Connect with us

    ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುವ ಗ್ರಾಮೀಣ ಪ್ರದೇಶದವರಿಗೆ ಶಾಸಕ ರಘುಪತಿ ಭಟ್ ಕೊಡುಗೆ ಅಪಾರ

    Published

    on

    ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುವ ಗ್ರಾಮೀಣ ಪ್ರದೇಶದವರಿಗೆ ಶಾಸಕ ರಘುಪತಿ ಭಟ್ ಕೊಡುಗೆ ಅಪಾರ

    ಉಡುಪಿ: ಲಾಕ್ ಡೌನ್ ಹಿನ್ನೆಲೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುತ್ತಿರುವ ಗ್ರಾಮೀಣ ಪ್ರದೇಶದ ಜನರಿಗಾಗಿ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಉಚಿತ ಸೇವೆ ಆರಂಭಿಸಲಾಗಿದೆ.

    ಮುಖ್ಯವಾಗಿ ಗ್ರಾಮೀಣ ಭಾಗದ ಜನತೆಯನ್ನು ಗುರಿಯಾಗಿಸಿಕೊಂಡು ಶಾಸಕರು ಈ ಸೇವೆ ಆರಂಭಿಸಿದ್ದಾರೆ.

    ಮೇ 25 ರಿಂದ ಮೇ 30ರ ವರೆಗೆ ನಗರದ 7 ಮಾರ್ಗಗಳಲ್ಲಿ 12 ಉಚಿತ ಸಿಟಿ ಬಸ್‍ ಸೇವೆಗೆ ರಾಜ್ಯ ಬಿಜೆಪಿ ಘಟಕಾಧ್ಯಕ್ಷ ದ.ಕ ಸಂಸದ ನಳಿನ್ ಕುಮಾರ್ ಕಟೀಲು ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಸೋಮವಾರ (ಮೇ 25) ಬೆಳಗ್ಗೆ ಚಾಲನೆ ನೀಡಿದರು.

    ಈ ಸಮಾರಂಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಸಿಟಿ ಬಸ್ ಮಾಲಕರ ಸಂಘದ ಪಧಾದಿಕಾರಿಗಳು, ಮತ್ತಿತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

    ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಗ್ರಾಮೀಣ ಪ್ರದೇಶಗಳಿಗೆ ಈ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.

    ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಹೆಚ್ಚಿನ ಕಡೆಗಳಲ್ಲಿ ಕೆಲಸ ಕಾರ್ಯಗಳು ಆರಂಭಗೊಂಡಿದ್ದು, ಸಾರಿಗೆ ವ್ಯವಸ್ಥೆ ಇಲ್ಲದೇ ದುಪ್ಪಟ್ಟು ಹಣ ಕೊಟ್ಟು ಕೆಲಸಕ್ಕೆ ಹೋಗಬೇಕಾಗಿದೆ.

    ಅಲ್ಲದೇ ಸಮೂಹ ಸಾರಿಗೆ ಬಳಸುವುದರಿಂದ ಕೋವಿಡ್ ಹರಡುತ್ತದೆ ಎನ್ನುವ ಭೀತಿಯೂ ಇದೆ.

    ಇದನ್ನೆಲ್ಲಾ ದೂರ ಮಾಡುವ ನಿಟ್ಟಿನಲ್ಲಿ ಒಂದು ವಾರಗಳ ಕಾಲ ಉಚಿತ ಬಸ್ ಸೇವೆಯನ್ನು ನೀಡಲು ಸಂಸ್ಥೆಗಳು ನಿರ್ಧರಿಸಿವೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಅಪಘಾತಕ್ಕೀಡಾದವರ ರಕ್ಷಣೆಗೆ “ಆಪತ್ಕಾಲಯಾನ”: 65 ನೂತನ ಅಂಬುಲೆನ್ಸ್ ಗೆ ಚಾಲನೆ ನೀಡಿದ ಸಿಎಂ

    Published

    on

    ಬೆಂಗಳೂರು: ಅಪಘಾತಕ್ಕೆ ಒಳಗಾಗುವ ಜನರ ರಕ್ಷಣೆಗೆ ಮುಖ್ಯಮಂತ್ರಿಗಳ ಹೆಸರಿನಲ್ಲೇ “ಆಪತ್ಕಾಲಯಾನ” ಎಂಬ ಅಂಬುಲೆನ್ಸ್‌ಗಳ ಸೇವೆಯನ್ನು ಒದಗಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

    ರಸ್ತೆ ಅಪಾಘಾತಕ್ಕೀಡಾದವರ ಗೋಲ್ಡನ್ ಅವಧಿಯ ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ 65 ನೂತನ ಅಂಬುಲೆನ್ಸ್‌ಗಳ ಸೇವೆಗೆ ಇಂದು (ಸೆ.23ರಂದು) ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

    ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯದಲ್ಲಿ ಪ್ರತಿ ವರ್ಷ 40 ಸಾವಿರ ಅಪಘಾತ ಪ್ರಕರಣಗಳು ನಡೆಯುತ್ತಿವೆ. ಸರಾಸರಿ 10 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಅಪಘಾತಕ್ಕೆ ಒಳಗಾಗುವ ಜನರ ರಕ್ಷಣೆಗೆ ಪ್ರತ್ಯೇಕವಾಗಿ ಮುಖ್ಯಮಂತ್ರಿಗಳ ಹೆಸರಿನಲ್ಲೇ “ಆಪತ್ಕಾಲಯಾನ” ಅಂಬುಲೆನ್ಸ್‌ಗಳ ಸೇವೆಯನ್ನು ಒದಗಿಸುತ್ತಿದ್ದೇವೆ. ಮುಂಬರುವ ವರ್ಷದಲ್ಲಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಈ ಯೋಜನೆ ವಿಸ್ತರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

    ಅಂಬುಲೆನ್ಸ್‌ಗಳು ಹೇಗೆ ಕಾರ್ಯನಿರ್ವಹಿಸಲಿವೆ?

    • ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳ ಹತ್ತಿರದ ಆಸ್ಪತ್ರೆಗಳಲ್ಲಿ ಅಂಬುಲೆನ್ಸ್‌ಗಳು ತಂಗಲಿವೆ.
    • 65 ಹಾಟ್‌ಸ್ಪಾಟ್‌ಗಳನ್ನ ಗುರುತಿಸಲಾಗಿದ್ದು, ಆ ಸ್ಥಳಗಳ ಹತ್ತಿರದ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಿಗೆ ಅಂಬುಲೆನ್ಸ್‌ಗಳನ್ನು ನೀಡಲಾಗಿದೆ.
    • ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಡ್ವಾನ್ಸ್ ಲೈಫ್ ಸಪೋರ್ಟ್ (ALS) ಅಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದೆ.
    • ಜಿಲ್ಲಾಸ್ಪತ್ರೆಗಳ ಮಟ್ಟದಲ್ಲಿ ಚಿಕಿತ್ಸೆ ಅಗತ್ಯವಾದಲ್ಲಿ ಆರೋಗ್ಯ ಇಲಾಖೆಯ ಸ್ಟಾಫ್ ನರ್ಸ್‌ನ್ನು ಅಂಬುಲೆನ್ಸ್‌ಗಳಿಗೆ ಡೆಪ್ಯೂಟ್ ಮಾಡಲಾಗುವುದು.
    • ವೆಂಟೀಲೇಟರ್ ಸಹಾಯದೊಂದಿಗೆ ಜಿಲ್ಲಾಸ್ಪತ್ರೆಗಳಿಗೆ ರೋಗಿಗಳನ್ನ ಕರೆದೊಯ್ದು ಚಿಕಿತ್ಸೆ ಕೊಡಿಸುವ ಸೌಲಭ್ಯ ಒದಗಿಸಲಾಗಿದೆ.
    • ಅಂಬುಲೆನ್ಸ್‌ಗಳು ಸುಸಜ್ಜಿತ ಉಪಕರಣಗಳು, ಔಷಧಿ ಹಾಗೂ ಉಪಭೋಗ್ಯ ವಸ್ತುಗಳನ್ನು ಹೊಂದಿರಲಿವೆ. ಈ ಪ್ರಕ್ರಿಯೆಯು ಅಪಘಾತಕ್ಕೆ ಒಳಗಾದ ವ್ಯಕ್ತಿಯ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಅಲ್ಲದೇ ಸ್ಥಳಾಂತರಕ್ಕೆ ರೋಗಿಗಳ ಸ್ವಂತ ಹಣದ ವ್ಯಯವನ್ನು ತಪ್ಪಿಸಲಿದೆ.
    Continue Reading

    LATEST NEWS

    ‘ಮಿಸ್ ಯೂನಿವರ್ಸ್ ಇಂಡಿಯಾ 2024’ ಮುಡಿಗೇರಿಸಿಕೊಂಡ ರಿಯಾ ಸಿಂಘಾ

    Published

    on

    ಮಂಗಳೂರು/ಜೈಪುರ : ರಾಜಸ್ಥಾನದ ಜೈಪುರದಲ್ಲಿ ಭಾನುವಾರ (ಸೆಪ್ಟೆಂಬರ್ 22) ‘ಮಿಸ್ ಯೂನಿವರ್ಸ್ ಇಂಡಿಯಾ 2024’ ಕಾರ್ಯಕ್ರಮ ನಡೆದಿದ್ದು, ರಿಯಾ ಸಿಂಘಾ ಅವರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಊರ್ವಶಿ ರೌಟೇಲಾ ಅವರು ಈ ಕಿರೀಟವನ್ನು ತೊಡಿಸಿದ್ದಾರೆ.


    ‘ನಾನು ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ಗೆದ್ದಿದ್ದೇನೆ. ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಾನು ಇಲ್ಲಿಗೆ ಬರಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಈ ಕಿರೀಟಕ್ಕೆ ನಾನು ಅರ್ಹ ಎಂದು ಭಾವಿಸುತ್ತೇನೆ. ಈ ಮೊದಲಿನ ವಿನ್ನರ್ಗಳಿಂದ ನಾನು ಸ್ಫೂರ್ತಿ ಪಡೆದಿದ್ದೇನೆ’ ಎಂದಿದ್ದಾರೆ ರಿಯಾ ಸಿಂಘಾ.
    ‘ಮಿಸ್ ಯೂನಿವರ್ಸ್ 2024’ನ ಮೊದಲ ರನ್ನರ್ ಅಪ್ ಆಗಿ ಪ್ರಂಜಲ್ ಪ್ರಿಯಾ ಮೊದಲ ರನ್ನರ್ ಅಪ್ ಆಗಿದ್ದಾರೆ. ಚವಿ ವರ್ಗ್ ಎರಡನೇ ಸ್ಥಾನ ಪಡೆದಿದ್ದಾರೆ. ಸುಷ್ಮಿತಾ ರಾಯ್ ಮೂರನೇ ರನ್ನರ್ ಅಪ್ ಆಗಿದ್ದಾರೆ.
    ರಿಯಾ ಸಿಂಘಾ 19 ವರ್ಷದಲ್ಲಿಯೇ ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಗುಜರಾತ್ ಮೂಲದವರಾದ ರಿಯಾ ಇತರ ಸ್ಪರ್ಧಿಗಳ ಜೊತೆ ಟಫ್ ಪರ್ಫಾರ್ಮೆನ್ಸ್ ನೀಡಿದ್ದಾರೆ.
    ಮಿಸ್ ಯೂನಿವರ್ಸ್ ಕಿರೀಟ ಗೆದ್ದರೆ ಸಹಜವಾಗಿಯೇ ಅವರ ಖ್ಯಾತಿ ಹೆಚ್ಚಲಿದೆ. ಸಿನಿಮಾ ರಂಗದಿಂದ ಸಾಕಷ್ಟು ಆಫರ್ಗಳು ಕೂಡ ಬರುತ್ತವೆ. ಈವರೆಗೆ ಭಾರತದ ಮಿಸ್ ಯೂನಿವರ್ಸ್ ಗೆದ್ದವರು ಎಂದರೆ ಸುಷ್ಮಿತಾ ಸೇನ್ (1994), ಲಾರಾ ದತ್ (2000) ಹಾಗೂ ಹರ್ನಾಜ್ ಸಂಧು.

    Continue Reading

    International news

    ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ದಿಸ್ಸನಾಯಕೆ ಪ್ರಮಾಣವಚನ

    Published

    on

    ಮಂಗಳೂರು/ಕೊಲಂಬೊ : ಮಾರ್ಕ್ಸ್ ವಾದಿ ನಾಯಕ ಅನುರಾ ಕುಮಾರ ದಿಸ್ಸನಾಯಕೆ ದ್ವೀಪ ರಾಷ್ಟ್ರ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಸೋಮವಾರ(ಸೆ.23) ಪ್ರಮಾಣವಚನ ಸ್ವೀಕರಿಸಿದ್ದಾರೆ. 56 ವರ್ಷದ ದಿಸ್ಸ ನಾಯಕೆ ಅವರಿಗೆ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಪ್ರಮಾಣವಚನ ಬೋಧಿಸಿದರು.

    ನ್ಯಾಷನಲ್ ಪೀಪಲ್ಸ್ ಪವರ್ ಒಕ್ಕೂಟದ ಅಭ್ಯರ್ಥಿಯಾಗಿ ಮಾರ್ಕ್ಸ್ ವಾದಿ ಜನತಾ ವಿಮುಕ್ತಿ ಪೆರೆಮುನಾ ಪಕ್ಷದಿಂದ ದಿಸ್ಸನಾಯಕೆ ಕಣಕ್ಕಿಳಿದಿದ್ದರು. ವಿರೋಧ ಪಕ್ಷ ಸಮಗಿ ಜನ ಬಲವೇಗಯ ಅಭ್ಯರ್ಥಿ ಸಜಿತ್ ಪ್ರೇಮದಾಸ್ ಗೆಲುವು ಸಾಧಿಸಿದ್ದರು.

    ಇದನ್ನೂ ಓದಿ : WATCH: ಎಸಿ ಕೋಚ್ನಲ್ಲಿ ಟಿಕೇಟ್ ಇಲ್ಲದೆ ಪ್ರಯಾಣಿಸಿದ ಹಾವು; ವೀಡಿಯೋ ವೈರಲ್

    2022ರಲ್ಲಿ ಎದುರಾದ ತೀವ್ರ ಆರ್ಥಿಕ ಸಂಕಷ್ಟದಿಂದ ಶ್ರೀಲಂಕಾ ಚೇತರಿಸಿಕೊಳ್ಳುತ್ತಿದೆ. ದೇಶವನ್ನು ಚೇತರಿಕೆಯ ಹಾದಿಯಲ್ಲಿ ಮುನ್ನಡೆಸುವುದಾಗಿ ಪ್ರಚಾರದ ವೇಳೆ ನಿರ್ಗಮಿತ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಪ್ರಚಾರದ ವೇಳೆ ಹೇಳಿಕೊಂಡಿದ್ದರು. ಮರು ಆಯ್ಕೆ ಬಯಸಿದ್ದ ಸಿಂಘೇ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.  ಶನಿವಾರ(ಸೆ.21) ಮತದಾನ ನಡೆದಿದ್ದು. ಭಾನುವಾರ ಫಲಿತಾಂಶ ಪ್ರಕಟವಾಗಿದೆ.

     

     

    Continue Reading

    LATEST NEWS

    Trending