Connect with us

FILM

ಗಲ್ಲಾಪೆಟ್ಟಿಗೆ ಗಳಿಕೆ ಮಾತ್ರವಲ್ಲ ಗೂಗಲ್ ​ಸರ್ಚ್ ನಲ್ಲೂ ಶಾರುಖ್ ನಂ.1

Published

on

ಮುಂಬೈ : 2023ರ ಗೂಗಲ್​ ಸರ್ಚ್​ನಲ್ಲಿ ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾಗೆ ನಂಬರ್​ 1 ಸ್ಥಾನ ಸಿಕ್ಕಿದೆ. 2023ರಲ್ಲಿ ಸೂಪರ್​ ಹಿಟ್​ ಆದ ಮತ್ತೊಂದು ಸಿನಿಮಾ ‘ಗದರ್​ 2’ ಎರಡನೇ ಸ್ಥಾನ ಪಡೆದುಕೊಂಡಿದೆ.
ಈ ವರ್ಷ ಶಾರುಖ್ ನಟಿಸಿದ ಎರಡು ಸಿನಿಮಾಗಳು ಬ್ಲಾಕ್​ ಬಸ್ಟರ್​ ಹಿಟ್ ಆಗಿದ್ದು, ‘ಜವಾನ್​’, ‘ಪಠಾಣ್​’ ಸಿನಿಮಾಗಳು ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿವೆ.


ಗದರ್​ 2’ ಎರಡನೇ ಸ್ಥಾನ , ‘ಆಪನ್​ಹೈಮರ್​’ ಸಿನಿಮಾಗೆ 3ನೇ ಸ್ಥಾನ, ಪ್ರಭಾಸ್​ ನಟನೆಯ ‘ಆದಿಪುರುಷ್​’ ಸಿನಿಮಾ 4ನೇ ಸ್ಥಾನ, 5ನೇ ಸ್ಥಾನದಲ್ಲಿ ‘ಪಠಾಣ್​’, 6ನೇ ಸ್ಥಾನದಲ್ಲಿ ‘ದಿ ಕೇರಳ ಸ್ಟೋರಿ’, 7ನೇ ಸ್ಥಾನದಲ್ಲಿ ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾ ಇದೆ.


ಗಲ್ಲಾಪೆಟ್ಟಿಗೆ ಗಳಿಕೆ ಮಾತ್ರವಲ್ಲದೇ ಗೂಗಲ್​ ಹುಡುಕಾಟದಲ್ಲೂ ಶಾರುಖ್​ ಖಾನ್​ ನಂಬರ್​ ಒನ್​ ಸ್ಥಾನ ಪಡೆದುಕೊಂಡಿರುವುದು ಬಾದ್ ಷಾ ಅಭಿಮಾನಿಗಳಲ್ಲಿ ಸಂತಸ ಹಿಮ್ಮಡಿ ಮಾಡಿದೆ.

FILM

ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್‌ಗೆ ಏನಾಗಿದೆ? ಎಂದು ಹೇಳಿದ್ಯಾಕೆ?

Published

on

ಮುಂಬೈ/ಮಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಸಿನೆಮಾ ಲೋಕದಲ್ಲಿ ತಮ್ಮದೇ ಆದ ಸ್ಟಾಂಡ್‌ ಕ್ರಿಯೇಟ್ ಮಾಡಿದ್ದಾರೆ. ಕೇವಲ ತಮಿಳು ಭಾಷೆ ಅಲ್ಲದೇ ಎಲ್ಲಾ ಭಾಷೆಗಳಲ್ಲಿಯೂ ರಜನಿಗೆ ಫ್ಯಾನ್ಸ್ ಇದ್ದಾರೆ. ಇನ್ನು ಅವರ ಚಾರ್ಮ್ ಅಬ್ಬಾ…! ವಯಸ್ಸಲ್ಲಿ 73 ಆದರೂ ಚಿರ ಯುವಕನಂತೆ ಕಾಣಿಸುವ ಎನರ್ಜಿ ಇವರದು. ಇನ್ನು ಇವರ ಸಿನೆಮಾ ರಿಲೀಸ್ ಆದ್ರೆ ಸಾಕು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತೆ. ಅದಕ್ಕೆ ಇತ್ತೀಚೆಗೆ ರಿಲೀಸ್ ಆದ ಜೈಲರ್ ಸಿನೆಮಾವೇ ಸಾಕ್ಷಿ. ಇದೀಗ ರಜನಿ ಹಾಗೂ ಐಶ್ವರ್ಯ ರೈ ಗೆ ಸಂಬಂಧಪಟ್ಟ ಹಳೆ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

rajani-aishwarya

14 ವರ್ಷಗಳ ಹಿಂದೆಯೇ ಕೆಲವರು ರಜನಿಕಾಂತ್ ಅವರನ್ನು ಹೀರೋ ಅಲ್ಲ ಎಂಬಂತೆ ವರ್ತಿಸಿದ್ದರಂತೆ. ಹೀಗಂತ ಖುದ್ದು ರಜನಿ ಅವರು ರೋಬೋ ಸಿನೆಮಾ ಪ್ರೆಸ್‌ಮೀಟ್‌ ನಲ್ಲಿ ಇಂಟ್ರಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದರು. ಇದೀಗ ಈ ವೀಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ಐಶ್ವರ್ಯ ರೈ ಬಚ್ಚನ್‌ಗೆ, ಸೊಸೆಯ ‘ವಾಟ್‌ ದಿ ಹೆಲ್‌ ನವ್ಯಾ’ದಲ್ಲಿ ಡಿಮ್ಯಾಂಡ್‌…!

ಪ್ರೆಸ್‌ಮೀಟ್‌ನಲ್ಲಿ ಮಾತು ಆರಂಭಿಸಿದ ರಜನಿ ‘ನನ್ನ ಜೊತೆ ಹೀರೋಯಿನ್‌ ಆಗಿ ನಟಿಸಿರುವುದಕ್ಕೆ ಐಶ್ವರ್ಯಾಗೆ ಧನ್ಯವಾದಗಳು. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿರುವ ನನ್ನ ಸಹೋದರನ ಮನೆಗೆ ಹೋಗಿದ್ದೆ. ಪಕ್ಕದ ಮನೆ ರಾಜಸ್ಥಾನ ಕುಟುಂಬದವರು ನನ್ನನ್ನು ನೋಡಲು ಬಂದರು. ಅದರಲ್ಲಿ ನಂದುಲಾಲ್ ಎಂಬವರು ನನ್ನನ್ನು ಮಾತನಾಡಿಸಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಸರ್ ನಿಮ್ಮ ತಲೆ ಕೂದಲಿಗೆ ಏನಾಗಿದೆ ಎಂದು ಕೇಳಿದರು. ಬಿಡಿ ಎಲ್ಲಾ ಉದುರಿ ಹೋಗಿದೆ ಎಂದು ಹೇಳಿದೆ. ನಿಮ್ಮ ನಿವೃತ್ತಿ ಜೀವನ ಹೇಗಿದೆ. ಲೈಫ್ ಎಂಜಾಯ್ ಮಾಡ್ತಿದ್ದೀರಾ ಎಂದು ಕೇಳಿದರು. ಇಲ್ಲಾ ನಾನೊಂದು ಸಿನೆಮಾ ಮಾಡ್ತಾ ಇದ್ದೇನೆ. ಐಶ್ವರ್ಯ ರೈ ಹೀರೋಯಿನ್ ಅಂದೆ. ‘ಹೀರೋ ಯಾರು ಸರ್’ ಎಂದು ಮರು ಪ್ರಶ್ನಿಸಿದರು.  ಅವರ ಜೊತೆ ಇದ್ದವರು ಡ್ಯಾಡಿ ಇವರೇ ಹೀರೋ ಎಂದು ಮೆಲುಧ್ವನಿಯಲ್ಲಿ ಹೇಳ್ತಾರೆ. ನಂದುಲಾಲ್  ಮೌನವಾಗಿ ನನ್ನನ್ನೇ ದಿಟ್ಟಿಸಿ ನೋಡಿ ಏನೂ ಮಾತನಾಡದೆ ಹೊರಟು ಬಿಟ್ಟರು. ಅಷ್ಟರಾಗಲೇ ಮನೆ ಒಳಗಡೆಯಿಂದು ಒಂದು ಧ್ವನಿ ಬರುತ್ತೆ. ಐಶ್ವರ್ಯ ರೈ ಗೆ ಏನಾಗಿದೆ..? ಅಲ್ಲಾ ಅಭಿಷೇಕ್ ಹೇಗೆ ಒಪ್ಪಿದ್ರು..? ಅಮಿತಾಬಚನ್‌ಗಾದ್ರು ಎನಾಗಿದೆ.. ಐಶ್ವರ್ಯಾಳನ್ನು ಇವರ ಜೊತೆ ಹೀರೋಯಿನ್ ಮಾಡಲು ಒಪ್ಪಿದ್ದಾರಲ್ಲ  ಎಂಬ ಮಾತು ಕೇಳಿ ಬಂತು ಎಂದು ರಜನಿಕಾಂತ್ ಸಿನೆಮಾ ಪ್ರೆಸ್ ಮೀಟ್‌ನಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದರು.

Continue Reading

FILM

ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ಕರೀನಾ ಕಪೂರ್; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ, ಏನಂದ್ರು?

Published

on

ಮಂಗಳೂರು / ಬೆಂಗಳೂರು : ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ (Unicef India’s National Ambassador) ನೇಮಕಗೊಂಡಿದ್ದಾರೆ. ಈ ಬಗ್ಗೆ ಕರೀನಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಭಾವನಾತ್ಮಕ ಪೋಸ್ಟ್ :

ಕರೀನಾ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ, ನನಗೆ ಇದು ಭಾವನಾತ್ಮಕ ದಿನ. ನಾನು ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿರುವುದಕ್ಕೆ ಗೌರವವಿದೆ. ಕಳೆದ 10 ವರ್ಷಗಳಲ್ಲಿ ಯುನಿಸೆಫ್ ಇಂಡಿಯಾ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಾನು ಆ ಕೆಲಸದ ಬಗ್ಗೆ ಹೆಮ್ಮೆಪಡುತ್ತೇನೆ. ಮಕ್ಕಳ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಮತ್ತು ಎಲ್ಲಾ ಮಕ್ಕಳಿಗೆ ಸಮಾನ ಭವಿಷ್ಯಕ್ಕಾಗಿ ಧ್ವನಿಯಾಗಲು ಹೆಮ್ಮೆಯಾಗುತ್ತಿದೆ. ದೇಶದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ದಣಿವರಿಯಿಲ್ಲದೆ ಶ್ರಮಿಸುತ್ತಿರುವ ಇಡೀ ತಂಡಕ್ಕೆ ವಿಶೇಷ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಟಾಕ್ಸಿಕ್ ನಿಂದ ಔಟ್ :

ಕರೀನಾ ಕಪೂರ್ ಇತ್ತೀಚೆಗೆ ‘ಕ್ರೂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮಹಿಳಾ ಪ್ರಧಾನ ಚಿತ್ರವಾದ ಈ ಚಿತ್ರ ಭಾರೀ ಯಶಸ್ಸನ್ನು ಬಾಚಿಕೊಂಡಿತ್ತು. ಸದ್ಯ ರೋಹಿತ್ ಶೆಟ್ಟಿ ಅವರ ‘ಸಿಂಗಮ್ ಅಗೇನ್’ ಚಿತ್ರದಲ್ಲಿ ಅವರು ಬಿಝಿಯಾಗಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ಕರೀನಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತಾದರೂ, ಅವರು ಟಾಕ್ಸಿಕ್‌ ಸಿನಿಮಾದಿಂದ ಔಟ್‌ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಜೊತೆಯಾಗಿ ಕಾಣಿಸಿಕೊಂಡ ಸೂಪರ್ ಸ್ಟಾರ್ – ಬಿಗ್ ಬಿ; ಸ್ಟೈಲಿಶ್ ಫೋಟೋ ವೈರಲ್ 

ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಸಹೋದರಿಯಾಗಿ ಕರೀನಾ ನಟಿಸಬೇಕಿತ್ತು. ಅದಕ್ಕಾಗಿ ಶೂಟಿಂಗ್‌ ಮಾಡಲು ಹಲವು ದಿನಗಳೇ ಬೇಕಿತ್ತು. ಆದರೆ ಕರೀನಾ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಡೇಟ್‌ ಹೊಂದಾಣಿಕೆ ಸಮಸ್ಯೆ ಬಂದ ಕಾರಣ ಕರೀನಾ ಅವರು ಈ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ವರದಿಯಾಗಿದೆ.

Continue Reading

FILM

ಜೊತೆಯಾಗಿ ಕಾಣಿಸಿಕೊಂಡ ಸೂಪರ್ ಸ್ಟಾರ್ – ಬಿಗ್ ಬಿ; ಸ್ಟೈಲಿಶ್ ಫೋಟೋ ವೈರಲ್

Published

on

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ 170 ನೇ ಸಿನಿಮಾ ‘ವೆಟ್ಟೈಯಾನ್‘ ಈಗಾಗಲೇ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಟೀಸರ್ ಬಹಳ ಸದ್ದು ಮಾಡಿದೆ. ಅಲ್ಲದೇ ಈ ಚಿತ್ರದಲ್ಲಿ ಸೂಪರ್ ಸ್ಟಾರ್ – ಬಿಗ್ ಬಿ ಜೊತೆಯಾಗ್ತಿರೋದು ವಿಶೇಷ. ಅದೂ 33 ವರ್ಷಗಳ ಬಳಿಕ. ಹಾಗಾಗಿ ಸಹಜವಾಗಿಯೇ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿದೆ.

ವೈರಲ್ ಆಯ್ತು ಫೋಟೋ :


ಇಬ್ಬರು ಸಿನಿ ದಿಗ್ಗಜರು ಜೊತೆಯಾಗೋದು ಅಂದ್ರೆ ಕೇಳ್ಬೇಕಾ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತದೆ. ಈ ಚಿತ್ರದ ಅಪ್ಡೇಟ್ಸ್ ಗಾಗಿ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಅಭಿಮಾನಿಗಳು ಕಾಯುತ್ತಿರೋದು ಸುಳ್ಳಲ್ಲ. ಇದೀಗಲೈಕಾ ಪ್ರೊಡಕ್ಷನ್ ಸಂಸ್ಥೆ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಒಟ್ಟಿಗೆ ಇರೋ ಫೋಟೋಗಳನ್ನು ಪೋಸ್ಟ್ ಮಾಡಿದೆ.


‘ಭಾರತೀಯ ಸಿನಿಮಾ ರಂಗದ ದಿಗ್ಗಜರು. ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಮುಂಬೈನ ವೆಟ್ಟೈಯನ್ ಸಿನಿಮಾ ಸೆಟ್​ನಲ್ಲಿ ಎಂದು ಲೈಕಾ ಪ್ರೊಡಕ್ಷನ್ಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ : ಬಾಲಿವುಡ್ ಜನಪ್ರಿಯ ನಿರೂಪಕಿ ಭಾರತಿ ಸಿಂಗ್ ಆಸ್ಪತ್ರೆ ದಾಖಲು..!

ಈ ಫೋಟೋಗಳಲ್ಲಿ ರಜನಿಕಾಂತ್ ಹಾಗೂ ಅಮಿತಾಭ್ ಇಬ್ಬರೂ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನೆಟ್ಟಿಗರು ಈ ಫೋಟೋಗಳನ್ನು ನೆಚ್ಚಿಕೊಂಡಿದ್ದು, ಕಮೆಂಟ್ಸ್ ಹರಿದು ಬರುತ್ತಿದೆ.

Continue Reading

LATEST NEWS

Trending