Connect with us

    LATEST NEWS

    ನೆರೆಮನೆಯವರನ್ನು ವಂಚಿಸಿ ಕೋಟಿಗಟ್ಟಲೆ ದೋಚಿ ತಾಯಿ-ಮಗಳು ಪರಾರಿ..! ಫ್ಲೆಕ್ಸ್ ಹಾಕಿ ವಂಚಕರಿಗೆ ಹುಡುಕಾಟ..!

    Published

    on

    ಮಂಡ್ಯ/ಮಂಗಳೂರು: ತಾಯಿ-ಮಗಳು ಸೇರಿಕೊಂಡು ಅಕ್ಕಪಕ್ಕದವರಿಗೆ ಮಂಕು ಬೂದಿ ಎರಸಿ ಕೋಟಿ ಗಟ್ಟಲೆ ಹಣ ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ತಾಯಿ-ಮಗಳಿಬ್ಬರು  ನೆರೆ ಮನೆಯವರಿಗೆ ಕೋಟಿಗಟ್ಟಲೆ ಹಣ ವಂಚಿಸಿ ಊರು ಬಿಟ್ಟು ಪರಾರಿಯಾಗಿದ್ದು, ಇದೀಗ ಹಣ ಕಳೆದುಕೊಂಡವರು ಬೀದಿ ಪಾಲಾಗಿದ್ದಾರೆ.

    ಮಂಡ್ಯದ ಹೊಸಹಳ್ಳಿ ಬಡಾವಣೆಯ 5 ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ಗಿರಿಜಮ್ಮ ಹಾಗೂ ಅವರ ಪುತ್ರಿ ದಿವ್ಯಾ ಎಂಬವರು ಅಕ್ಕಪಕ್ಕದ ಮನೆಯವರ ನಂಬಿಕೆ, ವಿಶ್ವಾಸ ಗಳಿಸಿ ಅವರ ಹೆಸರಿನಲ್ಲಿ ಸಾಲ ಪಡೆದು ಇದೀಗ ವಂಚಿಸಿ ಊರು ಬಿಟ್ಟು ರಾತ್ರೋರಾತ್ರಿ ಪರಾರಿಯಾಗಿದ್ದಾರೆ. ಊರಿನಲ್ಲಿ ವಂಚಕಿಯರಿಗಾಗಿ ಫ್ಲೆಕ್ಸ್ ಚಳವಳಿಯನ್ನು ನಡೆಸಿದ್ದಾರೆ. ಕೋಟಿ ಕೋಟಿ ದೋಚಿ ಪರಾರಿಯಾದ ತಾಯಿ ಮಗಳನ್ನು ಹುಡುಕಲು ಫ್ಲೆಕ್ಸ್‌ಗಳನ್ನು ಹಾಕುತ್ತಿದ್ದಾರೆ. ನಗರದ ಪ್ರಮುಖ ನಗರಗಳಲ್ಲಿ ಈ ಫ್ಲೆಕ್ಸ್‌ಗಳನ್ನು ಆಳವಡಿಸಲಾಗಿದ್ದು ಆರೋಪಿಗಳ ಪತ್ತೆಗಾಗಿ ಮನವಿ ಮಾಡಲಾಗುತ್ತಿದೆ.

    ಲಿಪ್‌ಸ್ಟಿಕ್‌ ಹಚ್ಚಿದ್ದಕ್ಕಾಗಿ ದಫೇದರ್‌ಗೆ ವರ್ಗಾವಣೆ ಶಿಕ್ಷೆ..!

    ವಿವಿಧ ಸ್ತ್ರೀಶಕ್ತಿ ಸಂಘಗಳು, ಸ್ವ-ಸಹಾಯ ಸಂಘಗಳು, ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ, ಸಂಘದ ಸದಸ್ಯರ ಹೆಸರಲ್ಲಿ, ನಂಬಿಕಸ್ಥರು, ಪರಿಚಯಸ್ಥರ ಹೆಸರಲ್ಲಿ ಮತ್ತು ನಾಮಿನಿಯಾಗಿ ಸಾಲ ಪಡೆದು ಸಾಲ ಮರು ಪಾವತಿಸದೆ ವಂಚಿಸಿ, ರಾತ್ರೋ ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ತಾಯಿ-ಮಗಳ ಈ ಕಿಲಾಡಿ ಜೋಡಿ ಸಾಲದ ಮೊತ್ತ ಮರು ಪಾವತಿಸದ ಹಿನ್ನೆಲೆ ವಿವಿಧ ಸಂಘಗಳು, ಮೈಕ್ರೋ ಫೈನಾನ್ಸ್​ಗಳು ಸಂಘದ ಸಹ ಸದಸ್ಯರು, ಸಾಲಕ್ಕೆ ಮಧ್ಯಸ್ಥಿಕೆ ವಹಿಸಿದ್ದವರ ದುಂಬಾಲು ಬಿದ್ದಿದ್ದಾರೆ. ಇನ್ನು ಈ ಜೋಡಿ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿದ್ದಾರೆ. ಈ ಕುರಿತು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

     

    DAKSHINA KANNADA

    ಮಂಗಳೂರಿನ ಪಡೀಲ್ ಬಳಿ ಅಂಬ್ಯುಲೆನ್ಸ್ ಪಲ್ಟಿ; ಹೃದ್ರೋಗಿ ದಾಸಪ್ಪ ರೈ ಮೃ*ತ್ಯು

    Published

    on

    ಪುತ್ತೂರು: ಪುತ್ತೂರಿನ ಆ್ಯಂಬುಲೆನ್ಸ್ ನಲ್ಲಿ ರೋಗಿಯೊಬ್ಬರನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಮಂಗಳೂರಿನಲ್ಲಿ ಪಲ್ಟಿಯಾಗಿ ಹೃದ್ರೋಗಿ ಕೃಷಿ ದಾಸಪ್ಪ ರೈ ಎಂಬವರು ಸಾವನ್ನಪ್ಪಿದ್ದಾರೆ. ಇಂದು(ಸೆ.25) ಬೆಳಿಗ್ಗೆ ನಸುಕಿನ ಜಾವ ಈ ಘಟನೆ ನಡೆದಿದೆ.

    ಗುಜರಾತ್: ದೇವಸ್ಥಾನದಿಂದ ಹಿಂದಿರುಗುವಾಗ ಟ್ರಕ್​ಗೆ ಕಾರು ಡಿಕ್ಕಿ, 7 ಮಂದಿ ಸಾ*ವು

    ರಾಮಕುಂಜ ಹಳೆನೇರೆಂಕಿ ನಿವಾಸಿ ಕೃಷಿಕ ದಾಸಪ್ಪ ರೈ  ಎಂಬವರು ಸಾವನ್ನಪ್ಪಿದವರು. ಎದೆ ನೋವು ಕಾಣಿಸಿಕೊಂಡ ದಾಸಪ್ಪ ರೈ ಅವರನ್ನು ತಡರಾತ್ರಿ ಪುತ್ತೂರು ಮಹಾವೀರ ಅಸ್ಪತ್ರೆಗೆ ಕರೆದು ಕೊಂಡು ಬಂದಾಗ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ವಠಾರದಲ್ಲಿದ್ದ ಇನ್ನೊಂದು ಆ್ಯಂಬುಲೆನ್ಸ್ ನಲ್ಲಿ – ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದು ಹೋಗುತ್ತಿರುವಾಗ ಮಂಗಳೂರು ಪಡೀಲು ಸಮೀಪ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್ ನಲ್ಲಿದ್ದ ಹೃದ್ರೋಗಿ ದಾಸಪ್ಪ ರೈ ಮೃತಪಟ್ಟಿದ್ದರು. ಜೊತೆಯಲ್ಲಿದ್ದ  ನಳಿನಿ ಎಂಬವರು ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಸಪ್ಪ ಅವರ ಪುತ್ರ ಹರ್ಷಿತ್ ಮತ್ತು ಸಂಬಂಧಿ ಅಲ್ಪಸ್ವಲ್ಪ ಗಾಯಗೊಂಡು ಪಾರಾಗಿದ್ದಾರೆ.

    Continue Reading

    LATEST NEWS

    ಅಮೇರಿಕಾ ಪ್ರವಾಸದಿಂದ ತಾಯ್ನಾಡಿಗೆ ಮರಳಿದ ಪಟ್ಲ ಸತೀಶ್ ಶೆಟ್ಟಿ ಯಕ್ಷಗಾನ ತಂಡ

    Published

    on

    “ಅಮೇರಿಕಾದಲ್ಲಿ ಯಕ್ಷಗಾನ ಕಲೆಗೆ ಸಿಕ್ಕ ಗೌರವ ಅವಿಸ್ಮರಣೀಯ” -ಪಟ್ಲ ಸತೀಶ್ ಶೆಟ್ಟಿ

    ಮಂಗಳೂರು: ಅಮೇರಿಕ ಪ್ರವಾಸ ಕೈಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ತಮ್ಮ ತಂಡದ ಜೊತೆ ಮಂಗಳವಾರ ರಾತ್ರಿ ತಾಯ್ನಾಡಿಗೆ ಮರಳಿದ್ದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಸ್ವಾಗತ ಕೋರಿದರು.

    ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ 9 ಮಂದಿಯ ತಂಡ ಅಮೇರಿಕ ದೇಶದ ಬೇರೆ ಬೇರೆ ತಾಣಗಳಲ್ಲಿ ಯಕ್ಷಗಾನ ಪ್ರದರ್ಶಿಸಿ 75 ದಿನಗಳ ಬಳಿಕ ತಾಯ್ನಾಡಿಗೆ ಮರಳಿದೆ. ಈ ವೇಳೆ ತಮ್ಮ ಅಮೇರಿಕ ಪ್ರವಾಸದ ಕಥನವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡ ಅವರು, “ವಿದೇಶಗಳಲ್ಲಿ ತುಳುನಾಡಿನ ಗಂಡುಮೆಟ್ಟಿನ ಕಲೆಯಾಗಿರುವ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಹೆಮ್ಮೆ ಅನಿಸುತ್ತಿದೆ. ಅಲ್ಲಿನ ಜನರು ಕೂಡ ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿಯ ವಿಚಾರ” ಎಂದರು.

    “ಅಮೇರಿಕಾದ ಎರಡು ನಗರಗಳಲ್ಲಿ ಪಟ್ಲ ಫೌಂಡೇಶನ್ ದಿನವನ್ನಾಗಿ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಇದು ಅವಿಸ್ಮರಣೀಯ ಅನುಭವ. ನಮ್ಮ ಕಲೆಗೆ ಇಂದು ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ. ಪಟ್ಲ ಫೌಂಡೇಷನ್ ಟ್ರಸ್ಟ್ ಅಮೇರಿಕಾ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್ ಮತ್ತಿತರ ಪ್ರಮುಖರು ಅಮೆರಿಕದ 20 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದರು ಅವರಿಗೆ ಧನ್ಯವಾದಗಳು” ಎಂದರು.

    ಪ್ರೊ.ಎಂ.ಎಲ್. ಸಾಮಗ ಮಾತನಾಡಿ, “ಅಮೇರಿಕಾದ ಜನರು ನಮ್ಮ ಯಕ್ಷಗಾನ ತಂಡದ ಮೇಲೆ ತೋರಿಸಿದ ಪ್ರೀತಿ ಮರೆಯಲಾಗದ್ದು. ಪ್ರತೀ ಪ್ರದರ್ಶನಕ್ಕೂ 500 ಜನರಿಗಿಂತ ಕಡಿಮೆ ಜನರು ಸೇರುತ್ತಿರಲಿಲ್ಲ. ನಮ್ಮ ತಂಡದಲ್ಲಿ ಕಲಾವಿದರು ಮಿತಿಯಲ್ಲಿ ಇದ್ದುದರಿಂದ ಅದಕ್ಕೆ ಸೂಕ್ತ ಎನಿಸುವ ಪ್ರಸಂಗ ಆಡಿ ತೋರಿಸಬೇಕಿತ್ತು. ಕೆಲವರು ತಾವು ವೇಷ ಹಾಕುತ್ತೇವೆ ಎಂದು ಮುಂದೆ ಬಂದರು ಮತ್ತೂ ಕೆಲವರು ಭಾಗವತಿಕೆ ಕಲಿಯಲು ಮುಂದೆ ಬಂದರು. ಆನ್ ಲೈನ್ ಕ್ಲಾಸ್ ಬಗ್ಗೆಯೂ ವಿಚಾರಿಸಿದ್ದಾರೆ. ಮುಂದೆ ಆ ಬಗ್ಗೆ ಯೋಚನೆ ಮಾಡುತ್ತೇವೆ“ ಎಂದರು.

    ಪಟ್ಲ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು.

    ಅಮೇರಿಕಾ ನಗರಗಳಲ್ಲಿ “ಪಟ್ಲ ಫೌಂಡೇಶನ್ ಡೇ”!

    ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಪ್ರದರ್ಶಿಸಿದ ಯಕ್ಷಗಾನ ಹಾಗೂ ಪಟ್ಲ ಫೌಂಡೇಷನ್ ಕಾರ್ಯ ಚಟುವಟಿಕೆಯನ್ನು ಮೆಚ್ಚಿ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್‌ಫೀಲ್ಡ್ ನಗರದ ಮೇಯರ್ ಸ್ಟೀವನ್ ವಿ. ಪೋಂಟೊ ಅವರು ಆಗಸ್ಟ್ 18 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ. ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್ ನಗರದ ಮೇಯರ್ ಅವರು ಜುಲೈ 27 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ.

    Continue Reading

    LATEST NEWS

    10 ವರ್ಷ ಕಿರಿಯನ ಜೊತೆಗಿನ 8 ವರ್ಷದ ಸಂಬಂಧಕ್ಕೆ ಬಿಗ್ ಬ್ರೇಕ್; ‘ರಂಗೀಲಾ’ ಬೆಡಗಿಯಿಂದ ಅಭಿಮಾನಿಗಳಿಗೆ ಶಾಕ್

    Published

    on

    ಮೋಗಳೂರು/ಮುಂಬೈ; ಊರ್ಮಿಳಾ ಮಾತೋಂಡ್ಕರ್ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡು ನಂತರ ಟಾಪ್‌ ನಟಿಯಾಗಿ ಮಿಂಚಿದ್ದರು. ರಂಗೀಲಾ, ಸತ್ಯ, ಭೂತ, ಕೌನ್ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ಆಳಿದವರು ಊರ್ಮಿಳಾ. 2016 ರಲ್ಲಿ 10 ವರ್ಷದ ಕಿರಿಯನೊಡನೆ ಮದುವೆಯಾಗಿದ್ದು, ಪತಿ ಮೊಹ್ಸಿನ್ ಅಖ್ತರ್ ಮಿರ್‌ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.


    ಕಪಲ್ ಮ್ಯಾರೇಜ್ ಸ್ಟೋರಿ:
    ಊರ್ಮಿಳಾ ಮಾತೋಂಡ್ಕರ್ ಹಾಗೂ ಪತಿ ಮೋಸಿನ್ ಅಖ್ತರ್ ಮಿರ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು ಬಾಲಿವುಡ್‌ನ ಡಿಸೈನರ್ ಮನೀಶ್ ಮಲ್ಹೋತ್ರಾ ಸೊಸೆಯ ಮದುವೆ ಸಂದರ್ಭ 2014ರಲ್ಲಿ. ಅದೇ ಅವರ ಮೊದಲ ಭೇಟಿಯಾಗಿದ್ದು, ಅದು ಪ್ರೀತಿಗೆ ತಿರುಗಿ ಎರಡು ವರ್ಷಗಳ ನಂತರ, 3 ಮಾರ್ಚ್ 2016 ರಂದು, ತಮ್ಮ ಕುಟುಂಬಗಳು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮುಂಬೈನಲ್ಲಿ ವಿವಾಹವಾಗಿದ್ದರು.


    ಮೊಹ್ಸಿನ್ ಅಖ್ತರ್ ಮಿರ್ ಪರಿಚಯ:
    ಮೊಹ್ಸಿನ್ ಅಖ್ತರ್ ಮಿರ್, ಕಾಶ್ಮೀರಿ ಮಾಡೆಲ್. 21 ನೇ ವಯಸ್ಸಿನಲ್ಲಿ ನಟನಾಗಲು ಮುಂಬೈಗೆ ಬಂದರು. 2007 ರಲ್ಲಿ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಟ್ರೋಫಿ ಗೆದ್ದಿದ್ದರು. ಇಟ್ಸ್ ಎ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. 2009 ರಲ್ಲಿ, ಅವರು ಮ್ಯಾನ್ಸ್‌ವರ್ಲ್ಡ್ ಮತ್ತು ನಂತರ ಲಕ್ ಬೈ ಚಾನ್ಸ್, ಮುಂಬೈ ಮಸ್ತ್ ಕ್ಯಾಲೆಂಡರ್ ಮತ್ತು ಬಿ.ಎ. ಪ್ರಾಜೆಕ್ಟ್ ಗಳಲ್ಲೂ ಕೆಲಸ ಮಾಡಿದ್ದಾರೆ.


    ವಿಚ್ಚೇದನಕ್ಕೆ ಕಾರಣ:
    ಊರ್ಮಿಳಾ ಮಾತೋಂಡ್ಕರ್ ವಿಚ್ಚೇದನದ ಬಗ್ಗೆ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ದಾಂಪತ್ಯ ಉಳಿಸಿಕೊಳ್ಳಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಕಳೆದ 8 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದಕ್ಕೆ ಊರ್ಮಿಳಾ ಮಾತೋಂಡ್ಕರ್ ಹಾಗೂ ಮೋಸಿನ್ ನಿರ್ಧರಿಸಿದ ಘಟನೆ ವರದಿಯಾಗಿದೆ. ಆದರೆ, ಈ ನಟಿ ಇನ್ನೂ ಈ ವಿಷಯದ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ.

    Continue Reading

    LATEST NEWS

    Trending