Connect with us

DAKSHINA KANNADA

ಕೊರೊನಾ ಮಹಾಮಾರಿಯ ಸ್ಥಿತಿಗತಿಗಳ ಸವಿವರ; ಶ್ವೇತಪತ್ರ ಹೊರಡಿಸಲು ಶಾಸಕ ಯು.ಟಿ ಖಾದರ್ ಒತ್ತಾಯ

Published

on

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಶಾಸಕ ಯು.ಟಿ. ಖಾದರ್ ಒತ್ತಾಯಿಸಿದ್ದಾರೆ.ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೊರೊನಾ ಸಾಂಕ್ರಮಿಕವಾಗಿ ಹರಡಿದ್ದು, ಹಳ್ಳಿಗಳಿಗೂ ವಿಸ್ತರಿಸಿ ಗಂಭೀರ ಸ್ವರೂಪ ಪಡೆದಿದೆ.

ಕೊರೊನಾ ರೋಗವನ್ನೇ ಮುಂದಿಟ್ಟು ಆನೇಕ ಆಸ್ಪತ್ರೆಗಳು ರೋಗಿಗಳಿಂದ ಅಪಾರ ಪ್ರಮಾಣದಲ್ಲಿ ಹಣ ಪಡೆಯುತ್ತಿರುವ ಆರೋಪಗಳು ಕೇಳಿ ಬಂದಿವೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಷ್ಟು ಕೋರೊನಾ ರೋಗ ಪೀಡಿತರಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳೆಷ್ಟು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಎಷ್ಟು ಜನರಿದ್ದಾರೆ ? ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬ ಗೊಂದಲಗಳಿದ್ದು ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.

ಇನ್ನು ಜಿಲ್ಲಾಧಿಕಾರಿಗಳೊಂದಿಗೆ ನಿನ್ನೆ ಪ್ರಧಾನಿಯವರು ಮಾಡಿದ ವಿಡಿಯೋ ಸಂವಾದ ಬಗ್ಗೆ ಪ್ರಸ್ತಾಪಿಸಿದ ಅವರು ಡಿಸಿಗಳನ್ನು ಪ್ರಧಾನ ಮಂತ್ರಿಗಳು ಕಮಾಂಡರ್ ಇನ್ ಚೀಫ್ ಎಂದು ಕರೆದಿದ್ದಾರೆ.

ಈಗಾಗಲೇ ಜಿಲ್ಲಾಧಿಕಾರಿಗಳು ನ್ಯಾಯಾಧಿಕರಣದ ಅಧಿಕಾರ ಹೊಂದಿದ್ದಾರೆ. ಕಮಾಂಡರ್ ಇನ್ ಚೀಫ್  ಮಾಡಿ ಮತ್ತೆ ಯಾವ ಪವರ್ ಕೊಟ್ಟಿದ್ದಾರೆ ?

ಕಮಾಂಡರ್ ಇನ್ ಚೀಫ್  ಅಂತಹ ಹೇಳಿಕೆಗೆ ನೀವು ಕೊಟ್ಟ ಪವರ್ ಏನು ? ತಹಶಿಲ್ದಾರರು.ಎಸಿ ಕೆಲಸ ಮಾಡದೆ ಇದ್ದರೆ ಅವರ ಮೇಲೆ ಆ್ಯಕ್ಷನ್ ತೆಗೆದುಕೊಳ್ಳುವ ಪವರ್ ಕೂಡ ಡಿ.ಸಿ ಯವರಿಗೆ ಇಲ್ಲ ಅಂದ ಮೇಲೆ ಜಿಲ್ಲಾ ಆರೋಗ್ಯಧಿಕಾರಿ ಅಥವಾ ಡಾಕ್ಟರ್ ಕೆಲಸ ಮಾಡದೆ ಇದ್ರೆ ಅವರನ್ನ ವರ್ಗಾವಣೆ ಮಾಡುವ ಪವರ್ ಡಿ.ಸಿ ಯವರಿಗೆ ಇದೆಯಾ..?

ಈ ಎಲ್ಲಾ ಪವರ್ ಕೊಡದೆ ಮತ್ತೆ ಏನು‌ ಹೊಸ ಪವರ್ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಖಾದರ್ ಜನರ ಕಷ್ಟ ಇನ್ನೂ ಕೇಂದ್ರ ಸರಕಾರಕ್ಕೆ ಅರ್ಥವಾಗಿಲ್ಲ.

ಕಮಾಂಡರ್ ಇನ್ ಚೀಫ್ ಎಂದು ಹೇಳಿ ಜನರನ್ನ ಮೂರ್ಖರನ್ನಾಗಿ ಮಾಡಲು ಹೊರಟಿದೆ. ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಪ್ರಧಾನ ಮಂತ್ರಿಯವರು ಸೂಚಿಸುತ್ತಾರೆ.

ನಮ್ಮಲ್ಲಿ ಈಗಾಗಲೇ ಟಾಸ್ಕ್ ಫೋರ್ಸ್ ರಚನೆಯಾಗಿ ಎರಡು ತಿಂಗಳೇ ಕಳೆದಿವೆ ಇದರಲ್ಲೇ ನಮ್ಮ ಪ್ರಧಾನಿಗಳು ಎಷ್ಟು ಹಿಂದೆ ಇದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಸಿಡಿಲ ಬಡಿತಕ್ಕೆ ನವವಿವಾಹಿತ ದುರ್ಮರ*ಣ..!10 ದಿನಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ವಿಧಿಯಾಟಕ್ಕೆ ಬ*ಲಿ!!

Published

on

ಕಡಬ:  ಹದಿನೈದು ದಿನಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವವಿವಾಹಿತ ಸಿಡಿಲು ಬಡಿದು ಸಾವನಪ್ಪಿರುವ ಘಟನೆ ಮೇ.3ರ ಸಂಜೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಇಲ್ಲಿನ ಪರ್ವತಮುಖಿ ನಿವಾಸಿ ಸೋಮಸುಂದರ್(34 ವ)ಮೃತಪಟ್ಟವರು.

death

ಸುಬ್ರಹ್ಮಣ್ಯದಲ್ಲಿ ಮಳೆ ಆರಂಭಕ್ಕೂ ಮೊದಲು ಗಾಳಿ, ಗುಡುಗು ಆರಂಭಗೊಡಿತ್ತು. ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ರಾಶಿ ಮಾಡುತ್ತಿದ್ದ ವೇಳೆ ಸೋಮಸುಂದರ್‌ರವರಿಗೆ ಸಿಡಿಲು ಬಡೆದಿದೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಮುಂಧೆ ಓದಿ..; ಉಳ್ಳಾಲ : ಕಾರು ಡಿ*ಕ್ಕಿ; ಇಹಲೋಕ ಇಹಲೋಕ ತ್ಯಜಿಸಿದ ಬಿಜೆಪಿ ಕಾರ್ಯಕರ್ತ

10 ದಿನಗಳ ಹಿಂದೆಯಷ್ಟೆ ಏ.18ರಂದು ಮೋಹಿನಿ(ಪವಿತ್ರ) ಎಂಬವರ ಜೊತೆ ಸುಬ್ರಹ್ಮಣ್ಯದ ಆದಿಸುಬ್ರಹ್ಮಣ್ಯ ಸಭಾಭವನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ವಿಧಿಯಾಟಕ್ಕೆ ಸೋಮಸುಂದರ್ ಬಲಿಯಾಗಿದ್ದಾರೆ. ಹೊಸೋಳಿಕೆ ಪರ್ವತಮುಖಿ ದಿ.ಸಾಂತಪ್ಪ ಗೌಡರ ಪುತ್ರ ಸೋಮಸುಂದರ್ ಪರ್ವತಮುಖಿ ಬಳಿ ಕಾರ್ ವಾಷಿಂಗ್ ಉದ್ಯಮವನ್ನು ನಡೆಸುತ್ತಿದ್ದರು. ಮದುವೆ ಸಂಭ್ರಮ ಮಾಸುವ ಮುನ್ನವೇ ಮನೆಯಲ್ಲಿ ಸಾವಿನ ಛಾಯೆ ಮೂಡಿದೆ. ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ. ಮೃತರು ತಾಯಿ, ತಂಗಿ ಮತ್ತು ಪತ್ನಿಯನ್ನು ಅಗಲಿದ್ದಾರೆ.

Continue Reading

DAKSHINA KANNADA

ಉಳ್ಳಾಲ : ಕಾರು ಡಿ*ಕ್ಕಿ; ಇಹಲೋಕ ಇಹಲೋಕ ತ್ಯಜಿಸಿದ ಬಿಜೆಪಿ ಕಾರ್ಯಕರ್ತ

Published

on

ಉಳ್ಳಾಲ : ಕಾರು ಡಿ*ಕ್ಕಿ ಹೊಡೆದು ಪಾದಚಾರಿ ಬಿಜೆಪಿ ಕಾರ್ಯಕರ್ತ ಮೃ*ತಪಟ್ಟ ಘಟನೆ ರಾ.ಹೆ.66 ರ ಕೋಟೆಕಾರು ಬಳಿಯ ಅಡ್ಕ ಎಂಬಲ್ಲಿ ನಡೆದಿದೆ. ಕೋಟೆಕಾರು ನೆಲ್ಲಿ ಸ್ಥಳ ಕಾಳಿಕಾಂಬ ದೇವಸ್ಥಾನದ ಬಳಿಯ ನಿವಾಸಿ ಶ್ರೀಕಾಂತ್ (46)ಮೃ*ತಪಟ್ಟವರು. ಶ್ರೀಕಾಂತ್ ಆಟೋ ಇಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದರು.

ಶುಕ್ರವಾರ ಮಧ್ಯಾಹ್ನ ಅಡ್ಕದಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಕೇರಳದಿಂದ ಧಾವಿಸುತ್ತಿದ್ದ ಕಾರು ಶ್ರೀಕಾಂತ್ ಗೆ ಡಿ*ಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಶ್ರೀಕಾಂತ್ ರನ್ನು ಅಪಘಾ*ತ ನಡೆಸಿದ ಕಾರು ಚಾಲಕನೇ ಮಂಗಳೂರಿನ‌ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕೊಡದೆ ಮೃ*ತಪಟ್ಟಿದ್ದಾರೆ.

ಇದನ್ನೂ ಓದಿ : ಮಂಗಳೂರು : ನಾಳೆಯಿಂದ ರೇಶನಿಂಗ್ ಆರಂಭ; ಎಲ್ಲೆಲ್ಲಿ ನೀರಿಲ್ಲ?

ಮೃ*ತ ಶ್ರೀಕಾಂತ್ ತುಳುನಾಡು ಫ್ರೆಂಡ್ಸ್ ಕೋಟೆಕಾರುವಿನ ಸಕ್ರಿಯ ಸದಸ್ಯರಾಗಿದ್ದು, ಬಿಜೆಪಿಯ ಕಾರ್ಯಕರ್ತರಾಗಿದ್ದರು. ಶ್ರೀಕಾಂತ್ ಅವಿವಾಹಿತರಾಗಿದ್ದು ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಮಂಗಳೂರು : ನಾಳೆಯಿಂದ ರೇಶನಿಂಗ್ ಆರಂಭ; ಎಲ್ಲೆಲ್ಲಿ ನೀರಿಲ್ಲ?

Published

on

ಮಂಗಳೂರು: ಕರಾವಳಿಗೆ ಬಿರುಬೇಸಿಗೆಯ ಬಿಸಿ ಭಾರೀ ತಟ್ಟಿದ್ದು, ನೀರಿನ ಅಭಾವ ಎದುರಾಗಿದೆ. ಮಂಗಳೂರು ಮಹಾ ನಗರಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಹೀಗಾಗಿ ಮಂಗಳೂರು ನಗರ ಪಾಲಿಕೆ ಆಯುಕ್ತರು ಮೇ 5 ರಿಂದ ನೀರಿನ ರೇಶನಿಂಗ್ ಆರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಲಭ್ಯವಿರುವ ನೀರನ್ನು ಮಂಗಳೂರು ನಗರ (ಮಂಗಳೂರು ನಗರ ದಕ್ಷಿಣ) ಮತ್ತು ಸುರತ್ಕಲ್ (ಮಂಗಳೂರು ನಗರ ಉತ್ತರ ಭಾಗಕ್ಕೆ) ಪರ್ಯಾಯ ದಿನಗಳಲ್ಲಿ ನೀರು ಬಿಡಲು ಕ್ರಮ ವಹಿಸಲಾಗಿದೆ.

ಬೆಂದೂರು ಸ್ಥಾವರದಿಂದ ನೀರು ಪೂರೈಕೆ :

ಮೇ 5ರಿಂದ ಬೆಸ ದಿನಗಳಲ್ಲಿ ಬೆಂದೂರು ಸ್ಥಾವರದಿಂದ ಕೋರ್ಟ್ ಪ್ರದೇಶ, ಕಾರ್‌ಸ್ಟ್ರೀಟ್, ಬಾವುಟಗುಡ್ಡ, ಆಕಾಶವಾಣಿ, ಪದವು, ಗೋರಿಗುಡ್ಡ, ಸೂಟರ್‌ಪೇಟೆ, ಶಿವಬಾಗ್, ಕದ್ರಿ, ವಾಸ್‌ಲೇನ್, ಬೆಂದೂರು, ಲೋವರ್ ಬೆಂದೂರು, ಕುದ್ರೋಳಿ, ಕೋಡಿಯಾಲ್ ಬೈಲ್ ಮತ್ತು ಪಡೀಲ್ ಸ್ಥಾವರದಿಂದ ಮಂಗಳಾದೇವಿ, ಅತ್ತಾವರ, ಬಾಬುಗುಡ್ಡ, ವೆಲೆನ್ಸಿಯಾ, ಜಪ್ಪಿನಮೊಗರು, ಬಿಕರ್ನಕಟ್ಟೆ, ಉಲ್ಲಾಸ್‌ನಗರ, ಬಜಾಲ್, ತಿರುವೈಲು, ವಾಮಂಜೂರು ಹಾಗೂ ಶಕ್ತಿನಗ ಟ್ಯಾಂಕ್‌ನಿಂದ ಕುಂಜತ್ತಬೈಲ್, ಮೊಗ್ರೊಡಿ, ಶಕ್ತಿನಗರ, ಸಂಜಯನಗರ, ಪ್ರೀತಿನಗರ, ಮಂಜಡ್ಕ, ರಾಜೀವ ನಗರ, ಬೋಂದೆಲ್, ಗಾಂಧಿ ನಗರ, ಶಾಂತಿನಗರ, ಕಾವೂರು ಮತ್ತು ತುಂಬೆ – ಪಣಂಬೂರು ನೇರ ಲೈನ್‌ನಿಂದ ಕಂಕನಾಡಿ, ನಾಗುರಿ, ಪಂಪ್‌ವೆಲ್, ಬಳ್ಳೂರುಗುಡ್ಡೆ, ಪಡೀಲ್‌ಗೆ ನೀರು ಪೂರೈಕೆ ಮಾಡಲಾಗುವುದು.

ಪಣಂಬೂರು ಸ್ಥಾವರದಿಂದ ನೀರು ಪೂರೈಕೆ :

ಮೇ 6 ರಿಂದ ಪಣಂಬೂರು ಸ್ಥಾವರದಿಂದ ಸುರತ್ಕಲ್, ಎನ್‌ಐಟಿಕೆ, ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲನಿ, ಬೈಕಂಪಾಡಿ, ಪಣಂಬೂರು, ಮೀನಕಳಿಯ ಮತ್ತು ಪಡೀಲ್ ಸ್ಥಾವರದಿಂದ ಬಜಾಲ್, ಜಲ್ಲಿಗುಡ್ಡ, ಮುಗೇರ್, ಎಕ್ಕೂರು, ಸದಾಶಿವ ನಗರ, ಅಳಪೆ, ಮೇಘ ನಗರ, ಮಂಜಳಿಕೆ, ಕಂಕನಾಡಿ ರೈಲ್ವೆ ಸ್ಟೇಷನ್, ಕುಡುಪು, ಪಾಂಡೇಶ್ವರ, ಸ್ಟೇಟ್‌ ಬ್ಯಾಂಕ್, ಗೂಡ್ಸ್‌ಶೆಡ್, ಬಂದರ್ ದಕ್ಕೆ,ಕಣ್ಣೂರು, ನಿಡ್ಡೆಲ್, ಶಿವನಗರ. ಕೊಡಕ್ಕಲ್, ನೂಜಿ, ಸರಿಪಳ್ಳ, ಉಲ್ಲಾಸ್ ನಗರ, ವೀರನಗದ ಹಾಗೂ ಶಕ್ತಿನಗರ ಟ್ಯಾಂಕ್‌ನಿಂದ ಕಂಡೆಟ್ಟು, ಕುಲಶೇಖರ, ಮರೋಳಿ, ಕಕ್ಕೆಬೆಟ್ಟು, ಸಿಲ್ವರ್ ಗೇಟ್, ಕೊಂಗೂರು ಮಠ, ಪ್ರಶಾಂತ್ ನಗರ ಮತ್ತು ತುಂಬೆ-ಪಣಂಬೂರು ನೇರ ಲೈನ್‌ನಿಂದ ಮುಡಾ ಪಂಪ್ ಹೌಸ್, ಕೊಟ್ಟಾರ ಚೌಕಿ ಪಂಪ್‌ಹೌಸ್, ಕೂಳೂರು ಪಂಪ್‌ಹೌಸ್, ಕಾಪಿಕ್ಕಾಡ್, ದಡ್ಡಲ್‌ಕಾಡ್, ಬಂಗ್ರ ಕೂಳೂರುಗೆ ನೀರು ಸರಬರಾಜು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪೋಲು ಮಾಡಿದಲ್ಲಿ ನೀರು ಕಡಿತ :

ಕಟ್ಟಡ ರಚನೆ ಮತ್ತಿತರ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್‌ಗಳ ಜೋಡಣೆ ಯನ್ನು ಮುಂದಿನ ಸೂಚನೆಯವರೆಗೆ ಕಡಿತಗೊಳಿಸುವುದು. ಸಾರ್ವಜನಿಕರು ನೀರನ್ನು ಅನವಶ್ಯಕವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ಯಾವುದೇ ಸೂಚನೆ ನೀಡದೆ ಜೋಡಣೆ ಕಡಿತಗೊಳಿಸುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ :

ಸಂಪರ್ಕ ಸಂಖ್ಯೆ :

ಕುಡಿಯುವ ನೀರಿನ ಸಮಸ್ಯೆಯಾದರೆ ದೂ.ಸಂ: ಪಡೀಲ್ ರೇಚಕ ಸ್ಥಾವರ-0824-2220364 ಹಾಗೂ ಮನಪಾ ವಾಟ್ಸ್‌ಆ್ಯಪ್ ಸಂಖ್ಯೆ 9449007722/ಮನಪಾ ಕಂಟ್ರೋಲ್ ರೂಮ್- 0824-2220319/2220306ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Continue Reading

LATEST NEWS

Trending