Connect with us

  LATEST NEWS

  ನಟಿ ಖುಷ್ಬೂ ವಿರುದ್ಧ ’30 ಠಾಣೆಗಳಲ್ಲಿ’ ದೂರು ದಾಖಲು..!

  Published

  on

  ನಟಿ ಖುಷ್ಬೂ ವಿರುದ್ಧ ’30 ಠಾಣೆಗಳಲ್ಲಿ’ ದೂರು ದಾಖಲು..!

  ಚೆನೈ: ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ನಟಿ ಖುಷ್ಬೂ ಅವರ ವಿರುದ್ಧ ನಿನ್ನೆ ಒಂದೇ ದಿನ ಬರೋಬ್ಬರಿ 30 ದೂರುಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.

  ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ನಟಿ ಖುಷ್ಬೂ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷ ಬೌದ್ಧಿಕವಾಗಿ ದುರ್ಬಲ ಪಕ್ಷ ಎಂದು ಟೀಕಿಸಿದ್ದರು.

  ಇದೀಗ ಇದೇ ಹೇಳಿಕೆಗೆ ಸಂಬಂಧಿಸಿದಂತೆ ಖುಷ್ಬೂ ಅವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ನಟಿ ಖುಷ್ಬೂ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಅಂಗವಿಕಲರನ್ನು ಹೀಗಳೆದು ಮಾತನಾಡಿದ್ದಾರೆ ಎಂದು ಆರೋಪಿಸಿ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ದೂರು ದಾಖಲು ಮಾಡಿದೆ.

  ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆಯ ಕಾರ್ಯದರ್ಶಿ ಮುರಳೀಧರನ್ ಅವರು ಚೆನ್ನೈ, ಕಾಂಜಿಪುರಂ, ಚೆಂಗಲ್ಪೇಟೆ, ಮಧುರೈ, ಕೊಯಮತ್ತೂರು, ತಿರುಪುರ್ ಸೇರಿದಂತೆ 30 ಠಾಣೆಗಳಲ್ಲಿ ದೂರು ದಾಖಲು ಮಾಡಿದ್ದಾರೆ.

  ಈ ಪೈಕಿ ಹಲವು ದೂರುಗಳು ಆನ್ ಲೈನ್ ನಲ್ಲಿ ಸಲ್ಲಿಕೆಯಾಗಿದೆ. ಅಂತೆಯೇ ಒಂದು ದೂರನ್ನು ನೇರವಾಗಿ ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಯಲ್ಲೇ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

  ನಟಿ ಖುಷ್ಬೂ ಅವರು ಓರ್ವ ರಾಜಕಾರಣಿಯಾಗಿದ್ದು, ಅವರಿಗೆ ಅವರ ವಿರೋಧಿಗಳನ್ನು ಅಥವಾ ಎದುರಾಳಿಗಳನ್ನು ಟೀಕಿಸುವ ಹಕ್ಕಿದೆ. ಆದರೆ ಅವರು ಯಾರನ್ನೋ ಟೀಕಿಸುವ ಭರದಲ್ಲಿ ಅಂಗವಿಕಲರನ್ನು ಹೀಗಳೆಯುವ ಹಕ್ಕು ಅವರಿಗಿಲ್ಲ.

  ಅವರು ಮಾಡಿರುವ ಪದ ಬಳಕೆಗಳು ಅಂಗವಿಕಲರ ಮಾನಸಿಕ ಸ್ಥೈರ್ಯ ಕುಸಿಯುವಂತಿದೆ. ಅಂತೆಯೇ ಅಂಗವಿಕಲರನ್ನು ನಕಾರಾತ್ಮಕವಾಗಿ ನೋಡುವ ಆಂತಕವಿದೆ.

  ಇದು ನಿಜಕ್ಕೂ ಸಹಿಸಲಸಾಧ್ಯ. ಇಂತಹ ಕೃತ್ಯಗಳನ್ನು ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಖಂಡಿಸುತ್ತದೆ.

  ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇದು ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದು ಮುರಳೀಧರನ್ ಅವರು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.

  LATEST NEWS

  ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಸ್ಟಾರ್ ಆಲ್​ ರೌಂಡರ್!

  Published

  on

  ಮಂಗಳೂರು/ನಮೀಬಿಯಾ  : ನಮೀಬಿಯಾ ತಂಡದ ಸ್ಟಾರ್ ಆಲ್​ ರೌಂಡರ್ ಡೇವಿಡ್ ವೀಝ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಬಾರಿ ಕಣಕ್ಕಿಳಿಯುವ ಮೂಲಕ ವೀಝ ಇಂಟರ್​ನ್ಯಾಷನಲ್ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸಿದರು.


  2013 ರಿಂದ 2016 ರವರೆಗೆ ಸೌತ್ ಆಫ್ರಿಕಾ ತಂಡವನ್ನು ವೀಝ ಪ್ರತಿನಿಧಿಸಿದ್ದರು. ಆ ಬಳಿಕ ನಮೀಬಿಯಾ ಪರ ಆಡುವ ಮೂಲಕ ಕ್ರಿಕೆಟ್ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದರು. ಇದೀಗ ತಮ್ಮ 11 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

  ಇದನ್ನೂ ಓದಿ : ಅಪ್ಪಂದಿರ ದಿನ : ತಂದೆಯನ್ನು ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ವಿನೀಶ್ ದರ್ಶನ್

  ಏಕದಿನ ಕ್ರಿಕೆಟ್​ನಲ್ಲಿ 15 ಪಂದ್ಯಗಳನ್ನಾಡಿರುವ ಡೇವಿಡ್ ವೀಝ, 330 ರನ್ ಮತ್ತು 15 ವಿಕೆಟ್​ಗಳನ್ನು ಗಳಿಸಿದ್ದಾರೆ. 54 ಟಿ20 ಪಂದ್ಯಗಳಿಂದ 624 ರನ್​ ಹಾಗೂ 59 ವಿಕೆಟ್ ಪಡೆದಿದ್ದಾರೆ.

  ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ, ಕೆಕೆಆರ್ ಪರ ಒಟ್ಟು 18 ಪಂದ್ಯಗಳನ್ನಾಡಿರುವ ಡೇವಿಡ್ ವೀಝ 148 ರನ್​ ಹಾಗೂ 16 ವಿಕೆಟ್ ಕಬಳಿಸಿದ್ದಾರೆ. ವಿಶೇಷ ಅಂದರೆ ಎರಡು ದೇಶಗಳನ್ನು ಪ್ರತಿನಿಧಿಸಿ ಐಪಿಎಲ್​ನಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ ಎಂಬ ದಾಖಲೆಯನ್ನು ಮಾಡಿದ್ದಾರೆ.

  ಸೌತ್ ಆಫ್ರಿಕಾ ತಂಡದಲ್ಲಿದ್ದಾಗ 2015 ರಲ್ಲಿ ಡೇವಿಡ್ ವೀಝ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. ಅಲ್ಲದೆ ಎರಡು ಸೀಸನ್​ಗಳಲ್ಲಿ ಕಣಕ್ಕಿಳಿದಿದ್ದ ವೀಝ ಒಟ್ಟು 15 ಪಂದ್ಯಗಳನ್ನಾಡಿದ್ದಾರೆ. 16 ವಿಕೆಟ್​ಗಳನ್ನು ಪಡೆದಿದ್ದಾರೆ. ಇದಾದ ಬಳಿಕ ನಮೀಬಿಯಾ ತಂಡವನ್ನು ಪ್ರತಿನಿಧಿಸಿದ್ದ ಡೇವಿಡ್ ವೀಝ, ಐಪಿಎಲ್ 2023 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು.
  ಈ ಮೂಲಕ ಎರಡು ದೇಶಗಳನ್ನು ಪ್ರತಿನಿಧಿಸಿ ಐಪಿಎಲ್​ನಲ್ಲಿ ಅವಕಾಶ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  Continue Reading

  LATEST NEWS

  ನಕಲಿ ವೈದ್ಯನಿಂದ ಭ್ರೂಣ ಹ*ತ್ಯೆ ..! ತನಿಖೆ ವೇಳೆ ವೈದ್ಯನ ಕರಾಳ ಮುಖ ಬಯಲು..!!

  Published

  on

  ಬೆಳಗಾವಿ/ಮಂಗಳೂರು: ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ನಕಲಿ ವೈದ್ಯನೊಬ್ಬ ಸಿಕ್ಕಿಬಿದ್ದಿದ್ದಾನೆ. ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ನಕಲಿ ವೈದ್ಯನ ಮತ್ತೊಂದು ಕರಾಳ ಮುಖ ಬಯಲಿಗೆ ಬಂದಿದೆ.

  ನಕಲಿ ವೈದ್ಯ ಡಾ.ಅಬ್ದುಲ್ ಗಫಾತ್ ಸೇರಿ ಐವರನ್ನು ಜೂ. 10 ರಂದು ಮಾಳಮಾರುತಿ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದರು. ತನಿಖೆ ವೇಳೆ ಇವನ ಮತ್ತೊಂದು ಕರಾಳ ಮುಖ ಬಯಲಿಗೆ ಬಂದಿದೆ. ಮಕ್ಕಳ ಮಾರಾಟ ಜಾಲ ಪ್ರಕರಣವನ್ನು ಬೆನ್ನು ಹತ್ತಿದ್ದ ಬೆಳಗಾವಿ ಪೊಲೀಸರಿಗೆ ವೈದ್ಯನ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಈ ವೈದ್ಯ ಮಕ್ಕಳ ಮಾರಾಟ ಸೇರಿದಂತೆ ಭ್ರೂಣಗಳ ಹತ್ಯೆ ಮಾಡಿದ್ದಾನೆ. ಭ್ರೂಣ ಹತ್ಯೆಗೈದು ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಫಾರ್ಮ್‌ ಹೌಸ್‌ನಲ್ಲಿ ಅಂತ್ಯಕ್ರಿಯೆ ಮಾಡಿದ್ದಾನೆ. ಪೊಲೀಸರ ತನಿಖೆ ವೇಳೆ ಅಬ್ದುಲ್ ಭ್ರೂಣ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಫಾರ್ಮ್‌ ಹೌಸ್‌ನಲ್ಲಿ ಶೋಧಕಾರ್ಯ ನಡೆಸಿದಾಗ ಮೂರು ಭ್ರೂಣಗಳ ಅವಶೇಷ ಪತ್ತೆಯಾಗಿದೆ. ಕಿತ್ತೂರಿನಲ್ಲಿದ್ದ ತನ್ನ ಫಾರ್ಮ್‌ ಹೌಸ್‌ನಲ್ಲಿ ಭ್ರೂಣ ಹತ್ಯೆ ಮಾಡಿ, ಫಾರ್ಮ್‌ಹೌಸ್‌ನಲ್ಲಿ ಹೂತುಹಾಕುತ್ತಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.

  Read More..; ‘ನನ್ನಿಂದ ಹೀಗೆ ಆಗೋಯ್ತಲ್ಲ’ ತಂದೆ ಶವದ ಮುಂದೆ ಕಣ್ಣೀರಿಟ್ಟ ದರ್ಶನ್ ಕೇಸ್‌ ಆರೋಪಿ..!

  ಡಿಸಿ ನಿತೇಶ ಪಾಟೀಲ್ ಸೂಚನೆ ಮೇರೆಗೆ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದ್ದು, ಪೊಲೀಸರು, ಆರೋಗ್ಯ ಇಲಾಖೆ, ಎಫ್ ಎಸ್ ಎಲ್ ತಂಡದಿಂದ ಶೋಧ ಕಾರ್ಯ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಮೂರು ಭ್ರೂಣಗಳ ಅವಶೇಷಗಳು ಪತ್ತೆಯಾಗಿದ್ದು, ಅವಶೇಷಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಆರೋಪಿಗಳ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

  Continue Reading

  LATEST NEWS

  ಗಂಗಾ ನದಿಯಲ್ಲಿ ದೋಣಿ ಮಗುಚಿ 6 ಮಂದಿ ನಾಪತ್ತೆ

  Published

  on

  ಪಾಟ್ನಾ: ದೋಣಿಯೊಂದು ಗಂಗಾ ನದಿಯಲ್ಲಿ ಮಗುಚಿ ಬಿದ್ದು, 6 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಬಿಹಾರದ ರಾಜಧಾನಿ ಪಾಟ್ನಾದ ಬಾರ್ಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 17 ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. 11 ಮಂದಿ ಈಜಿ ದಡ ಸೇರಿದ್ದು, 6 ಮಂದಿ ನಾಪತ್ತೆಯಾಗಿದ್ದಾರೆ.


  ನದಿ ಮಧ್ಯದಲ್ಲಿ ದೋಣಿ ಮುಳುಗಿದೆ. ತಕ್ಷಣ ಎಲ್ಲರೂ ನದಿಯಲ್ಲಿ ಮುಳುಗಲು ಪ್ರಾರಂಭಿಸಿದರು. ಈ ವೇಳೆ 11 ಜನ ಈಜಿ ದಡ ಸೇರಿದ್ದರೆ, ಇನ್ನೂ ಆರು ಮಂದಿ ನಾಪತ್ತೆಯಾಗಿದ್ದಾರೆ.

  ಇದನ್ನೂ ಓದಿ : ಐಸ್‌ಕ್ರೀಂ ಪ್ರಿಯರೇ ಎಚ್ಚರ! ಆನ್‌ಲೈನ್‌ನಲ್ಲಿ ತರಿಸಿದ ಐಸ್‌ಕ್ರೀಂನಲ್ಲಿ ಸತ್ತ ಹುಳಗಳು ಪತ್ತೆ!

  ಗಂಗಾ ದಸರಾ ನಿಮಿತ್ತ ಕೆಲವರು ಸ್ನಾನ ಮಾಡಲು ನದಿಗೆ ಅಡ್ಡಲಾಗಿ ದೋಣಿಯಲ್ಲಿ ಹೋಗುತ್ತಿದ್ದರು ಎಂದು ವರದಿಯಾಗಿದೆ. ಈ ವೇಳೆ ಉಮಾ ಘಾಟ್ ಬಳಿ ದೋಣಿ ಪಲ್ಟಿಯಾಗಿದೆ. ದುರಂತದಲ್ಲಿ ಆರು ಮಂದಿ ನೀರಿನಲ್ಲಿ ಮುಳುಗಿ ಮೃ*ತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸುವ ಬಗ್ಗೆ ವರದಿಯಾಗಿದೆ.

  Continue Reading

  LATEST NEWS

  Trending