Connect with us

    LATEST NEWS

    ಗೂಗಲ್ ಟ್ರೆಂಡ್ಸ್ ನಲ್ಲಿ ಅತಿ ಹೆಚ್ಚು ಹುಡುಕಾಟ; ಟಾಪ್ 5 ಸ್ಥಾನದಲ್ಲಿರುವ ಐದು ಬ್ಯಾಟರ್‌ಗಳ ಹೆಸರು ಬಹಿರಂಗ

    Published

    on

    ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ಫೇಮಸ್ ಜೊತೆಗೆ ಶ್ರೀಮಂತ ಕ್ರಿಕೆಟ್ ಲೀಗ್. ವಿಶ್ವದ ಮೂಲೆ ಮೂಲೆಗಳಲ್ಲಿ ಐಪಿಎಲ್ ವೀಕ್ಷಿಸುವ ಅಪಾರ ಅಭಿಮಾನಿಗಳಿದ್ದಾರೆ.

    ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಆಟಗಾಗರರು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನಿಗಾಗಿ ಗೂಗಲ್‌ನಲ್ಲಿ ಹುಡುಕಾಡುತ್ತಾರೆ.

    ಐಪಿಎಲ್ 2024 ಆರಂಭವಾಗುವ ಜೊತೆಗೆ, ಗೂಗಲ್ ಟ್ರೆಂಡ್ಸ್‌ನಲ್ಲಿ ಜಾಗತಿಕವಾಗಿ ಹೆಚ್ಚು ಹುಡುಕಲ್ಪಟ್ಟ ಅಗ್ರ ಐದು ಬ್ಯಾಟರ್‌ಗಳ ಹೆಸರನ್ನು ಬಹಿರಂಗಪಡಿಸಿದೆ. ಜನವರಿ ಬಳಿಕ ಕ್ರಿಕೆಟ್ ಆಡದೇ ಇದ್ದರೂ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿರೋದು ಅಚ್ಚರಿಯ ಸಂಗತಿ.

    ಇವರೇ ಆ ಐವರು :

    1. ಕೊಹ್ಲಿ ಅಗ್ರಸ್ಥಾನ :

    ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ, ಜನವರಿ ಬಳಿಕ ಕ್ರಿಕೆಟ್‌ನಿಂದ ದೂರವಿದ್ದರೂ ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ. ಎರಡು ತಿಂಗಳಿನಿಂದ ಮೈದಾನಕ್ಕೆ ಇಳಿಯದೇ ಇದ್ದರೂ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ. ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಬಲವಾಗಿದ್ದಾರೆ. ಈ ಸೀಸನ್‌ನಲ್ಲಿ ಕೂಡ ಅವರು ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
    ಮೊದಲ ಪಂದ್ಯದಲ್ಲಿ ದೊಡ್ಡ ರನ್ ಗಳಿಸಲು ವಿಫಲವಾದರೂ, ಟಿ20 ಕ್ರಿಕೆಟ್‌ನಲ್ಲಿ 12,000 ರನ್ ಪೂರೈಸಿದ ಸಾಧನೆ ಮಾಡಿದರು, ಸಿಎಸ್‌ಕೆ ವಿರುದ್ಧ ಐಪಿಎಲ್‌ನಲ್ಲಿ 1000 ರನ್ ಗಳಿಸಿದ ಸಾಧನೆ ಮಾಡಿದರು.

    2. ರೋಹಿತ್ ಶರ್ಮಾಗೆ ಎರಡನೇ ಸ್ಥಾನ :

    ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ ಯಶಸ್ವಿ ನಾಯಕನಾಗಿ ರೋಹಿತ್ ಶರ್ಮಾ ಗುರುತಿಸಿಕೊಂಡಿದ್ದರು. ಈ ಬಾರಿ ಐಪಿಎಲ್‌ನಲ್ಲಿ ಅವರು ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವ ವಹಿಸಿದ್ದಾರೆ. ಇದರಿಂದ ರೋಹಿತ್ ಅಭಿಮಾನಿಗಳು ಅಭಿಮಾನಿಗಳು ಆಕ್ರೋಶಗೊಂಡಿದ್ದರು.

    3. ಶುಭಮನ್ ಗಿಲ್

    ಭಾರತ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಗಿಲ್ ಪಂದ್ಯದಿಂದ ಪಂದ್ಯಕ್ಕೆ ತಮ್ಮ ಪ್ರದರ್ಶನವನ್ನು ಉತ್ತಮಗೊಳಿಸಿದ್ದಾರೆ, ಅವರು ಈಗಾಗಲೇ ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳ ಗಮನವನ್ನು ಸೆಳೆದಿದೆ, ಈ ವಾರ ಅವರನ್ನು ಹೆಚ್ಚು ಹುಡುಕಲ್ಪಟ್ಟ ಬ್ಯಾಟರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಪ್ರಸ್ತುತ ಗಿಲ್ ಗುಜರಾತ್ ಟೈಟನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

    4. ಶ್ರೇಯಸ್ ಅಯ್ಯರ್

    ಆಕ್ರಮಣಕಾರಿ ಬ್ಯಾಟಿಂಗ್ ನಿಂದಲೇ ಗಮನ ಸೆಳೆದಿರುವ ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲೂ ಉತ್ತಮ ಆಟಗಾರ ಎಂದೆನಿಸಿಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್‌ನ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಅಯ್ಯರ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಅವರ ತಂಡದ ಪ್ರದರ್ಶನಗಳಲ್ಲಿ ಪ್ರಮುಖವಾಗಿದೆ.

    5. ಕೆಎಲ್ ರಾಹುಲ್

     

    ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಕೂಡಾ ಈ ಪಟ್ಟಿಯಲ್ಲಿದ್ದಾರೆ. ಅವರು 5 ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚಿನ ಐಪಿಎಲ್ ಸೀಸನ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದಾರೆ. ತಂಡಕ್ಕೆ ಅವರದೇ ಮಹತ್ವದ ಕೊಡುಗೆ ನೀಡಿದ್ದಾರೆ.

    Baindooru

    ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!

    Published

    on

    ಫ್ರಿಜ್ಜಿನ್ನಲ್ಲಿರಿಸಿದ ಅಹಾರಗಳು ತಾಜಾತನವನ್ನು ಉಳಿಸಿಕೊಳ್ಳಲು ಕಾರಣವೆಂದರೆ ಶೀತಲೀಕರಣ. ಆದರೆ, ಈ ಪರಿ ಎಲ್ಲಾ ಬಗೆಯ ಅಹಾರಗಳಿಗೆ ಅನ್ವಯಿಸಲಾರದು. ಕೆಲವು ಫಲಗಳಂತೂ ಫ್ರಿಜ್ಜಿನಲ್ಲಿಟ್ಟರೇ ಸಾಕು, ಚೆನ್ನಾಗಿರುವ ಬದಲು ಹಾಳಾಗಲು ತೊಡಗುತ್ತವೆ. ಇಂದಿನ ಲೇಖನದಲ್ಲಿ ಈ ಗುಣವಿರುವ ಕೆಲವು ಫಲಗಳ ಬಗ್ಗೆ ವಿವರಿಸಲಾಗಿದೆ. ಇವನ್ನು ಫ್ರಿಜ್ಜಿನಲ್ಲಿಡುವ ಬದಲು ತಣ್ಣನೆಯ ಸ್ಥಳದಲ್ಲಿ ಗಾಳಿಯಾಡದಂತೆ ಶೇಖರಿಸಬೇಕು. ಈ ಫಲಗಳು ಯಾವುವು ಎಂಬುದನ್ನು ನೋಡೋಣ.

    ಬಾಳೆಹಣ್ಣು

    ಬಾಳೆಹಣ್ಣುಗಳನ್ನು ಎಂದಿಗೂ ಫ್ರಿಜ್ಜಿನಲ್ಲಿ ಸಂಗ್ರಹಿಸಬಾರದು. ಏಕೆಂದರೆ ಬಾಳೆಹಣ್ಣಿನ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಾದರೆ, ಇದರ ಸಿಪ್ಪೆ ಶೀಘ್ರವೇ ಕಪ್ಪಾಗುತ್ತದೆ ಹಾಗೂ ಸಿಪ್ಪೆಯ ಅಡಿಯಲ್ಲಿನ ತಿರುಳು ಕೂಡಾ ಕೊಳೆಯಲು ತೊಡಗುತ್ತದೆ.

     

    ಕಲ್ಲಂಗಡಿ

    ಬೇಸಿಗೆಯಲ್ಲಿ ಜನರು ಅತಿ ಹೆಚ್ಚಾಗಿ ಇಷ್ಟಪಡುವ ಫಲವಾದ ಕಲ್ಲಂಗಡಿಯನ್ನೂ ಫ್ರಿಜ್ಜಿನಲ್ಲಿ ಇರಿಸಬಾರದು. ಆದರೆ, ಸಾಮಾನ್ಯವಾಗಿ ಕಲ್ಲಗಂಡಿ ದೊಡ್ಡ ಗಾತ್ರದಲ್ಲಿದ್ದು ಇದನ್ನು ಕತ್ತರಿಸಿದಾಗ ದೊರಕುವ ಆಗಾಧ ಪ್ರಮಾಣವನ್ನು ಫ್ರಿಜ್ಜಿನಲ್ಲಿ ಸಂಗ್ರಹಿಸದೇ ಬೇರೆ ಮಾರ್ಗವಿಲ್ಲ. ಆದರೆ, ನಿಸರ್ಗಕ್ಕೆ ನಿಮ್ಮ ಈ ಅಗತ್ಯತೆಯ ಅರಿವಿಲ್ಲ. ಸೇಬನ್ನು ಕತ್ತರಿಸಿ ಕೊಂಚ ಹೊತ್ತು ಇರಿಸಿದಾಗ ಗಾಳಿಗೆ ತೆರೆದ ಭಾಗ ಕಪ್ಪಗಾಗುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿಯೂ ಹೀಗೇ, ಗಾಳಿಗೆ ಒಡ್ಡಿದ ಭಾಗದ ಆಂಟಿ ಆಕ್ಸಿಡೆಂಟುಗಳು ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶೀಘ್ರವೇ ಹುಳಿಯಾಗುತ್ತದೆ.

     

    ಸೇಬು

    ಸೇಬು ಹಣ್ಣುಗಳು 90% ತೇವಾಂಶವನ್ನು ಹೊಂದಿರುವ ಪರಿಸರದಲ್ಲಿ ಹೆಚ್ಚು ಹೊತ್ತು ಕೆಡದೇ ತಾಜಾತನವನ್ನುಉಳಿಸಿಕೊಳ್ಳುತ್ತವೆ. ಆದರೆ ನಮ್ಮ ರೆಫ್ರಿಜರೇಟರ್ ನೈಸರ್ಗಿಕ ಡಿಹೈಡ್ರೇಟರ್ ಅಥವಾ ತೇವಾಂಶ ಇರದ ಸ್ಥಳವಾಗಿದೆ. ಹಾಗಾಗಿ, ಫ್ರಿಜ್ಜಿನಲ್ಲಿಟ್ಟ ಸೇಬು ತೇವಾಂಶದ ಕೊರತೆಗೆ ಒಡ್ಡಿಕೊಳ್ಳುತ್ತವೆ. ಈ ಸ್ಥಿತಿಯಲ್ಲಿ ಸೇಬಿನಲ್ಲಿರುವ ಇಥೈಲೀನ್ ಹಾಗೂ ಇತರ ಕಿಣ್ವಗಳು ತಿರುಳನ್ನು ಅತಿ ಶೀಘ್ರವಾಗಿ ಹಣ್ಣಾಗಿಸುತ್ತವೆ ಹಾಗೂ ಕೊಳೆಯಲು ಪ್ರಾರಂಭಿಸುತ್ತದೆ.

    ಮಾವಿನ ಹಣ್ಣು

    ಮಾವಿನ ಹಣ್ಣನ್ನು ಫ್ರಿಜ್ಜಿನಲ್ಲಿ ಇರಿಸಿದರೆ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳ ಪ್ರಮಾಣ ತಗ್ಗತೊಡಗುತ್ತದೆ. ಹಾಗಾಗಿ ಮಾವಿನ ಹಣ್ಣಿನ ಪೌಷ್ಟಿಕ ಮೌಲ್ಯಗಳು ಕಡಿಮೆಯಾಗುತ್ತವೆ. ಈ ಹಣ್ಣುಗಳನ್ನು ಫ್ರಿಜ್ಜಿನಲ್ಲಿರಿಸಿದರೆ ಮಾವಿನ ಹಣ್ಣು ವಿಷಕಾರಿ ಯಾಗ ಬಹುದು. ಬದಲಿಗೆ ಇನ್ನೂ ಕಾಯಿಯಾಗಿರುವ ಮಾವು ಗಳನ್ನು ತಂದು ಬೆಚ್ಚಗಿರುವ ಮತ್ತು ನೆರಳಿನ ಸ್ಥಳದಲ್ಲಿ ಇರಿಸಿ ಒಂದೆರಡು ದಿನಗಳ ಬಳಿಕ ಸ್ವಾಭಾವಿಕವಾಗಿ ಹಣ್ಣಾಗುವಂತೆ ಮಾಡಿ ಸೇವಿಸಿ​.

    ಲಿಚ್ಚಿ

    ಬೇಸಿಗೆಯಲ್ಲಿ ಸೇವಿಸಲು ರುಚಿಕರವಾದ ಚಿಕ್ಕ ಗೋಲಿಗ ಳಂತಿರುವ ಲಿಚ್ಚಿ ಹಣ್ಣುಗಳನ್ನು ಎಂದಿಗೂ ಫ್ರಿಜ್ಜಿನಲ್ಲಿ ಇರಿಸ ಬಾರದು. ಏಕೆಂದರೆ, ತಂಪಾದ ತಾಪಮಾನದಲ್ಲಿ ಇದರ ತಿರುಳು ಕೊಳೆಯಲು ಆರಂಭಿಸುತ್ತದೆ. ಆದರೆ, ಸಿಪ್ಪೆ ಮಾತ್ರ ಹಾಳಾಗದೇ ಹಾಗೇ ಉಳಿದಿರುತ್ತದೆ. ಫ್ರಿಜ್ಜಿ ನಿಂದ ತೆಗೆದು ನೋಡಿದ ಲಿಚ್ಚಿಯ ಸಿಪ್ಪೆ ಚೆನ್ನಾಗಿರು ವಂತೆಯೇ ಕಂಡುಬಂದರೂ ಒಳಗಿನ ತಿರುಳು ಕೊಳೆತಿರುತ್ತದೆ.

    Continue Reading

    Baindooru

    ಹೊಸ ಟ್ರೆಂಡ್‌ನ ಪ್ಯಾಂಟ್ ಧರಿಸಿದ ಯುವಕ; ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

    Published

    on

    ಬೆಳ್ತಂಗಡಿ: ಯುವಕನೊಬ್ಬತನ್ನ ವಿನೂತನ ಶೈಲಿಯ ಜೀನ್ಸ್ ಪ್ಯಾಂಟ್ ಧರಿಸಿ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಗೆ ಬಂದಾಗ ಮೂವರು ಸೇರಿ ಆತನನ್ನು ತಡೆದು ಎರಡು ಕೈಗಳನ್ನು ಲಾಕ್ ಮಾಡಿ ಪ್ಯಾಂಟ್ ಗೆ ಗೋಣಿಚೀಲದ ಸೂಜಿಯಿಂದ ಹೊಲಿದು ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರಿಂದ ನೋಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನ.22ರ ಶುಕ್ರವಾರ ನಡೆದಿದೆ.

    ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ ಶಾಹಿಲ್(21) ಆತ್ಮಹತ್ಯೆಗೆ ಯತ್ನಿಸಿದ ಯುವಕ.

    ಈತನ ವಿಡಿಯೋ ವೈರಲ್ ಆಗುತ್ತಲೇ, ತನ್ನ ಸ್ನೇಹಿತರು ಯುವಕನಿಗೆ ವಿಡಿಯೋ ಕಳುಹಿಸಿದ್ದಾರೆ. ಇದರಿಂದ ಮನನೊಂದ ಸಂಜೆ ವೇಳೆಗೆ ಆತ್ಮಹತ್ಯೆಗೆ ಯತ್ನಿಸಿ ಜೀವಣ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ ಎಂದು ತಿಳಿದು ಬಂದಿದೆ.

    ನವೀನ ಮಾದರಿಯ ಜೀನ್ಸ್ ಪ್ಯಾಂಟ್ ಹರಿದ ರೀತಿಯಲ್ಲಿತ್ತು. ಅದನ್ನು ಧರಿಸಿ ನ.21 ರಂದು ಮಧ್ಯಾಹ್ನ ಬೆಳ್ತಂಗಡಿ ನಗರದಲ್ಲಿರುವ ಸಂತೆಕಟ್ಟೆ ಮಾರುಕಟ್ಟೆಗೆ ಬಂದಿದ್ದ. ಮಾರುಕಟ್ಟೆಯಲ್ಲಿದ್ದ ಪಡ್ಡೆ ಹುಡುಗರ ತಂಡವೊಂದು ಆತನನ್ನು ಸಾರ್ವಜನಿಕವಾಗಿ ಎರಡು ಕೈಗಳನ್ನು ಹಿಂದಕ್ಕೆ ಹಿಡಿದು ಬಲವಂತದಿಂದ ಹಿಡಿದಿಟ್ಟು ಆತನ ಪ್ಯಾಂಟನ್ನು ಗೋಣಿ ಹೊಲಿಯುವ ಸೂಜಿಯಿಂದ ಹೊಲಿದು ಜತೆಗೆ ಮೊಬೈಲ್‌ನಲ್ಲಿ ವೀಡಿಯೊ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಹರಿಯಬಿಟ್ಟಿದ್ದರು.

    ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬಿರ್, ಅನೀಶ್ ಪಣಕಜೆ, ಲಾಯಿಲ ಗ್ರಾಮದ ಆದರ್ಶ ನಗರದ ನಿವಾಸಿ ಸಲೀಂ ಎಂಬವರು ಸೇರಿ ಈ ದುಷ್ಕ್ರತ್ಯ ನಡೆಸಿದ್ದಾರೆ ಎನ್ನಲಾಗಿದೆ.

    ವಿಡಿಯೋ ಮಾಡಿ ಟ್ರೋಲ್ ಮಾಡಿದರಿಂದ ಮಾನಸಿಕವಾಗಿ ನೊಂದ ಶಾಹಿಲ್ ನ.21 ರಂದು ಸಂಜೆ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದು, ತಕ್ಷಣ ಮನೆಯವರು ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಘಟಣೆ ಬಗ್ಗೆ ಸಾರ್ವಜನಿಕರು ಈ ಮೂವರನ್ನು ಪುಂಡರ ವಿರುದ್ಧ ಕಠಿನ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

    Continue Reading

    Baindooru

    ನಿಜ್ಜರ್ ಹತ್ಯೆಯಲ್ಲಿ ಮೋದಿ-ಅಜಿತ್ ದೋವಲ್ ಕೈವಾಡ; ವರದಿ ನಿರಾಕರಿಸಿದ ಕೆನಡಾ ಸರ್ಕಾರ

    Published

    on

    ಮಂಗಳೂರು/ ನವದೆಹಲಿ :  ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹ*ತ್ಯೆಯಲ್ಲಿ ಪ್ರಧಾನಿ ಮೋದಿ, ರಾಷ್ಟ್ರೀಯ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಕೈವಾಡ ಇದೆ ಎಂಬ ವರದಿಯ ಬಗ್ಗೆ ತೀವ್ರ ಆಕ್ಷೇಪ ಬಂದ ಬೆನ್ನಲ್ಲೇ ಕೆನಡಾ ಈ ಬಗ್ಗೆ ಸ್ಪಷ್ಟನೆ ನೀಡಿದೆ.  ಈ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.

    ನಿಜ್ಜರ್ ಹ*ತ್ಯೆಯಲ್ಲಿ ಪ್ರಧಾನಿ ಮೋದಿ, ರಾಷ್ಟ್ರೀಯ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಕೆನಡಾದೊಳಗೆ ಯಾವುದೇ ಕ್ರಿ*ಮಿನಲ್ ಚಟುವಟಿಕೆಯಲ್ಲಿ ಶಾಮೀಲಾಗಿದ್ದಾರೆ ಎಂಬುದಕ್ಕೆ ಕೆನಡಾ ಸರ್ಕಾರದ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟ ಪಡಿಸಿದೆ.

    ಕೆನಡಾ ಸರ್ಕಾರ ಈ ಹೇಳಿಕೆ ನೀಡಿಲ್ಲ : 

    ಕೆನಡಾ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಿಜ್ಜರ್ ಹ*ತ್ಯೆಗೆ ಭಾರತದ ನಾಯಕರೇ ಸಂಚು ರೂಪಿಸಿದ್ದರು ಎಂಬುದಾಗಿ  ವರದಿಯಲ್ಲಿ ಆರೋಪ ಮಾಡಲಾಗಿತ್ತು. ಇದೀಗ ಎಚ್ಚೆತ್ತ ಕೆನಡಾ ಸರ್ಕಾರ  ಪ್ರತಿಕ್ರಿಯೆ ನೀಡಿದೆ.  ಮಾಧ್ಯಮಗಳ ಈ ವರದಿ ಊಹಾಪೋಹವಾಗಿದ್ದು, ತಪ್ಪಾದ ಆಧಾರದ ಮೇಲೆ ಬರೆಯಲಾಗಿದೆ. ಕೆನಡಾ ಸರ್ಕಾರ ಈ ಹೇಳಿಕೆ ನೀಡಿಲ್ಲ ಎಂದು ಹೇಳಿದೆ.
    ಈ ವರದಿ ಕುರಿತು ಪ್ರಿವಿ ಕೌನ್ಸಿಲ್‌ನ ಡೆಪ್ಯುಟಿ ಕ್ಲರ್ಕ್ ಮತ್ತು ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಜಿ. ಡ್ರೂಯಿನ್ ಹೇಳಿಕೆ ನೀಡಿದ್ದಾರೆ.
    ಇದನ್ನೂ ಓದಿ : ಸಜ್ಜಾಗುತ್ತಿದೆ OPEN AI; ಹಾಗಾದ್ರೆ ಬ್ರೌಸರ್, ಗೂಗಲ್ ಕ್ರೋಮ್ ಕಥೆ ಏನಾಗ್ಬೋದು ?
    ಕಳೆದ ವರ್ಷ ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ನಡೆದಿತ್ತು. ಈ  ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಪ್ರಧಾನಿ ಮೋದಿ ಮತ್ತು ಎನ್‌ಎಸ್‌ಎ ದೋವಲ್ ಲಿಂಕ್ ಮಾಡುವ ಲೇಖನವನ್ನು ಕೆನಡಾದ ಪ್ರತಿಷ್ಠಿತ ಪತ್ರಿಕೆ ದಿ ಗ್ಲೋಬ್ ಅಂಡ್ ಮೇಲ್ ಪ್ರಕಟಿಸಿತ್ತು. ಪ್ರಧಾನಿ ಮೋದಿಯವರಿಗೆ ನಿಜ್ಜರ್ ಹತ್ಯೆಯ ಬಗ್ಗೆ ಗೊತ್ತಿತ್ತು ಎಂದು ಕೆನಡಾದ ಭದ್ರತಾ ಏಜೆನ್ಸಿಗಳು ನಂಬುತ್ತವೆ ಎಂಬುದಾಗಿ ಹೆಸರಿಸದ ಭದ್ರತಾ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಆದರೆ ಭಾರತ ಸರ್ಕಾರ ಈ ಆರೋಪವನ್ನು ನಿರಾಕರಿಸಿತ್ತು.

    Continue Reading

    LATEST NEWS

    Trending