Thursday, August 11, 2022

ನಮ್ಮ ಹೋರಾಟದ ಲಾಭ ಬಿಜೆಪಿಗೆ ಆದ್ರೂ ಅವರಿಗೆ ನಾನೇ ವಿಲನ್‌: ಪ್ರಮೋದ್‌ ಮುತಾಲಿಕ್‌

ಕುಂದಾಪುರ: ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನಾನಂತೂ 67 ವರ್ಷದಿಂದ ಹಿಂದೂ ಸಂಘಟನೆಗಳಲ್ಲಿ ಹೋರಾಟ ಮಾಡುತ್ತಿದ್ದೇನೆ.

ನಮ್ಮ ಎಲ್ಲ ಹೋರಾಟದ ಲಾಭ ಬಿಜೆಪಿಗೆ ಹೋಗುತ್ತಿದೆ. ಆದರೆ ಬಿಜೆಪಿಯವರು ಸ್ಪಂದಿಸುತ್ತಿಲ್ಲ. ನನ್ನ ಕಾರ್ಯಕ್ರಮಕ್ಕೆ ಬಿಜೆಪಿಯವರೇ ಅಡ್ಡಿಪಡಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಕುಂದಾಪುರದಲ್ಲಿ ಮಾತನಾಡಿದ ಅವರು, ಕೋಲಾರ, ಉಡುಪಿ, ಕಲಬುರ್ಗಿ ಜಿಲ್ಲೆಗೆ ನನಗೆ ಬ್ಯಾನ್ ಮಾಡಿದರು. ಕಾಂಗ್ರೆಸ್ ಇದ್ದಾಗಲೂ ಬ್ಯಾನ್, ಜೈಲು.

ಬಿಜೆಪಿ ಇದ್ದಾಗಲೂ ಬ್ಯಾನ್, ಕೇಸು, ಜೈಲು. ಬಿಜೆಪಿ ನನ್ನನ್ನು ಬ್ಯಾನ್ ಮಾಡುತ್ತದೆ ಅಂದ್ರೆ ಹೇಗೆ? ನೀವು ಬ್ಯಾನ್ ಮಾಡುತ್ತಿರುವುದು ನನ್ನನ್ನಲ್ಲ, ಹಿಂದುತ್ವವನ್ನು.

ಹಿಂದೂ ಸಿದ್ಧಾಂತವನ್ನು ಬ್ಯಾನ್ ಮಾಡುತ್ತಿದ್ದೀರಿ. ಹಿಂದುಗಳಿಂದಲೇ ಗೆದ್ದು ಬಂದವರು ನೀವು. ಹಿಂದುಗಳನ್ನೇ ನೀವು ತಡೆಯುತ್ತೀರಿ ಅಂದರೆ ಮುಂದಿನ ದಿನ ನಿಮಗೆ ಪಾಠ ಕಲಿಸಬೇಕಾಗುತ್ತೆ. ದೇಶದ ಹಿತಕ್ಕಾಗೆ ಹಿಂದೂ ಸಂಘಟಕರು ಕೆಲಸ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಅಮೃತ ಮಹೋತ್ಸವ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕು-ಶಾಸಕ ಪೂಂಜಾ

ಬೆಳ್ತಂಗಡಿ: ಸ್ವಾತಂತ್ರ್ಯದ ಅಮೃತಮಹೋತ್ಸವ ದಿನಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಜಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಇಂದು ಗುರುವಾಯನಕೆರೆ ನವಶಕ್ತಿ ಸಭಾಭವನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದರು.ಈ ವೇಳೆ ಮಾಧ್ಯಗಳನ್ನು ಉದ್ದೇಶಿಸಿ ಮಾತನಾಡಿದ...

ಟಿ.ವಿ ನೋಡಲು ಬರುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ-ವ್ಯಕ್ತಿ ಬಂಧನ

ತೀರ್ಥಹಳ್ಳಿ: ಟಿ.ವಿ ನೋಡಲು ಬರುತ್ತಿದ್ದ ಪಕ್ಕದ ಮನೆಯ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿ ಗರ್ಭವತಿಯನ್ನಾಗಿ ಮಾಡಿದ ಆರೋಪದ ಅಡಿಯಲ್ಲಿ ಶಿವಮೊಗ್ಗದ ತೀರ್ಥ ಹಳ್ಳಿಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಮುರುಳೀಧರ್ ಭಟ್ ಬಂಧನಕ್ಕೊಳಗಾದ ವ್ಯಕ್ತಿ.ತೀರ್ಥಹಳ್ಳಿಯ ನಾಲೂರಿನಲ್ಲಿ...

‘ಪ್ರವೀಣ್‌’ ಬೇಟೆಗೆ 6 ವೆಹಿಕಲ್‌ 10 ಹತ್ಯೆಕೋರರು..!: ಪಿನ್‌ ಟು ಪಿನ್‌ ಡಿಟೇಲ್ಸ್‌

ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ನಡೆದ 16 ದಿನಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ಒಟ್ಟು...