Connect with us

LATEST NEWS

ಬಸ್ ಡ್ರೈವರ್‌ನ ಕೈಹಿಡಿದ ಪಾನಿಪುರಿ ಉದ್ಯಮ: ಕಿರು ಉದ್ದಿಮೆಯಲ್ಲಿ ಸೈ ಎನ್ನಿಸಿಕೊಂಡ ಮನೋಜ್ ದಂಪತಿ

Published

on

ಪುತ್ತೂರು: ಪಾನಿಪುರಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕಾಲೇಜು ಹುಡುಗಿಯರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಎಲ್ಲರೂ ಪಾನಿಪುರಿಯನ್ನು ಇಷ್ಟಪಡುತ್ತಾರೆ.


ಒಂದು ಕಾಲದಲ್ಲಿ ಉತ್ತರ ಭಾರತದ ಪ್ರಸಿದ್ಧ ತಿನಿಸು ಆಗಿದ್ದ ಪಾನಿಪುರಿ ತಿನಿಸು ಇಂದು ದೇಶದೆಲ್ಲೆಡೆ ಬೇಡಿಕೆಯನ್ನು ಕುದುರಿಸಿಕೊಂಡಿದೆ. ರಾಜ್ಯದ ಕರಾವಳಿ ಭಾಗದಲ್ಲೂ ಇದರ ಪ್ರಭಾವ ಜೋರಾಗೇ ಇದೆ. ಬೇಡಿಕೆಗೆ ಅನುಗುಣವಾಗಿ ಪೂರಿ ಪೂರೈಕೆ ಆಗದಿದ್ದರೆ ಪಾನಿಪುರಿ ಪ್ರಿಯರು ನಿರಾಶರಾಗುವುದು ಖಚಿತ.


ಈ ಎಲ್ಲ ಡಿಮ್ಯಾಂಡ್ ಗುರುತಿಸಿ ಚಾಲಕ ವೃತ್ತಿಗೆ ತಿಲಾಂಜಲಿ ಇಟ್ಟು ಪಾನಿಪುರಿ ಉದ್ಯಮ ಆರಂಭಿಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ದಾರಂದಕುಕ್ಕು ನಿವಾಸಿ, ಮನೋಜ್. ಪಾನಿಪುರಿ ತಯಾರಿಕಾ ಘಟಕವನ್ನು ಆರಂಭಿಸಿ ಇದೀಗ ಯಶಸ್ಸಿನ ಹಾದಿಯಲ್ಲಿ ಮುನ್ನೆಡೆಯುತ್ತಿರುವ ಯಶಸ್ವಿ ಉದ್ಯಮಿ ಮನೋಜ್ ಈ ಮೊದಲು ಬಸ್ ಚಾಲಕರಾಗಿ ದುಡಿಯುತ್ತಿದ್ದರು.


ಜಿಲ್ಲೆಯಾದ್ಯಂತ ವಿವಿಧ ಭಾಗಗಳಲ್ಲಿ ಪಾನಿಪೂರಿ ತಯಾರಿಕಾ ಘಟಕಗಳನ್ನು ಸ್ಥಾಪಿಸಿರುವ ಮನೋಜ್ ಪಾನಿಪುರಿಯಿಂದಲೇ ಉತ್ತಮ ಲಾಭ ಗಳಿಸುತ್ತಿದ್ದಾರೆ. ಜತೆಗೆ, ಪಾನಿಪುರಿ ಪ್ರಿಯರಿಗೆ ನಿರಾಸೆಯಾಗದಂತೆ ವ್ಯವಹಾರ ನಡೆಸಲಾಗುತ್ತಿದೆ.


ಪುತ್ತೂರಿನ ದಾರಂದಕುಕ್ಕು ಎಂಬಲ್ಲಿ ಕಳೆದ 4 ವರ್ಷಗಳಿಂದ ಮಧ್ಯಮ ಕುಟುಂಬವೊಂದು ಪಾನಿಪೂರಿ ತಯಾರಿಕಾ ಘಟಕವನ್ನು ನಡೆಸಿಕೊಂಡು ಬರುತ್ತಿದೆ. ಈ ಕುಟುಂಬದ ಹಿರಿಯರಾದ ಮೋಹಿನಿ ಅವರ ನೇತೃತ್ವದಲ್ಲಿ ಪುತ್ರ ಮನೋಜ್ ಜೀವನೋಪಾಯಕ್ಕಾಗಿ ಪಾನಿಪೂರಿ ತಯಾರಿಕಾ ಕಿರು ಘಟಕವನ್ನು ನಡೆಸಿಕೊಂಡು ಬರುತ್ತಿದೆ.

ಮನೋಜ್ ಮಂಗಳೂರಿನಲ್ಲಿ ಸಿಟಿ ಬಸ್ಸು ಚಾಲಕನಾಗಿದ್ದುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಸುಮಾರು 5 ವರ್ಷಗಳ ಕಾಲ ಚಾಲಕನಾಗಿ ದುಡಿದು ಕಾರಣಾಂತರಗಳಿಂದ ತನ್ನ ಹುಟ್ಟೂರಾದ ಪುತ್ತೂರಿನ ದಾರಂದಕುಕ್ಕು ಮನೆಗೆ ಮರಳಿದ್ದರು.


ಈ ಸಂದರ್ಭ ಅವರು ರಿಕ್ಷಾವೊಂದರಲ್ಲಿ ಚಾಲಕನಾಗಿ ದುಡಿಯಲಾರಂಭಿಸಿದರು. ಈ ಸಂದರ್ಭ ಅವರು ಪಾನಿಪೂರಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಕಂಡುಕೊಂಡರು. ರಿಕ್ಷಾ ಚಾಲಕನಾಗಿ ಇದ್ದುಕೊಂಡೇ ದಿನಕ್ಕೆ ಮೂರ್ನಾಲ್ಕು ಕೆ.ಜಿ. ಪೂರಿಯನ್ನು ಕೈಯಲ್ಲೇ ತಯಾರಿಸಿ ಮಾರುಕಟ್ಟೆಗೆ ಒದಗಿಸುತ್ತಿದ್ದರು.

ಮನೋಜ್ ಸುಮಾರು ಎರಡೂವರೆ ವರ್ಷಗಳ ಹಿಂದೆ ಪಾನಿಪೂರಿ ತಯಾರಿಕಾ ಯಂತ್ರವನ್ನು ಖರೀದಿಸಿದರು. ಸುಮಾರು 25 ಸೆಂಟ್ಸ್‌ನಲ್ಲಿರುವ ತನ್ನ ಪುಟ್ಟ ನಿವೇಶನದಲ್ಲಿ ಮನೆ ಸಮೀಪವೇ ಶೆಡ್ ಒಂದರಲ್ಲಿ ಪಾನಿಪುರಿ ತಯಾರಿಸಲು ಆರಂಭಿಸಿದರು.

ರಿಕ್ಷಾ ಚಾಲಕ ಉದ್ಯೋಗವನ್ನು ತೊರೆದು ಪೂರಿ ತಯಾರಿಕೆಯ ಪೂರ್ಣಕಾಲಿಕ ವ್ಯವಹಾರ ನಡೆಸಲು ಆರಂಭಿಸಿದರು. ದಿನಕ್ಕೆ ಸುಮಾರು 40 ಕೆ.ಜಿ.ಯಷ್ಟು ಪೂರಿ ತಯಾರಿಸಲು ಆರಂಭಿಸಿ ತನ್ನ ಉತ್ಪನ್ನಗಳಿಗೆ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಕಡಬ ಮುಂತಾದ ಕಡೆಗಳಲ್ಲಿ ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡರು.

ಪೂರಿ ತಯಾರಿಕಾ ಯಂತ್ರ ನಡೆಸಲು ಜನರೇಟರನ್ನು ಬಳಸಬೇಕಾದ ಅನಿವಾರ್ಯತೆ ಮನೋಜ್ ಗಿತ್ತು. ಇದಕ್ಕೆ ಡೀಸೆಲ್ ಅಗತ್ಯವಿದ್ದ ಕಾರಣ ಲಾಭದಲ್ಲಿ ಬಹುಪಾಲು ಇದಕ್ಕೆ ವ್ಯಯವಾಗುತ್ತಿತ್ತು. ಇದೇ ಸಂದರ್ಭ ಸೆಲ್ಕೋ ಸಂಸ್ಥೆ ಮನೋಜ್ ಅವರ ನೆರವಿಗೆ ಧಾವಿಸಿ ಬಂದ ಕಾರಣ ಇದೀಗ ಅವರು ಪ್ರತೀದಿನ ಸುಮಾರು 70 ಕೆ.ಜಿ.ಯಷ್ಟು ಪೂರಿ ತಯಾರಿಕೆ ಮಾಡುತ್ತಿದ್ದು, ಜೀವನದಲ್ಲಿ ಹೊಸ ಬೆಳಕನ್ನು ಕಂಡುಕೊಂಡಿದ್ದಾರೆ. ಮನೋಜ್ ಅವರ ಕಿರು ಉದ್ದಿಮೆಗೆ ಕೈಜೋಡಿಸಿದವರು ಅವರ ಕೈಹಿಡಿದ ಪತ್ನಿ ಧನ್ಯಾ ಮತ್ತು ತಾಯಿ ಮೋಹಿನಿ.

ಪಾನಿಪುರಿ ತಯಾರಿಕಾ ಘಟಕವನ್ನು ಆಧುನೀಕರಣಗೊಳಿಸಬೇಕೆಂಬ ಕನಸು ಮನೋಜ್ ಅವರದ್ದು. ಆದರೇನು…? ಇದಕ್ಕೆ ಅಗತ್ಯವಿರುವ ಹಣಕಾಸನ್ನು ಹೊಂದಿಸಿಕೊಳ್ಳಲು ಈ ಕುಟುಂಬಕ್ಕೆ ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಲಭ್ಯ ಸವಲತ್ತುಗಳೊಂದಿಗೆ ಪಾನಿಪೂರಿ ತಯಾರಿಕಾ ಘಟಕವನ್ನು ನಡೆಸಿಕೊಂಡು ಬರುತ್ತಿತ್ತು. ಈ ಸಂದರ್ಭ ಅವರ ನೆರವಿಗೆ ಬಂದದ್ದು ಸೆಲ್ಕೋ ಸಂಸ್ಥೆ. ಅವರ ಕನಸನ್ನು ನನಸಾಗಿಸಲು ಅಗತ್ಯದ ನೆರವನ್ನು ನೀಡಿದ್ದು ಇದೇ ಸಂಸ್ಥೆ.

ಸೌರಚಾಲಿತ ಪಾನಿಪುರಿ ಮಾಡುವ ಯಂತ್ರವನ್ನು ಅಳವಡಿಸಲು ಸೆಲ್ಕೋ ವತಿಯಿಂದ ನೆರವನ್ನು ಒದಗಿಸಲಾಗಿದೆ. ಪೂರಿ ತಯಾರಿಕಾ ಯಂತ್ರದ ಒಟ್ಟು ಮೊತ್ತ ರೂ.3 ಲಕ್ಷ ಆಗಿದ್ದು, ಇದಕ್ಕೆ ರೂ.70 ಸಾವಿರ ಅನುದಾನ ಸೆಲ್ಕೋ ಫೌಂಡೇಶನ್ ವತಿಯಿಂದ ದೊರೆತಿದೆ.

ಉಳಿದ ಮೊತ್ತವನ್ನು ಬ್ಯಾಂಕ್ ಸಾಲ ಸಹಾಯದಿಂದ ಹೊಂದಿಸಲಾಗಿದೆ. ಸೌರಚಾಲಿತ ಪಾನಿಪುರಿ ಮಾಡುವ ಯಂತ್ರವಲ್ಲದೆ, ಅವರು ಪಾನಿಪೂರಿ ತಯಾರು ಮಾಡುವ ಕೊಠಡಿಯನ್ನು ಕೂಡ ಸೆಲ್ಕೋ ಫೌಂಡೇಶನ್‌ನ ವತಿಯಿಂದ ರೂ.5.50 ಲಕ್ಷ ಮೊತ್ತದ ಸಂಪೂರ್ಣ ಅನುದಾನದೊಂದಿಗೆ ನವೀಕರಿಸಲಾಗಿದೆ. ಸೆಲ್ಕೋದ ಈ ಸಹಾಯಗಳಿಂದ ಅವರ ಆದಾಯವೂ ಹೆಚ್ಚಿದೆ ಹಾಗೂ ಇದರಿಂದಾಗಿ ಇನ್ನೂ 5 ಜನರಿಗೆ ಉದ್ಯೋಗವೂ ದೊರಕಿದೆ.

 

BELTHANGADY

ಕಾಂಗ್ರೆಸ್ ಹಿರಿಯ ಮುಖಂಡ ವಸಂತ ಬಂಗೇರ ವಿಧಿವಶ

Published

on

ಬೆಳ್ತಂಗಡಿ: ಕಾಂಗ್ರೆಸ್ ಹಿರಿಯ ಮುಖಂಡ ಬೆಳ್ತಂಗಡಿ ಮಾಜಿ ಶಾಸಕ, ಸಚಿವ ವಸಂತ ಬಂಗೇರ(79 ವ) ಇಂದು(ಮೇ.8) ಸಂಜೆ 4 ಗಂಟೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಇವರು ಬೆಳ್ತಂಗಡಿಯಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

vasanth bangera

ಮುಂದೆ ಓದಿ..; ಹೆಚ್.ಡಿ.ರೇವಣ್ಣಗೆ ಬಿಗ್ ಶಾಕ್; 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

1946 ಜನವರಿ 15 ರಂದು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದಲ್ಲಿ ಜನಿಸಿದ ಇವರು ದಿ. ಕೇದೆ ಸುಬ್ಬ ಪೂಜಾರಿ ಹಾಗೂ ದಿ. ದೇವಕಿ ದಂಪತಿ ಪುತ್ರ. 1972 ರಲ್ಲಿ ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. 1983 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ, 1985 ರಲ್ಲಿ ಮತ್ತೆ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1989 ರಲ್ಲಿ ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಮತ್ತೆ 1994 ರಲ್ಲಿ  ಜೆಡಿಎಸ್‌ನಿಂದ ಸ್ಪರ್ಧಿಸಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸುಮಾರು 52 ವರ್ಷಗಳ ಕಾಲ ರಾಜಕೀಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ ಸೇವೆಸಲ್ಲಿಸಿದ್ದ ಬಂಗೇರರು, ಶ್ರೀ ಗುರುನಾರಾಯಣ ಸೇವಾ ಸಂಘದ ಗೌರವಾಧ್ಯಕ್ಷರಾಗಿ, ಗುರುದೇವ ಕಾಲೇಜಿನ ಅಧ್ಯಕ್ಷರಾಗಿ, ಗುರುದೇವ ಸಹಕಾರಿ ಸಂಘದ ಸ್ಥಾಪಕರಲ್ಲಿ ಓರ್ವರಾಗಿ ಕೊಡುಗೈ ದಾನಿಯಾಗಿಯಾಗಿದ್ದರು. ಮೃತರು ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಇಬ್ಬರು ಪುತ್ರಿಯರು, ಬಂಧು ವರ್ಗದವರನ್ನು ಅಗಲಿದ್ದಾರೆ.

ಮೇ. 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

Continue Reading

FILM

ಪ್ರತಿಷ್ಟಿತ ಮೆಟ್ ಗಾಲ ಸಮಾರಂಭದಲ್ಲಿ ಮಿಂಚಿದ ಆಲಿಯಾ ಭಟ್; ಆಲಿಯಾ ವಿಶಿಷ್ಟ ಉಡುಗೆಗೆ ಬೆರಗಾದ್ರು ಫ್ಯಾನ್ಸ್

Published

on

ಜಗತ್ತಿನ ವಿವಿಧ ಮನರಂಜನಾ ಕ್ಷೇತ್ರಗಳಲ್ಲಿ ತೊಡಗಿರುವ ಗಣ್ಯರು ಭಾಗಿಯಾಗುವ ಪ್ರತಿಷ್ಠಿತ ಮೆಟ್ ಗಾಲ ಸಮಾರಂಭದಲ್ಲಿ ಈ ಬಾರಿ ಆಲಿಯಾ ಭಟ್ ತನ್ನ ವಿಶಿಷ್ಟ ಉಡುಗೆಯ ಮೂಲಕ ಗಮನ ಸೆಳೆದಿದ್ದಾರೆ. ಅವರು ಸಬ್ಯಸಾಚಿ ಮುಖರ್ಜಿ ವಿನ್ಯಾಸದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅವರ ಲುಕ್‌ಗೆ ಸಾಕಷ್ಟು ಮೆಚ್ಚುಗೆ ಕೇಳಿ ಬಂದಿದೆ. ಅವರ ಸೊಗಸಾದ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.


ದೇಸಿ ಉಡುಪಿಗೂ ಟ್ರೇನ್ ವಿನ್ಯಾಸ:

ತಿಳಿ ನೀಲಿ, ಬಿಳಿ ಮಿಶ್ರಿತ ಸುಂದರ ಸೀರೆಯಲ್ಲಿದ್ದ ಉದ್ದನೆಯ ಟ್ರೇನ್ ಸೆರಗು ಸೀರೆಗೆ ಮೆರುಗು ನೀಡಿತ್ತು. ಸಾಮಾನ್ಯವಾಗಿ ಗೌನ್ ಗೆ ಇಂತಹ ಟ್ರೇನ್ ವಿನ್ಯಾಸಗೊಳಿಸಲಾಗುತ್ತದೆ. ದೇಸಿ ಉಡುಪಿಗೂ ಟ್ರೇನ್ ವಿನ್ಯಾಸಗೊಳಿಸಿ ಕಂಟೆಂಪರರಿ ಸ್ಪರ್ಶ ನೀಡಬಹುದು ಎಂದು ಆಲಿಯಾ ಭಟ್ ತೋರಿಸಿದ್ದಾರೆ.


‘ಗಾರ್ಡನ್ ಆಫ್ ಟೈಮ್’ ಡ್ರೆಸ್ ಕೋಡ್ ಗೆ ಅನುಗುಣವಾಗಿ ತಿಳಿ ಗುಲಾಬಿ ಎಂಬ್ರಾಯ್ಡರಿ ಹೂವು, ತಿಳಿ ಹಸಿರು ಎಲೆ, ಬಳಿಗಳ್ಳ ವಿನ್ಯಾಸವಿದೆ. ಸೀರೆಗೊಪ್ಪುವ ಹರಳು ಖಚಿತ ಬ್ಲೌಸ್, ಕಿವಿಗೆ ದೊಡ್ಡ ಇಯರಿಂಗ್ಸ್, ಬೈತಲೆಗೆ ಹರಳಿನ ಆಭರಣ ಧರಿಸಿದ್ದು ಮತ್ತಷ್ಟು ಮೆರುಗು ನೀಡಿತ್ತು.

ಇದನ್ನೂ ಓದಿ : ಹರಕೆ ತೀರಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ; ಅಭಯವಿತ್ತ ದೈವ!

ಆಲಿಯಾ ಪಾವತಿಸಿದ್ದು ಎಷ್ಟು?


ಮೆಟ್ ಗಾಲಾ ಫ್ಯಾಶನ್ ಹೆಸರಲ್ಲಿ ಪ್ರತಿ ವರ್ಷ ಮೇ ತಿಂಗಳ ಮೊದಲ ಸೋಮವಾರದಂದು ನಡೆಯುವ ನಿಧಿ ಸಂಗ್ರಹಣೆ ಕಾರ್ಯಕ್ರಮವಾಗಿದೆ. ಇಲ್ಲಿ ಭಾಗವಹಿಸುವವರು ಪ್ರತಿ ಟಿಕೆಟ್‌ಗೆ ಪ್ರತಿ ವ್ಯಕ್ತಿಗೆ USD 75,000 ವೆಚ್ಚವಾಗುತ್ತದೆ, ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ ಸುಮಾರು ರೂ. 63 ಲಕ್ಷ ರೂ.ಗಳಾಗುತ್ತವೆ. ಪ್ರತಿ ಸಂಪೂರ್ಣ ಟೇಬಲ್‌ನ ಬೆಲೆ ಸುಮಾರು USD 350,000, ಇದು ಸುಮಾರು ರೂ. 2 ಕೋಟಿ 92 ಲಕ್ಷವಾಗುತ್ತದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಯಾವುದೇ ಕಂಪನಿಯ ಮೂಲಕ ಹೋದರೆ, ಅವರ ವೆಚ್ಚವನ್ನು ಆ ಕಂಪನಿಗಳೇ ಭರಿಸುತ್ತವೆ.

ಆದರೆ, ವೈಯಕ್ತಿಕವಾಗಿ ಹೋದಾಗ ವ್ಯಕ್ತಿಯೇ ತಮ್ಮ ಟಿಕೆಟ್‌ಗಾಗಿ ಪಾವತಿಸುತ್ತಾರೆ. ಹೀಗಾಗಿ, ಆಲಿಯಾ ಭಟ್ ಕನಿಷ್ಠ 63 ಲಕ್ಷ ರೂ.ನಿಂದ 2 ಕೋಟಿ ರೂ.ವರೆಗೆ ಈ ಪ್ರದರ್ಶನದಲ್ಲಿ ಭಾಗವಹಿಸಲು ಸ್ವತಃ ಪಾವತಿಸಿದ್ದಾರೆ. ಈ ಬಾರಿ ಆಲಿಯಾ ಎರಡನೇ ಬಾರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Continue Reading

LATEST NEWS

ಹೆಚ್.ಡಿ.ರೇವಣ್ಣಗೆ ಬಿಗ್ ಶಾಕ್; 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

Published

on

ಬೆಂಗಳೂರು : ಸದ್ಯ ಪ್ರಜ್ವಲ್ ರೇವಣ್ಣ, ರೇವಣ್ಣ ಕೇಸ್ ಭಾರೀ ಸದ್ದು ಮಾಡುತ್ತಿದೆ. ಅತ್ತ ಲೈಂ*ಗಿಕ ದೌರ್ಜ*ನ್ಯ ನಡೆಸಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ದೇಶದಿಂದ ಪ್ರಜ್ವಲ್ ರೇವಣ್ಣ ಎಸ್ಕೇಪ್ ಆಗಿದ್ದರೆ, ಇತ್ತ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಂತ್ರಸ್ತ ಮಹಿಳೆಯೊಬ್ಬರನ್ನು ಅಪಹರಿಸಿದ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಬಂಧನವಾಗಿತ್ತು. ಬಂಧಿಸಿದ ಎಸ್ ಐಟಿ ಅಧಿಕಾರಿಗಳು ಅವರನ್ನು ತಮ್ಮ ವಶಕ್ಕೂ ಪಡೆದಿದ್ದರು.

ಮೇ. 8 ರ ವರೆಗೆ ಎಸ್ ಐ ಟಿ ವಶಕ್ಕೆ ಕೋರ್ಟ್ ನೀಡಿತ್ತು. ಇಂದು ರೇವಣ್ಣ ಎಸ್ ಐ ಟಿ ವಶದ ಅವಧಿ ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಇದನ್ನೂ ಓದಿ  : ಖಾಸಗಿ ಕಾಲೇಜಿನ ಮಹಿಳಾ ಟಾಯ್ಲೆಟ್ ನಲ್ಲಿ ಮೊಬೈಲ್ ಪತ್ತೆ; ಆರೋಪಿ ಬಂಧನ

ವಿಚಾರಣೆ ನಡೆಸಿದ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

Continue Reading

LATEST NEWS

Trending