Saturday, November 27, 2021

ಫೋನ್‌ಪೇ ಬಳಕೆದಾರರಿಗೆ ಶಾಕ್‌: ಪ್ರತೀ ಫೋನ್ ರೀಚಾರ್ಜ್‌ ಮೇಲೆ 1 ರೂಪಾಯಿ ಪ್ರೊಸೆಸಿಂಗ್ ಶುಲ್ಕ

ನವದೆಹಲಿ: ಭಾರತದ ಜನಪ್ರಿಯ ಡಿಜಿಟಲ್ ನಗದು ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾದ ಫೋನ್‌ಪೇ ಇದೀಗ ತನ್ನ ಬಳಕೆದಾರರಿಗೆ ಬಿಗ್ ಶಾಕ್‌ ಒಂದನ್ನು ನೀಡಿದೆ.

ಡಿಜಿಟಲ್ ಪಾವತಿಗಳ ನಾಯಕನಾಗಿ ಬೆಳೆದುನಿಂತ ನಂತರ, ತನ್ನ ಫೋನ್‌ ಪೇ ಅಪ್ಲಿಕೇಷನ್‌ನಲ್ಲಿ 50 ರೂ.ಗಿಂತ ಹೆಚ್ಚಿನ ಫೋನ್ ರೀಚಾರ್ಜ್‌ಗಳ ಮೇಲೆ 1 ರಿಂದ 2 ರೂಗಳ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸಲು ಆರಂಭಿಸಿದೆ.

ಕಡಿಮೆ ಸಂಖ್ಯೆಯ ಬಳಕೆದಾರರೊಂದಿಗೆ ಇದನ್ನು ಪ್ರಾಯೋಗಿಕ ಆಧಾರದ ಮೇಲೆ ಮಾಡಲಾಗುತ್ತಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದು, 51 ರಿಂದ 100 ರೂ.ವರೆಗಿನ ರೀಚಾರ್ಜ್‌ಗಳಿಗೆ 1 ರೂ. ಶುಲ್ಕ ಮತ್ತು 100 ರೂ.ಗಿಂತ ಹೆಚ್ಚಿನದಕ್ಕೆ 2 ರೂ.ಶುಲ್ಕವನ್ನು ವಿಧಿಸುವುದಾಗಿ ತಿಳಿಸಿದೆ.
ಹೌದು, ನೀವು ಇನ್ಮುಂದೆ PhonePe ಪ್ಲಾಟ್‌ಫಾರ್ಮ್‌ನಲ್ಲಿ ಮೊಬೈಲ್‌ ರೀಚಾರ್ಜ್ ಮಾಡಿಸಿದರೆ ಶುಲ್ಕ ವಿಧಿಸಲಾಗುತ್ತದೆ.

ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿರುವುದರಿಂದ ಸದ್ಯ ಎಲ್ಲಾ ಫೋನ್‌ಪೇ ಬಳಕೆದಾರರಿಗೆ ಅನ್ವಯಿಸುವುದಿಲ್ಲ.
ಇನ್ಮುಂದೆ 50ರೂ ಬೆಲೆಯ ರೀಚಾರ್ಜ್‌ಗಳಿಗೆ 1ರೂ.ಶುಲ್ಕವನ್ನು ವಿಧಿಸಲಾಗುತ್ತದೆ. 100ರೂ. ಮೇಲಿನ ಎಲ್ಲಾ ಮೊಬೈಲ್ ರೀಚಾರ್ಜ್‌ಗಳು 2ರೂ.ಬೆಲೆಯ ಶುಲ್ಕವನ್ನು ವಿಧಿಸಲಾಗುತ್ತದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...