ಅಂಗಡಿ ಸಿಬ್ಬಂದಿ ಮಾಲಕರಿಂದ ಪೌರಕಾರ್ಮಿಕನ ಮೇಲೆ ಭೀಕರ ಹಲ್ಲೆ..!
ಉಡುಪಿ: ಸಿಟಿ ಬಸ್ ನಿಲ್ದಾಣದ ಬಳಿ ಇರುವ ಎಲೆಕ್ಟ್ರಾನಿಕ್ಸ್ ಅಂಗಡಿಯ ಮಾಲಕ ಮತ್ತು ಸಿಬ್ಬಂದಿಗಳು ನಗರಸಭೆಯ ಪೌರಕಾರ್ಮಿಕನೊಬ್ಬನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.ಹಲ್ಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಿಶಿಷ್ಟ ಜಾತಿಯ ಪೌರಕಾರ್ಮಿಕ ಸಂಜು ಅವರ ಮೇಲೆ ಉಡುಪಿಯ ಎಲೆಕ್ಟ್ರಾನಿಕ್ಸ್ ಅಂಗಡಿ ಸಿಬ್ಬಂದಿಗಳಾದ ಇಸ್ಮಾಯಿಲ್ ಮತ್ತು ಸೊಹೈಲ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪೌರ ಕಾರ್ಮಿಕ ಕಸವನ್ನು ವಿಂಗಡಿಸಿ ನೀಡುವಂತೆ ಅಂಗಡಿಯವರಿಗೆ ತಿಳಿಸಿದಾಗ ಅಂಗಡಿಯ ಸಿಬ್ಬಂದಿಗಳು ಆತನಿಗೆ ನಿನ್ನ ಕೆಲಸ ಕಸ ತೆಗೆದುಕೊಂಡು ಹೋಗುವುದು ಅದನ್ನು ಮಾಡು ಎಂದಿದ್ದಾರೆ.
ಪೌರಕಾರ್ಮಿಕ ವಿರೋಧಿಸಿದಾಗ ಆತನ ಕೆನ್ನೆಗೆ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಂಗಡಿಯ ಮಾಲಕ ಕೂಡ ಹೊರಗೆ ಬಂದು ನಿಂದಿಸಿದ್ದಾರೆ.
ಅಷ್ಟರಲ್ಲಿ ವಿಷಯ ತಿಳಿದು ನಗರಸಭೆಯ ಅಧಿಕಾರಿಗಳು ಬಂದಿದ್ದು, ಅವರೆದುರೇ ಅಂಗಡಿಯ ಸಿಬ್ಬಂದಿಗಳು ಮತ್ತೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.