದರು. ಶುಕ್ರವಾರ ರಾತ್ರಿ ರೈಲಿನಲ್ಲಿ ಎಮರ್ಜೆನ್ಸಿ ವಿಂಡೋ ಬಳಿ ಮಗಳನ್ನು ಮಲಗಿಸಿದ್ದು, ಅಷ್ಟರಲ್ಲಿ ಮುಂದಿನ ನಿಲ್ದಾಣದಲ್ಲಿ ಹತ್ತಿಕೊಂಡ ಪ್ರಯಾಣಿಕರು ಗಾಳಿ ಬರಲಿ ಎಂದು ತುರ್ತು ಕಿಟಕಿಯನ್ನು ತೆರೆದಾಗ ಆಕೆ ಜಾರಿ ಹೊರಗೆ ಬಿದ್ದಿದ್ದಳು.

    ಮಗಳು ಜಾರಿ ಬಿದ್ದ ಕೂಡಲೇ ಅಪ್ಪ ರೈಲಿನ ಚೈನ್ ಹಿಡಿದು ಎಳೆದಿದ್ದಾನೆ. ನಂತರ 112ಕ್ಕೆ ಕರೆ ಮಾಡಿ ಪೊಲೀಸರ ಸಹಾಯ ಕೋರಿದ್ದ. ಅಷ್ಟರಲ್ಲಿ ರೈಲು 15 ಕಿಲೋಮೀಟರ್‌ ಮುಂದಕ್ಕೆ ಚಲಿಸಿ ನಿಂತಿದೆ.

    ಕೂಡಲೇ ಪೊಲೀಸರು ಮೂರು ಟೀಂ​​ಗಳಾಗಿ ಕಂದಮ್ಮನನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದರು. ಎರಡು ಟೀಮ್ ವಾಹನಗಳಲ್ಲಿ ಹುಡುಕಾಟ ನಡೆಸಿತು. ಮತ್ತೊಂದು ಟೀಮ್ ಟ್ರ್ಯಾಕ್ ಮೇಲೆ ಹುಡುಕಲು ಮುಂದಾಗಿತ್ತು. ಆದರೆ ತಂದೆ ಅರವಿಂದ್ ಗಾಡಿ ಹತ್ತದೇ ಮಗಳನ್ನು ಹಳಿಯ ಮೇಲೆ ಹುಡುಕುತ್ತಾ ಒಂದೇ ಸಮನೇ ಓಡಿದ್ದರು.

    ಆತ ಪೊಲೀಸರಿಗಿಂತಲೂ ಮೊದಲೇ ವಿರಾರಿ ಸ್ಟೇಷನ್​​ ಬಳಿಗೆ ಧಾವಿಸಿದ್ದರು. ಬೆಳಕೇ ಇಲ್ಲದ ನಿರ್ಮಾನುಷ ಪ್ರದೇಶದಲ್ಲಿ ಪೊದೆಯಲ್ಲಿ ಮಗಳು ಬಿದ್ದಿದ್ದುದು ಆತನಿಗೇ ಕಂಡಿತ್ತು. ಪೊದೆಯೊಂದರಲ್ಲಿ ಗಾಯಗೊಂಡು ಬಿದ್ದಿದ್ದ ಕಂದಮ್ಮನನ್ನು ಅರವಿಂದ್ ಪತ್ತೆಹಚ್ಚಿ ಬಿಗಿದಪ್ಪಿಕೊಂಡಿದ್ದಾನೆ.

    ರೈಲಿನಿಂದ ಬಿದ್ದ ಕಾರಣ ಗೌರಿಗೆ ಪ್ರಜ್ಞೆ ತಪ್ಪಿ ಹೋಗಿತ್ತು. ಅರವಿಂದ್ ಹಿಂದೆಯೇ ಓಡೋಡಿ ಬಂದ ಪೊಲೀಸರು ಕೂಡಲೇ ಮಗುವನ್ನು ಲಲಿತ್​ಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗು ಚೇತರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

    Continue Reading

    BIG BOSS

    ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಬಿಕ್ಕಿಬಿಕ್ಕಿ ಅತ್ತ ಧನರಾಜ್

    Published

    on

    ಗಿಚ್ಚಿ ಗಿಲಿಗಿಲಿ ಸೀಸನ್ 2ರ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಧನರಾಜ್ ಆಚಾರ್ ಸದ್ಯ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೊದಲ ವಾರದಲ್ಲಿ ಕಾಮಿಡಿ ಮಾಡಿಕೊಂಡು ಖುಷ್ ಖುಷ್ ಆಗಿದ್ದ ಧನರಾಜ್ ತುಂಬಾ ವೀಕ್ ಆಗುತ್ತಿದ್ದಾರೆ ಮೂಲೆ ಸೇರುತ್ತಿದ್ದಾರೆ ಎಂದು ಇನ್ನಿತರ ಸ್ಪರ್ಧಿಗಳು ಟಾರ್ಗೆಟ್‌ ಮಾಡುತ್ತಿದ್ದರು. ಇದೇ ಕಾರಣ ಕೊಟ್ಟು ಎರಡು ವಾರವೂ ಧನರಾಜ್‌ರನ್ನು ನಾಮಿನೇಟ್ ಮಾಡಿದ್ದಾರೆ. ಯಾವ ರೀತಿ ಇರಬೇಕು, ಯಾವ ರೀತಿ ಮುಂದುವರೆಯಬೇಕು ಅನ್ನೋ ಗೊಂದಲದಲ್ಲಿ ಇರುವ ಧನರಾಜ್‌ಗೆ ಬಿಗ್ ಬಾಸ್ ಮೋಟಿವೇಷನ್ ನೀಡುತ್ತಾರೆ.

    ಫೋನ್ ಕರೆ ಬರುತ್ತಿದ್ದಂತೆ ಹಲೋ ಹೇಳಿ ಬಿಗ್ ಬಾಸ್ ಎಂದು ಧನರಾಜ್ ಮಾತನಾಡುತ್ತಾರೆ. ನಿಮಗೆ ಏನೋ ಕೇಳಿಸಬೇಕು ಎಂದು ಇದ್ದಕ್ಕಿದ್ದಂತೆ ಮಗು ಅಳುತ್ತಿರುವ ವಿಡಿಯೋವನ್ನು ಬಿಗ್ ಬಾಸ್ ಹಾಕುತ್ತಾರೆ. ಮಗು ಅಳುತ್ತಿರುವ ಧ್ವನಿ ಕೇಳಿಸುತ್ತಿದ್ದಂತೆ ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಧನರಾಜ್ ‘ಸಾರಿ ಪುಟ್ಟ ಸರಿಯಾಗಿ ಆಟವಾಡಲು ಆಗುತ್ತಿಲ್ಲ’ ಎಂದು ಹೇಳುತ್ತಾರೆ. ಕರೆ ಇಟ್ಟ ನಂತರ ಕ್ಯಾಮೆರಾ ನೋಡುತ್ತಾ ‘ನನ್ನ ಮಗಳು ನೆನಪಾದಾಗಲೆಲ್ಲಾ ಇನ್ನೂ ಚೆನ್ನಾಗಿ ಆಟವಾಡಬೇಕು ಅನಿಸುತ್ತದೆ. ಇದನ್ನು ಮೋಟಿವೇಷನ್ ಆಗಿ ಸ್ವೀಕರಿಸುತ್ತೀನಿ. ಇಲ್ಲಿ ನನ್ನ ಕಡೆ ಬೆರಳು ತೋರಿಸಿ ಪ್ರಶ್ನೆ ಮಾಡುವವರಿಗೆ ಉತ್ತರ ಕೊಡುತ್ತೀನಿ’ ಎಂದು ಧನರಾಜ್ ಹೇಳುತ್ತಾರೆ.

    Continue Reading

    LATEST NEWS

    Trending