Connect with us

FILM

ನಟಿ ಇಳಾ ವಿಟ್ಲ ಪತಿಯ ಹಲ್ಲು ಮುರಿದಿದ್ದ ವಿನಯ್ ಗೌಡ

Published

on

ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ವಿರುದ್ಧ  ಕಿರುತೆರೆ ನಟಿ ಇಳಾ ವಿಟ್ಲ ಗಂಭೀರ ಆರೋಪ ಮಾಡಿದ್ದಾರೆ. 8 ವರ್ಷಗಳ ಹಿಂದೆ ರಿಯಾಲಿಟಿ ಶೋನಲ್ಲಿ ವಿನಯ್‌ ವರ್ತನೆಯಿಂದ ಗಂಡ ಆರ್ಯನ್‌ ಮತ್ತು ಇಳಾ ಅವರು ಅನುಭವಿಸಿದ ದಿನಗಳನ್ನು  ನೆನಪು ಮಾಡಿಕೊಂಡಿದ್ದಾರೆ.

ಇಳಾ ವಿಟ್ಲ ಅವರ ಪೋಸ್ಟ್‌ ನ ಸಾರಾಂಶ ಇಂತಿದೆ:

ಬಿಗ್ ಬಾಸ್ ಸೀಸನ್ 10

ನಾನೊಬ್ಳು ಆರ್ಟಿಸ್ಟ್ ಆಗಿ ರಿಯಾಲಿ ಟೀ ಶೋ ಗಳನ್ನ ಮಾಡಿದ್ದಕ್ಕೆ ಹಾಗೇ ಸಾಮಾನ್ಯವಾಗಿ ಬಿಗ್ ಬಾಸ್ ನೋಡ್ತಿರೋ ಕಾರಣ ವಿನಯ್ ಅವರನ್ನ ಹತ್ತಿರದಿಂದ ನೋಡಿ ಅನುಭವಿಸಿರೋದಕ್ಕೆ ಪೋಸ್ಟ್ ಮಾಡ್ತಿದೀನಿ.ನನಗೇನಾದ್ರೂ ಆದ್ರೆ ನಾನು ಸುಮ್ನೆ ಬಿಡಲ್ಲ ಸುಮ್ನೆ ಬಿಡಲ್ಲ ಅಂತಾನೆ ಇರ್ತಾರಲ್ವಾ, ಆದ್ರೆ ಏನ್ ಮಾಡ್ತಿದ್ರು .ಅವರಿಂದ ಬೇರೆಯವರಿಗೆ ತೊಂದರೆ ಆದ್ರೆ ಏನ್ ಮಾಡ್ಬೇಕಿತ್ತು 😡 ಆಟ ಅಂದ್ಮೇಲೆ ಹೆಚ್ಚು ಕಡಿಮೆ ಇದ್ದೇ ಇರುತ್ತೆ ಸ್ವಲ್ಪ ಸ್ವಲ್ಪ ಗಾಯಗಳು ಆಗುತ್ತೆ ಅದು ಸರ್ವೇಸಾಮಾನ್ಯ  ಬೇರೆಯವರು ಯಕ್ಕುಟೋದ್ರು ಪರ್ವಾಗಿಲ್ಲ.

ನಾನು ಗೆಲ್ಲಲೇ ಬೇಕು ಅನ್ನೋ ಮನಸ್ಥಿತಿ ಇರೋದು ಯಾವತ್ತಿಗೂ ಉದ್ದಾರ ಆಗಿಲ್ಲ 😡 ರಿಯಾಲಿಟಿ ಶೋ ನೇ ಹಾಗೆ ಏನು ಮಾಡಕ್ಕಾಗಲ್ಲ ಇಷ್ಟ ಇದ್ರೆ ಹೋಗ್ಬೇಕು.ಇಲ್ಲ ಅಂದ್ರೆ ಸುಮ್ನಿರಬೇಕು ಬಿಗ್ ಬಾಸ್ ಅಂದ್ರೆ ನನಗೆ ಮೊದಲಿಂದಾನು ಇಷ್ಟ  ನಮ್ಮ ಕಿರುತೆರೆ ಹೆಮ್ಮೆ ಮೊದ್ಲು ಕಿರುತೆರೆ ಅಂತ ತಾತ್ಸಾರ ಮಾಡಿದವರನ್ನು ಕಿರುತೆರೆಗೆ ಕರ್ಕೊಂಡು ಬಂದಿರುವ ಹೆಮ್ಮೆಯ ಶೋ ಕಿಚ್ಚ ಸುದೀಪ್ ಅವರು ಹೇಳುವ ಬುದ್ಧಿ ಮಾತು ನಮ್ಮ ಜೀವನಕ್ಕೂ ಅನ್ವಯಿಸುತ್ತೆ ಬಿಗ್ ಬಾಸ್ ಗೆ ಹೋಗ್ಬೇಕು ಅಂತೇನಿಲ್ಲ ಸುಮ್ನೆ ಕೇಳಿಸಿಕೊಂಡರೆ ಸಾಕಾಗುತ್ತೆ ❤️

ಇದೇ ವಿನಯ್ ಸೂಪರ್ ಜೋಡಿ ಟೈಮಲ್ಲಿ ನನ್ನ ಕಣ್ಣೆದುರಿಗೆ ಪ್ಲಾನ್ ಮಾಡ್ಕೊಂಡುಬಂದು ನಮ್ಮತ್ರ ಹೇಳ್ತಾ ಇದ್ರು ನನಗೇನಾದ್ರೂ ಆದ್ರೆ ನಾನ್ ಯಾರನ್ನು ಸುಮ್ಮನೆ ಬಿಡಲ್ಲ ಅಂತ ಹೆದ್ರಿಸೋದು 😡 ಆಮೇಲೆ ಅಂತ ಕೆಲಸ ಅವರೇ ಮಾಡೋದು 😡ಅವತ್ತು ವಿನಯ್ ಜೊತೆ ನಮ್ಮೆಜಮಾನ್ರು ಆಡಿದಾಗ  ಆಟದಲ್ಲಿ ದವಡೆ ಹಲ್ಲು ಮುರಿದ್ರು ಅಷ್ಟು ಸಾಲದು ಅಂತ ರಿಬ್ಬು ಫ್ಯಾಕ್ಚರ್  ಮಾಡಿದ್ರು, ಆದ್ರೂ ಅವರಿಗೆ ನಾವು ಒಂದು ಮಾತು ಏನು ಹೇಳಿಲ್ಲ.ಶೋ ಮುಗಿದ್ ಮೇಲೆ  ನೋವು ಜಾಸ್ತಿ ಆಯ್ತು. ಆರು ತಿಂಗಳು  ಸರಿಯಾಗಿ ಕೆಲಸ ಮಾಡಕ್ಕಾಗ್ದೆ ಆರ್ಯನ್ಸರು ಒದ್ದಾಡಿದ್ದಾರೆ ಡಾಕ್ಟ್ರು ಏನು ಮಾಡಬಾರದು ರೆಸ್ಟ್ ಮಾಡಿ ಅಂತ ಹೇಳಿದ್ರು. ಅವತ್ತು ನಾನು ಎಷ್ಟು ಕಣ್ಣೀರು ಹಾಕ್ತ ಕೂತಿದ್ದೆ ಅನ್ನೋದು ಭಗವಂತನಿಗೆ ಮಾತ್ರ ಗೊತ್ತು  .

ಇದೇ ಪರಿಸ್ಥಿತಿ ಅವರಿಗೆ ಬಂದಿದ್ರೆ  ಏನ್ ಮಾಡ್ತಿದ್ರು. ನಾವು ಕಲಾವಿದರು  ಆಗಿ ಹೋಗಿರೋ ಘಟನೆಗಳಿಗೆ ರಿಯಾಕ್ಷನ್ ಕೊಡೋದು, ದುರಹಂಕಾರದ ಮಾತುಗಳನ್ನ ಆಡೋದು ಒಬ್ಬರಿಗೊಬ್ರು ಜಗಳ ಮಾಡ್ಕೊಂಡು  ಲೈಫ್ ಹಾಳ್ ಮಾಡ್ಕೊಳೋದು ಬೇಡ ಎಲ್ಲರೂ ಚೆನ್ನಾಗಿರ್ಲಿ ಅಂತ ಸುಮ್ನೆ ಇದ್ವಿ.ಅದ್ರಲ್ಲೂ ಅವರ ತಾಯಿ ತುಂಬಾ ಒಳ್ಳೆ ಮನಸ್ಸು ಇರೋರು ಯಾರ್ ಗೆದ್ರು ಪರ್ವಾಗಿಲ್ಲ ಎಲ್ಲಾ ನನ್ನ ಮಕ್ಕಳೇ ಅಂತ ಹೇಳಿರೋ ಮಾತು ಈಗಲೂ ನನಗೆ ನೆನಪಿದೆ. ಸೋ ಸ್ವಲ್ಪ ದಿನ ನೋವಿರುತ್ತೆ,ಆಮೇಲೆ ಇರೋದೇ ಜೀವನ  ಅಂತ ಸುಮ್ಮನೆ ಇದ್ವಿ  ಯಾಕೆಂದ್ರೆ ನಮ್ಮಿಂದಾಗಿ  ಎಲ್ಲ ಫ್ಯಾಮಿಲಿಯವರು ಅನುಭವಿಸುವುದು ಒಳ್ಳೆ ಲಕ್ಷಣ ಅಲ್ಲ .ಅವರ ಫ್ಯಾಮಿಲಿ ಮಾತ್ರ ಚೆನ್ನಾಗಿರಬೇಕು  ಉಳಿದವರು ಯಕ್ಕುಟ್ ಹೋದ್ರು ಅವರಿಗೆ ತೊಂದರೆ ಇಲ್ಲಅನ್ಸುತ್ತೆ, ಈ ತರ ಹೆದ್ರಿಸೋರಿಗೆ ನಂದೊಂದು ಮಾತು, ಒಂದು ವೇಳೆ ನೀವೇನಾದ್ರೂ ಮಾಡಿದ್ರೆ ಬೇರೆಯವರು ಕಡ್ಲೆಪುರಿ ತಿನ್ಕೊಂಡು ಕೂತಿರ್ತಾರಾ.

ಗೊತ್ತಿಲ್ಲದೆ ಆಟದಲ್ಲಿ ಏನೋ ಒಂದಾದರೆ  ಈ ಮನುಷ್ಯನ ಯೋಗ್ಯತೆನೆ ಇಷ್ಟು ಹಾಳಾಗೋಗ್ಲಿ ಅಂತ  ಬಿಡಬಹುದು ಆಟದಿಂದ ಹೊರಗೆ ಬಂದ ಮೇಲೆನೂ ಇವ್ರು ನಾ ನಿನ್ನ  ಹೊರಗ್ ಹೋದ್ಮೇಲೆ ಸುಮ್ನೆ ಬಿಡಲ್ಲ ನಾನು ಸುಮ್ಮನೆ ಬಿಡಲ್ಲ ಅಂದ್ರೆ ಎದುರುಗಡೆಯವರು ಕೈಕಟ್ಟಿ ಕೂತ್ಕೊಂಡಿರ್ತಾರಾ, ಐಯೋ ದೇವ್ರೇ ಅವರು ಅದಕ್ಕಿಂತ ದೊಡ್ಡ ರೌಡಿಗಳಾಗಿರುತ್ತಾರೆ ಬಿಡ್ತಾರಾ .

ಇವರೆಲ್ಲ ಲೈಫ್ ಹಾಳ್ ಮಾಡ್ಕೊಳಕ್ ಬಂದಿದ್ದಾರಾ ಜೀವನ ಮಾಡ್ಕೊಳ್ಳೋಕೆ ಬಂದಿದ್ದರೋ ಒಂದು ಅರ್ಥ ಆಗ್ತಿಲ್ಲ ಫ್ಯಾಮಿಲಿ ಮುಖ್ಯ ಅಂತ 50ಸರಿ ಹೇಳ್ತಿರಲ್ಲ, ಒಂದು ವೇಳೆ ನೀವೇನಾದರೂ ಮಾಡಿದ್ರಿ ಅಂತ ಇಟ್ಕೊಳಿ ಎದ್ರುಗಡೆ ಅವ್ರು ನಿಮ್ಮನ್ ಏನೋ ಒಂದು ಮಾಡ್ತಾರೆ ಅಲ್ಲಿಗೆ ಯಾರಿಂದ ಯಾರು ಫ್ಯಾಮಿಲಿ ಹಾಳ್ ಮಾಡುದ್ರು ಅಷ್ಟು ತಲೆ ಇಲ್ವಾ ಇವರಿಗೆ ಖರ್ಮ,ಎಲ್ಲಾ ಆದ್ಮೇಲೆ ಏನು ಗೊತ್ತಿಲ್ಲದಂಗೆ ಸಾರಿ ಸರ್ ಸಾರಿ ಸರ್ ಅಂತ ಹೇಳೋದು ಅಷ್ಟೇ .ನಾನು ಬದಲಾಗಿದ್ದಾರೆ ಅನ್ಕೊಂಡಿದ್ದೆ.

ಯಾಕೆಂದ್ರೆ ಒಬ್ಬ ಮನುಷ್ಯ ಅಂದಮೇಲೆ ತಪ್ಪು ಮಾಡೋದು ಸಹಜ  ಒಂದು ಸಲ ಮಾಡಿದ್ಮೇಲೆ ಮತ್ತೆ ಅದೇ ತಪ್ಪನ್ನು,ಇವರು ಬದಲಾಗಲ್ಲ ಯಾಕೆಂದ್ರೆ ಇಂಥ ಬಿಗ್ ಬಾಸ್ ಅಂತ ಶೋದಲ್ಲೂನು ಕಂಟ್ರೋಲ್ ಇಲ್ದೆ ಮಾತಾಡ್ತಿದ್ದಾರೆ.ಅಂದ್ರೆ ಹೊರಗಡೆ ಹೇಗಿರಬಹುದು ಅಷ್ಟೇ ನನ್ನ ಪ್ರಶ್ನೆ, ಭಾಗವಂತ ಇನ್ನಾದರೂ ಒಳ್ಳೆ ಬುದ್ದಿ ಕೊಡ್ಲಿ, ನನ್ ಜೀವನದಲ್ಲಿ ನಾನು ಯಾರಿಗೂ ಹೆದರೋ ಮಾತಿಲ್ಲ ನನ್ ಯಾರ್ ಸುದ್ದಿಗೂ ಹೋಗಲ್ಲ ಯಾಕೆಂದ್ರೆ ಎಲ್ಲರ ಫ್ಯಾಮಿಲಿನು ಚೆನ್ನಾಗಿರಬೇಕು. ಹೋಗುವಾಗ ಏನು ತಗೊಂಡ್ ಹೋಗಲ್ಲ ನಾವು ಅಂತ ತಿಳ್ಕೊಂಡಿರೋಳು ಬದುಕಿರೋದು ಇಷ್ಟು ದಿನ ಪ್ರೀತಿ ವಿಶ್ವಾಸ ನಂಬಿಕೆ ಇಂದಾನೆ ಜೀವನ ಮಾಡಬೇಕು ಅನ್ನೋದು, ನನ್ ಸುದ್ದಿಗೆ ಬಂದ್ರೆ ಡು ಆರ್ ಡೈ ಕೆಟ್ಟ ಕೆಲಸ ಮಾಡಿ ನೂರು ದಿನ ಬದುಕುವುದಕ್ಕಿಂತ ಒಳ್ಳೆ ಕೆಲಸ ಮಾಡಿ ಒಂದಿನ ಬದುಕೋದು ಗ್ರೇಟ್.ಮನ್ಸಲ್ಲಿರೋದನ್ನ ಹೇಳಲೇಬೇಕು ಆಗಲೇ ನಂಗೆ ಸಮಾಧಾನ.

ಈ ರೀತಿಯಾಗಿ ನಟಿ ಇಳಾ ವಿಟ್ಲ ಫೇಸ್ ಬುಕ್ ನ್ಲಿ ಬೇಸರ ಹೊರ ಹಾಕಿದ್ದಾರೆ.

FILM

ಸೋಶಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ಚಂದನ್ ಗೌಡ-ಕವಿತಾ ದಂಪತಿ

Published

on

ಚಂದನ್ ಗೌಡ – ಕವಿತಾ ದಂಪತಿ ಯಾರಿಗೆ ತಾನೇ ಗೊತ್ತಿಲ್ಲ. ಈ ಜೋಡಿ ‘ಲಕ್ಷ್ಮೀ ಬಾರಮ್ಮಾ’ ಮೂಲಕಾನೇ ಫೇಮಸ್. ಈ ಧಾರಾವಾಹಿಯಲ್ಲಿ ಕೆಲವು ಸಮಯ ನಟಿಸಿದ್ದ ಚಂದನ್ ಹೊರಬಂದಿದ್ದರು. ಕವಿತಾ ಕೂಡಾ ಅಷ್ಟೇ ಈ ಧಾರಾವಾಹಿ ಖ್ಯಾತಿ ನೀಡಿದ್ದರೂ, ನಂತರ ದಿನಗಳಲ್ಲಿ ಹೊರನಡೆದಿದ್ದರು. ಆದ್ರೆ, ಈ ಜೋಡಿ ರಿಯಲ್ ನಲ್ಲಿ ಒಂದಾಗಿ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಇದೀಗ ಚಂದು – ಲಚ್ಚಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಖುಷಿ ಸುದ್ದಿ ಹಂಚಿಕೊಂಡ ದಂಪತಿ :

ನಟ ಚಂದನ್ ಕುಮಾರ್, ಕವಿತಾ ಗೌಡ ಅವರು ಬೇಬಿ ಸ್ಕ್ಯಾನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಂಭ್ರಮ ಹಂಚಿಕೊಂಡಿದ್ದಾರೆ. ನಟಿ ಕವಿತಾ ಗೌಡ ಚಂದನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆಅಭಿಮಾನಿಗಳಿಂದ, ನಟ, ನಟಿಯರಿಂದ ಶುಭ ಹಾರೈಕೆ ಹರಿದು ಬರುತ್ತಿದೆ. ನೇಹಾ ಗೌಡ, ಗೀತಾ ಭಾರತೀ ಭಟ್, ಧನರಾಜ್, ವಿನಯ್ ಗೌಡ, ಪ್ರಿಯಾಂಕಾ ಚಿಂಚೋಳಿ ಮೊದಲಾದವರು ಶುಭಾಶಯ ತಿಳಿಸಿದ್ದಾರೆ. 2021 ಮೇ 14ರಂದು ಲಾಕ್ ಡೌನ್ ಸಂದರ್ಭದಲ್ಲಿ ಈ ಜೋಡಿ ಮದುವೆಯಾಗಿತ್ತು.

ಮುಂದೆ ಓದಿ..; ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್‌ಗೆ ಏನಾಗಿದೆ? ಎಂದು ಹೇಳಿದ್ಯಾಕೆ?

ಬ್ಯುಸಿ ಲೈಫ್ :

ಕೆಲ ತಿಂಗಳುಗಳಿಂದ ಕವಿತಾ ಗೌಡ ಅವರು ಉದ್ಯಮದ ಕಡೆಗೆ ಮುಖ ಮಾಡಿದ್ದರು. ಚಂದನ್ ಜೊತೆ ಸೇರಿ ಒಂದಾದ ಮೇಲೆ ಒಂದರಂತೆ ಹೋಟೆಲ್ ಬ್ರ್ಯಾಂಚ್ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಮೇಕಪ್ ಸ್ಟುಡಿಯೋವನ್ನು ಕೂಡ ಆರಂಭಿಸಿದ್ದಾರೆ.

Continue Reading

FILM

ಬರ್ಬರ ಹತ್ಯೆಯಾದ ಬ್ಯೂಟಿ ಕ್ವೀನ್.!! ಮುಳುವಾಯಿತಾ ಇನ್ಸ್ಟಾಗ್ರಾಮ್ ಪೋಸ್ಟ್‌..! ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ

Published

on

ಬ್ಯೂಟಿ ಕ್ವೀನ್ ಎಂದು ಕಿರೀಟ ಮುಡಿಗೇರಿಸಿಕೊಂಡವಳು ಎರಡೇ ವರ್ಷಕ್ಕೆ ಹಂತಕರ ಗುಂಡೇಟಿಕೆ ಬಲಿಯಾಗಿದ್ದಾಳೆ. ರೆಸ್ಟೋರೆಂಟ್‌ನಲ್ಲಿ ಆರಾಮವಾಗಿ ವಿರಾಮಿಸಿ ಬಗೆ ಬಗೆಯ ಸೀಫುಡ್ ಆರ್ಡರ್ ಮಾಡಿದ್ರು.  ಇನ್ನೇನು ಫುಡ್‌ಅನ್ನು ಆಹ್ಲಾದಿಸಬೇಕು ಅನ್ನೋವಷ್ಟರಲ್ಲಿ ದುರಂತ ಅಂದ್ರೆ ಹಂತಕರ ಗುಂಡೇಟಿಗೆ ಈ ಸುಂದರಿ ಬಲಿಯಾಗಿದ್ದಾರೆ.

23ವರ್ಷಕ್ಕೆ ಬ್ಯೂಟಿ ಕ್ವೀನ್ ಆದ ಲ್ಯಾಂಡಿ

ಲ್ಯಾಂಡಿ ಪರ್ರಾಗಾ ಗೊಯ್ಬುರೊ ತನ್ನ 23 ವರ್ಷಕ್ಕೆ ಬ್ಯೂಟಿ ಕ್ವೀನ್ ಕಿರೀಟವನ್ನು ಮುಡಿಗೇರಿಸಿಕೊಂಡವಳು. 2022ರ ಮಿಸ್‌ ಈಕ್ವೆಡಾರ್ ಸ್ಪರ್ಧೆಯಲ್ಲಿ ಬ್ಯೂಟಿ ಕ್ವೀನ್ ಆಗಿ ಲಕ್ಷಾಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾಳೆ.  ಬಿಕಿನಿ ಕ್ವೀನ್ ಎಂದೆನಿಸಿಕೊಂಡ ಈಕೆ ಇನ್ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾಳೆ. ಹಲವು ಉದ್ಯಮಗಳನ್ನು ಕೂಡ ಈಕೆ ನಡೆಸುತ್ತಿದ್ದಳು.  ಲ್ಯಾಂಡಿ ಪರ್ರಾಗಾ ಸಾವಿನ ಸುದ್ದಿ ಕೇಳಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.

ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್‌ಗೆ ಏನಾಗಿದೆ? ಎಂದು ಹೇಳಿದ್ಯಾಕೆ?

ಸಾವಿಗೆ ಕಾರಣವಾದ ಇನ್ಸ್ಟಾಗ್ರಾಮ್ ಪೋಸ್ಟ್:

ಎ.28ರಂದು ಕ್ವೆವೆಡೊ ನಗರದ ರೆಸ್ಟೋರೆಂಟ್‌ವೊಂದಕ್ಕೆ ಲ್ಯಾಂಡಿ ತೆರಳಿದ್ದರು. ಈ ವೇಳೆ ವೆರೈಟಿ ಸೀ ಫುಡ್‌ಗಳನ್ನು ಆರ್ಡರ್ ಮಾಡಿದ್ದಾರೆ. ಫುಡ್‌ಗಳು ಟೇಬಲ್ ಮೇಲೆ ಬಂದ ಕೂಡಲೇ ಫೊಟೋ ಕ್ಲಿಕ್ಕಿಸಿ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೊಟೋ ಲ್ಯಾಂಡಿಯ ಪ್ರಾಣಕ್ಕೆ ಕುತ್ತು ತಂದಿತ್ತು. ಹಂತಕರು ಪೋಸ್ಟ್ ಮಾಡಿದ್ದ ಫೊಟೋದ ಜಾಲವನ್ನು ಹಿಡಿದು ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು ಲ್ಯಾಂಡಿ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ. ರೆಸ್ಟೋರೆಂಟ್‌ಗೆ ಬಂದ ದುಷ್ಕರ್ಮಿಗಳು ಲ್ಯಾಂಡಿ ಮೇಲೆ ಗನ್‌ನಿಂದ ಶೂಟ್ ಮಾಡಿ ಪರಾರಿಯಾಗಿದ್ದಾರೆ. ಈಕ್ವೆಡಾರ್‌ನ ಸುಂದರಿ ದುಷ್ಕರ್ಮಿಗಳ ಗುಂಡೇಟಿಗೆ ರಕ್ತದ ಮಡುವಿನಲ್ಲಿ ಬರ್ಬರವಾಗಿ  ಹತ್ಯೆಯಾಗಿದ್ದಾರೆ. ಹಂತಕರು ಈಕೆಯ ಇನ್ಸ್ಟಾಗ್ರಾಮ್‌ನ್ನು ಫಾಲೋ ಮಾಡಿ ಹತ್ಯೆ ಮಾಡಿದ್ದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ವೀಡಿಯೋ ರೆಸ್ಟೋರೆಂಟ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು ವಿಶೇಷ ತಂಡ ರಚನೆ ಮಾಡಿದ್ದಾರೆ. 2023ರಲ್ಲಿ ಅಟಾರ್ನಿ ಜನರಲ್ ಕಚೇರಿಯಲ್ಲಿ ನಡೆದ ಸಂಘಟಿತ ಅಪರಾಧ ಪ್ರಕರಣದಲ್ಲಿ, ಡ್ರಗ್ ಕಳ್ಳ ಸಾಗಾಣಿಕೆಯಲ್ಲಿ ಲ್ಯಾಂಡಿ ಹೆಸರು ಕೇಳಿಬಂದಿತ್ತು. ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದ ತನ್ನ ಬಾಯ್‌ಫ್ರೆಂಡ್‌ನಿಂದ ದೂರಾಗಿದ್ದ ಲ್ಯಾಂಡ್ರಿಯ ಈ ನಿಗೂಢ ಬರ್ಬರ ಹತ್ಯೆಗೆ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ.

 

 

 

Continue Reading

FILM

ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್‌ಗೆ ಏನಾಗಿದೆ? ಎಂದು ಹೇಳಿದ್ಯಾಕೆ?

Published

on

ಮುಂಬೈ/ಮಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಸಿನೆಮಾ ಲೋಕದಲ್ಲಿ ತಮ್ಮದೇ ಆದ ಸ್ಟಾಂಡ್‌ ಕ್ರಿಯೇಟ್ ಮಾಡಿದ್ದಾರೆ. ಕೇವಲ ತಮಿಳು ಭಾಷೆ ಅಲ್ಲದೇ ಎಲ್ಲಾ ಭಾಷೆಗಳಲ್ಲಿಯೂ ರಜನಿಗೆ ಫ್ಯಾನ್ಸ್ ಇದ್ದಾರೆ. ಇನ್ನು ಅವರ ಚಾರ್ಮ್ ಅಬ್ಬಾ…! ವಯಸ್ಸಲ್ಲಿ 73 ಆದರೂ ಚಿರ ಯುವಕನಂತೆ ಕಾಣಿಸುವ ಎನರ್ಜಿ ಇವರದು. ಇನ್ನು ಇವರ ಸಿನೆಮಾ ರಿಲೀಸ್ ಆದ್ರೆ ಸಾಕು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತೆ. ಅದಕ್ಕೆ ಇತ್ತೀಚೆಗೆ ರಿಲೀಸ್ ಆದ ಜೈಲರ್ ಸಿನೆಮಾವೇ ಸಾಕ್ಷಿ. ಇದೀಗ ರಜನಿ ಹಾಗೂ ಐಶ್ವರ್ಯ ರೈ ಗೆ ಸಂಬಂಧಪಟ್ಟ ಹಳೆ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

rajani-aishwarya

14 ವರ್ಷಗಳ ಹಿಂದೆಯೇ ಕೆಲವರು ರಜನಿಕಾಂತ್ ಅವರನ್ನು ಹೀರೋ ಅಲ್ಲ ಎಂಬಂತೆ ವರ್ತಿಸಿದ್ದರಂತೆ. ಹೀಗಂತ ಖುದ್ದು ರಜನಿ ಅವರು ರೋಬೋ ಸಿನೆಮಾ ಪ್ರೆಸ್‌ಮೀಟ್‌ ನಲ್ಲಿ ಇಂಟ್ರಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದರು. ಇದೀಗ ಈ ವೀಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ಐಶ್ವರ್ಯ ರೈ ಬಚ್ಚನ್‌ಗೆ, ಸೊಸೆಯ ‘ವಾಟ್‌ ದಿ ಹೆಲ್‌ ನವ್ಯಾ’ದಲ್ಲಿ ಡಿಮ್ಯಾಂಡ್‌…!

ಪ್ರೆಸ್‌ಮೀಟ್‌ನಲ್ಲಿ ಮಾತು ಆರಂಭಿಸಿದ ರಜನಿ ‘ನನ್ನ ಜೊತೆ ಹೀರೋಯಿನ್‌ ಆಗಿ ನಟಿಸಿರುವುದಕ್ಕೆ ಐಶ್ವರ್ಯಾಗೆ ಧನ್ಯವಾದಗಳು. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿರುವ ನನ್ನ ಸಹೋದರನ ಮನೆಗೆ ಹೋಗಿದ್ದೆ. ಪಕ್ಕದ ಮನೆ ರಾಜಸ್ಥಾನ ಕುಟುಂಬದವರು ನನ್ನನ್ನು ನೋಡಲು ಬಂದರು. ಅದರಲ್ಲಿ ನಂದುಲಾಲ್ ಎಂಬವರು ನನ್ನನ್ನು ಮಾತನಾಡಿಸಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಸರ್ ನಿಮ್ಮ ತಲೆ ಕೂದಲಿಗೆ ಏನಾಗಿದೆ ಎಂದು ಕೇಳಿದರು. ಬಿಡಿ ಎಲ್ಲಾ ಉದುರಿ ಹೋಗಿದೆ ಎಂದು ಹೇಳಿದೆ. ನಿಮ್ಮ ನಿವೃತ್ತಿ ಜೀವನ ಹೇಗಿದೆ. ಲೈಫ್ ಎಂಜಾಯ್ ಮಾಡ್ತಿದ್ದೀರಾ ಎಂದು ಕೇಳಿದರು. ಇಲ್ಲಾ ನಾನೊಂದು ಸಿನೆಮಾ ಮಾಡ್ತಾ ಇದ್ದೇನೆ. ಐಶ್ವರ್ಯ ರೈ ಹೀರೋಯಿನ್ ಅಂದೆ. ‘ಹೀರೋ ಯಾರು ಸರ್’ ಎಂದು ಮರು ಪ್ರಶ್ನಿಸಿದರು.  ಅವರ ಜೊತೆ ಇದ್ದವರು ಡ್ಯಾಡಿ ಇವರೇ ಹೀರೋ ಎಂದು ಮೆಲುಧ್ವನಿಯಲ್ಲಿ ಹೇಳ್ತಾರೆ. ನಂದುಲಾಲ್  ಮೌನವಾಗಿ ನನ್ನನ್ನೇ ದಿಟ್ಟಿಸಿ ನೋಡಿ ಏನೂ ಮಾತನಾಡದೆ ಹೊರಟು ಬಿಟ್ಟರು. ಅಷ್ಟರಾಗಲೇ ಮನೆ ಒಳಗಡೆಯಿಂದು ಒಂದು ಧ್ವನಿ ಬರುತ್ತೆ. ಐಶ್ವರ್ಯ ರೈ ಗೆ ಏನಾಗಿದೆ..? ಅಲ್ಲಾ ಅಭಿಷೇಕ್ ಹೇಗೆ ಒಪ್ಪಿದ್ರು..? ಅಮಿತಾಬಚನ್‌ಗಾದ್ರು ಎನಾಗಿದೆ.. ಐಶ್ವರ್ಯಾಳನ್ನು ಇವರ ಜೊತೆ ಹೀರೋಯಿನ್ ಮಾಡಲು ಒಪ್ಪಿದ್ದಾರಲ್ಲ  ಎಂಬ ಮಾತು ಕೇಳಿ ಬಂತು ಎಂದು ರಜನಿಕಾಂತ್ ಸಿನೆಮಾ ಪ್ರೆಸ್ ಮೀಟ್‌ನಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದರು.

Continue Reading

LATEST NEWS

Trending