Connect with us

    LATEST NEWS

    ಶಾಸಕ ಜನಾರ್ದನ ರೆಡ್ಡಿ ರೇಂಜ್ ರೋವರ್ ಕಾರು ಪೊಲೀಸ್ ವಶಕ್ಕೆ

    Published

    on

    ಮಂಗಳೂರು/ಕೊಪ್ಪಳ : ಮುಖ್ಯಮಂತ್ರಿಗಳ ಬೆಂಗಾವಲು ವಾಹನಗಳ ಎದುರಾಗಿ ಕಾರು ಚಲಾಯಿಸಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿಗೆ ಸೇರಿದ್ದ ರೇಂಜ್ ರೋವರ್ ಕಾರನ್ನುಗಂಗಾವತಿ ಸಂಚಾರಿ ಠಾಣೆ ಪೊಲೀಸರು ಇಂದು(ಅ.8) ಸೀಜ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕಾರು ಜಪ್ತಿ ಮಾಡಿದ ಪೊಲೀಸರು ಗಂಗಾವತಿಗೆ ತಂದಿದ್ದಾರೆ.

    ಝೀರೋ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದರಿಂದ ಪೊಲೀಸರು ರೆಡ್ಡಿಯ ಮೂವರು ಕಾರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ರೆಡ್ಡಿ ಪ್ರತಿಕ್ರಿಯೆ :

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜನಾರ್ದನ ರೆಡ್ಡಿ, ರಾಜಕೀಯವಾಗಿ ಸಿದ್ದರಾಮಯ್ಯ ಏನೇ ಇದ್ದರೂ, ತೊಂದರೆ ಕೊಟ್ಟರೂ, ಸಿದ್ದರಾಮಯ್ಯ ಅಲ್ಲದೇ ಹೋದರೂ ಸಿಎಂ‌ ಎಂದು ಮರ್ಯಾದೆ ಕೊಡುತ್ತೇನೆ. ನಾನು ಅಂದು ಗಂಗಾವತಿಗೆ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಹೋಗಿದ್ದೆ. ಬಳ್ಳಾರಿಯಲ್ಲಿ ಮನೆಯಲ್ಲಿ ಹೋಮ‌ ನಡೆಯುತ್ತಿತ್ತು. ಪೂರ್ಣಾಹುತಿಗೆ ಬರಬೇಕು ಎಂದು ಹೇಳಿದ್ದರು. ಹಾಗಾಗಿ ಮನೆಗೆ ಹೊರಟಿದ್ದೆ. ಕಾರಿನಲ್ಲಿ ಸಿಸಿ ಕ್ಯಾಮೆರಾ ಇದೆ, ದೃಶ್ಯಾವಳಿ ಕೊಡುತ್ತೇನೆ. ಅರ್ಧ ಗಂಟೆ ಕಾಲ ಕಾದರೂ ಕಾನ್ವೇ ಬರಲಿಲ್ಲ. ನಾನು ಪೊಲೀಸರಿಗೆ ಹೇಳಿ ಹೋಗಬಹುದಿತ್ತು. ನನ್ನ ಮುಂದೆ ಇರುವ ವಾಹನ ಬಿಟ್ಟರೆ ಅವರಿಗೆ ಸಮಸ್ಯೆ ಆಗುತ್ತದೆ ಎಂದು ಸಿಎಂ ಬರುವ ಮೊದಲು ಹೋಗಬೇಕು ಎಂದು ಡಿವೈಡರ್ ಮೇಲೆ ಹೋದೆ. ಅಷ್ಟು ಮೂರ್ಖತನ ನನಗಿಲ್ಲ ಎಂದರು.

    ಇದನ್ನೂ ಓದಿ : ಅಯ್ಯೋ ದುರ್ವಿಧಿಯೇ! ಭೀಕರ ಅಪಘಾ*ತ ಸಂಭವಿಸಿ ಒಂದೇ ಕುಟುಂಬದ ನಾಲ್ವರ ದುರ್ಮರಣ

    ಏನಿದು ಘಟನೆ?

    ಅ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಮಾರ್ಗವಾಗಿ ರಾಯಚೂರಿನಿಂದ ಜಿಂದಾಲ್ ಏರ್​ಪೋರ್ಟ್​ಗೆ ತೆರಳುತ್ತಿದ್ದರು. ಈ ವೇಳೆ ರೆಡ್ಡಿ ಕಾರು ಚಾಲಕ ಸಿಎಂ ಬೆಂಗಾವಲು ವಾಹನಕ್ಕೆ ಎದುರಾಗಿ ಚಾಲನೆ ಮಾಡಿದ್ದ. ರೂಲ್ಸ್ ಬ್ರೇಕ್ ಹಿನ್ನೆಲೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಬಳಸುವ ರೇಂಜ್ ರೋವರ್, ಸ್ಕಾರ್ಪಿಯೊ ಹಾಗೂ ಫಾರ್ಚೂನರ್ ಸೇರಿ  ಮೂರು ಕಾರುಗಳ ಮೇಲೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು. ಅದರಂತೆ ಇಂದು ಬೆಂಗಳೂರಿನಲ್ಲಿ ಕಾರನ್ನು ಸೀಜ್​ ಮಾಡಲಾಗಿದೆ.

    LATEST NEWS

    ವರದಕ್ಷಿಣೆಗಾಗಿ ಗೃಹಣಿಯ ಕತ್ತು ಹಿಸುಕಿ ಕೊ*ಲೆ

    Published

    on

    ಮಂಗಳೂರು/ಹುಬ್ಬಳ್ಳಿ: ತವರು ಮನೆಯಿಂದ ವರದಕ್ಷಿಣೆ ತರದ್ದಕ್ಕೆ ಗಂಡನ ಮನೆಯವರು ಗೃಹಿಣಿಯ ಕತ್ತು ಹಿಸುಕಿ ಕೊ*ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿಶಾಲ ನಗರದಲ್ಲಿ ನಡೆದಿದೆ.

    ಹೀನಾ ಕೌಸರ(28) ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಗೃಹಿಣಿ. ಎರಡೂ ವರ್ಷದ ಹಿಂದೆ ಮಹಮ್ಮದ್ ಅಜರುದ್ದೀನ್ ಎಂಬಾತನೊಂದಿಗೆ ಹೀನಾ ಮದುವೆಯಾಗಿತ್ತು. ಮದುವೆಯ ಹೊಸತರಲ್ಲಿ ಎಲ್ಲವೂ ಚೆನ್ನಾಗಿ ಇತ್ತು. ನಂತರ ಮಹಮ್ಮದ್ ಕುಟುಂಬಸ್ಥರು ಹೀನಾಗೆ ವರದಕ್ಷಿಣೆ ತರುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.
    ಈ ಹಿಂದೆ ಹಲವು ಬಾರಿ ಮಹಮ್ಮದ್ ಕುಟುಂಬಸ್ಥರಿಗೆ ಹಿರಿಯರು ಬುದ್ಧಿವಾದ ಹೇಳಿದ್ದರು. ಆದರೂ ಹೀನಾಳಿಗೆ ವರದಕ್ಷಿಣೆ ಕಿರುಕುಳ ಮಾತ್ರ ಮುಂದುವರೆದಿತ್ತು.
    ಭಾನುವಾರವೂ ವರದಕ್ಷಿಣೆ ತರುವಂತೆ ಹೀನಾಳೊಂದಿಗೆ ಮಹಮ್ಮದ್ ಕುಟುಂಬಸ್ಥರು ಜಗಳವಾಡಿದ್ದರು. ಗಂಡ ಮಹಮ್ಮದ್ ಅಜರುದ್ದೀನ್, ಅತ್ತೆ ಫರಿದಾಬಾನು, ಮಾವ ಕರೀಮ್‌ಸಾಬ್, ಹಾಗೂ ನಾದಿನಿ ಶಬ್ಬೋ ಸೇರಿ ಆಕೆಯನ್ನು ಕ*ತ್ತು ಹಿಸುಕಿ ಕೊಂದಿದ್ದಾರೆ ಎಂದು ಆರೋಪಿಸಿ ಹೀನಾ ತಂದೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

     

    Continue Reading

    LATEST NEWS

    ವರದಕ್ಷಿಣೆ ಕಿರುಕುಳ – ಕೆರೆಗೆ ಹಾರಿ ಮಹಿಳೆ ಆತ್ಮ*ಹತ್ಯೆ

    Published

    on

    ಮಂಗಳೂರು/ಕೊಲಾರ: ಪತಿ ಮತ್ತು ಆತನ ಕುಟುಂಬಸ್ಥರಿ0ದ ನಿರಂತರ ವರದಕ್ಷಿಣಿ ಕಿರುಕುಳದಿಂದಾಗಿ ಬೇಸತ್ತು ಮಹಿಳೆ ಕೆರೆಗೆ ಹಾರಿ ಆತ್ಮ*ಹತ್ಯೆಗೆ ಶರಣಾದ ಘಟನೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ.

    ಆತ್ಮ*ಹತ್ಯೆಗೆ ಶರಣಾದ ಮಹಿಳೆಯನ್ನು ಕೊಲಾರದ ಕೆಜಿಎಫ್‌ನ ಕಂಗನಲ್ಲೂರು ಗ್ರಾಮದ ಸೌಮ್ಯ (25) ಎಂದು ಗುರುತಿಸಲಾಗಿದೆ.
    ಅ. 6ರ ಭಾನುವಾರ ಬಂಗಾರಪೇಟೆ ಪಟ್ಟಣದ ಅಮರಾವತಿ ಬಡಾವಣೆಯಲ್ಲಿರುವ ತಾಯಿಯ ಮನೆಗೆ ಬಂದಿದ್ದ ಸೌಮ್ಯ, ರಾತ್ರಿ ಮನೆಯಿಂದ ಹೊರ ಬಂದು ಕೆರೆಗೆ ಹಾರಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಎರಡು ವರ್ಷದ ಹಿಂದೆ ಸುನಿಲ್ ಕುಮಾರ್ ಎಂಬಾತನ ಜೊತೆ ಸೌಮ್ಯ ಮದುವೆಯಾಗಿದ್ದರು.
    ಮೃ*ತ ಮಹಿಳೆಯ ಪೋಷಕರು ಆಕೆಯ ಪತಿ ಸುನಿಲ್ ಕುಮಾರ್ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಸೌಮ್ಯ ಆತ್ಮ*ಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    Continue Reading

    LATEST NEWS

    ವಿದ್ಯುತ್ ತಂತಿ ಸ್ಪರ್ಶಿಸಿ ಮಗು ಸಹಿತ ಎರಡು ಕರಡಿ ಮೃ*ತ್ಯು

    Published

    on

    ಮಂಗಳೂರು/ಹಾಸನ: ವಿದ್ಯುತ್ ತಂತಿ ಸ್ಪರ್ಶಿಸಿ 3 ಕರಡಿಗಳು ಮೃ*ತಪಟ್ಟ ಘಟನೆ ಅರಸೀಕೆರೆ ತಾಲೂಕಿನ ಕಲ್ಲುಸಾಗರಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ತಡವಾಗಿ ಸ್ಥಳೀಯರ ಗುರುತಿಸಿದ್ದಾರೆ.


    ಹಾಸನದ ಗುಡ್ಡಗಾಡು ಪ್ರದೇಶಗಳಲ್ಲಿ ಕರಡಿಗಳು ಹೆಚ್ಚಾಗಿದ್ದು, ಕಳೆದ 6 ತಿಂಗಳಲ್ಲಿ ಸುಮಾರು ಐದಾರು ಮಂದಿ ದಾಳಿ ಮಾಡಿ ಗಾಯ**ಗೊಳಿಸಿದ್ದವು.


    ಅರಣ್ಯ ಪ್ರದೇಶದ ಬಳಿ ವಿದ್ಯುತ್ ಕಂಬದಿಂದ ತಂಡಾಗಿ ಬಿದ್ದಿದ್ದ ತಂತಿ ತುಳಿದ ಹಿನ್ನಲೆ ತಾಯಿ ಮತ್ತು ಮರಿ ಕರಡಿಯ ಜೊತೆ ಗಂಡು ಕರಡಿ ಸಾವಿಗೀಡಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

    Continue Reading

    LATEST NEWS

    Trending