Thursday, August 11, 2022

ಗಂಡು ಮಗು ಹೇರಲಿಲ್ಲ ಎಂದು ಕಿರುಕುಳ: 3 ಹೆಣ್ಮಕ್ಕಳನ್ನು ಬಾವಿಗೆ ಬಿಸಾಕಿ ತಾಯಿ ಆತ್ಮಹತ್ಯೆ

ಕಲಬುರಗಿ: ಗಂಡನ ಮನೆಯವರಿಗೆ ಗಂಡು ಮಗುವಿನ ಮೇಲಿದ್ದ ಮೋಹಕ್ಕೆ ಮನೆಯ ಸೊಸೆ ತನ್ನ ಮೂವರು ಹೆಣ್ಣುಮಕ್ಕಳನ್ನು ಬಾವಿಗೆ ಬಿಸಾಕಿ ತಾನೂ ಹಾರಿ ದುರಂತ ಅಂತ್ಯ ಕಂಡಿದ್ದಾಳೆ. ಮೂರು ಮಕ್ಕಳ ಪೈಕಿ ಒಂದು ಮಗು ಅದೃಷ್ಟವಶಾತ್​ ಬದುಕುಳಿದಿದೆ.


ಇಂತಹ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

ಲಕ್ಷ್ಮೀ ಏಳಕೆ(28),‌ ಮಕ್ಕಳಾದ ಸಾವಿತ್ರಿ (2 ವರ್ಷ) ಮತ್ತು ಗೌರಮ್ಮ (6 ತಿಂಗಳು) ಮೃತ ದುರ್ದೈವಿಗಳು. 4 ವರ್ಷದ ಬಾಲಕಿ ಈಶ್ವರಿಯನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಲಕ್ಷ್ಮೀಗೆ ಮೂವರು ಹೆಣ್ಣು ಮಕ್ಕಳಾಗಿದ್ದಕ್ಕೆ ಗಂಡನ ಮನೆಯವರು ಗಂಡು ಮಗು ಆಗಲಿಲ್ಲ ಎಂದು ನಿತ್ಯ ಕಿರುಕುಳ ಕೊಡುತ್ತಿದ್ದರಂತೆ.

ಇದರಿಂದ ಬೇಸತ್ತ ಲಕ್ಷ್ಮೀ, ಗ್ರಾಮ ಹೊರವಲಯದ ಜಮೀನಿನೊಂದರ ಬಾವಿಗೆ ತನ್ನ ಮೂವರು ಮಕ್ಕಳನ್ನು ಮೊದಲು ಎಸೆದು ನಂತರ ಅದೇ ಬಾವಿಗೆ ಲಕ್ಷ್ಮೀ ಜಿಗಿದಿದ್ದಾರೆ.

ಕೂಡಲೇ ಸ್ಥಳೀಯರು ಅವರ ರಕ್ಷಣೆಗೆ ಮುಂದಾಗಿದ್ದು, ಓರ್ವ ಬಾಲಕಿ ಮಾತ್ರ ಬದುಕುಳಿದಿದ್ದಾಳೆ. ತಾಯಿ ಜತೆ 2 ಪುಟ್ಟ ಕಂದಮ್ಮಗಳು ಕೊನೆಯುಸಿರೆಳೆದಿವೆ.

ಸುದ್ದಿ ತಿಳಿಯುತ್ತಿದ್ದ ಸ್ಥಳಕ್ಕೆ ಬಂದ ನಿಂಬರ್ಗಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ರಕ್ಷಾಬಂಧನ

ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಇಂದು ರಕ್ಷಾಬಂಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರರವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು...

ಪ್ರವೀಣ್ ಹತ್ಯೆ ಪ್ರಕರಣ: ಪ್ರಮುಖ ಮೂವರು ಆರೋಪಿಗಳ ಬಂಧನ-ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆ

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದು, ಗೌಪ್ಯ ಸ್ಥಳದಲ್ಲಿ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಶಿಯಾಬ್, ಬಶೀರ್, ರಿಯಾಝ್ ಎಂದು...

ಸ್ಥಳೀಯರೇ ಪ್ರವೀಣ್‌ನನ್ನು ಹತ್ಯೆಗೈದಿದ್ದು, ಆರೋಪಿಗಳಿಗೆ ಎಸ್‌ಡಿಪಿಐ ಲಿಂಕ್‌ ಎಂದ ಎಡಿಜಿಪಿ

ಮಂಗಳೂರು: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲರೂ ಸ್ಥಳೀಯರೇ ಆಗಿದ್ದಾರೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.ಈ ಬಗ್ಗೆ ಮಂಗಳೂರಿನ ಎಸ್‌ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...