ಮಂಗಳೂರು: ‘ಆರ್ಯ ಸಂತತಿಯ ಮುತಾಲಿಕ್, ಈಗಾಗಲೇ ಕೃಪಾ ಅಣತಿಯಂತೆ, ಲವ್ ಜಿಹಾದ್, ಹಲಾಲ್, ಆಝಾನ್ ಮೂಲಕ, ಹಿಂದುತ್ವದ ದ್ವೇಷ ಹೇಳಿಕೆಯ ಮೂಲಕ ಈ ರಾಜ್ಯದ ಜನತೆಯನ್ನು ಗಲಭೆಯಲ್ಲಿ ಹುಟ್ಟು ಹಾಕಿ, ಹಿಂದುತ್ವದ ಅಮಲಿನಲ್ಲಿ ಇರಿಸಿ,ಈಗ ಆಝಾನ್ ನಿಲ್ಲಿಸದಿದ್ದರೆ ಸರಕಾರ ಅಧಿಕಾರ ನೀಡಲಿ ಗುಂಡು ಹೊಡೆದು ಸಾಯಿಸುತ್ತೇನೆ ಎಂಬಿತ್ಯಾದಿಯಾಗಿ ಬಹಿರಂಗ ಹತ್ಯಾ ಕರೆ ನೀಡುವುದು ಎಷ್ಟು ಸರಿ’ ಎಂದು ದ.ಕ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿದರು.
ಸಮಾಜದಲ್ಲಿ ಶಾಂತಿ ಕದಡಿಸುವ ವಿಚಾರವಾಗಿ ಪ್ರಮೋದ್ ಮುತಾಲಿಕ್‌ನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಇವರು ‘ಮುತಾಲಿಕ್ ಕರ್ನಾಟಕದಲ್ಲಿ, ಆಡಳಿತ, ಪೊಲೀಸು, ಕಾನೂನು ಅಸ್ತಿತ್ವದಲ್ಲಿಯೇ ಇಲ್ಲದ ರೀತಿಯಲ್ಲಿ ಭಾಸವಾಗುವ, ಘನ ಘೋರ ಅಪರಾಧ ಕೃತ್ಯ ಎಸಗಿದ್ದಾನೆ ಮತ್ತು ಬಹಿರಂಗ ಜನಾಂಗೀಯ ಹತ್ಯಾ ಹೇಳಿಕೆ ನೀಡಿದ್ದಾನೆ’ ಎಂದು ಕಿಡಿಕಾರಿದರು.
ಈ ರಾಜ್ಯದಲ್ಲಿ ಪೊಲೀಸು ವ್ಯವಸ್ಥೆ ಇದೆಯೇ ಇಲ್ಲವೇ ಎಂದು ಖಾಕಿ ಬಣ್ಣದ ವಸ್ತ್ರ ಧರಿಸಿದ ಕೆಲವು ವ್ಯಕ್ತಿಗಳಾದರೂ ಜನರಿಗೆ ಮಾಹಿತಿ ನೀಡುವುದು ಒಳಿತು.
ಮುತಾಲಿಕ್ ಬಹುಷಮುಕ್ತವಾಗಿ ರಂಗಕ್ಕೆ ಇಳಿದಂತೆ ಭಾಸವಾಗುತ್ತದೆ. ಈ ಹಿಂದಿನ ಕೇಂದ್ರ ಸರಕಾರಗಳು ಪೊಲೀಸು ಮತ್ತು ಮಿಲಿಟರಿ ಯೇತರ ಶಸ್ತ್ರ ಸಂಘಟನೆಗಳನ್ನು ಉಗ್ರ ಸಂಘಟನೆಗಳು ಎಂದು ಪಟ್ಟಿ ಮಾಡಿದ್ದವು.
ಮುತಾಲಿಕ್ ನಂತಹ ನೀಚನು ಮುಕ್ತವಾಗಿ ಪೊಲೀಸು,ಆಡಳಿತ,ಕಾನೂನು ಸಂಸ್ಥೆಯ ಮಧ್ಯದಲ್ಲಿಯೇ ನಿಂತು ತಾನು ಈ ದೇಶದ ಜನರಿಗೆ ಗುಂಡು ಹೊಡೆದು ಸಾಯಿಸುತ್ತೇನೆ ಎಂದು ಐಸಿಸ್ ನಂತಹ ಸಂಘಟನೆಗಳ ಕರೆಯನ್ನು ಮೀರಿಸುವ ಹೇಳಿಕೆ ನೀಡಿದ್ದಾನೆ.
ಈ ರಾಜ್ಯದ ಪೊಲೀಸು, ಕಾನೂನು ಮತ್ತು ಆಡಳಿತಕ್ಕೆ ಮುತಾಲಿಕ್ ಎಂಬ ಆರ್ಯ, ಸವರ್ಣೀಯ ಉಗ್ರನನ್ನು ನಿಯಂತ್ರಿಸಲು ಅಗತ್ಯವಿರುವ ಸಾಕ್ಷ್ಯಾಧಾರಗಳು ಬಹುಶ ಕಳೆದ ಮೂರು ದಿನಗಳಿಂದ ಲಭ್ಯವಾಗಲಿಲ್ಲ ಎಂದು ಕಾಣಿಸುತ್ತದೆ.
ಜನರ ತೆರಿಗೆ ಹಣದಿಂದ ಬದುಕುವ ಕರ್ನಾಟಕ ರಾಜ್ಯ ಆಡಳಿತ,ಪೊಲೀಸು ಮತ್ತು ಕಾನೂನು ಒಂದು ವೇಳೆ ಈ ಆರ್ಯ, ಸವರ್ಣೀಯ,ವೈದಿಕ ಮುತಾಲಿಕ್‌ನನ್ನು ನಿಯಂತ್ರಿಸಲು ಪರ್ಯಾಯ ವ್ಯವಸ್ಥೆ ಮಾಡಿ ಕೊಳ್ಳುವ ಸಂದರ್ಭವನ್ನು ಕೈ ಚೆಲ್ಲಿದರೆ, ಮುತಾಲಿಕ್‌ನಿಗೆ ಮಾಹಿತಿಯಾದರೂ ನೀಡಿ, ಮುತಾಲಿಕ್‌ನಿಂದ ಐಸಿಸ್ ಮುಖ್ಯಸ್ಥನ ಹುದ್ದೆಗೆ ಅರ್ಜಿ ಸಲ್ಲಿಸಿ ಬರಲಿ.
ಈ ದೇಶದ, ನಾಡಿನ ಮುಸ್ಲಿಮರು, ದಲಿತರು, ಪರಿಶಿಷ್ಟರು, ಅಂದು ಬ್ರಿಟಿಷರನ್ನು ಈ ದೇಶದಿಂದ ಓಡಿಸಿದಂತೆ, ಟಿಪ್ಪು,ರಾಣಿ ಅಬ್ಬಕ್ಕನ ಸಂತತಿಯಾದ ನಾವು ಈ ದೇಶದ್ರೋಹಿ ಆರ್ಯ, ಸವರ್ಣೀಯ, ವೈದಿಕ ಮುತಾಲಿಕ್‌ನನ್ನು ಅವನ ಮೂಲ ಸ್ಥಾನವಾದ ಮಧ್ಯ ಏಶಿಯಾಕೆ ಓಡಿಸಲಿದ್ದೇವೆ.
ಈ ದೇಶದ ಬಹುಸಂಖ್ಯಾತ ಜನರಾದ, ಮುಸ್ಲಿಮರು, ಕ್ರೈಸ್ತರು, ಹಿಂದುಳಿದ ವರ್ಗ, ಪರಿಶಿಷ್ಟರು, ಬುಡಕಟ್ಟು ಜನಾಂಗದ ಈ ನಾಡಿನಲ್ಲಿ ಸಾಮರಸ್ಯದ ಜೀವನ ನಡೆಸುತ್ತಿರುವಾಗ, ತಾಕತ್ತಿದ್ದರೆ ಐಸಿಸ್ ಮುಖ್ಯಸ್ಥನ ಪಟ್ಟ ಹಿಡಿದುಕೊಂಡು ಬರಲಿ, ತಕ್ಕ ಉತ್ತರ ಸಿದ್ದವಾಗಿಯೆ ಇದೆ, ಯಾಕೆ ನೀಡಿಯೇ ಬಿಡಬಾರದು, ಮುತಾಲಿಕ್‌ನಿಗೆ ಮುಲ್ಲಾ ದೀಕ್ಷೆ ನೀಡಲಿದ್ದೇವೆ.