chikkamagaluru
ಸಿನಿಮಾ ಶೈಲಿಯಲ್ಲಿ ಕತ್ತು ಸೀಳಿ ಸ್ನೇಹಿತನ ಕೊಲೆ..!
ಚಿಕ್ಕಮಗಳೂರು: ಸಿನಿಮಾದಿಂದ ಪ್ರೇರಣೆ ಪಡೆದು ರೌಡಿಗಳಾಗಲು ಹೊರಟ ಯುವಕರು ಜೋಗಿ ಸಿನೆಮಾ ಮಾದರಿಯಲ್ಲೇ ಸ್ನೇಹಿತನ ಕೊಲೆ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಈ ಬರ್ಬರ ಕೃತ್ಯ ನಡೆದಿದ್ದು, ಸ್ನೇಹಿತನ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಮದುಗಿರಿ ಮೂಲದ ದರ್ಶನ್ ಸ್ನೇಹಿತರಿಂದ ಕೊಲೆಯಾದ ಯುವಕನಾಗಿದ್ದು, ಇತ್ತೀಚೆಗಷ್ಟೇ ಕೊಲೆ ಯತ್ನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಬೇಲ್ ಪಡೆದು ಹೊರ ಬಂದಿದ್ದ ದರ್ಶನ್ ಕಡೂರಿನ ಹೊಸೂರು ಗ್ರಾಮದಲ್ಲಿ ಅಜ್ಜಿ ಜೊತೆ ವಾಸವಾಗಿದ್ದ. ದರ್ಶನ್ ಜೊತೆ ಆತನ ಸ್ನೇಹಿತರು ಹಾಗೂ ಪುಡಿ ರೌಡಿಗಳಾಗಿದ್ದ ಮನೋಜ್ ಹಾಗೂ ಕೌಶಿಕ್ ಕೂಡಾ ಅಜ್ಜಿ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ದರ್ಶನ್ ಜೊತೆ ಒಂದು ತಿಂಗಳಿನಿಂದ ಒಂದೇ ತಟ್ಟೆಯಲ್ಲಿ ಊಟ ಮಾಡಿಕೊಂಡಿದ್ದ ಮನೋಜ್ ಹಾಗೂ ಕೌಶಿಕ್ ದರ್ಶನ್ ಕೊಲೆ ಮಾಡಿ ಅಂದರ್ ಆಗಿದ್ದಾರೆ. ಜೈಲಿನಿಂದ ಬಂದಿದ್ದ ದರ್ಶನ್ ಡಾನ್ ಆಗಲು ಯತ್ನಿಸಿದ್ದು , ಕೌಶಿಕ್ ಹಾಗೂ ಮನೋಜ್ ಮೇಲೆ ಹಿಡಿತ ಸಾದಿಸಲು ಯತ್ನಿಸಿದ್ದೇ ಈ ಕೊಲೆಗೆ ಕಾರಣವಾಗಿದೆ. ದರ್ಶನ್ನನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ನಮಗಿಂತ ದೊಡ್ಡ ಹೆಸರು ಮಾಡ್ತಾನೆ ಅಂತ ಇಬ್ಬರೂ ದರ್ಶನ್ ಕಥೆ ಮುಗಿಸಿದ್ದಾರೆ. ಬೆಂಗಳೂರಿನ ಕಿರಣ್ ಮತ್ತು ರಾಜು ಎಂಬವರ ಜೊತೆ ಸೇರಿ ಫೆ. 15 ಮದ್ಯರಾತ್ರಿ ಈ ಕೊಲೆ ಮಾಡಿದ್ದಾರೆ.
ಮದ್ಯ ಕುಡಿಯಲು ಕರೆದು ಸ್ನೇಹಿತನ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆಎ. ಕೊಲೆ ನಡೆದ 12 ಗಂಟೆಯಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಈ ವೇಳೆ ಕೊಲೆಯ ಕಾರಣ ಬಿಚ್ಚಿಟ್ಟಿದ್ದಾರೆ.
chikkamagaluru
ಶೃಂಗೇರಿ ದೇವಸ್ಥಾನದಲ್ಲಿಯೂ ವಸ್ತ್ರ ಸಂಹಿತೆ ಜಾರಿ; ಈ ಉಡುಪು ಧರಿಸಿದವರಿಗೆ ಮಾತ್ರ ಪ್ರವೇಶ
ಚಿಕ್ಕಮಗಳೂರು: ದೇಶದ ಅನೇಕ ಹಿಂದೂ ದೇವಾಲಯಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಅದೇ ರೀತಿ ಇದೀಗ ಶೃಂಗೇರಿ ಶಾರದಾಂಬ ದೇವಾಲಯದಲ್ಲಿಯೂ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ. ಪುರುಷ ಹಾಗೂ ಮಹಿಳೆಯರು ನಿರ್ದಿಷ್ಟ ಬಟ್ಟೆಗಳನ್ನು ಧರಿಸಿದರೆ ಮಾತ್ರ ಪ್ರವೇಶ ನೀಡಲಾಗುವುದು. ಆದರೆ ವಸ್ತ್ರ ಸಂಹಿತೆಯು ಒಳ ಪ್ರಕಾರಕ್ಕೆ ಮಾತ್ರ ಅನ್ವಯವಾಗಲಿದ್ದು ದೇವಸ್ಥಾನದ ಒಳ ಆವರಣಕ್ಕೆ ಯಾವುದೇ ನಿರ್ಬಂಧವಿಲ್ಲ.
ಶ್ರೀ ಶಾರದಾ ಪೀಠದ ಒಳ ಪ್ರಾಕಾರಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಶ್ರೀಮಠ ರೂಪಿಸಿದ್ದು ಆಗಸ್ಟ್ 15ರಿಂದ ಜಾರಿಗೆ ಬರಲಿದೆ. ಪುರುಷರು ಧೋತಿ, ಶಲ್ಯ ಹಾಗೂ ಮಹಿಳೆಯರು ಸೀರೆ, ಸೆಲ್ವಾರ್ ಕಮೀಜ್, ದುಪ್ಪಟ್ಟ, ಲಂಗ ದಾವಣಿ, ಲೆಹಂಗ ಧರಿಸಬಹುದಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಮೈಸೂರು ದಸರಾ 2024: ಈ ಬಾರಿಯೂ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು ಹೆಗಲಿಗೆ
“ಅಗಸ್ಟ್ 15, 2024ನೇ ಗುರುವಾರದಿಂದ ಶ್ರೀ ಶಾರದಾಮ್ಮನವರ ದರ್ಶನಕ್ಕಾಗಿ ಬರುವ ಭಕ್ತಾದಿಗಳು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರಲು ವಿನಂತಿಸಲಾಗಿದೆ ಭಾರತೀಯ ಸಾಂಪ್ರದಾಯಿಕವಲ್ಲದ ಉಡುಗೆಯನ್ನು ತೊಟ್ಟುಬಂದವರಿಗೆ ಅರ್ಧಮಂಟಪದ ಒಳಗೆ ಪ್ರವೇಶವಿರುವುದಿಲ್ಲ, ಹೊರಗಿನ ಪ್ರಾಕಾರದಿಂದಲೇ ದೇವರ ದರ್ಶನವನ್ನು ಪಡೆಯಬೇಕಾಗುತ್ತದೆ” ಎಂದು ಪ್ರಕಟಣೆ ಹೇಳಿದೆ. ಜಗದ್ಗುರುಗಳ ಚಾತುರ್ಮಾಸ ವ್ರತ ಚಾಲ್ತಿಯಲ್ಲಿ ಇರುವ ಮಧ್ಯೆಯೇ ಈ ವಸ್ತ್ರಸಂಹಿತೆ ನಿಯಮ ಜಾರಿಗೆ ಬರಲಿದೆ.
chikkamagaluru
ಚಿಕ್ಕಮಗಳೂರು: ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿರ್ಬಂಧ..! ಜಿಲ್ಲಾಧಿಕಾರಿ ಆದೇಶ
ಚಿಕ್ಕಮಗಳೂರು: ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಡುಪಿ, ಕೊಡಗು ಜಿಲ್ಲೆ ಸೇರಿದಂತೆ ಹಲವು ಕಡೆಯ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಸಮುದ್ರದ ತೀರದ ಜನರಿಗೆ ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದ್ದು, ಬೀಚ್ನತ್ತ ಬರುವ ಪ್ರವಾಸಿಗರಿಗೂ ನಿರ್ಬಂಧ ಹೇರಲಾಗಿದೆ.
ಮಲೆನಾಡು ಪ್ರದೇಶಗಳಲ್ಲಿ ಮಳೆ ಮುಂದುವರಿಯುತ್ತಿದೆ. ಈ ಪ್ರದೇಶಗಳಲ್ಲಿ ಗುಡ್ಡ, ಬೆಟ್ಟಗಳು ಹೆಚ್ಚಿರುವುದರಿಂದ ಆತಂಕ ಹೆಚ್ಚಾಗಿದೆ. ಗಾಳಿ ಮಳೆಗೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಶೃಂಗೇರಿ, ಕಳಸ, ನರಸಿಂಹರಾಜಪುರ, ಮೂಡಿಗೆರೆ, ಕುದುರೆಮುಖ ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿದ್ದು ಗುಡ್ಡೆ, ಬೆಟ್ಟಗಳಲ್ಲಿ ನಿರ್ಮಾಣವಾಗಿರುವ ಸಣ್ಣ ಜಲಪಾತಗಳು ತುಂಬಿ ಹರಿಯುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಹಲವು ಪ್ರವಾಸಿತಾಣಗಳಿಗೆ ಬರುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದ್ದು, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಜು.22 ರವರೆಗೆ ಪ್ರವಾಸ ನಿರ್ಬಂಧವನ್ನು ಹೇರಿದೆ.
ನೆರೆಯಿಂದ ಜಲಾವೃತಗೊಂಡ ಮನೆ..! ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಹೋಗಲಾಗದೆ ಪರದಾಟ..!
ಮುಳ್ಳಯ್ಯನಗಿರಿ ಪ್ರದೇಶಕ್ಕೆ ಹೋಗುವ ದಾರಿ ಕಿರಿದಾಗಿದ್ದು ಬೆಟ್ಟ ಗುಡ್ಡಗಳ ನಡುವೆಯೇ ಹಾದು ಹೋಗಬೇಕಿದೆ. ಹಾಗಾಗಿ ಈ ಪ್ರದೇಶದಲ್ಲಿ ಅಪಾಯ ಸಂಭವಿಸುವ ಸಾದ್ಯತೆ ಹೆಚ್ಚಿದೆ. ಈ ಪ್ರದೇಶದಲ್ಲಿ ಈಗಾಗಲೇ ಸಣ್ಣ ಪ್ರಮಾಣದ ಗುಡ್ಡ ಕುಸಿತ ಗೊಂಡಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಸ್ಥಳೀಯ ವಾಹನಗಳನ್ನು ಹೊರತುಪಡಿಸಿ ಹೊರಗಿನ ಯಾವುದೇ ವಾಹನಗಳಿಗೆ ಈ ಪ್ರದೇಶಗಳಲ್ಲಿ ಜು.22ವರೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
chikkamagaluru
ವೀಕೆಂಡ್ ಮಸ್ತಿಯಲ್ಲಿ ಯುವಕರು..! ದೇವರಮನೆಯಲ್ಲಿ ಯುವಕರ ಡ್ಯಾನ್ಸ್..!!
ಚಿಕ್ಕಮಗಳೂರು: ಚಿಕ್ಕಮಗಳೂರು ಪ್ರವಾಸಿ ತಾಣಕ್ಕೆ ಹೆಸರುವಾಸಿ. ಇನ್ನು ಮಳೆಗಾಲದಲ್ಲಿ ಹೇಳಲೇಬೇಕಿಲ್ಲ. ಹಚ್ಚ ಹಸಿರ ವಾತಾವರಣ.. ಝಳಝಳಿಸುವ ಪುಟ್ಟ ಪುಟ್ಟ ಜಲಪಾತಗಳು ಕಣ್ಮನ ಸೆಳೆಯುತ್ತದೆ. ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಹೊಯ್ಸಳರ ಕಾಲದ ಇತಿಹಾಸವನ್ನು ಹೊಂದಿರುವ ದೇವರಮನೆ ಕಾಲಭೈರವೇಶ್ವರನ ಕ್ಷೇತ್ರಕ್ಕೆ ಪ್ರವಾಸಿಗರು ಅಂತರ್ರಾಜ್ಯದಿಂದಲೂ ಬರುತ್ತಾರೆ.
ಇದೀಗ ಶ್ರೀ ಕ್ಷೇತ್ರ ಕಾಲಭೈರವೇಶ್ವರನ ಕ್ಷೇತ್ರ ಮೋಜು ಮಸ್ತಿಯ ಅಡ್ಡವಾಗಿ ಕಂಡುಬರುತ್ತಿದೆ. ರಸ್ತೆಗೆ ಅಡ್ಡವಾಗಿ ವಾಹನಗಳನ್ನು ನಿಲ್ಲಿಸಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆವುಂಟು ಮಾಡಿದ್ದಾರೆ. ಮೋಜು, ಮಸ್ತಿ, ಡ್ಯಾನ್ಸ್ ಮಾಡಿ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕ್ ಮಾಡಿದ್ದರು. ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಕುಣಿದು ಕುಪ್ಪಳಿಸಿರವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಪೊಲೀಸರ ಭಯ ಹೇಗೂ ಇಲ್ಲ.. ಸ್ಥಳೀಯರ ಮಾತಿಗೆ ಕಿಮ್ಮತ್ತಿಲ್ಲ ಅನ್ನುವಂತಾಗಿದೆ.
ನಿವೃತ್ತಿಗೊಂಡ ಪೊಲೀಸ್ ಅಧಿಕಾರಿಗೆ ವಿಶೇಷ ಗೌರವ..! ಪುಷ್ಪಾರ್ಚಣೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು..!
ಚಾರ್ಮಾಡಿ ಘಾಟಿಯಲ್ಲೂ ಇದೇ ಪರಿಸ್ಥಿತಿ
ಇನ್ನು ಚಾರ್ಮಾಡಿ ಘಾಟಿಯಲ್ಲೂ ಇಂಥದ್ದೇ ಪರಿಸ್ಥಿತಿ. ಪ್ರವಾಸಿಗರು ಅಲ್ಲಿನ ಬಂಡೆಕಲ್ಲಿನ ಮೇಲೆ ನಿಂತು ಸೆಲ್ಫಿಗೆ ಪೋಸ್ ಕೊಡುತ್ತಿದ್ದಾರೆ. ಜಲಪಾತಕ್ಕೆ ಇಳಿದು ಮೋಜು ಮಸ್ತಿ ಮಾಡುತ್ತಿದ್ದಾರೆ. ಇನ್ನು ಜಾರುವ ಬಂಡೆಗಳಲ್ಲಿ ನಿಂತು ಮೋಜು, ಮಸ್ತಿ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
- LATEST NEWS5 days ago
ಗೀಸರ್ನಿಂದ ವಿಷಾನಿಲ ಸೋರಿಕೆ; ಇಹಲೋಕ ತ್ಯಜಿಸಿದ ತಾಯಿ, ಮಗ
- LATEST NEWS5 days ago
ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ನೆಕ್ಲೇಸ್
- LATEST NEWS7 days ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ
- DAKSHINA KANNADA2 days ago
ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ; ಸಾರ್ವಜನಿಕರನ್ನು ನೋಡಿ ಕಾಲ್ಕಿತ್ತ ಜೋಡಿ