Connect with us

    LATEST NEWS

    ಕರ್ನಾಟಕದ 17 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ; ಎಲ್ಲೆಲ್ಲಿ?

    Published

    on

    ಮಂಗಳೂರು : ಈ ಬಾರಿ ಮಳೆರಾಯನ ಆರ್ಭಟ ಜೋರಾಗಿಯೇ ಇತ್ತು. ಮಳೆಗಾಲ ಮುಗಿದರೂ ಅವಾಗವಾಗ ಬಂದು ಹೋಗುತ್ತಿರೋ ಮಳೆ ಮತ್ತೆ ಕಾಣಿಸಿಕೊಳ್ಳಲಿದೆ  ಎಂದು ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕದ 17 ಜಿಲ್ಲೆಗಳಲ್ಲಿ ನವೆಂಬರ್ 27 ರಿಂದ ಮತ್ತೆ ಮಳೆಯಾಗಲಿದೆ ಎಂದು ಹೇಳಲಾಗಿದೆ.

    ಎಲ್ಲೆಲ್ಲಿ ಮಳೆ?

    ಈಗಾಗಲೇ ಬಿಸಿಲಿನ ಝಳಕ್ಕೆ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿವೆ. ಇದೀಗ ಮತ್ತೆ ವರುಣ ತಂಪೆರೆಯಲಿದ್ದಾನೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವೆಡೆ ಮಳೆಯಾಗುವ ಮುನ್ಸೂಚನೆ ನೀಡಿದೆ.

    ಇದನ್ನೂ ಓದಿ : ಬ್ರೇಕಪ್ ಆದ್ರೂ ಬಿಡದ ಪಾಗಲ್ ಪ್ರೇಮಿ; ನಿಮಿಷಕ್ಕೊಮ್ಮೆ ಗೂಗಲ್ ಪೇ ಮಾಡಿ ಹಿಂಸೆ..!

    ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಮಂಗಳೂರಲ್ಲಿ ಸಮುದ್ರಕ್ಕೆ ಜಿಗಿದು ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆಗೆ ಯತ್ನ

    Published

    on

    ಮಂಗಳೂರು : ಕಾಲೇಜಿನ ಪದವಿ ವಿದ್ಯಾರ್ಥಿನಿಯೊಬ್ಬಳು ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳೂರಿನ ಸೋಮೇಶ್ವರದ ರುದ್ರಬಂಡೆಯ ಸಮುದ್ರದ ಬಳಿ ನಡೆದಿದೆ. ಕೂಡಲೇ ತಡಿಯಲಿದ್ದ ಮೇಲುಗಾರರು ಯುವತಿಯನ್ನು ರಕ್ಷಿಸಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಯುವತಿ ಮಾಡೂರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸಮುದ್ರಕ್ಕೆ ಹಾರಿದ ಯುವತಿಯನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.

    ಮಂಗಳೂರಿನ ಕಾಲೇಜು ಒಂದರಲ್ಲಿ ವಿದ್ಯಾರ್ಥಿನಿಯು ಪದವಿ ಓದುತ್ತಿದ್ದಳು ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಸಿಕ್ಕ ರಕ್ಷಣಾ ಸಾಮಗ್ರಿ ಬಳಸಿ ವಿದ್ಯಾರ್ಥಿಯನ್ನು ಇದೀಗ ರಕ್ಷಣೆ ಮಾಡಲಾಗಿದೆ. ಘಟನೆಯ ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ಸುರಕ್ಷಿತವಾಗಿದ್ದಾಳೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    ಚಲಿಸುತ್ತಿರುವ ಬಸ್ಸಿನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟ ಯುವಕ

    Published

    on

    ಆಂಧ್ರಪ್ರದೇಶ: ಚಲಿಸುತ್ತಿರುವ ಆರ್‌ಟಿಸಿ ಬಸ್‌ನಲ್ಲಿ ಅಪರಿಚಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಆತಂಕ ಮೂಡಿಸಿದ್ದಾನೆ. ಆಂಧ್ರಪ್ರದೇಶದ ಶ್ರೀಕಾಳಹಸ್ತಿಯಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

    ಎರ್ಪೇಡು ಮಂಡಲದ ಅಂಜಿಮೇಡು ಬಳಿ ಯುವಕ ಬೆಳಿಗ್ಗೆ 5:30 ಕ್ಕೆ ಬಸ್ ಹತ್ತಿದ್ದಾನೆ. ಬೆಳಗಿನ ಬಸ್ ಆಗಿರುವುದರಿಂದ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ಕೇವಲ ನಾಲ್ವರು ಪ್ರಯಾಣಿಕರಿದ್ದರು. ಆ ವೇಳೆ ಹಾಸಿಗೆಯಂತಹ ಹಗ್ಗದಿಂದ ಬಸ್‌ನ ಮೇಲ್ಬಾಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕ ನೇತಾಡುತ್ತಿರುವುದನ್ನು ಕಂಡು ಸಹ ಪ್ರಯಾಣಿಕರು ಕೂಡಲೇ ಕಂಡಕ್ಟರ್‌ಗೆ ಹೇಳಿದ್ದಾರೆ.

    ಚಾಲಕ ಬಸ್‌ ನಿಲ್ಲಿಸಿ ರೇಣಿಗುಂಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    Continue Reading

    International news

    ನಿದ್ದೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ: ನಿಮಗೆ ಗೊತ್ತಾ!

    Published

    on

    ಮಂಗಳೂರು: ‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬ ಮಾತು ಕೇಳಿರಬಹುದು. ಮನುಷ್ಯ ಸರಿಯಾಗಿ ನಿದ್ದೆ ಮಾಡಿದರೆ ಉತ್ತಮ ಆರೋಗ್ಯ ಮತ್ತು ದಿನ ಪೂರ್ತಿ ಲವಲವಿಕೆಯಲ್ಲಿ ಇರುವಂತೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ನಿದ್ದೆ ಮಾಡುವ ಸಮಯ ಕಡಿಮೆಯಾಗುತ್ತಿದ್ದು, ಇದರ ಬದಲು ಮೊಬೈಲ್ ನೋಡುವ ಮೂಲಕ ಸಮಯ ಜಾಸ್ತಿಯಾಗುತ್ತಿದೆ.


    ಗ್ಲೋಬಲ್ ಸ್ಲೀಪ್ ಸಮೀಕ್ಷೆಯ ಪ್ರಕಾರ, ನೆದರ್ಲ್ಯಾಂಡ್ ಹೆಚ್ಚು ನಿದ್ರಿಸುವ ಜನರಲ್ಲಿ ಮೊದಲ ಸ್ಥಾನದಲ್ಲಿದೆ. ನೆದರ್ಲ್ಯಾಂಡ್ ಜನರು ಸರಾಸರಿ 8 ಗಂಟೆಗಳ ಕಾಲ ನಿದ್ರಿಸುತ್ತಾರೆ. ಎರಡನೇ ಸ್ಥಾನದಲ್ಲಿ ಫಿನ್ಲ್ಯಾಂಡ್ ಸ್ಥಾನ ಪಡೆದಿದೆ. ಅಲ್ಲಿನ ಜನರು ದಿನಕ್ಕೆ 8 ಗಂಟೆಗಳ ಕಾಲ ನಿದ್ರಿಸುತ್ತಾರೆ. 7 ಗಂಟೆಗಳ ಕಾಲ ನಿದ್ರಿಸುವ ಮೂಲಕ, ಮೂರನೇ ಸ್ಥಾನವನ್ನು ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ದೇಶಗಳು ಪಡೆದಿವೆ.

    ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ನ.25 ಡೆಡ್‌ಲೈನ್
    ಇನ್ನೂ ನಾಲ್ಕನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಮತ್ತು ಯುನೈಟೆಡ್ ಕಿಂಗ್ ಡಮ್ ಸ್ಥಾನ ಪಡೆದಿವೆ. ಈ ಎರಡು ದೇಶಗಳ ಜನರು 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಐದನೇ ಸ್ಥಾನವನ್ನು ಕೆನಡಾ ಮತ್ತು ಡೆನ್ಮಾರ್ಕ್ ದೇಶಗಳು ಪಡೆದುಕೊಂಡಿದೆ. ಅಲ್ಲಿನ ಜನರು ಸರಾಸರಿ 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಆರನೇ ಸ್ಥಾನದಲ್ಲಿ ಅಮೇರಿಕಾ ಪಡೆದಿದೆ. ಇಲ್ಲಿನ ಜನರು 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಇಟಲಿ ಮತ್ತು ಬೆಲ್ಜಿಯಂ ಏಳನೇ ಸ್ಥಾನ ಪಡೆದಿದೆ. ಇಲ್ಲಿನ ಜನರು ಸರಾಸರಿ 7.5 ಗಂಟೆಗಳ ಕಾಲ ನಿದ್ರಿಸುತ್ತಾರೆ ಎಂದು ಗ್ಲೋಬಲ್ ಸ್ಲೀಪ್ ಸಮೀಕ್ಷೆ ವರದಿ ನೀಡಿದೆ.
    ಭಾರತಕ್ಕೆ ಎಷ್ಟನೇ ಸ್ಥಾನ?
    ಭಾರತಕ್ಕೆ ಎಲ್ಲಾ ವಿಭಾಗದಲ್ಲಿಯೂ ಪ್ರತಿಸ್ಪರ್ಧಿ ದೇಶವೆಂದರೆ ಅದುವೇ ಚೀನಾ. ನಿದ್ದೆ ಮಾಡುವ ವಿಷಯದಲ್ಲೂ ಎರಡು ದೇಶಗಳ ಜನರು ಸರಾಸರಿಯಾಗಿ 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಹೀಗಾಗಿ, ಭಾರತ ಮತ್ತು ಚೀನಾ 11ನೇ ಸ್ಥಾನ ಪಡೆದಿದೆ. ವಯಸ್ಕರಿಗಿಂತ ಮಕ್ಕಳಿಗೆ ನಿದ್ದೆ ಅವಶ್ಯಕ. ವಯಸ್ಕರು ಕೂಡ ಕನಿಷ್ಠ 8 ತಾಸು ನಿದ್ದೆ ಮಾಡಬೇಕು ಎಂದು ಆಧ್ಯಯನ ಹೇಳುತ್ತದೆ.

    Continue Reading

    LATEST NEWS

    Trending