ಕೊಲ್ಲಂ: ಮೇಣದ ಬತ್ತಿ ಹಚ್ಚುವಾಗ ಲಂಗಕ್ಕೆ ಬೆಂಕಿ ತಗುಲಿ ವಿದ್ಯಾರ್ಥಿನಿಯೊಬ್ಬಳು ಸುಟ್ಟಗಾಯಗಳಿಂದ ಮೃತಪಟ್ಟ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಮೃತರನ್ನು ಕುನ್ನತ್ತೂರ್ ಪಶ್ಚಿಮದ ಥಾನಲ್ ಹೌಸ್ ನ ದಿವಂಗತ ಅನಿಲ್ ಮತ್ತು ಲೀನಾ ಅವರ ಏಕೈಕ ಪುತ್ರಿ ಮಿಯಾ (17) ಎಂದು ಗುರುತಿಸಲಾಗಿದೆ.
ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಕೊನೆಯುಸಿರೆಳೆದರು.
ಎಪ್ರಿಲ್ 14 ರಂದು ಕರೆಂಟ್ ಆರಿ ಹೋದ ನಂತರ ಮೇಣದ ಬತ್ತಿಯನ್ನು ಹೊತ್ತಿಸುವ ಸಂದರ್ಭ ಅಕಸ್ಮಾತ್ ಆಗಿ ಸ್ಕರ್ಟ್ ಗೆ ಬೆಂಕಿ ತಗುಲಿತು. ಆ ಸಂದರ್ಭದಲ್ಲಿ ಮನೆಯಲ್ಲಿ ಮಿಯಾ ಒಬ್ಬಳೇ ಇದ್ದಳು.
ಟಿನ್ನರ್‌ನ್ನು ಒರೆಸಿದ ಉಡುಪನ್ನು ಹುಡುಗಿ ಧರಿಸಿದ್ದಳು ಹಾಗಾಗಿ ದೇಹದಲ್ಲಿ ಹಠಾತ್ ಬೆಂಕಿಗೆ ಕಾರಣವಾಯಿತು ಎಂದು ಹೇಳಲಾಗುತ್ತದೆ.
ಮಿಯಾಳ ಅಳುವನ್ನು ಕೇಳಿದ ಸ್ಥಳೀಯರು ಅವಳನ್ನು ಸಾಸ್ತಂಕೋಟಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.
ನಂತರ ಅವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ.