ಮೈಸೂರು: ಮದ್ವೆಯಾಗಿ ಎರಡು ಮಕ್ಕಳಿದ್ದರೂ ಯುವ ಅರ್ಚಕನೊಂದಿಗೆ ಪರಾರಿಯಾಗಿದ್ದ ಆಂಟಿಯನ್ನು ‘ಈಗ ಬರುತ್ತೇನೆಂದು’ ಹೇಳಿ ನಡುರಾತ್ರಿ ಕಾಡಿನಲ್ಲಿ ಬಿಟ್ಟು ಎಸ್ಕೇಪ್ ಆದ ಘಟನೆ ಮೈಸೂರಿನ ನಂಜನಗೂಡು ತಾಲೂಕು ಕೊಲ್ಲೂಪುರ ಗ್ರಾಮದಲ್ಲಿ ನಡೆದಿದೆ.
35 ವರ್ಷದ ಎರಡು ಮಕ್ಕಳ ತಾಯಿಯೊಬ್ಬಳು ಶಾಸ್ತ್ರ ಕೇಳಲು ಹೋದಾಗ 21 ವರ್ಷ ವಯಸ್ಸಿನ ಅರ್ಚಕ ಸಂತೋಷ್ ಎಂಬಾತನ ಪರಿಚಯವಾಗಿತ್ತು.
ಪರಿಚಯ ಸ್ನೇಹವಾಗಿ ಪ್ರೀತಿಯಾಗಿ ಮಾರ್ಪಟ್ಟಿತ್ತು. ಆಗ ಅರ್ಚಕ ಸಂತೋಷ್ ‘ಎಲ್ಲಿಗಾದರೂ ಹೋಗಾಣ ಬಾ ನಿನಗೆ ಬಾಳು ಕೊಡುವೆ’ ಎಂದು ಮರುಳು ಮಾಡಿದ್ದ,
ಪ್ರಿಯಕರನ ಮಾತಿಗೆ ಕಟ್ಟುಬಿದ್ದ ಈಕೆ ತನ್ನ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಜೂ.12ರಂದು ತವರು ಮನೆಯಿಂದ ನಾಪತ್ತೆಯಾಗಿದ್ದಳು.
ಅತ್ತ ಮಹಿಳೆಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರೆ, ಇತ್ತ ಈಕೆ ಪ್ರಿಯಕರನ ಜತೆ ಊರು ಬಿಟ್ಟು 10 ದಿನ ಜಾಲಿ ರೈಡ್ ಮಾಡಿದ್ದಳು.
ನಿನ್ನೆ (ಜೂ.22) ಏಕಾಏಕಿ ಸಂತೋಷ್ ‘ಮದ್ವೆ ಆಗೋಕೆ ನಮ್ಮ ಮನೆಯಲ್ಲಿ ಒಪ್ಪಲ್ಲ’ ಎಂದು ಉಲ್ಟಾ ಹೊಡೆದಿದ್ದಾನೆ.
ಆಗ ಈಕೆಗೆ ದಿಕ್ಕೇ ತೋಚದಂತಾಗಿತ್ತು. ಆಗ ಈಕೆ ಪ್ರಿಯಕರನ ಬಳಿ ‘ನಾವು ಎಲ್ಲಿಯಾದರೂ ದೂರ ಹೋಗಿ ಬದುಕೋಣ’ ಎಂದರೂ ಆತ ಸಮ್ಮತಿಸಿಲ್ಲ.
ನೀನು ನನಗೆ ತಾಳಿ ಕಟ್ಟು, ನಾನು ನಿನ್ನೊಂದಿಗೇ ಬಾಳುವೆ ಎಂದು ಈಕೆ ಗೋಗರೆದಾಗ ಕೊನೆಗೆ ‘ನಾವಿಬ್ಬರೂ ಸಾವಲ್ಲಿ ಒಂದಾಗೋಣ,
ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ’ ಎಂದು ರಾತ್ರಿ ವೇಳೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದ.
ಮಧ್ಯರಾತ್ರಿ 12 ಗಂಟೆ ಸುಮಾರಿಗೆ ‘ನೀನು ಇಲ್ಲೇ ಇರು ಬರ್ತೀನಿ ಒಂದೈದು ನಿಮಿಷ’ ಎಂದು ಕತ್ತಲಲ್ಲೇ ಆತ ಎಸ್ಕೇಪ್ ಆಗಿದ್ದಾನೆ.
ಪ್ರಿಯಕರನ ಬರುವಿಕೆಗಾಗಿ ಕಾದು ಕಾದು ಸುಸ್ತಾದ ಈಕೆ ಕಾಡುಪ್ರಾಣಿಗಳು, ಸರೀಸೃಪಗಳ ಭಯದಲ್ಲೇ ಬೆಳಗ್ಗೆಯವರೆಗೂ ಕಾಲ ಕಳೆದಿದ್ದಾಳೆ.
ನಂತರ ನಡೆದುಕೊಂಡೇ ಕಾಡಂಚಿಗೆ ಬಂದು ಕೂಗಿಕೊಂಡು ಕುಳಿತಿದ್ದ ಒಬ್ಬಂಟಿ ಮಹಿಳೆಯನ್ನ ಕಂಡ ಸ್ಥಳೀಯರು ಪ್ರಶ್ನಿಸಿದಾಗ ಈ ವೃತ್ತಾಂತ ಬೆಳಕಿಗೆ ಬಂದಿದೆ. ತಕ್ಷಣ ಗ್ರಾಮಸ್ಥರು, ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಪೊಲೀಸರ ಮುಂದೆ ಮಹಿಳೆ ಕಣ್ಣೀರು ಹಾಕಿ ‘ನನಗೆ ಸಂತೋಷ್ ಬೇಕು, ಆತನ ಜತೆ ಮದ್ವೆ ಮಾಡಿಸಿ. ಅವನು ಮದ್ವೆ ಆಗ್ತೀನಿ ಅಂತ
ಕರೆದುಕೊಂಡು ಬಂದು ಈಗ ನಾಪತ್ತೆಯಾಗಿದ್ದಾನೆ ಎಂದು ಕಣ್ಣೀರು ಹಾಕಿದ್ದಾಳೆ. ಸದ್ಯ ಮಹಿಳೆಯ ಮನವೊಲಿಸಿ ಪೊಲೀಸರು ಕರೆದೊಯ್ದಿದ್ದು, ಸಂತೋಷ್ಗಾಗಿ ಬಲೆ ಬೀಸಿದ್ದಾರೆ.