ಕಂಕನಾಡಿ: ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ 10 ಲಕ್ಷ ಅನುದಾನ ಬಿಡುಗಡೆಗೊಳಿಸಲು ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರವೇ ಅನುಮೋದನೆ ದೊರೆಯಲಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿ ಮಾತನಾಡಿದ ಅವರು, “ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗಾಗಿ ಅನುದಾನಗಳನ್ನು ತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ.
ಕಂಕನಾಡಿ ದೇಗುಲದ ಅಭಿವೃದ್ಧಿಯ ನೆಲೆಯಲ್ಲಿ 10 ಲಕ್ಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಅದನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗುವುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಪೂಜಾರಿ,
ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ಪ್ರಮುಖರಾದ ಶರಣ್ ಪಂಪ್ವೆಲ್, ಡಾ. ರೋಶನ್ ನೆಕ್ಕರೆಮಾರ್,
ರಘುವೀರ್ ಗಂಗೆಮನೆ, ನಾರಾಯಣ ಪೂಜಾರಿ ಗಂಗೆಮನೆ, ರಾಮ ಗಣೇಶ್ ದಂಬೆ, ನ್ಯಾಯವಾದಿ ಶಿವರಾಮ್ ಮಣಿಯಾಣಿ, ವಸಂತ್ ಜೆ ಪೂಜಾರಿ, ಗುಣರಾಜ್ ಕುಂಞಗುಡ್ಡೆ, ದಿನೇಶ್ ಎಂ ಗಂಗಾ ಬಡಾವಣೆ, ನಾಗೇಶ್ ಕಲ್ಲೂರು
ಚೇತನ್ ದೇವಾಡಿಗ, ಭರತ್ ರಾಮ್ ಗಂಗೆಮನೆ, ಕಿಶೋರ್ ಎಕ್ಕೂರು, ರಾಮಕೃಷ್ಣ ಶೆಟ್ಟಿ ಕಡೆಕಾರ್, ದೀಪಕ್ ಪೂಜಾರಿ ಅಳಪೆ ಮುಂತಾದವರು ಉಪಸ್ಥಿತರಿದ್ದರು.