DAKSHINA KANNADA
ಮಂಗಳೂರಿನಲ್ಲಿ ಕುದುರೆ ಸವಾರಿಗೆ ಹೊಸ ಲುಕ್ ನೀಡಿದ ಸ್ನೇಹಿತ್ ವಾಮಂಜೂರು..!
ಮಂಗಳೂರು : ರಸ್ತೆ ಸಾರಿಗೆ, ಜಲ ಸಾರಿಗೆ ಹಾಗೂ ವಾಯು ಮಾರ್ಗವನ್ನು ಹೊಂದಿರುವ ನಗರಿ ಮಂಗಳೂರು. ಇಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬಹಳ ಸುಲಭವಾಗಿ ಸಂಚಾರ ಮಾಡಬಹುದು. ಇಷ್ಟೆಲ್ಲಾ ಸರಾಗ ಸಂಚಾರ ವ್ಯವಸ್ಥೆಗಳಿದ್ದರೂ ಇಲ್ಲಿ ಕುದುರೆ ಸವಾರಿ ಜನಪ್ರಿಯವಾಗುತ್ತಿದೆ. ಆದರೆ ಅತ್ಯಾಧುನಿಕ ಮಾದರಿಯ ಕಾರು ಸವಾರಿಗಳನ್ನೆಲ್ಲಾ ಬದಿಗಿಟ್ಟು ಇಲ್ಲೊಬ್ಬರು ಈವೆಂಟ್ ಮ್ಯಾನೇಜರ್ ಕುದುರೆ ಸವಾರಿಯನ್ನು ಜನಪ್ರಿಯಗೊಳಿಸಿದ್ದಾರೆ.
ಇಷ್ಟೇ ಏಕೆ ಇದೀಗ ಮದುವೆ ಸಂಭ್ರಮದಲ್ಲಿ ಮದುಮಗನ, ಮದುಮಗಳ ಸಭಾಂಗಣ ಎಂಟ್ರಿಗೂ ಇವರ ಕುದುರೆಯೇ ಬೇಕಂತೆ. ಅಷ್ಟು ಡಿಮ್ಯಾಂಡ್ ಇದೆ.
ಮಹಾರಾಷ್ಟ್ರದಿಂದ ಕುದುರೆ ಖರೀದಿಸಿ ಇದೀಗ ಕುದುರೆ ಸವಾರಿ ಮೂಲಕವೇ ಎಲ್ಲಾ ಕಡೆಗಳಲ್ಲಿ ಸಂಚಾರ ಮಾಡುತ್ತಿದ್ದಾರೆ.
ಇವರೇ ಅಡ್ಯಾರ್ ಪದವು ನಿವಾಸಿ ಸ್ನೇಹಿತ್ ವಾಮಂಜೂರು. ಸಣ್ಣ ವಯಸ್ಸಿನಿಂದಲೇ ಕುದುರೆ ಸವಾರಿಯೆಂದರೆ ಭಾರೀ ಕ್ರೇಝ್.
ಆದ್ದರಿಂದ ಇವರು ತಾವು ಉದ್ಯೋಗಕ್ಕೆ ಸೇರಿದ ಮೂರೇ ವರ್ಷದಲ್ಲಿ ಹಣ ಒಟ್ಟು ಮಾಡಿ ಮಹಾರಾಷ್ಟ್ರದ ಎವ್ಲಾ ಮಾರುಕಟ್ಟೆಯಿಂದ ಮರಿ ಕುದುರೆಯನ್ನು 60,000 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ.
ಲಕ್ಕಿ ಎಂಬ ಹೆಸರಿನ ಈ ಕುದುರೆಯೀಗ ಆರು ವರ್ಷದಿಂದ ಇವರ ಜೊತೆಗಿದೆ. ಈವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿರುವ ಅವರು ವಧು – ವರರ ಎಂಟ್ರಿಗೆಂದು ವೈವಿಧ್ಯಮಯ ಕಾರುಗಳನ್ನು ಕೂಡಾ ಹೊಂದಿದ್ದಾರೆ.
ಅದರ ಜೊತೆಗೆ ಬೇಡಿಕೆ ಇರುವ ಸಮಾರಂಭಗಳಿಗೆ ಈ ಕುದುರೆಯನ್ನು ಕೂಡಾ ಬಾಡಿಗೆಗೆ ಕೊಡುತ್ತಾರೆ. ತಮ್ಮ ಸುತ್ತಾಟಗಳಿಗೂ ಅವರು ಸದಾ ಈ ಕುದುರೆಯನ್ನೇ ಬಳಸುತ್ತಾರೆ.
ಈ ಕುದುರೆಗೆ ಆಹಾರವಾಗಿ ಗೋಧಿ, ಜೋಳ ಬೂಸಾ, ಬಾಜಿರಾಗಳನ್ನು ಬೇಯಿಸಿ ಹಾಕುತ್ತೇನೆ. ಅಲ್ಲದೆ ಅಪರೂಪಕ್ಕೆಂಬಂತೆ ಕಡ್ಲೆ , ಹುರುಳಿಗಳನ್ನು ಬೇಯಿಸಿ ಹಾಕಲಾಗುತ್ತದೆ.
ಸಾಮಾನ್ಯ 40 ಕಿಲೋ ಮೀಟರ್ ವೇಗ ಓಡುವ ಈ ಕುದುರೆ ರಸ್ತೆಯಲ್ಲಿ 20 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಒಟ್ಟಿನಲ್ಲಿ ಮಂಗಳೂರಿನಲ್ಲಿ ಸದಾ ವಾಹನಗಳ ಓಡಾಟಗಳ ಸದ್ದಿನ ನಡುವೆ ಪರಿಸರ ಪ್ರೇಮಿ, ಕುದುರೆ ಖರಪುಟದ ಸದ್ದು ಎಲ್ಲರ ಆಕರ್ಷಣೆಗೆ ಒಳಗಾಗಿದೆ.
BELTHANGADY
ಕಾಂಗ್ರೆಸ್ ಹಿರಿಯ ಮುಖಂಡ ವಸಂತ ಬಂಗೇರ ವಿಧಿವಶ
ಬೆಳ್ತಂಗಡಿ: ಕಾಂಗ್ರೆಸ್ ಹಿರಿಯ ಮುಖಂಡ ಬೆಳ್ತಂಗಡಿ ಮಾಜಿ ಶಾಸಕ, ಸಚಿವ ವಸಂತ ಬಂಗೇರ(79 ವ) ಇಂದು(ಮೇ.8) ಸಂಜೆ 4 ಗಂಟೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಇವರು ಬೆಳ್ತಂಗಡಿಯಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಮುಂದೆ ಓದಿ..; ಹೆಚ್.ಡಿ.ರೇವಣ್ಣಗೆ ಬಿಗ್ ಶಾಕ್; 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್
1946 ಜನವರಿ 15 ರಂದು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದಲ್ಲಿ ಜನಿಸಿದ ಇವರು ದಿ. ಕೇದೆ ಸುಬ್ಬ ಪೂಜಾರಿ ಹಾಗೂ ದಿ. ದೇವಕಿ ದಂಪತಿ ಪುತ್ರ. 1972 ರಲ್ಲಿ ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. 1983 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ, 1985 ರಲ್ಲಿ ಮತ್ತೆ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1989 ರಲ್ಲಿ ಬಿಜೆಪಿ ತೊರೆದು ಜೆಡಿಎಸ್ನಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಮತ್ತೆ 1994 ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸುಮಾರು 52 ವರ್ಷಗಳ ಕಾಲ ರಾಜಕೀಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ ಸೇವೆಸಲ್ಲಿಸಿದ್ದ ಬಂಗೇರರು, ಶ್ರೀ ಗುರುನಾರಾಯಣ ಸೇವಾ ಸಂಘದ ಗೌರವಾಧ್ಯಕ್ಷರಾಗಿ, ಗುರುದೇವ ಕಾಲೇಜಿನ ಅಧ್ಯಕ್ಷರಾಗಿ, ಗುರುದೇವ ಸಹಕಾರಿ ಸಂಘದ ಸ್ಥಾಪಕರಲ್ಲಿ ಓರ್ವರಾಗಿ ಕೊಡುಗೈ ದಾನಿಯಾಗಿಯಾಗಿದ್ದರು. ಮೃತರು ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಇಬ್ಬರು ಪುತ್ರಿಯರು, ಬಂಧು ವರ್ಗದವರನ್ನು ಅಗಲಿದ್ದಾರೆ.
ಮೇ. 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
DAKSHINA KANNADA
ಮೇ 9 ರಂದು SSLC ಫಲಿತಾಂಶ ಪ್ರಕಟ…!
ಮಂಗಳೂರು : 2023-24 ರ SSLC ಪರೀಕ್ಷೆಯ ಫಲಿತಾಂಶ ಮೇ 9 ರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್ 25 ರಿಂದ ಎಪ್ರಿಲ್ 6 ರ ವರೆಗೆ ಪರೀಕ್ಷೆ ನಡೆಸಲಾಗಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದೆ. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ಬಾರಿ ಫಲಿತಾಂಶ ಬಿಡುಗಡೆಗೆ ವಿಳಂಭವಾಗಿದೆ ಎಂದು ಹೇಳಿದೆ
2023- 24ರ SSLC ಪರೀಕ್ಷೆಯಲ್ಲಿ ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು ಮತ್ತು 41,375 ವಿದ್ಯಾರ್ಥಿಗಳು ರೀ ಎಕ್ಸಾಂ ಬರೆದಿದ್ದಾರೆ. ಇದರಲ್ಲಿ 4.41 ಲಕ್ಷ ಬಾಲಕರು ಮತ್ತು 4.28 ಲಕ್ಷ ಬಾಲಕಿಯರು ಇದ್ದಾರೆ.
ಫಲಿತಾಂಶವನ್ನು ನೋಡಲು ಈ ವೆಬ್ಸೈಟ್ ಬಳಸಿ..!
ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದು. kseab.karnataka.gov.in ಹಾಗೂ karresults.nic.in ವೆಬ್ಸೈಟ್ನಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ.
DAKSHINA KANNADA
ದಕ್ಷಿಣ ಕನ್ನಡ ಜಿಲ್ಲೆಯ ಕಲಾವೈವಿಧ್ಯತೆಗೆ ಮಾರುಹೋದ ವಿದೇಶಿಗರು
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯು ವಿವಿಧ ವೈವಿಧ್ಯಮಯ ಕ್ಷೇತ್ರವನ್ನು ಒಳಗೊಂಡಿರುವ ಕರಾವಳಿ ನಗರಿ. ಇಲ್ಲಿಗೆ ಬಂದ ವಿದೇಶಿ ಪ್ರಜೆಗಳು ಇಲ್ಲಿನ ವಿಶೇಷತೆಗಳನ್ನು ನೋಡಿ ಮನಸೋಲುತ್ತಾರೆ. ನವಮಂಗಳೂರು ಬಂದರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಹಲವು ವಿದೇಶಿ ಪ್ರವಾಸಿ ಹಡಗುಗಳು ಬಂದಿದ್ದು, ಇಲ್ಲಿನ ವಿಶೇಷ ತಾಣಗಳಿಗೆ ಭೇಟಿ ನೀಡಿ ಆನಂದ ಪಟ್ಟರು.
ವಿದೇಶಿ ಹಡಗಿನಲ್ಲಿ ಬಂದಿಳಿದ ಯುಎಸ್ಎ, ನೆದರ್ ಲ್ಯಾಂಡ್, ಉಕ್ರೇನ್, ಯುನೈಟೆಡ್ ಕಿಂಗ್ಡಂ, ಅಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್, ಪಿಲಿಫೈನ್ಸ್ ದೇಶದ ಸುಮಾರು 120 ಜನ ವಿದೇಶಿಗಳು, ಜಗತ್ಪ್ರಸಿದ್ದ ಸಾವಿರ ಕಂಬ ಬಸದಿಗೆ ಭೇಟಿ ನೀಡಿ ಅಲ್ಲಿ ಕಲಾಸೌಂದರ್ಯಕ್ಕೆ ಮಾರು ಹೋದರು.
ಇದನ್ನೂ ಓದಿ : ಹರಕೆ ತೀರಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ; ಅಭಯವಿತ್ತ ದೈವ!
ಮಂಗಳೂರು ಮೂಲದ ಕ್ಯಾಲಿಫೋರ್ನಿಯ ಉದ್ಯೋಗಿ ಸಚಿನ್ ಪಡಿವಾಳ್ ಅವರನ್ನು ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಸನ್ಮಾನಿಸಿದರು. ಈ ಸಂದರ್ಭ ಮಂಗಳೂರು ಟ್ರಾವೆಲ್ ಗೈಡ್ ರೋಹನ್, ರೋಷನ್, ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದರು.
- DAKSHINA KANNADA6 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- dehali7 days ago
ನಾಯಿಗಳಿಗೂ ಬಂತು ಆಧಾರ್ ಕಾರ್ಡ್.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?
- BELTHANGADY7 days ago
ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು
- LATEST NEWS6 days ago
ಎರಡು ಬಾರಿ ಅಕ್ರಮವಾಗಿ ಗರ್ಭಿಣಿಯಾದ ಅಪ್ರಾಪ್ತೆ..! ಪೋಷಕರ ವಿರುದ್ಧ ದೂರು.!!ಮುಂದೇನಾಯ್ತು?