Connect with us

    LATEST NEWS

    ನಾಪತ್ತೆಯಾಗಿದ್ದ ಮಹಿಳೆ 3 ವರ್ಷದ ಬಳಿಕ ಪ್ರಿಯಕರನ ಮನೆಯಲ್ಲಿ ಪತ್ತೆ..!

    Published

    on

    ಮಂಗಳೂರು/ಉತ್ತರಪ್ರದೇಶ: ಯಾರಿಗೂ ಊಹಿಸಲು ಅಸಾಧ್ಯ ಎಂಬಂತೆ ಮೂರು ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಕರನ ಮನೆಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆ ನಾಪತ್ತೆಯಾಗಿದ್ದಾಗ ಆಕೆಯ ಪತಿ ಹಾಗೂ ಅತ್ತೆಯ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.


    ಆಕೆಯನ್ನು ಅಪಹರಿಸಿ ಕೊ*ಲೆ ಮಾಡಲಾಗಿದೆ ಎಂದು ಅಂದಾಜಿಸಲಾಗಿತ್ತು, 3 ವರ್ಷಗಳಿಂದ ಕಾಣಿಸಿಕೊಳ್ಳದ ಆಕೆ ಲಕ್ನೋದಲ್ಲಿ ಬಾಯ್​ಫ್ರೆಂಡ್​ ಜತೆ ಇರುವುದು ತಿಳಿದುಬಂದಿದೆ. ಕವಿತಾ ಎಂಬುವವರು 2017 ರ ನವೆಂಬರ್ 17 ರಂದು ದಾದುಹಾ ಬಜಾರ್​ನ ವಿನಯ್​ ಎಂಬುವವರನ್ನು ವಿವಾಹವಾಗಿದ್ದರು, ಮೇ 5, 2021 ರಂದು ಅತ್ತೆ ಮನೆಯಿಂದ ನಾಪತ್ತೆಯಾಗಿದ್ದಳು.
    ಇದೇ ವೇಳೆ ಕವಿತಾ ಮನೆಯವರು ಆಕೆಯ ಅತ್ತೆ ಹಾಗೂ ಪತಿಯ ವಿರುದ್ಧ ದೂರು ದಾಖಲಿಸಿದ್ದರು. ಎಷ್ಟೇ ಹುಡುಕಿದರೂ ಎಲ್ಲಿದ್ದಾಳೆ ಎಂಬುವುದು ತಿಳಿಯಲಿಲ್ಲ. ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಮತ್ತು ಕೊತ್ವಾಲಿ ಪೊಲೀಸರು ಲಕ್ನೋದ ದಲಿಗಂಜ್ ಪ್ರದೇಶದಲ್ಲಿ ಆಕೆಯ ಗೆಳೆಯ ಸತ್ಯ ನಾರಾಯಣ ಗುಪ್ತನ ನಿವಾಸದಲ್ಲಿ ಪತ್ತೆ ಮಾಡಿದ್ದಾರೆ,
    ಸತ್ಯ ನಾರಾಯಣ್  ಗೊಂಡಾದ ದುರ್ಜನ್‌ಪುರ ಮಾರುಕಟ್ಟೆಯಲ್ಲಿ ಅಂಗಡಿಯನ್ನು ಹೊಂದಿದ್ದ. ಕವಿತಾ ಅವರನ್ನು ಆಗಾಗ ಭೇಟಿ ಮಾಡುತ್ತಿದ್ದ ಕಾರಣ ಸ್ನೇಹ ಪ್ರೀತಿಗೆ ತಿರುಗಿತ್ತು. ಹಾಗಾಗಿ ಅವರು ಅಲ್ಲಿಂದ ಓಡಿಹೋಗುವ ಯೋಜನೆ ರೂಪಿಸಿದ್ದರು. ಲಕ್ನೋಗೆ ಹೋಗುವ ಮುನ್ನ ಒಂದು ವರ್ಷ ಅಯೋಧ್ಯೆಯಲ್ಲಿ ಸತ್ಯನಾರಾಯಣ ಅವರ ಜತೆ ಆಕೆ ವಾಸವಿದ್ದಳು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಕವಿತಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ನಡೆಸುತ್ತಿದ್ದಾರೆ.

    LATEST NEWS

    ಬೇರೆಯವರ ಮಾತಿಗೆ ಕಿವಿ ಕೊಡದೆ ಇರುವುದು ಹೇಗೆ ? ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.. !

    Published

    on

    ಮಂಗಳೂರು: ಅಂದುಕೊಂಡಂತೆ ಬದುಕಬೇಕು ಎಂದು ಜೀವನದಲ್ಲಿ ಪ್ರತಿಯೊಬ್ಬರು ಅಂದುಕೊಳ್ಳುತ್ತಾರೆ. ಆದರೆ ಎಷ್ಟೋ ಸಲ ನಮ್ಮ ಸುತ್ತಮುತ್ತಲಿನ ಜನರೇ ನಾವು ಮಾಡುವ ಕೆಲಸದ ಬಗ್ಗೆ ಕೊಂಕು ಮಾತನಾಡುತ್ತಾರೆ. ಇಲ್ಲದಿದ್ದರೆ ಅವರ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಇಂತಹ ಜನರ ಮಾತಿನ ಬಗ್ಗೆ ಗಮನ ಕೊಡದೇ ನಮ್ಮ ಪಾಡಿಗೆ ನಾವು ಇರುವುದಕ್ಕೆ ಯತ್ನಿಸಬೇಕು.

    ಅವರು ಏನಂತಾರೋ, ಇವರೇನು ಅಂತಾರೋ ಎಂದು ಯಾವ ಕೆಲಸಕ್ಕೆ ಕೈಹಾಕಿದರೂ ಕೂಡ ಯೊಚಿಸ್ತಾ ಕಾಲ ಕಳೆತಾ, ನಾನೇನಾದ್ರೂ ತಪ್ಪು ಮಾಡ್ತಾ ಇದ್ದೇನಾ ಹೀಗೆ ನಾನಾ ರೀತಿಯ ಯೋಚನೆಗಳು ತಲೆಯಲ್ಲಿ ಓಡಾಡುತ್ತದೆ. ಇದರಿಂದ ಅಂದುಕೊಂಡ ಕೆಲಸವು ಅಪೂರ್ಣವಾಗುತ್ತದೆ. ಅದಲ್ಲದೇ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಬೇರೆಯವರು ಏನಂದುಕೊಳ್ಳುತ್ತಾರೋ ಎನ್ನುವ ಬಗ್ಗೆ ಯೋಚಿಸದೇ ಇರುವುದು ಒಳ್ಳೆಯದು.
    ಜೀವನಕ್ಕೆ ಏನು ಬೇಕು ಏನು ಬೇಡ ಎನ್ನುವ ಬಗ್ಗೆ ನಿಮ್ಮಷ್ಟು ಅರಿತುಕೊಂಡವರು ಯಾರು ಇಲ್ಲ. ಎಲ್ಲರಿಗೂ ಕೂಡ ವಿಭಿನ್ನ ಆದ್ಯತೆಗಳಿರುತ್ತದೆ. ಹೀಗಾಗಿ ನೀವು ಏನು ಮಾಡುತ್ತಿದ್ದೀರಿ ಮತ್ತು ಏಕೆ ಮಾಡುತ್ತಿದ್ದೀರಿ ಎಂಬ ಬಗ್ಗೆ ತಿಳಿದಿರಲಿ. ಬೇಡದವರ ಮಾತಿಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು, ಸ್ವಂತ ಆಲೋಚನೆಯಲ್ಲಿಯೇ ಮುಂದುವರೆಯಿರಿ. ಬೇರೆಯವರ ಮಾತನ್ನು ಅಭಿಪ್ರಾಯವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದು ಸರಿಯಲ್ಲ.
    ಕೆಲವೊಮ್ಮೆ ಕೈಗೊಂಡಿರುವ ನಿರ್ಧಾರದ ಬಗ್ಗೆ ಬೇರೆಯವರ ಬಳಿ ಅಭಿಪ್ರಾಯ ಅಥವಾ ಸಲಹೆಯನ್ನು ಕೇಳುತ್ತೇವೆ. ಆದರೆ ಸುತ್ತಮುತ್ತಲಿನ ವ್ಯಕ್ತಿಗಳು ಯೋಚಿಸುವ ರೀತಿಯು ಭಿನ್ನವಾಗಿರುವುದರಿಂದ ಅವರು ನೀಡುವ ಸಲಹೆ ಸೂಚನೆಗಳು ಸರಿಯೆನಿಸದೇ ಇರಬಹುದು. ಹೀಗಾಗಿ ನಾವೇನು ಮಾಡಬೇಕು ಎನ್ನುವ ಬಗ್ಗೆ ಸ್ಪಷ್ಟ ಚಿತ್ರಣವಿರಲಿ.
    ನಮ್ಮ ಸುತ್ತ ಮುತ್ತಲಿನ ವ್ಯಕ್ತಿಗಳು ಏನೇ ಮಾತನಾಡಿದರೂ ಕೂಡ ಅವರಿಗೆ ತೋಚಿದ್ದನ್ನೇ ಮಾತನಾಡುತ್ತಾರೆ. ಹೀಗಾಗಿ ಜನರ ಯೋಚನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಹಾಗೂ ನಿಯಂತ್ರಿಸಲು ಆಗುವುದಿಲ್ಲ ಎನ್ನುವ ವಾಸ್ತವವನ್ನು ಅರಿತುಕೊಳ್ಳಬೇಕು. ನಾವು ಸದಾ ಚಟುವಟಿಕೆಯಿಂದ ಇದ್ದು, ಅವರಿರವರ ಅಭಿಪ್ರಾಯಕ್ಕೆ ಗಮನ ಕೊಡದೆ ನಮ್ಮ ದಾರಿಯಲ್ಲಿ ಮುಂದುವರೆಯುತ್ತಿರಬೇಕು.
    ಎಲ್ಲರೂ ಪರಿಪೂರ್ಣರಾಗಿರಲು ಸಾಧ್ಯವಿಲ್ಲ: ಈ ಲೋಕದಲ್ಲಿ ಪರಿಪೂರ್ಣವಾದ ವ್ಯಕ್ತಿ ಯಾರು ಇಲ್ಲ. ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಶ್ರಮವಹಿಸಿ ಮಾಡಬೇಕು, ಎಲ್ಲ ಕೆಲಸದಲ್ಲಿ ಪರಿಪೂರ್ಣತೆಯನ್ನು ಬಯಸಬಾರದು. ಕೆಲಸದಲ್ಲಿ ತಪ್ಪಾದಾಗ ಸರಿ ಪಡಿಸಿಕೊಂಡು ಮುಂದೆ ಸಾಗುವುದು ಮುಖ್ಯ. ಅವರಿವರ ಕೊಂಕು ಮಾತನ್ನು ಪರಿಗಣಿಸಬಾರದು.
    ಹೆಚ್ಚಿನವರು ಬೇರೆಯವರ ಅಭಿಪ್ರಾಯಗಳಿಗೆ ಬೆಲೆ ಕೊಟ್ಟು, ಅದರಂತೆ ನಡೆದುಕೊಳ್ಳುತ್ತಾರೆ. ಆದರೆ ನಮ್ಮ ಜೀವನ ಗೊತ್ತುಗುರಿಗಳ ಬಗ್ಗೆ ನಮಗೆ ತಿಳಿದಿರುವಷ್ಟು ಬೇರೆ ಯಾರು ತಿಳಿದವರಿಲ್ಲ. ಹೀಗಾಗಿ ನಮ್ಮ ಅಭಿಪ್ರಾಯಗಳು, ನಿರ್ಧಾರಗಳು ಸರಿಯಾಗಿರಬಹುದು. ಬೇರೆಯವರು ಯೋಚಿಸುವ ವಿಧಾನಗಳು ತಪ್ಪಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಮೇಲೆ ನಮಗೆ ನಂಬಿಕೆಯಿರಬೇಕು.
    ಬೇರೆಯವರನ್ನು ಮೆಚ್ಚಿಸುವ ಸಲುವಾಗಿ ಯಾವುದೇ ಕೆಲಸವನ್ನು ಮಾಡಬಾರದು. ಗುರಿ ತಲುಪಲು ಸುಲಭವಾಗುವ ರೀತಿಯಲ್ಲಿ ನಿರ್ಧಾರವನ್ನು ಕೈಗೊಳ್ಳಬೇಕು. ನಾವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಅವರಿವರ ಜೊತೆಗೆ ಚರ್ಚಿಸುವುದು ಬೇಡ. ಏಕೆಂದರೆ ಅವರ ಮೂಗಿನ ನೇರಕ್ಕೆ ಅವರು ಮಾತನಾಡುವ ಸಾಧ್ಯತೆಯೇ ಹೆಚ್ಚು.

     

    Continue Reading

    FILM

    ಎರಡನೇ ಮದುವೆಯಾಗುತ್ತಿರುವ ಬಿಗ್‌ಬಾಸ್ ಕಂಟೆಸ್ಟೆಂಟ್

    Published

    on

    ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್ ಮೂಲಕ ತಮ್ಮ 4 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿಯ ಮದುವೆ ಕುರಿತು ಕೆಲ ಕಿರಾತಕರು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ.

    ಹೌದು.. ಸಹಜ ಅಭಿನಯ ಮತ್ತು ಸರಳ ಸೌಂದರ್ಯದಿಂದಲೇ ಸ್ಯಾಂಡಲ್‌ವುಡ್‌ನ ಕ್ರಶ್ ಎನಿಸಿಕೊಂಡ ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಯನ್ನೂ ಕೆಲವರು ತೇಲಿ ಬಿಟ್ಟಿದ್ದಾರೆ. ಹೀಗೆ ಹಬ್ಬಿಸಲಾದ ಈ ಸುಳ್ಳು ಸುದ್ದಿಯನ್ನೂ ಅನೇಕರು ನಿಜಾ ಎಂದುಕೊಂಡಿದ್ದಾರೆ.

    ನಿವೇದಿತಾ ಗೌಡ ಅವರಿಂದ ದೂರವಾದ ಚಂದನ್ ಶೆಟ್ಟಿ ಮತ್ತು ಕನ್ನಡ ಚಿತ್ರರಂಗದಲ್ಲಿ ನೆಲೆಯೂರುತ್ತಿರುವ ಸಂಜನಾ ಆನಂದ್‌ಗೆ ಶುಭಾಶಯವನ್ನೂ ಕೋರುತ್ತಿದ್ದಾರೆ. ಇದೀಗ ಈ ಸುದ್ದಿಯ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆಯನ್ನು ನೀಡಿರುವ ಸಂಜನಾ ಆನಂದ್, ಚಂದನ್ ಶೆಟ್ಟಿ ಜೊತೆ ನಾನು ಮದುವೆಯಾಗುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದಾರೆ. ಈ ತರಹದ ಸುಳ್ಳು ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದಾರೆ.

    ಚಂದನ್ ಶೆಟ್ಟಿ ಸೂತ್ರಧಾರಿ ಎಂಬ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಸಂಜನಾ ಆನಂದ್ ಕೂಡ ಇದ್ದಾರೆ. ಹಾಡೊಂದಕ್ಕೆ ಹೆಜ್ಜೆಯನ್ನೂ ಹಾಕಿದ್ದಾರೆ.

    Continue Reading

    LATEST NEWS

    ಮಂಗಳೂರು: ನ. 16ರಂದು ಶಕ್ತಿ ಫೆಸ್ಟ್ -2024

    Published

    on

    ಮಂಗಳೂರು: ಶಕ್ತಿನಗರದ ಶಕ್ತಿ ಎಜ್ಯುಕೇಶನ್‌ ಟ್ಟಸ್ಟ್‌ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಹೈಸ್ಕೂಲು ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳ ಕಲಾ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ‘ಶಕ್ತಿ ಫೆಸ್ಟ್‌’ ಕಾರ್ಯಕ್ರಮ ಮುಂದಿನ ನವೆಂಬರ್‌ 16 ರಂದು ಶಕ್ತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ.

    ಶಕ್ತಿ ಎಜ್ಯುಕೇಶನ್‌ ಟ್ರಸ್ಟ್ ನ ಪ್ರಧಾನ ಸಲಹೆಗಾರ ರಮೇಶ್ ಕೆ. ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಮಾಹಿತಿ ನೀಡಿ, ಶಕ್ತಿ ಫೆಸ್ಟ್‌ನಲ್ಲಿ ಹೈಸ್ಕೂಲು ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ತಲಾ 7 ಸ್ಪರ್ಧೆಗಳು ನಡೆಯಲಿವೆ. ಒಂದು ಶಾಲೆ ಅಥವಾ ಕಾಲೇಜಿನಿಂದ ಒಂದು ತಂಡಕ್ಕೆ ಮಾತ್ರ ಭಾಗವಹಿಸಲು ಅವಕಾಶವಿದೆ.

    ಒಬ್ಬ ವಿದ್ಯಾರ್ಥಿಯು ತಲಾ ಎರಡು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳ ಬಹುದಾಗಿದೆ. ಒಂದು ತಂಡದಲ್ಲಿ ಗರಿಷ್ಠ ಅಂದರೆ 25 ಮಂದಿ ವಿದ್ಯಾರ್ಥಿಗಳು ಭಾಗವಹಿಸ ಬಹುದಾಗಿದೆ. ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ತಲಾ 100 ರೂಪಾಯಿ ನೋಂದಣಿ ಶುಲ್ಕ ನಿಗದಿ ಪಡಿಸಲಾಗಿದೆ. ಸ್ಪರ್ಧೆಗೆ ಹೆಸರು ನೊಂದಾಯಿಸಲು ನವೆಂಬರ್‌ 11 ಕೊನೆಯ ದಿನಾಂಕವಾಗಿರುತ್ತದೆ. ಸ್ಪರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದರು.

    ಸುದ್ದಿಗೋಷ್ಠಿಯಲ್ಲಿ ಶಕ್ತಿ,ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶಮೂರ್ತಿ ಎಚ್., ಶಕ್ತಿ ರೆಸಿಡೆನ್ಶಿಯಲ್‌ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್‌, ಶಕ್ತಿ ಫೆಸ್ಟ್‌ ಸಂಚಾಲಕಿ ಸಬಿತಾ ಕಾಮತ್‌ ಉಪಸ್ಥಿತರಿದ್ದರು.

    Continue Reading

    LATEST NEWS

    Trending