Connect with us

LATEST NEWS

ಮಗನ ಅಂತ್ಯಕ್ರಿಯೆಯಲ್ಲಿ ಗೃಹಲಕ್ಷ್ಮಿಯನ್ನು ನೆನೆದು ಕಣ್ಣೀರಿಟ್ಟ ತಾಯಿ..!

Published

on

ಬೆಳಗಾವಿ: ಮಗನ ಅಂತ್ಯಕ್ರಿಯೆಗೆ ಹಣ ವಿಲ್ಲದೆ ಪರದಾಡಿದ ಮಹಿಳೆ ನೋವಿನ ಸಮಯದಲ್ಲೂ ಗೃಹಲಕ್ಷ್ಮಿ ಯೋಜನೆಯನ್ನು ನೆನೆದು ಕಣ್ಣೀರಿಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಕಣ್ಣೀರಿಡುತ್ತಾ ಸರ್ಕಾರದ ಸಹಾಯ ನೆನಪಿಸಿಕೊಂಡ ವೃದ್ಧ ಮಹಿಳೆಯ ವಿಡಿಯೋ ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬೆಳಗಾವಿಯ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಶಿವಲಿಂಗಪ್ಪ (34)  ಅನಾರೋಗ್ಯದಿಮದ ಮೃತ ಪಟ್ಟಿದ್ದಾನೆ. ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದ ಈ ಯುವಕನ ತಾಯಿ ನೀಲವ್ವ ಮಗನ ಅಂತ್ಯ ಸಂಸ್ಕಾರಕ್ಕೆ ಹಣ ಇಲ್ಲದೆ ಗೋಳಾಡಿದ್ದಾರೆ. ಈ ವೇಳೆ ಯಂಗ್ ಬೆಳಗಾಮ್‌ ಫೌಂಡೇಶನ್‌ನವರು ವೃದ್ಧೆಯ ನೆರವಿಗೆ ಬಂದು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಮಗನಿಗೆ ಅಂತಿಮ ನಮನ ಸಲ್ಲಿಸುವ ವೇಳೆ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂಪಾಯಿಯನ್ನು ನೀಲವ್ವ ನೆನಪಿಸಕೊಂಡಿದ್ದಾರೆ. ಅನಾರೋಗ್ಯಕ್ಕೆ ತುತ್ತಾದ ಮಗ ತಾಯಿಗೆ 2 ಸಾವಿರ ಬರುತ್ತದೆ ಅದರಲ್ಲಿ ತಾಯಿ ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದ. ತಾನಿನ್ನು ಬದುಕೋದಿಲ್ಲ ಅನ್ನೋದು ಖಚಿತವಾದಗ ಮಗ ತಾಯಿಗೆ ಆಸರೆಯಾಗಿ ಸರ್ಕಾರದ 2 ಸಾವಿರ ಸಿಗುವ ನೆಮ್ಮದಿಯಲ್ಲೇ ಪ್ರಾಣ ಬಿಟ್ಟಿದ್ದ. ಇದನ್ನ ವೃದ್ಧೆ ನೀಲವ್ವ ನೆನೆಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿದ್ದು ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಎರಡು ಬಾರಿ ಅಕ್ರಮವಾಗಿ ಗರ್ಭಿಣಿಯಾದ ಅಪ್ರಾಪ್ತೆ..! ಪೋಷಕರ ವಿರುದ್ಧ ದೂರು.!!ಮುಂದೇನಾಯ್ತು?

Published

on

ಮಹಾರಷ್ಟ್ರ: ಅಪ್ರಾಪ್ತ ಬಾಲಕಿಯೊಬ್ಬಳು ಎರಡು ಬಾರಿ ಅಕ್ರಮ ಗರ್ಭ ಧರಿಸಿ ಇದೀಗ ತನ್ನ ಪೋಷಕರ ವಿರುದ್ಧ ಠಾಣೆ ಮೆಟ್ಟಿಲೇರಿರುವ ಘಟನೆ ಮಹಾರಷ್ಟ್ರದಲ್ಲಿ ನಡೆದಿದೆ. ಹೌದು, 17 ವರ್ಷದ ಬಾಲಕಿಯೊಬ್ಬಳು ಬೇರೆ ಬೇರೆ ಯುವಕರಿಂದ ಎರಡು ಬಾರಿ ಗರ್ಭ ಧರಿಸಿದ್ದಾಳೆ.

pregnant

ಮೊದಲಾಗಿ ಅಕ್ರಮ ಸಂಬಂಧ ಹೊಂದಿದ್ದ ಪುರುಷನಿಂದ ಗರ್ಭ ಧರಿಸಿದ್ದಳು. ಈ ಮಗುವನ್ನು ಪೋಷಕರು ತನಗರಿಯದೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಬಾಲಕಿ ಪೋಷಕರು ಸೇರಿದಂತೆ ಶಿಕ್ಷಕರು, ವಕೀಲರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಮುಂದೆ ಓದಿ..; 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

ಪೋಷಕರು ನನ್ನನ್ನು ಮುಂಬೈಗೆ ಕರೆದುಕೊಂಡು ಹೋಗಿ ವಕೀಲರ ನೇತೃತ್ವದಲ್ಲಿ ಕೆಲವು ದಾಖಲೆ ಪತ್ರಗಳಿಗೆ ಸಹಿ ಹಾಕಿಸಿದ್ದಾರೆ.  7ನೇ ತರಗತಿಯ ಬಳಿಕ ಶಾಲೆಯಿಂದ ಹೊರಗುಳಿದ ಬಾಲಕಿಯ ನಿಯಮಿತ ತಪಾಸಣೆ ಮತ್ತು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. 2021ರ ಸೆಪ್ಟೆಂಬರ್ 24ರಂದು ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮರುದಿನ ಆ ಮಗುವನ್ನು ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಹಸ್ತಾಂತರಿಸಿದ್ದು, ಹೆರಿಗೆಯ ಬಗ್ಗೆ ಯಾರಲ್ಲೂ ಮಾತನಾಡದಂತೆ ಆಕೆಗೆ ಪೋಷಕರು ಎಚ್ಚರಿಕೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಇನ್ನು ಹೆರಿಗೆ ಆದ ಆರು ತಿಂಗಳ ಬಳಿಕ ಅಪ್ರಾಪ್ತೆ ಮಗುವಿನ ತಂದೆಯನ್ನು ಸಂಪರ್ಕಿಸಿದ್ದಾಳೆ. ಈ ವೇಳೆ ಆತ ಅವಳನ್ನು ವರಿಸಳು ಸಿದ್ಧನಾಗಿದ್ದೇನೆ ಎಂದು ಹೇಳುತ್ತಾನೆ. ಆದರೆ ಮನೆಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ತನ್ನ ಪೋಷಕರು ಮಗುವನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಪೈಕಿ ಪೋಷಕರು ಮತ್ತು ಚಿಕ್ಕಪ್ಪ ತಲಾ 1.5 ಲಕ್ಷ ರೂ. , ಸಾಮಾಜಿಕ ಕಾರ್ಯಕರ್ತೆ ಮತ್ತು ಇತರ ಕೆಲವರು ಉಳಿದ 1 ಲಕ್ಷ ರೂ.ಗಳನ್ನು ಹಂಚಿಕೊಂಡಿದ್ದಾರೆ ಎಂದು ಅಪ್ರಾಪ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಈ ಕುರಿತಾಗಿ ಪ್ರಶ್ನಿಸಿದಕ್ಕೆ ಅಜ್ಜಿ ಮನೆಗೆ ಕಳುಹಿಸಿದ್ದಾರೆ. ಇನ್ನು ಅಲ್ಲಿ ಈ ಬಾಲಕಿಗೆ 23ವರ್ಷದ ಯುವಕನ ಜೊತೆ ಮದುವೆ ಫಿಕ್ಸ್ ಮಾಡಲಾಗಿತ್ತು.  ಈ ವೇಳೆ ವಿವಾಹ ನಿಶ್ಚಯವಾಗಿದ್ದ ಯುವಕನ ಜೊತೆ ಲೈಂಗಿಕ ಸಂಪರ್ಕ ಹೊಂದುತ್ತಾಳೆ. ಬಳಿಕ ಬಾಲಕಿ ಮತ್ತೊಮ್ಮೆ ಗರ್ಭ ಧರಿಸುತ್ತಾಳೆ. ಅಷ್ಟಾಗಲೇ ವಿವಾಹ ನಿಶ್ಚಯವಾಗಿದ್ದ ಹುಡುಗನಿಗೆ ಇವಳ ಮೊದಲ ಮಗುವಿನ ಕುರಿತಾಗಿ ತಿಳಿದು ಇವಳನ್ನು ಮದುವೆಯಾಗಲು ನಿರಾಕರಿಸುತ್ತಾನೆ. ಬಳಿಕ ಅಜ್ಜಿ ಮನೆಯಿಂದ ಹೊರಟು ಬರ್ತಾಳೆ. ಪರಿಚಯಸ್ಥರ ನೆರವಿನಿಂದ ಗಂಡು ಮಗುವಿಗೆ ಜನ್ಮ ನೀಡಿದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಪೋಷಕರು ಎರಡನೇ ಮಗವನ್ನೂ ಮಾರಾಟ ಮಾಡುವಂತೆ ಒತ್ತಡ ಹೇರುತ್ತಿದ್ದು ಈ ನಿಟ್ಟಿನಲ್ಲಿ ಬಾಲಕಿ ಪೊಲೀಸ್ ಮೆಟ್ಟಿಲೇರಿದ್ದಾಳೆ. ಇನ್ನು ಪೊಲೀಸರು ಮಾರಾಟ ಮಾಡಿದ್ದ ಹೆಣ್ಣು ಮಗುವನ್ನು ಹುಡುಕಲು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

 

 

Continue Reading

FILM

ಕ್ಲಿಕ್ ಆಯ್ತು ‘ಪುಷ್ಪ ಪುಷ್ಪ’…ಅಲ್ಲು ಅರ್ಜುನ್ ಮಾಸ್ ಲುಕ್; ಸಕತ್  ಸ್ಟೆಪ್ಸ್ ಗೆ ಫ್ಯಾನ್ಸ್ ಫಿದಾ

Published

on

ಟಾಲಿವುಡ್ : ಸದ್ಯ ಟಾಲಿವುಡ್ ಅಂಗಳದಲ್ಲಿ ‘ಪುಷ್ಪ 2 : ದಿ ರೂಲ್‌’ ಸೌಂಡ್ ಜೋರಾಗಿದೆ. ಅಲ್ಲು ಅರ್ಜುನ್ ಸಿನಿಮಾ ಅಂದ್ರೆ ಹೇಳ್ಬೇಕಾ..ಮೊದಲೇ ಕ್ರೇಜ್ ಹೆಚ್ಚಿಸಿರುತ್ತೆ. ಪುಷ್ಪ ಈಗಾಗಲೇ ಫಸ್ಟ್ ಲುಕ್, ಟೀಸರ್ ಎಲ್ಲದರ ಮೂಲಕಾನೂ ನಿರೀಕ್ಷೆ ಹೆಚ್ಚಿಸುತ್ತಿದೆ. ಇದೀಗ ಹಾಡಿನ ಸರದಿ.


ಅಲ್ಲು ಅರ್ಜುನ್ ಮಾಸ್ ಲುಕ್; ಸಕತ್  ಸ್ಟೆಪ್ಸ್ :

‘ಪುಷ್ಪ 2 : ದಿ ರೂಲ್‌’ ಸಿನಿಮಾದ ಕುರಿತು ಯಾವ ಅಪ್ಡೇಟ್ ಕೊಡುತ್ತದೆ ಎಂದು ಅಲ್ಲು ಅರ್ಜುನ್ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇದೀಗ ಮೇ 1 ರಂದು ಸಿನೆಮಾದ ಹಾಡೊಂದನ್ನು ರಿಲೀಸ್ ಮಾಡಲಾಗಿದೆ. ಪುಷ್ಪ ಪುಷ್ಪ ಅನ್ನೋ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡಿನಲ್ಲಿ ಅಲ್ಲು ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಮಾಸ್ ಲುಕ್ ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಈ ಲುಕ್ ಗೆ ಫ್ಯಾನ್ಸ್ ಫಿದಾ ಆಗಿರೋದಂತೂ ಸುಳ್ಳಲ್ಲ. ಎಂದಿನಂತೆ ಅಲ್ಲು ಡ್ಯಾನ್ಸ್ ಸಕತ್ತಾಗಿಯೇ ಇದೆ. ಟೀ ಗ್ಲಾಸ್ ಹಿಡಿದು ಅಲ್ಲು ಅರ್ಜುನ್ ವ್ಹಾವ್ ಎಂದೆನಿಸುವಂತೆ ಸ್ಟೆಪ್ ಹಾಕಿದ್ದಾರೆ.

ಬಿಡುಗಡೆಯಾದ ಕೆಲವೇ ಘಂಟೆಯಲ್ಲಿ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ. ಸದ್ಯ 9.7 ಮಿಲಿಯನ್ ವೀಕ್ಷಣೆ ಪಡೆದಿದೆ. ಈ ಮೂಲಕ ಭಾರತದಲ್ಲಿನ ಸಂಗೀತ ಪಟ್ಟಿಯಲ್ಲಿ ಈ ಹಾಡು ಅಗ್ರಸ್ಥಾನ ಪಡೆದುಕೊಂಡಿದೆ.

ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅಲ್ಲು ಅರ್ಜುನ್ ಪಾತ್ರದ ಮೇಲೆ ಚಿತ್ರಿಸಲಾಗಿದೆ. ತೆಲುಗು ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದು ,ನಕಾಶ್ ಅಜೀಜ್, ದೀಪಕ್ ಬ್ಲೂ ದನಿಯಾಗಿದ್ದಾರೆ.  ‘ಪುಷ್ಪ ಪುಷ್ಪ’ ಹಾಡು ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ಬೆಂಗಾಲಿ ಎಂಬ ಆರು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ : 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

ತೆರೆಗೆ ಯಾವಾಗ?

ಅಲ್ಲು ಅರ್ಜುನ್ ಜೊತೆ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹಾದ್ ಫಾಸಿಲ್ , ಡಾಲಿ ಧನಂಜಯ್, ಜಗದೀಶ್ ಪ್ರತಾಪ್ ಭಂಡಾರಿ, ರಾವ್ ರಮೇಶ್, ಜಗಪತಿ ಬಾಬು, ಅಜಯ್, ಸುನಿಲ್, ಮೈಮ್ ಗೋಪಿ, ಅನಸೂಯಾ ಭಾರದ್ವಾಜ್, ಶ್ರೀತೇಜ್, ಬ್ರಹ್ಮಾಜಿ ಮೊದಲಾದವರು ಪಾತ್ರವಾಗಿದ್ದಾರೆ.

‘ಪುಷ್ಪ 2: ದಿ ರೂಲ್’ ಆಗಸ್ಟ್ 15, 2024 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಪುಷ್ಪಾದಲ್ಲಿದ್ದ ಆಕ್ಷನ್‌ ಗಿಂತ ಹೆಚ್ಚಿನ ಆಕ್ಷನ್ ಪುಷ್ಪಾ 2 ನಲ್ಲಿ ಇರಲಿದೆಯಂತೆ. ಪುಷ್ಪಾದಲ್ಲಿ ಮರಗಳ್ಳತನದ ಕಥೆ ಇದ್ರೆ, ಪುಷ್ಪಾ2 ನಲ್ಲಿ ಕೆಂಪು ಮರಳು ಕಳ್ಳಸಾಗಾಟದ ಬಗ್ಗೆ ಹೇಳಲಾಗಿದೆ.

Continue Reading

LATEST NEWS

ಹೊಸ ಅಪ್​ಡೇಟ್ ನೊಂದಿಗೆ ಬರುತ್ತಿದೆ ವಾಟ್ಸ್ಆ್ಯಪ್; ಏನದು ಗೊತ್ತಾ!?

Published

on

ಮಂಗಳೂರು : ಆ್ಯಪ್ ಗಳು ಅಂದ್ರೆ ಹೊಸ ಹೊಸ ಫೀಚರ್ ಗಳ ಅನಾವರಣ ಮಾಡುತ್ತಿರುತ್ತವೆ. ಬಳಕೆದಾರರಿಗೆ ಅನುಕೂಲತೆಯನ್ನು ಸೃಷ್ಟಿಸಲು ನವೀನ ಫೀಚರ್ ಗಳನ್ನು ಅಳವಡಿಸಲಾಗುತ್ತದೆ. ವಾಟ್ಸ್ ಆ್ಯಪ್ ಕೂಡ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುತ್ತದೆ. ಇದೀಗ ಮತ್ತೊಂದು ಹೊಸ ಫೀಚರ್ ಪರಿಚಯಿಸುತ್ತಿದೆ.


ಏನಿದು ಫೀಚರ್ ?

ವಾಟ್ಸ್ ಆ್ಯಪ್ ಗೆ ಅತ್ಯಂತ ಹೆಚ್ಚಿನ ಬಳಕೆದಾರರಿದ್ದಾರೆ. ಈಗಾಗಲೇ ನೂತನ ಫೀಚರ್ ಗಳನ್ನು ವಾಟ್ಸ್ ಆ್ಯಪ್ ಪರಿಚಯಿಸುತ್ತಿರುತ್ತದೆ. ಇದೀಗ ಹೊಸ ಫೀಚರ್​ವೊಂದನ್ನು ಪರಿಶೀಲಿಸುತ್ತಿದೆ. ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್​ನಲ್ಲಿ ಫೋಟೋ, ವೀಡಿಯೋ ಇತ್ಯಾದಿ ಫೈಲ್ ಶೇರಿಂಗ್ ಮಾಡಲು ಅವಕಾಶ ಕೊಡುವ ಫೀಚರ್ ಇದಾಗಿದೆ. ಬೀಟಾ ಆವೃತ್ತಿಯಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಶೀಘ್ರದಲ್ಲಿ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ : 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

ನಿಯರ್ ​ಬೈ ಡಿವೈಸ್, ಕ್ವಿಕ್ ಶೇರಿಂಗ್ ಇತ್ಯಾದಿ ಫೀಚರ್ ರೀತಿಯಲ್ಲಿ ಇದು ಇರಬಹುದು ಎನ್ನಲಾಗಿದೆ.
ಭಾರತ ಸೇರಿದಂತೆ ಜಗತ್ತಿನಾದ್ಯಂತ ವಾಟ್ಸ್ ಆ್ಯಪ್ ಜನಪ್ರಿಯ. ಜನರಿಗೆ ಹೆಚ್ಚಿನ ಖಾಸಗಿತನ ಮತ್ತು ಭದ್ರತೆಯನ್ನು ಒದಗಿಸಲು ಕೂಡ ವಾಟ್ಸ್​​ಆ್ಯಪ್ ಸಹಾಯ ಮಾಡುತ್ತದೆ.

Continue Reading

LATEST NEWS

Trending