Sunday, July 3, 2022

ಉಡುಪಿ: ಒಂದು ವಾರದಿಂದ ಹೆದ್ದಾರಿಯಲ್ಲೇ ಬಾಕಿ ಆದ ಟ್ಯಾಂಕರ್-ಸವಾರರಿಗೆ ಕಿರಿಕಿರಿ

ಉಡುಪಿ: ಕಳೆದ ಒಂದು ವಾರದಿಂದ ಕಟಪಾಡಿಯ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್ ನಲ್ಲಿ ಟ್ಯಾಂಕರೊಂದು ತಾಂತ್ರಿಕ ಕಾರಣದಿಂದ ಕೆಟ್ಟು ಹೋದ ಪರಿಣಾಮವಾಗಿ ಹೆದ್ದಾರಿಯ ಒಂದು ಬದಿಯಲ್ಲಿ ಅಡ್ಡಲಾಗಿ ನಿಂತು ಜನರಿಗೆ ತೊಂದರೆಯಾಗುತ್ತಿದೆ.

ಕೆಟ್ಟು ನಿಂತ ಲಾರಿಯ ಅನತಿ ದೂರದಲ್ಲಿ ಬ್ಯಾರಿಗೇಟ್ ಅಳವಡಿಸಿದ್ದರೂ ಕೂಡ ಮಳೆಗಾಲದಲ್ಲಿ ಮತ್ತು ಓವರ್ ಟೇಕ್ ಮಾಡಿಕೊಂಡು ಬರುವ ವಾಹನ ಸವಾರರಿಗೆ ಇದೊಂದು ಪ್ರಾಣಸಂಕಟವಾಗಿ ಪರಿಣಮಿಸಿದೆ.

ರಾತ್ರಿಯ ಸಮಯದಲ್ಲಿ ವಾಹನ ಚಾಲನೆ ಮಾಡುವವರಿಗಂತೂ ಇದನ್ನು ದಾಟಿಕೊಂಡು ಹೋಗುವುದೇ ಒಂದು ಸಾಹಸವಾಗಿ ಬಿಟ್ಟಿದೆ.

ಇನ್ನು ಇಲ್ಲಿಂದ ಕೇವಲು 20 ಮೀಟರ್ ದೂರದಲ್ಲಿಯೇ ಕಟಪಾಡಿ ಹೊರ ಪೊಲೀಸ್ ಠಾಣೆ ಇದ್ದರೂ ಇದುವರೆಗೆ ಟ್ಯಾಂಕರ್ ತೆರವು ಕಾರ್ಯ ಯಾಕಗಿಲ್ಲ ….? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಹೆದ್ದಾರಿಯಲ್ಲಿ ಕೆಟ್ಟು ನಿಂತ ಟ್ಯಾಂಕರ್ ತೆರವು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕುವೈಟ್‌-ಮಂಗಳೂರು ಪ್ರಯಾಣಿಕನ ಜೊತೆ ಸಿಬ್ಬಂದಿ ಉದ್ಧಟತನ: ಕ್ಷಮೆ ಕೇಳಿದ ಏರ್‌ಇಂಡಿಯಾ

ಮಂಗಳೂರು: ಕುವೈಟ್‌ನಿಂದ ಮಂಗಳೂರಿಗೆ ಹೊರಡುವ ವೇಳೆ ಕುವೈಟ್‌ನ ಏರ್‌ಇಂಡಿಯಾ ಕೌಂಟರ್‌ನ ವ್ಯವಸ್ಥಾಪಕ ಉದ್ಧಟತನದ ವರ್ತನೆ ಬಗ್ಗೆ ದೂರಿದ ಮಂಗಳೂರಿಗರೊಬ್ಬರಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆ ಕ್ಷಮೆ ಕೋರಿದ ಘಟನೆ ನಿನ್ನೆ ನಡೆದಿದೆ.ಕುವೈತ್‌ನ ಅನಿವಾಸಿ ಭಾರತೀಯ,...

ಮರವಂತೆಯಲ್ಲಿ ಸಮುದ್ರಪಾಲಾದ ಕಾರು: ಓರ್ವ ಸ್ಪಾಟ್ ಡೆತ್-ಓರ್ವ ನಾಪತ್ತೆ

ಕುಂದಾಪುರ: ಚಲಿಸುತ್ತಿದ್ದ ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಮುದ್ರ ಪಾಲಾಗಿ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿ ಇಬ್ಬರು ಪ್ರಯಾಣಿಕರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದಂತಹ ದಾರುಣ ಘಟನೆ ಉಡುಪಿ...

ಮಂಗಳೂರು KSRTC ನಿಲ್ದಾಣದ ಟಾಯ್ಲೆಟ್‌ಗೆ ಹೋಗಿದ್ದ ಯುವತಿ ನಾಪತ್ತೆ..!

ಮಂಗಳೂರು: ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಮಂಗಳೂರು ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಜು.2 ರಂದು ಮುಂಜಾನೆ ನಡೆದಿದೆ. ನಾಪತ್ತೆಯಾದ ಯುವತಿಯನ್ನು ಕು. ದೀಪಿಕಾ (19) ಎಂದು ಗುರುತಿಸಲಾಗಿದೆ.ಘಟನೆ ವಿವರ ಹಾವೇರಿ ಜಿಲ್ಲೆ...