Connect with us

DAKSHINA KANNADA

ಭಜರಂಗದಳದ ಸಂಶಯ ದೂರೀಕರಿಸಿದ ಮೂಡಬಿದ್ರೆ ಪೊಲೀಸರು..!

Published

on

ಮೂಡುಬಿದಿರೆ: ಪ್ರತ್ಯೇಕ ಕೋಮಿಗೆ ಸೇರಿದ ಯುವಕ-ಯುವತಿ ಜೊತೆಯಾಗಿ ಹೊರ ರಾಜ್ಯಕ್ಕೆ ತೆರಳುತ್ತಿದ್ದ ಖಚಿತ ಮಾಹಿತಿ ಪಡೆದ ಭಜರಂಗದಳದ ಕಾರ್ಯಕರ್ತರು ಜೋಡಿಗಳನ್ನು ತಡೆದು ಪೊಲೀಸರಿಗೆ ಒಪ್ಪಿಸಿದ  ಘಟನೆ ಸೋಮವಾರ ನಡೆದಿತ್ತು.ಈ ಜೋಡಿ ಗುರುಪುರ ಕೈಕಂಬದಲ್ಲಿ ಮುಂಬೈಗೆ ಹೋಗುವ ಬಸ್ ಹತ್ತಿದ್ದ ಮಾಹಿತಿಯನ್ನು  ಮಂಗಳೂರು ಭಜರಂಗದಳ ಕಾರ್ಯಕರ್ತರು  ಮೂಡುಬಿದಿರೆ ಭಜರಂಗದಳ ಕಾರ್ಯಕರ್ತರಿಗೆ ರವಾನಿಸಿದ್ದರು.  ಈ ಮಾಹಿತಿಯ ಮೇರೆಗೆ ಬಸ್ ತಡೆ ಹಾಕಿ  ಯುವ ಜೋಡಿಯನ್ನು ಪೊಲೀಸರಿಗೆ  ಒಪ್ಪಿಸಿದರು.

ಜೋಡಿಗಳ ವಿಚಾರಣೆ ನಡೆಸಿದ ಪೊಲೀಸರಿಗ ಸತ್ಯ ಸಂಗತಿ ಏನೆಂದು ಗೊತ್ತಾಗಿದೆ.ಅಸಲಿಗೆ ಯುವತಿ ಮಂಗಳೂರು ಮೂಲದವಳಾಗಿದ್ದು, ಪ್ರಸ್ತುತ ಆಕೆಯ ಕುಟುಂಬ ಗುಜರಾತಿನಲ್ಲಿ ವಾಸವಿದೆ.

ಯುವಕ ಗುಜರಾತ್ ಮೂಲದವನಾಗಿದ್ದು, ಗುಜರಾತಿನಲ್ಲಿ ಯುವತಿಯ ನೆರೆಮನೆಯವನಾಗಿದ್ದಾನೆ. ಇವರಿಬ್ಬರೂ ಪ್ರಸ್ತುತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನೌಕರರಾಗಿದ್ದಾರೆ.

ಹೀಗಾಗಿ ಇವರಿಬ್ಬರೂ  ಜೊತೆಯಾಗಿ ಗುಜರಾತಿಗೆ ಪ್ರಯಾಣ ಬೆಳೆಸಿದ್ದರು. ಇಬ್ಬರೂ ಪ್ರತ್ಯೇಕ ಕೋಮಿಗೆ ಸೇರಿದವರಾಗಿದ್ದರಿಂದ ಹಿಂದೂ ಸಂಘಟನೆಗಳ ಸಂಶಯಕ್ಕೆ ಕಾರಣವಾಗಿತ್ತು ಎಂದು ತಿಳಿದು ಬಂದಿದ್ದು ಇವರ ಸಂಶಯವನ್ನು ಮೂಡಬಿದ್ರೆ ಪೊಲೀಸರು ದೂರಮಾಡಿದ್ದಾರೆ.

DAKSHINA KANNADA

ಮಂಗಳೂರು : ಮೇ 25 ರಂದು ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ

Published

on

ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.), ಮಂಗಳೂರು ಮತ್ತು ನಾರಾಯಣ ಗುರು ಕಾಲೇಜು ಇದರ ಆಶ್ರಯದಲ್ಲಿ ಕೆ.ಎಮ್.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಸಹಕಾರದಿಂದ ಹಿಂದುಳಿದ ಸಮಾಜದ ಸಾಮಾಜಿಕ ಕ್ರಾಂತಿಯ ಹರಿಕಾರ ದಿ.ದಾಮೋದರ ಆರ್.ಸುವರ್ಣ ಜನ್ಮಶತಾಬ್ದಿ ಪ್ರಯುಕ್ತ ಮೇ 25 ರಂದು ಕುದ್ರೋಳಿ ನಾರಾಯಣ ಗುರು ಕಾಲೇಜಿನ ದಾಮೋದರ ಆರ್.ಸಭಾಂಗಣದಲ್ಲಿ ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆ ತನಕ ಈ ಕಾರ್ಯಕ್ರಮ ನಡೆಯಲಿದೆ.


ವೈದ್ಯಕೀಯ ಶಿಬಿರದಲ್ಲಿ ಕಣ್ಣು, ಕಿವಿ, ಮೂಗು, ಗಂಟಲು, ಎಲುಬು, ಕೀಲು ಮತ್ತು ಸಾಮಾನ್ಯ ರೋಗ ತಪಾಸಣೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ರೀಡಿಂಗ್ ಕನ್ನಡಕ ಅಗತ್ಯ ಇದ್ದವರಿಗೆ ಉಚಿತವಾಗಿ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವವರಿಗೆ ಕೆ.ಎಮ್.ಸಿ.ಯ ಹಸಿರು ಕಾರ್ಡ್ ನೀಡಲಾಗುವುದು.

ಇದನ್ನೂ ಓದಿ : ಟಿ 20 ವಿಶ್ವಕಪ್ ಗೆ ಲಗ್ಗೆಯಿಟ್ಟ ‘ನಂದಿನಿ’; ಕ್ರಿಕೆಟಿಗರ ಜೆರ್ಸಿಯಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌

ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಬೇಕು. ಅದೇ ರೀತಿ ರಕ್ತದಾನದಲ್ಲೂ ಸ್ವಯಂ ಸ್ಪೂರ್ತಿಯಿಂದ ಭಾಗವಹಿಸಬೇಕೆಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Continue Reading

DAKSHINA KANNADA

ಈ 7 ರೈಲು ನಿಲ್ದಾಣಗಳಲ್ಲಿ ಸಿಗುತ್ತೆ ಅತೀ ಕಡಿಮೆ ಬೆಲೆಗೆ ತಿಂಡಿ, ಊಟ

Published

on

ಮಂಗಳೂರು: ಭಾರತೀಯ ರೈಲ್ವೆ ಮಂಡಳಿಯು ಕರ್ನಾಟಕದ ಏಳು ನಿಲ್ದಾಣಗಳು ಸೇರಿದಂತೆ ದೇಶದ 100ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ಕಂಪಾರ್ಟ್ಮೆಂಟ್ ಕೋಚ್‌ಗಳ ಬಳಿ ಕಡಿಮೆ ದರದಲ್ಲಿ ಉತ್ತಮ ಆಹಾರವನ್ನು ಒದಗಿಸುವ ಕೌಂಟರ್‌ಗಳನ್ನು ತೆರೆದಿದೆ.

ಕರ್ನಾಟಕದಲ್ಲಿ ದಕ್ಷಿಣ ರೈಲ್ವೆ ಅಡಿಯಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲ್ವೆ ವಿಭಾಗಗಳಲ್ಲಿ ಸಬ್ಸಿಡಿ ಆಹಾರ ಕೌಂಟರ್‌ಗಳನ್ನು ತೆರೆಯಲಾಗಿದೆ. ಹಾಗೆಯೇ ನೈರುತ್ಯ ರೈಲ್ವೆಯ ಅಡಿಯಲ್ಲಿ ಕೆಎಸ್ಆರ್ ಬೆಂಗಳೂರು, ಯಶವಂತಪುರ, ಮೈಸೂರು, ವಿಜಯಪುರ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಲ್ಲಿ ಈ ಆಹಾರ ಕೌಂಟರ್‌ಗಳನ್ನು ತೆರೆಯಲಾಗಿದೆ.

ಈ ಯೋಜನೆಯು ಭಾರತೀಯ ರೈಲ್ವೆಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಮತ್ತು ಭಾರತೀಯ ರೈಲ್ವೆಯ ಜಂಟಿ ಉಪಕ್ರಮವಾಗಿದೆ. ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆರೋಗ್ಯಕರ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಹಿಂದೆ ಜನತಾ ಊಟದ ಸೇವೆಯ ಅಡಿಯಲ್ಲಿ ರೈಲ್ವೆ ನಿಲ್ದಾಣದ ರೆಸ್ಟೋರೆಂಟ್‌ಗಳಲ್ಲಿ ಕಡಿಮೆ ದರದ ಆಹಾರ ಲಭ್ಯವಿತ್ತು. ಈಗ ಕೌಂಟರ್‌ಗಳು ನೇರವಾಗಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ.

ಪ್ರಸ್ತುತ 100 ರೈಲು ನಿಲ್ದಾಣಗಳಲ್ಲಿ 150 ಪ್ಲಾಟ್ಫಾರ್ಮ್ಗಳು ಈ ಸೌಲಭ್ಯವನ್ನು ನೀಡುತ್ತವೆ. ಬೆಳಗಿನ ಉಪಹಾರ 20 ರೂ., ಲಘು ಊಟ 50 ರೂ., 3 ರೂ.ಗೆ 200 ಎಂಎಲ್ ನೀರು ನೀಡಲಾಗುತ್ತದೆ. ಈ ಮಾಹಿತಿಯನ್ನು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಒಟ್ಟಾರೆ ಈ ಯೋಜನೆಯು ರೈಲು ಪ್ರಯಾಣಿಕರ ಆಹಾರ ಸಮಸ್ಯೆಯನ್ನು ಪರಿಹರಿಸಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

Continue Reading

DAKSHINA KANNADA

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ: ಮೇ 19, 20ರಂದು ಆರೆಂಜ್ ಅಲರ್ಟ್‌

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೇ 18 ರಿಂದ 21 ರವರೆಗೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 19 ಮತ್ತು 20 ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಆರೆಂಜ್ ಅಲರ್ಟ್‌ ಇರುವ ದಿನಗಳಲ್ಲಿ ಮಿಂಚು, ಗುಡುಗು, ಸಿಡಿಲುಗಳಿಂದ ಕೂಡಿದ ಭಾರಿ ಮಳೆಯಾಗಲಿದೆ. ಜಿಲ್ಲೆಯ ಕೆಲವೆಡೆ 11.55 ಸೆಂ.ಮೀ ನಿಂದ 20.44 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇದೇ 18 ಮತ್ತು 21ರಂದು ಜಿಲ್ಲೆಯಲ್ಲಿ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಕೆಲವೆಡೆ 6.45 ಸೆಂ.ಮೀ ನಿಂದ 11.55 ಸೆಂ.ಮೀವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Continue Reading

LATEST NEWS

Trending