Thursday, March 23, 2023

ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಖರ್ಗೆಯನ್ನು ಅಭಿನಂದಿಸಿದ ಸಚಿವ ಸುನಿಲ್ ಕುಮಾರ್

ಬೆಂಗಳೂರು: 24 ವರ್ಷಗಳ ನಂತರ ಗಾಂಧಿಯೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಆಯ್ಕೆ ಬಗ್ಗೆ ಯಾವುದೇ ವಿವಾದವಿಲ್ಲ. ಆದ್ರೆ ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಆಯ್ಕೆ ನಡೆದಿದೆ. 75 ವರ್ಷದ ಬಳಿಕ ಕಾಂಗ್ರೆಸ್ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದೆ’ ಎಂದು ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.


ಇಂದು ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ‌ ಮಾತನಾಡಿದ ಅವರು ‘ಶಶಿ ತರೂರ್ ಚುನಾವಣಾ ಪ್ರಕ್ರಿಯೆ ಪ್ರಶ್ನೆ ಮಾಡಿದಾರೆ. ಬಿಜೆಪಿಯಲ್ಲಿ ಪ್ರತೀ‌ ಮೂರು ವರ್ಷಕ್ಕೆ ಚುನಾವಣೆ ನಡೆಯುತ್ತದೆ. ನಮ್ಮಲ್ಲಿ ಪ್ರಧಾನಿ ಸ್ಥಾನದವರೆಗೂ ಆಂತರಿಕ ಪ್ರಜಾಪ್ರಭುತ್ವದಲ್ಲೇ ಆಯ್ಕೆ ಮಾಡುತ್ತೇವೆ’ ಎಂದರು.

ಇನ್ನು ರಾಮಮಂದಿರ ಸ್ಫೋಟಕ್ಕೆ ಪಿಎಫ್ಐ ಸಂಚು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ತುಷ್ಟೀಕರಣದ ರಾಜಕಾರಣಕ್ಕೆ ಪಿಎಫ್ಐ ಅನ್ನು ದೇಶದಲ್ಲಿ ಬೆಂಬಲಿಸಲಾಗ್ತಿದೆ.

ಎಲ್ಲ ರಾಜಕೀಯ ಪಕ್ಷಗಳು ಇಂಥ ಸಂಘಟನೆಗಳನ್ನು ವಿರೋಧಿಸುವವರೆಗೂ ಇಂಥ ಶಕ್ತಿಗಳು ವಿಜೃಂಭಿಸುತ್ತಿರುತ್ತವೆ.

ಪಿಎಫ್ಐ ನಿಷೇಧ ಮಾಡಿದ ಬಳಿಕ ಹಲವು ಸಂಗತಿಗಳು ಬೆಳಕಿಗೆ ಬರ್ತಿವೆ. ಪಿಎಫ್ಐ ಸಂಘಟನೆ ಭಾರತವನ್ನು ಇಸ್ಲಾಮೀಕರಣ ಮಾಡುವ ದೊಡ್ಡ ಸಂಚು ಮಾಡ್ತಿತ್ತು. ಇವತ್ತು ರಾಮಮಂದಿರವನ್ನು ಧ್ವಂಸ ಮಾಡುವ ಅಜೆಂಡಾ ಇಟ್ಟುಕ್ಕೊಂಡಿದೆ. ಈ ಅಜೆಂಡಾದ ಕಾರ್ಯತಂತ್ರವನ್ನು ಈಗ ಕೇಂದ್ರ ಸರ್ಕಾರ ವಿಫಲಗೊಳಿಸಿದೆ. ಇಡೀ ತನಿಖಾ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸ್ತೇನೆ.

ಯಾವುದೇ ಕಾರಣಕ್ಕೂ ಭಾರತವನ್ನು ಇಸ್ಲಾಮೀಕರಣ ಮಾಡಲು ಬಿಡಲ್ಲ. ನಮ್ಮದು ಹಿಂದೂ ರಾಷ್ಟ್ರ, ಹಿಂದೂ ರಾಷ್ಟ್ರವಾಗಿಯೇ ಇನ್ನಷ್ಟು‌ ಗಟ್ಟಿ ಮಾಡ್ತೇವೆ’ ಎಂದು ಖಡಕ್ಕಾಗಿ ಮಾತನಾಡಿದರು.

ಇನ್ನು ಸರ್ಕಾರ ತೀರ್ಮಾನಿಸಿದ ದೈವನರ್ತಕರಿಗೆ ಮಾಸಾಶನ ನೀಡುವ ಯೋಜನೆಯ ಬಗ್ಗೆ ಮಾತನಾಡಿ ‘ಜಾನಪದ ಅಕಾಡೆಮಿಯಿಂದ ಮಾಸಾಶನ ನೀಡಲು ತೀರ್ಮಾನಿಸಲಾಗಿದೆ.

ದೈವಾರಾಧನೆ ತುಳು ನಾಡಿನ ಅವಿಭಾಜ್ಯ ಅಂಗವಾಗಿದೆ. ಈ ಹಿನ್ನೆಲೆಯಲ್ಲಿ ದೈವ ನರ್ತಕರಿಗೆ ಮಾಸಾಶನ ನೀಡಲಾಗುವುದು.ಅರವತ್ತು ವರ್ಷ ಮೇಲ್ಪಟ್ಟವರು ಅರ್ಜಿ ಹಾಕಬೇಕು. ಅರ್ಜಿ ಸಲ್ಲಿಸಿದವರಿಗೆ ಮಾಸಾಶನ ನೀಡಲಾಗುವುದು ಎಂದು ತಿಳಿಸಿದರು.

 

LEAVE A REPLY

Please enter your comment!
Please enter your name here

Hot Topics

ಓಮನ್‌ನಲ್ಲಿ ಹೃದಯಾಘಾತದಿಂದ ಅನಿವಾಸಿ ಭಾರತೀಯ ಮಹಿಳೆ ಮೃತ್ಯು..!

ಓಮನ್‌ ನಲ್ಲಿ ಭಾರತೀಯ ಮೂಲದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೇರಳ ಕೊಟ್ಟಾಯಂನ ಮಹಿಳೆ ಸೈಮಾ ಬಾಲಕೃಷ್ಣ ಮೃತ ಮಹಿಳೆಯಾಗಿದ್ದಾಳೆ.ಓಮನ್ : ಓಮನ್‌ ನಲ್ಲಿ ಭಾರತೀಯ ಮೂಲದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೇರಳ ಕೊಟ್ಟಾಯಂನ...

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ..!

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆವರು ಜಿನೈಕ್ಯರಾಗಿದ್ದಾರೆ.ಹಾಸನ : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ...

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದ ಕುಮಟಾದ ಯುವತಿ ಡಿಡೀರ್ ನಾಪತ್ತೆ..! 

ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳನ್ನು ಸಂದರ್ಶಿಸಲು ಬಂದಿದ್ದ ಹದಿ ಹರೆಯದ ಯುವತಿ ನಾಪತ್ತೆಯಾಗಿದ್ದಾಳೆ.ಬೆಳ್ತಂಗಡಿ : ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳನ್ನು...