LATEST NEWS
ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಕಾರ್ಯವೈಖರಿಯನ್ನು ಪ್ರಶಂಸಿಸಿದ ಮ ಹಾರಾಷ್ಟ್ರ ಎಡಿಜಿಪಿ ಜೈಜೀತ್ ಸಿಂಗ್..!
ಮುಂಬೈ :ದೇಶಾದ್ಯಂತ ಸಂಚಲನ ಮೂಡಿಸಿದ್ದ ಮುಂಬೈ ಮನ್ಸುಖ್ ಹಿರೆನ್ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಿದ ಮುಂಬೈ ಎ.ಟಿ.ಎಸ್ ತಂಡದ ನಾಯಕ ಕನ್ನಡಿಗ ಎನ್ ಕೌಂಟರ್ ಖ್ಯಾತಿಯ ಪೊಲೀಸ್ ಅಧಿಕಾರಿ ದಯಾ ನಾಯಕ್ ಮತ್ತು ತಂಡವನ್ನು ಮಹಾರಾಷ್ಟ್ರ ಪೊಲೀಸ್ ಶ್ಲಾಘಿಸಿದೆ.ಜೊತೆಗೆ ದಯಾ ನಾಯಕ್ ಮತ್ತು ಅವರ ತಂಡದ ಕಾರ್ಯವನ್ನು ಶ್ಲಾಘಿಸಿ ಮಹಾರಾಷ್ಟ್ರ ಎಡಿಜಿಪಿ ಜೈ ಜೀತ್ ಸಿಂಗ್ ಅವರು ಪ್ರಶಂಸನಾ ಪತ್ರವನ್ನು ನೀಡಿದ್ದಾರೆ.ಮನ್ಸುಖ್ ಹಿರೆನ್ ಕೊಲೆ ಪ್ರಕರಣ ಅತ್ಯಂತ ಸೂಕ್ಷ್ಮ ಮತ್ತು ಚರ್ಚೆಯ ಪ್ರಕರಣಗಳಲ್ಲಿ ಒಂದಾಗಿತ್ತು. ನಾವು ನಂತರ ಕಂಡುಕೊಂಡಂತೆ ಇದು ಕೆಲವು ಕ್ರೂರ ಪೊಲೀಸ್ ಅಧಿಕಾರಿಗಳಿಂದ ಯೋಜಿಸಲ್ಪಟ್ಟ ಮತ್ತು ಕಾರ್ಯಗತಗೊಳಿಸಿದ ಕಾರ್ಯಾಚರಣೆಯಾಗಿದ್ದು,
ತಮ್ಮ ದುಷ್ಕೃತ್ಯದ ಹಾದಿಗಳನ್ನು ಅಳಿಸಿ ಹಾಕಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರು.ಈ ಪ್ರಕರಣವನ್ನು ಪರಿಹರಿಸುವುದು ಎ.ಟಿ.ಎಸ್ ಗೆ ಕೇವಲ ಕರ್ತವ್ಯದ ವಿಷಯ ಮಾತ್ರವಲ್ಲ ಕ್ಲಿಷ್ಟಕರ ಸಮಸ್ಯೆಯೂ ಆಗಿತ್ತು.
ಆದರೂ ತಮ್ಮ ನೇತೃತ್ವದ ಎ.ಟಿ.ಎಸ್ ಈ ಕ್ಲಿಷ್ಟಕರ ಪ್ರಕರಣವನ್ನು ಯಶಸಸ್ವಿಯಾಗಿ ನಿಭಾಯಿಸಿದ್ದು ಮಾತ್ರವಲ್ಲ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಲಾಯಿತು.
ನಂತರ, ಈ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಯಿತು.ನೀವು ಮತ್ತು ನಿಮ್ಮ ತಂಡದೊಂದಿಗೆ ಪ್ರಕರಣದ ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಶ್ರದ್ಧೆಯಿಂದ ಕೆಲಸ ಮಾಡಿದ್ದೀರಿ ಜೊತೆಗೆ ಕೆಲವು ಪ್ರಮುಖ ಆರೋಪಿಗಳನ್ನು ಬಂಧಿಸಲು ಸಹಾಯ ಮಾಡಿದ್ದೀರಿ ಎಂದು ಹೇಳಲು ಹೆಮ್ಮೆಯಾಗುತ್ತಿದೆ.
ನಿಮ್ಮ ಕೌಶಲ್ಯಗಳು, ವೃತ್ತಿಪರ ಕುಶಾಗ್ರಮತಿ ಮತ್ತು ಕಠಿಣ ಪರಿಶ್ರಮ ಎಟಿಎಸ್‌ಗೆ ಅಮೂಲ್ಯವಾದುದು, ನಿಮ್ಮಂತಹ ಅಧಿಕಾರಿಗಳು ಎಟಿಎಸ್, ಮಹಾರಾಷ್ಟ್ರವನ್ನು ಭಯೋತ್ಪಾದನೆಯಿಂದ ಮುಕ್ತ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ.
ಮುಂದಿನ ದಿನಗಳಲ್ಲೂ ಇದೇ ರೀತಿಯ ಸೇವೆ ನಿಮ್ಮಿಂದ ನಾಡಿಗೆ ಸಿಗಲಿ ಎಂದು ಹಾರೈಸುತ್ತೇನೆ ಎಂದು ಪ್ರಶಂಸೆಯ ಮಾಡುಗಳನ್ನು ಮುಕ್ತ ಕಂಠದಿಂದ ಎಡಿಜಿಪಿಯವರು ಆಡಿದ್ದಾರೆ.
LATEST NEWS
ಪುತ್ತೂರು: ಚಡ್ಡಿ ಗ್ಯಾಂಗ್ ನಿಂದ ದರೋಡೆ ನಡೆದಿದೆ ಎಂದು ಕಥೆ ಕಟ್ಟಿದ ಮಹಿಳೆ !! ಆಮೇಲೇನಾಯ್ತು?
ಪುತ್ತೂರು: “ಚಡ್ಡಿ ಗ್ಯಾಂಗ್’ ದರೋಡೆಕೋರರು ಮಂಗಳವಾರ ರಾತ್ರಿ ನaನ್ನ ಮನೆಗೆ ಬಂದು ತಲವಾರು ತೋರಿಸಿ ನಗದು ನೀಡುವಂತೆ ಬೆದರಿಕೆ ಒಡ್ಡಿದ್ದು, ಈ ವೇಳೆ ನಾನು ಕಿಟಕಿಯ ಮೂಲಕ ತಪ್ಪಿಸಿಕೊಂಡಿರುವೆ” ಎಂಬ ಫೋಟೋವೊಂದನ್ನು ಮಹಿಳೆ ವೈರಲ್ ಮಾಡಿದ್ದ ಪರಿಣಾಮ ಕೆಯ್ಯೂರು ಗ್ರಾಮದೆಲ್ಲೆಡೆ ಆತಂಕ ಮನೆ ಮಾಡಿ ಕೊನೆಗೆ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ಸಂದರ್ಭ ಮಹಿಳೆಯ ಕಟ್ಟುಕಥೆ ಬೆಳಕಿಗೆ ಬಂದಿದೆ. ಚಡ್ಡಿ ಗ್ಯಾಂಗ್‌ನ ಕಥೆ ಕಟ್ಟಿದ್ದ ಮಹಿಳೆ ಕೇರಳ ಮೂಲದಿಂದ ಬಂದು ನೆಲೆಸಿರುವ ಮಾರ್ಗರೇಟ್. ಈ ರೀತಿ ಸುಳ್ಳು ಕಥೆ ಹೆಣೆದದ್ದು ಏಕೆ ಎನ್ನುವ ವಿಚಾರ ಇನ್ನೂ ಬಹಿರಂಗವಾಗಿಲ್ಲ. ಪುತ್ತೂರು ಗ್ರಾಮಾಂತರ ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.
ಕಟ್ಟು ಕಥೆ :
ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್. ಮನೆಮಂದಿಯ ವಿಚಾರಣೆ ನಡೆಸಿದ್ದಾರೆ. ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದ ವೇಳೆ ಇದು ಕಟ್ಟು ಕಥೆ ಎನ್ನುವ ಅಂಶ ಬೆಳಕಿಗೆ ಬಂದಿತ್ತು. ಮಹಿಳೆ ವೈರಲ್ ಮಾಡಿದ ಫೋಟೋಗಳು 2 ವರ್ಷಗಳ ಹಿಂದೆ ಕೇರಳದ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಫೋಟೋ ಆಗಿದ್ದು, ಕೊಟ್ಟಾಯಂನಲ್ಲಿ ನಡೆದಿದ್ದ ವೀಡಿಯೋ ಶೂಟಿಂಗ್ ಸಂಬಂಧಿಸಿದ ಫೋಟೋ ಎನ್ನುವ ಅಂಶ ತನಿಖೆಯ ಸಂದರ್ಭ ಬಯಲಿಗೆ ಬಂದಿದೆ. ಪರಿಶೀಲನೆ ಸಂದರ್ಭ ದಲ್ಲಿ ಡಿವೈಎಸ್‌ಪಿ ಅರುಣ್ ನಾಗೇಗೌಡ, ಸಂಪ್ಯ ಠಾಣಾ ತನಿಖಾ ವಿಭಾಗದ ಎಸ್‌ಐ ಸುಷ್ಮಾ ಭಂಡಾರಿ, ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ಮಾಡಾವು ಮೊದಲಾದವರಿದ್ದರು.
ಮಹಿಳೆಯ ಮೊಬೈಲ್ ಪರಿಶೀಲನೆ ಸಂದರ್ಭದಲ್ಲಿ ಆಕೆ ಕ್ರೈಂ ಸಂಬಂಧಿತ ವೀಡಿಯೋಗಳನ್ನು ಅತೀ ಹೆಚ್ಚಾಗಿ ನೋಡುತ್ತಿರುವುದು ಗೊತ್ತಾಗಿದೆ. ಚಡ್ಡಿ ಗ್ಯಾಂಗ್ ಕಥೆ ಎಂದು ನಂಬಿಸಿ ಹರಿಯಬಿಟ್ಟ ಫೋಟೋಗಳು ಕೇರಳದ ಕಾಡು ಜನಾಂಗದ ಕಥೆಯ ವೀಡಿಯೋದಿಂಂದ ತೆಗೆದ ಸ್ಕ್ರೀನ್ ಶಾಟ್ ಆಗಿದೆ. ಈ ಫೋಟೋವನ್ನು ಮೊದಲಿಗೆ ಬಾಡಿಗೆ ಮನೆಯ ಮಾಲಕನಿಗೆ ಕಳುಹಿಸಿ ‘ಮನೆಗೆ ದರೋಡೆಕೋರರು ಬಂದಿದ್ದಾರೆ’ ಎಂದು ಆಕೆ ಹೇಳಿದ್ದರಳು.
ಮನೆ ಮಾಲಕನಿಗೆ ಮಹಿಳೆಯ ಮೇಲೆ ಮೂಡಿತ್ತು ಅನುಮಾನ :
ಮಹಿಳೆ ಕಳುಹಿಸಿದ ಫೋಟೋ ನೋಡಿ ಮನೆ ಮಾಲಕ ಬಾತೀಷ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾರ್ಗರೇಟ್ ತೋರಿಸಿದ ಫೋಟೋದ ಮೇಲೆ ಬಾತೀಷ್‌ಗೂ ಸಂಶಯ ಮೂಡಿತ್ತು. ಹಿಂದೊಮ್ಮೆ ಮಾರ್ಗರೇಟ್ ತನಗೆ ಹಾವು ಕಚ್ಚಿದೆ ಎಂದು ಮಾಲಕನ ಬಳಿ ಸುಳ್ಳು ಹೇಳಿದ್ದರು. ಈ ಕಾರಣಕ್ಕಾಗಿ ಮಹಿಳೆ ಹೆಣೆದ ಚಡ್ಡಿ ಗ್ಯಾಂಗ್ ಕಥೆಯನ್ನು ಮಾಲಕ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸುಳ್ಳು ಕಥೆ ಎಲ್ಲೆಡೆ ಪ್ರಚಾರ ಪಡೆದು ಇಡೀ ಗ್ರಾಮದಲ್ಲಿ ಆತಂಕ ಮೂಡಿದ ಕಾರಣ ಬಾಡಿಗೆ ಮನೆಯನ್ನು ತೊರೆಯುವಂತೆ ಮನೆಮಂದಿಗೆ ಮಾಲಕ ಸೂಚಿಸಿದ್ದಾರೆ.
ಮಹಿಳೆಯ ಹಿನ್ನಲೆ :
ಕೇರಳದಿಂದ ಬಂದಿದ್ದ ಮಹಿಳೆ ಕಳೆದ 40 ದಿನಗಳಿಂದ ತನ್ನ ಪತಿ ಸೈಂಟ್ ಜಾರ್ಜ್ ಹಾಗೂ ಮಗುವಿನೊಂದಿಗೆ ಕೆಯ್ಯೂರು ಗ್ರಾಮದ ಸಣಂಗಳದ ಬಾತೀಷ ಅವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ಇದ್ದಾರೆ. ಜಾರ್ಜ್ ಅವರು ರಬ್ಬರ್ ಟ್ಯಾಪಿಂಗ್ ಹಾಗೂ ರಬ್ಬರ್ ಹಾಲು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ : ಚಡ್ಡಿ ಗ್ಯಾಂಗ್ ಮೇಲೆ ಪೊಲೀಸ್ ಫೈರಿಂಗ್..!
ಚಡ್ಡಿಗ್ಯಾಂಗ್ ದರೋಡೆ ಆರೋಪ ಪೂರ್ತಿ ಕಟ್ಟುಕಥೆಯಾಗಿದ್ದು, ಮಹಿಳೆ ಹಂಚಿಕೊಂಡ ಫೋಟೋಗಳು ಕೊಟ್ಟಾಯಂನಲ್ಲಿ ನಡೆದ ಒಂದು ವೀಡಿಯೋ ಸ್ಟೋರಿಯ ಫೋಟೋಗಳಾಗಿವೆ. ಕೆಯ್ಯೂರು ಸಣಂಗಳಕ್ಕೆ ಚಡ್ಡಿ ಗ್ಯಾಂಗ್‌ನ ದರೋಡೆಕೋರರು ಬಂದಿಲ್ಲ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್. ತಿಳಿಸಿದ್ದಾರೆ.
“ಕೆಯ್ಯೂರು ಗ್ರಾಮಕ್ಕೆ ಯಾವುದೇ ಚಡ್ಡಿ ಗ್ಯಾಂಗ್‌ನ ದರೋಡೆಕೋರರು ಬಂದಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯ ಇಲ್ಲ. ಪ್ರಕರಣದ ಸತ್ಯಾಸತ್ಯತೆಯನ್ನು ಪೊಲೀಸ್ ಇಲಾಖೆ ಭೇದಿಸಿ ಜನರ ಭಯ ದೂರಗೊಳಿಸಿದೆ” ಎಂದು ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ಮಾಡಾವು ತಿಳಿಸಿದ್ದಾರೆ. ಸಧ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನ9ಇಕೆ ನಡೆಸುತ್ತಿದ್ದಾರೆ.
DAKSHINA KANNADA
ರಾಷ್ಟ್ರ ಮಟ್ಟದ ಫಾರ್ಮುಲಾ ಫೆಸ್ಟ್ ನಲ್ಲಿ ಸಾಧನೆ ಮೆರೆದ ಶ್ರೀ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳು
ಮಂಗಳೂರು : ಶ್ರೀ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಫಾರ್ಮುಲಾ ಫೆಸ್ಟ್ ನಲ್ಲಿ ಭಾಗವಹಿಸಿ ಪ್ರತಿಭಾ ಪ್ರದರ್ಶನ ನೀಡಿದರು.
20 ರಾಜ್ಯಗಳಲ್ಲಿರುವ 120 ಶಾಖೆಯಲ್ಲಿ ಏಕಕಾಲಕ್ಕೆ 10,000 ವಿದ್ಯಾರ್ಥಿಗಳು ನೂರು ದಿನ ವಿಶೇಷ ತರಬೇತಿ ಪಡೆದು, 600 ಸೂತ್ರಗಳನ್ನು ಹೇಳುವುದರ ಮುಖಾಂತರ ಮೂರನೇ ಬಾರಿಗೆ ಇಲ್ಲಿನ ವಿದ್ಯಾರ್ಥಿಗಳು ಐತಿಹಾಸಿಕ ದಾಖಲೆ ಸೃಷ್ಠಿಸಿದ್ದಾರೆ.
ಇದನ್ನೂ ಓದಿ : ಕಾರ್ಕಳ: ಮಗುವಿನಿಂದ ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಮನನೊಂದು ತಾಯಿ ಆತ್ಮಹತ್ಯೆ
ಅದರಲ್ಲಿ ವಿಶೇಷವಾಗಿ ಮಂಗಳೂರು ನಗರದಲ್ಲಿರುವ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ 118 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮವಾದ ಸಾಧನೆ ಮಾಡಿದ್ದಾರೆ. ಸಾಧನೆಗೆ ಪಾಲಕರ ಪ್ರೋತ್ಸಾಹ, ಶಿಕ್ಷಕರ ನಿರಂತರ ತರಬೇತಿ ಮುಖ್ಯವಾಗಿದೆ ಎಂದು ಶಾಲೆಯ ವ್ಯವಸ್ಥಾಪಕ ಕೆ. ಸುನಿಲ್ ಕುಮಾರ್ ಸಂತಸ ವ್ಯಕ್ತ ಪಡಿಸಿದ್ದಾರೆ. ಈ ಫಾರ್ಮುಲಾ ಫೆಸ್ಟ್ ನಲ್ಲಿ ಭಾಗಿಯಾದ ಎಲ್ಲಾ ಮಕ್ಕಳ ಪ್ರತಿಭೆ ಪ್ರಜ್ವಲಿಸುವಂತಾಗಲಿ ಎಂದು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಹಾರೈಸಿದೆ.
LATEST NEWS
ಕುಡಿದ ಮತ್ತಲ್ಲಿ ಡಾಕ್ಟರ್ ಅವಾಂತರ – ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ವೈದ್ಯ
ಬೆಂಗಳೂರು: ಕುಡಿದ ಮತ್ತಲ್ಲಿ ಡಾಕ್ಟರ್ ಅವಾಂತರವೊಂದು ಮಾಡಿ ಸುದ್ದಿಯಾಗಿದ್ದಾರೆ. ವೈದ್ಯರು ಹಾಗು ನರ್ಸ್ ಸೇರಿ ಆಸ್ಪತ್ರೆಗೆ ಬಂದಿದ್ದ ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಯುವತಿಯೊಬ್ಬಳು ತೀವ್ರ ಜ್ವರದಿಂದ ಆಸ್ಪತ್ರೆಗೆ ಹೋಗಿದ್ದಳು ಎನ್ನಲಾಗಿದೆ. ಈ ವೇಳೆ ಡಾ.ಪ್ರದೀಪ್ ಹಾಗೂ ನರ್ಸ್ ಮಹೇಂದ್ರ ಕುಡಿದ ನಶೆಯಲ್ಲಿದ್ದರು. ಈ ವೇಳೆ ಯುವತಿಗೆ ಮಹೇಂದ್ರ ಇಂಜೆಕ್ಷನ್ ನೀಡಿದ್ದಾನೆ ಎಂದು ಹೇಳಲಾಗಿದೆ.
ನಂತರ ಡಾ.ಪ್ರದೀಪ್‌ನನ್ನು ಕರೆದು ಚಿಕಿತ್ಸೆ ಕೊಡುವಂತೆ ಹೇಳಿದ್ದಾನೆ. ಡಾ.ಪ್ರದೀಪ್ ಇಂಜೆಕ್ಷನ್ ಹಿಡಿದು ಯುವತಿಯ ಮೈಕೈಗೆ 4-5 ಬಾರಿ ಇಂಜೆಕ್ಷನ್ ಚುಚ್ಚಿದ್ದಾನೆ. ಹಾಗು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ದೂರಿದ್ದಾಳೆ. ಈ ವೇಳೆ ಯುವತಿಯ ಪೋಷಕರು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
- DAKSHINA KANNADA6 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS2 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- LATEST NEWS4 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್
- DAKSHINA KANNADA3 days ago
ದಕ್ಷಿಣ ಕನ್ನಡ : ಹೆಬ್ಬಾವಿನ ಬಾಯಿಂದ ಬೆಕ್ಕಿನ ರಕ್ಷಣೆಗಾಗಿ ಶೋಭಕ್ಕನ ಹರಸಾಹಸ; ವೀಡಿಯೋ ವೈರಲ್