ಗುರುಪುರ: 25 ಲಕ್ಷ ರೂಪಾಯಿ ಅನುದಾನದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಗಂಜಿಮಠ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೊಗರು ಗ್ರಾಮದ ಬಹುಕಾಲದ ಬೇಡಿಕೆಯಾದ ಕಾಲುಸಂಕ ರಚನೆಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಪಾದೆ ವಸಂತ್ ಇವರ ಮನೆ ಬಳಿ ಕಾಲುಸಂಕ ರಚನೆ ಹಾಗೂ ಮೊಗರು ಗ್ರಾಮದ ವೊಡ್ಪೆಲ್ ಮಾರ್ ಹರಿಯಪ್ಪ ಪೂಜಾರಿ ಮನೆ ಬಳಿ ಕಾಲುಸಂಕ ರಚನೆ ಮತ್ತು ನಾರಾಯಣ ಅಂಚನ್ ಇವರ ಮನೆ ಬಳಿ ಕಾಲುಸಂಕ ರಚನೆ ಮತ್ತು ಮೊಗರು ಗ್ರಾಮದ ಅನಿಲ್ ಮೆಂಡರ್ ತೋಟದ ಬಳಿ ಕಾಲುಸಂಕ ರಚನೆಗೆ ಒಟ್ಟು ರೂಪಾಯಿ 25 ಲಕ್ಷ ರೂಪಾಯಿ ಅನುದಾನದ ಯೋಜನೆಯನ್ನು ಹಾಕಲಾಗಿದೆ.
ಈ ಕಾರ್ಯಕ್ರಮದಲ್ಲಿ ಗುರುಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಸೋಹನ್ ಅತಿಕಾರಿ, ಗಂಜಿಮಠ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕಾರ್ಯಕರ್ತರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.