ದುಬೈ: ಯಕ್ಷಗಾನ ಅಭ್ಯಾಸ ತರಗತಿ ದುಬಾಯಿ ಪ್ರಸ್ತುತ ಪಡಿಸುವ, ದುಬಾಯಿ ಯಕ್ಷೋತ್ಸವ 2022 ರ ಸಲುವಾಗಿ ತರಗತಿಯ ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಹಮ್ಮಿಕೊಂಡ ಕನ್ನಡ ಪೌರಾಣಿಕ ಯಕ್ಷಗಾನ “ಲಲಿತೋಪಖ್ಯಾನ” ದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ, ನಿನ್ನೆ ಫಾರ್ಚೂನ್ ಗ್ರೂಪ್ ನ ದುಬೈ ಗ್ರಾಂಡ್ ಹೋಟೇಲ್ ನಲ್ಲಿ ನಡೆಯಿತು.
ಅಭ್ಯಾಗತರಾಗಿ ಭಾಗವಹಿಸಿದ ಗಣ್ಯಾತಿಗಣ್ಯರು ಕಾರ್ಯಕ್ರಮದ ಕುರಿತಾಗಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಸಂಘಟಕರನ್ನು ಅಭಿನಂದಿಸುವ ಜೊತೆಗೆ ಕಾರ್ಯಕ್ರಮಕ್ಕೆ ತಮ್ಮ ಬೆಂಬಲವನ್ನು ಪ್ರಕಟಿಸುವ ಜೊತೆಗೆ, ಅರಬನಾಡಿನಲ್ಲಿರುವ ಎಲ್ಲಾ ಕನ್ನಡದ – ತುಳುವಿನ ಯಕ್ಷಗಾನ ಅಭಿಮಾನಿಗಳು, ಕಲಾಭಿಮಾನಿಗಳು ಈ ಕಾರ್ಯಕ್ರಮಕ್ಕೆ ತಮ್ಮ ಎಲ್ಲಾ ಯಥಾಸಾಧ್ಯ ಬೆಂಬಲವನ್ನು ನೀಡಬೇಕೆಂದು ಕರೆಕೊಡುವ ಜೊತೆಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಆಶೀರ್ವಚನ ಮಾಡಿದ ಪುತ್ತಿಗೆ ರಾಘವೇಂದ್ರದ ಮಠದ ಟ್ರಸ್ಟಿ, ವೀನಸ್ ಗ್ರೂಪ್ ಆಫ್ ಹೋಟೇಲ್ಸ್ ನ ಮಾಲಕರಾದ ವಾಸುದೇವ ಭಟ್ ಪುತ್ತಿಗೆ ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.
ಉದ್ಯಮಿ, ಅಬುದಾಭಿ ಕರ್ನಾಟಕ ಸಂಘದ ಅಧ್ಯಕ್ಷರೂ , ಬಂಟ ಸಮುದಾಯದ ನೇತಾರರೂ ಆದ ಸರ್ವೋತ್ತಮ ಶೆಟ್ಟಿಯವರು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲ ಗಣ್ಯರ ಮತ್ತು ಯಕ್ಷಗಾನಾಭಿಮಾನಿಗಳ ಬೆಂಬಲ ದೊರೆತರೆ ಆರ್ಥಿಕವಾಗಿ ಮತ್ತು ತುಂಬಿದ ಸಭಾಂಗಣದಲ್ಲಿ ಕಾರ್ಯಕ್ರಮ ಯಶಸ್ವಿಯಾಗುವುದು ನಿಸ್ಸಂಶಯ ಎಂಬ ಭರವಸೆ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು.
ಇದೇ ವೇಳೆ ಲಲಿತೋಪಖ್ಯಾನ –ಯಕ್ಷಗಾನ ಆಖ್ಯಾನದ ಆಮಂತ್ರಣ ಪತ್ರ- ಪ್ರವೇಶ ಪತ್ರ ಅನಾವರಣದ ಜೊತೆ ಯಕ್ಷಗಾನ ಅಭ್ಯಾಸ ತರಗತಿಯ ಕ್ರೀಡಾ ಸಂಸ್ಥೆ ಯಕ್ಷಯೋಧಾಸ್ ನ ಟೀಶರ್ಟ್ ಕೂಡ ಬಿಡುಗಡೆಗೊಳಿಸಲಾಯಿತು.
ಉದ್ಯಮಿ, ಅಬುದಾಭಿ ಕರ್ನಾಟಕ ಸಂಘದ ಅಧ್ಯಕ್ಷರೂ , ಬಂಟ ಸಮುದಾಯದ ನೇತಾರರೂ ಆದ ಸರ್ವೋತ್ತಮ ಶೆಟ್ಟಿಯವರು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲ ಗಣ್ಯರ ಮತ್ತು ಯಕ್ಷಗಾನಾಭಿಮಾನಿಗಳ ಬೆಂಬಲ ದೊರೆತರೆ ಆರ್ಥಿಕವಾಗಿ ಮತ್ತು ತುಂಬಿದ ಸಭಾಂಗಣದಲ್ಲಿ ಕಾರ್ಯಕ್ರಮ ಯಶಸ್ವಿಯಾಗುವುದು ನಿಸ್ಸಂಶಯ ಎಂಬ ಭರವಸೆ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು.
ವೇದಿಕೆಯಲ್ಲಿ ನೆರೆದಿದ್ದ ಗಣ್ಯರು ಕಾರ್ಯಕ್ರಮಕ್ಕೆ ಶುಭಾಶಯವನ್ನು ಕೋರಿದರು.
ತರಗತಿಯ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು ಕಾರ್ಯಕ್ರಮಕ್ಕೆ ಅತಿಥಿ ಕಲಾವಿದರಾಗಿ ಬರುವ, ಭಾಗವತರಾಗಿ ಶ್ರೀಯುತ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಮತ್ತು ಶ್ರೀಮತಿ ಅಮೃತ ಕೌಶಿಕ್ ರಾವ್, ಮತ್ತು ಚೆಂಡೆ-ಮದ್ದಳೆಯಲ್ಲಿ ಕಾಣಿಸಿಕೊಳ್ಳಲಿರುವ ಶ್ರೀಯುತ ಕೌಶಿಕ್ ರಾವ್ ಪುತ್ತಿಗೆ, ಶ್ರಿಯುತ ಸವಿನಯ ನೆಲ್ಲಿತೀರ್ಥ, ಪ್ರಖ್ಯಾತ ಸ್ತ್ರೀವೇಷಧಾರಿ ದೀಪಕ್ ರಾವ್ ಪೇಜಾವರ, ಪ್ರಸಾಧನ –ವೇಷಭೂಷಣ ಕಲಾವಿದರಾಗಿ ಶ್ರಿಯುತ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ನಿತಿನ್ ಕುಂಪಲರ ವಿವರವನ್ನು ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಪ್ರವೀಣ್ ಶೆಟ್ಟಿ ವಕ್ವಾಡಿ, KNRI ಅಧ್ಯಕ್ಷರು, ಫೋರ್ಚ್ಯುನ್ ಗ್ರೂಪ್ ಆಫ್ ಹೋಟೆಲ್ ದುಬೈನ ಉದ್ಯಮಿ, ತುಳು ಮತ್ತು ಕನ್ನಡ ಚಿತ್ರ ನಿರ್ಮಾಪಕರು ಹಾಗೂ ಉದ್ಯಮಿ ಹರೀಶ್ ಶೇರಿಗಾರ್, ಉದ್ಯಮಿ ವಾಸು ಭಟ್ ಪುತ್ತಿಗೆ, ಉದ್ಯಮಿ ಹರೀಶ್ ಬಂಗೇರ, ಉದ್ಯಮಿ ಗುಣಶೀಲ್ ಶೆಟ್ಟಿ, ಕರ್ನಾಟಕ ಸಂಘ ಹಾಗೂ ಬಿಲ್ಲವಾಸ್ ದುಬೈ ಇದರ ನಿಕಟಪೂರ್ವ ಅಧ್ಯಕ್ಷರಾದ ಸತೀಶ್ ಪೂಜಾರಿ, ಸೇರಿದಂತೆ ಇನ್ನೂ ಪ್ರಮುಖರು ಉಪಸ್ಥಿತರಿದ್ದರು.