Connect with us

    DAKSHINA KANNADA

    ಬಡತನ ರೇಖೆ ಮೇಲಿರುವ 40 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಇದೆ ಬಿಪಿಎಲ್‌ ಕಾರ್ಡ್​​!

    Published

    on

    ಬೆಂಗಳೂರು: ರಾಜ್ಯದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬಿಪಿಎಲ್ ಕಾರ್ಡ್ ಬಳಕೆ ಮಾಡುವರರು ಹೆಚ್ಚಾಗಿದ್ದು, ಅಂತಹವರ ವಿರುದ್ಧ ಕ್ರಮಕ್ಕೆ ಇದೀಗ ಆಹಾರ ಇಲಾಖೆ ಮುಂದಾಗಿದೆ. ಬಡತನ ರೇಖೆ ಮೇಲಿರುವರು ಸಹ ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದ್ದು, ಒಟ್ಟು 40 ಲಕ್ಷಕ್ಕೂ ಹೆಚ್ಚು ಅನರ್ಹ ಬಿಪಿಎಲ್‌ ಕಾರ್ಡ್‌ದಾರರಾರು ಇರುವುದು ಪತ್ತೆಯಾಗಿದೆ.

    ಈ ಪಟ್ಟಿಯಲ್ಲಿ ಶೇ 20ರಷ್ಟು ಬಿಪಿಎಲ್ ಕಾರ್ಡ್‌ಗಳು ಬೆಂಗಳೂರಿನಲ್ಲಿಯೇ ಇರುವುದು ಪತ್ತೆಯಾಗಿದೆ. ಅನರ್ಹರು ದುಬಾರಿ ವೆಚ್ಚದ ಆರೋಗ್ಯ ಸೇವೆ, ಕೃಷಿ ಉದ್ದೇಶಿತ ಯೋಜನೆಗಳು, ವಸತಿ ಯೋಜನೆಗಳಂತಹ ನಾನಾ ಸರಕಾರಿ ಸೌಲಭ್ಯಗಳ ಬಳಕೆ ಮಾಡಲು ನಿಯಮ ಮೀರಿ ಕಾರ್ಡ್ ಬಳಕೆ ಮಾಡುತ್ತಿದ್ದಾರೆ.

    ಸದ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಸದ್ಯ ಬಿಪಿಎಲ್‌, ಅಂತ್ಯೋದಯ ಅನ್ನ ಯೋಜನೆ ಸೇರಿ 1.27 ಕೋಟಿ ಕಾರ್ಡ್‌ಗಳಿವೆ. 4.36 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಇದರಲ್ಲಿ ಲಕ್ಷಾಂತರ ಕಾರ್ಡ್‌ಗಳನ್ನು ಅರ್ಹತೆಯಿಲ್ಲದವರೂ ಪಡೆದುಕೊಂಡು ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಸರಕಾರದ ನಾನಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ಸಿಗಬೇಕಿರುವ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿದ್ದು, ಅನರ್ಹರ ಕಾರ್ಡ್ ಎಪಿಎಲ್ ಪಟ್ಟಿಗೆ ಸೇರಿಸಲು ಆಹಾರ ಸರಬರಾಜು ಇಲಾಖೆ ಮುಂದಾಗಿದೆ.

    ಅನರ್ಹ ಬಿಪಿಎಲ್ ಕಾರ್ಡ್​​ದಾರರನ್ನು ಪತ್ತೆ ಮಾಡಿದ್ದು ಹೇಗೆ?

    ಅನರ್ಹರು ಕೂಡ ಬಿಪಿಎಲ್‌ ಕಾರ್ಡ್ ಬಳಸುತ್ತಿದ್ದಾರೆ ಎಂಬ ಅನುಮಾನ ಬಂದ ಕೂಡಲೇ ಆಹಾರ ಇಲಾಖೆ ಕಾರ್ಡುದಾರರ ಹೆಸರಿನಲ್ಲಿ ಪರಿಶೀಲನೆ ನಡೆಸಿತ್ತು. ಕಾರ್ಡ್​​ದಾರರಲ್ಲಿ ವಾಹನಗಳು ಇವೆಯಾ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದರೆ, ಫಲಾನುಭವಿಗಳ ಹೆಸರಲ್ಲಿ ಭೂಮಿ ಎಷ್ಟಿದೆ ಎಂಬ ಮಾಹಿತಿಯನ್ನು ಕಂದಾಯ ಇಲಾಖೆ ನೀಡಿದೆ. ಇನ್ನು, ಐಟಿ ಪಾವತಿ ಬಗ್ಗೆ ಐಟಿ ಇಲಾಖೆಯಿಂದ ಮಾಹಿತಿ ಸಂಗ್ರಹ ಮಾಡಲಾಗಿದ್ದು, ಸರಕಾರಿ ನೌಕರಿ, ಸರಕಾರಿ ಪ್ರಾಯೋಜಿತ ಇಲಾಖೆ, ನಿಗಮ ಮಂಡಳಿಯಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಮಾಹಿತಿ ಕಲೆ ಹಾಕಿದೆ. ಅನರ್ಹ ಕಾರ್ಡ್‌ಗಳ ಪತ್ತೆಗಾಗಿ ಆಹಾರ ಇಲಾಖೆಗೆ ಸಾರಿಗೆ, ಕಂದಾಯ ಮತ್ತಿತರ ಇಲಾಖೆಗಳು ಸಾಥ್ ನೀಡಿದ್ದು, ಶೇ 40 ರಷ್ಟು ಅನರ್ಹರು ಪತ್ತೆಯಾಗಿದ್ದಾರೆ.

    ಬಿಪಿಎಲ್ ಕಾರ್ಡ್​​ ಹೊಂದಲು ಮಾನದಂಡವೇನು?

    • ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತಲೂ ಹೆಚ್ಚಿರಬಾರದು.
    • ವೈಟ್‌ ಬೋರ್ಡ್‌ನ ನಾಲ್ಕು ಚಕ್ರದ ವಾಹನ ಉಳ್ಳವರರು ಆಗಿರಬಾರದು.
    • ಐಟಿ ರಿಟರ್ನ್ ಪಾವತಿಸುವವರು ಆಗಿರಬಾರದು.
    • ಹಳ್ಳಿಯಲ್ಲಿ 3 ಹೆಕ್ಟೇರ್‌ ಒಣಭೂಮಿ/ ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು ಆಗಿರಬಾರದು.
    • ನಗರ ಪ್ರದೇಶಗಳಲ್ಲಿ 1000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು ಅರ್ಹರಲ್ಲ.
    • ಸರಕಾರಿ, ಅರೆಸರಕಾರಿ ಉದ್ಯೋಗದಲ್ಲಿರುವರಿಗೂ ಅರ್ಹತೆಯಿಲ್ಲ.

    ಅನರ್ಹ ಬಿಪಿಎಲ್ ಕಾರ್ಡ್​​​ದಾರರಿಗೆ ಆಹಾರ ಇಲಾಖೆ ಶಾಕ್ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಕಾರ್ಡ್ ವಿತರಣೆ ವೇಳೆ ಮತ್ತಷ್ಟು ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಕಟಪಾಡಿಯಲ್ಲಿ ವಾಹನಗಳ ಸರಣಿ ಅಪಘಾತ; ವಾಹನಗಳು ಜಖಂ

    Published

    on

    ಕಟಪಾಡಿ: ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಅ.17 ರ ಗುರುವಾರ ಸರಣಿ ಅಪಘಾತ ಸಂಭವಿಸಿದೆ.


    ತಾಂತ್ರಿಕ ತೊಂದರೆಯಿಂದ ಟ್ಯಾಂಕ್‌ವೊಂದು ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ಪರಿಣಾಮ ಕಟಪಾಡಿ ಜಂಕ್ಷನ್‌ನ ಸಿಸಿ ಕ್ಯಾಮರಾ ಸಹಿತ ವಾಹನಗಳು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ವಾಹನಗಳು ಉಡುಪಿಯತ್ತ ತೆರಳುತ್ತಿದ್ದವು ಎಂದು ತಿಳಿದು ಬಂದಿದೆ. ಪವಾಡ ಸದೃಶವಾಗಿ ಕಾರಿನಲ್ಲಿದ್ದರೂ, ದ್ವಿಚಕ್ರ ವಾಹನ ಸವಾರ ಅಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದ್ದು, ಟ್ಯಾಂಕರ್ ಸುಮಾರು ದೂರ ಚಲಿಸಿ ಮತ್ತೆ ನಿಂತಿದೆ.


    ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

    Continue Reading

    BELTHANGADY

    ಅಪ್ರಾಪ್ತ ಬಾಲಕಿಗೆ ಕಿರುಕುಳ; ಆರೋಪಿ ಅರೇಸ್ಟ್

    Published

    on

    ಬೆಳ್ತಂಗಡಿ: ಶಾಲಾ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಕೊಂಡು ಬಂದು ಮೊಬೈಲ್ ನಂಬರ್ ಕೇಳುವ ಮೂಲಕ ಆಕೆಗೆ ಕಿರುಕುಳ ನೀಡುತ್ತಿದ್ದ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

    ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಪುಲ್ಲಾಯಿ ಎನ್ನುವಲ್ಲಿ ಈ ಘಟನೆ ನಡೆದಿದೆ.

    ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ನಿವಾಸಿ, ಹುಲ್ಲು ಕಟಾವು ಯಂತ್ರದ ಮೆಕ್ಯಾನಿಕ್‌ ಆಗಿರುವ ಜುಮಾರ್‌ (24) ಬಂಧಿತ ಆರೋಪಿ. ಸಂಬಂಧಿ ಹಾಗೂ ನೆರೆಯ ವಿದ್ಯಾರ್ಥಿನಿಯೊಂದಿಗೆ ಬಾಲಕಿ ಕಾಲೇಜಿಗೆ ಹೋಗುತ್ತಿರುವ ವೇಳೆ ಕಳೆದ ಐದು ದಿನಗಳಿಂದ ಆರೋಪಿಯು ಬೈಕಿನಲ್ಲಿ ಹಿಂಬಾಲಿಸಿಕೊಂಡು ಹೋಗುತ್ತಿದ್ದ.

    ಬೈಕ್‌ನಲ್ಲಿ ಜೊತೆಯಾಗಿ ಬರುವಂತೆ ಒತ್ತಾಯಿಸಿದ್ದು ಮಾತ್ರವಲ್ಲದೆ, ಮೊಬೈಲ್‌ ನಂಬರ್ ಕೊಡುವಂತೆ ಕೇಳಿಕೊಳ್ಳುತ್ತಿದ್ದ.

    ಅಂತೆಯೇ ಅ. 15ರಂದು ಬೆಳಗ್ಗೆ 7.45 ಗಂಟೆಗೆ ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಅತ ಬೈಕ್‌ ಅನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋಗಿ ವಾಪಸು ಹಿಂದಕ್ಕೆ ತಿರುಗಿಸಿಕೊಂಡು ಬಂದು ತೊಂದರೆ ನೀಡಿದ್ದಾಗಿ ಆರೋಪಿಸಲಾಗಿದೆ.

    ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ವಿಧಾನ ಪರಿಷತ್‌ ಉಪ ಚುನಾವಣೆ: ದ.ಕ. ಜಿಲ್ಲಾದ್ಯಂತ ಮದ್ಯ ನಿಷೇಧ

    Published

    on

    ಮಂಗಳೂರು: ಕರ್ನಾಟಕ ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಉಪಚುನಾವಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಅ.19ರಂದು ಸಂಜೆ 4ರಿಂದ ಅ.21ರ ಸಂಜೆ 4ರವರೆಗೆ ಹಾಗೂ ಮತ ಎಣಿಕೆಯ ದಿನವಾದ ಅ.24ರಂದು ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

    Continue Reading

    LATEST NEWS

    Trending