ಮಂಗಳೂರು: ಬಿಜೆಪಿ ಕಾರ್ಯಕರ್ತ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಚಿವ ಈಶ್ವರಪ್ಪ ಬಂಧನಕ್ಕೆ ಮತ್ತು ನ್ಯಾಯಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಇಂದು ಸಂಜೆ ನಗರದ ಓಷಿಯನ್ ಪರ್ಲ್ ಹೋಟೆಲ್ ಎದುರು ಬಿಜೆಪಿ ನಾಯಕರ ವಿರುದ್ಧ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ಮುಖ್ಯಮಂತ್ರಿ ಬಸವರಾಜ್ ಮತ್ತು ಬಿಜೆಪಿ ರಾಜ್ಯ ಘಟಕದ ನಾಯಕರುಗಳ ಸಭೆ ನಡೆಯುತ್ತಿದ್ದ ಸಂದಂರ್ಭದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಮಿಥುನ್ ರೈ ನೇತ್ರತ್ವದಲ್ಲಿ ಹೋಟೇಲ್ ಗೆ ನುಗ್ಗಲು ಯತ್ನಿಸಿದ್ದಾರೆ.
ಅಷ್ಟೇ ಅಲ್ಲದೆ ಕಜಪ್ಪು ಬಾವುಟವನ್ನು ಹಾರಿಸುವುದರ ಮೂಲಕ ಘೋಷಣೆಯನ್ನು ಕೂಡ ಕೂಗಿದರು.
ಏಕಾಏಕಿ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ನೋಡಿದ ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಇತರ ಅಧಿಕಾರಿಗಳು ಒಂದು ಕ್ಷಣ ಅವಕ್ಕಾಗಿದ್ದಾರೆ.
ಬಳಿಕ ಪೊಲೀಸರು ಧಾವಿಸಿ ಬಂದು ಕಾರ್ಯಕರ್ತರನ್ನು ತಡೆದು ಬಂಧಿಸಿದ್ದು, ಸ್ಥಳದಲ್ಲಿ ಇದೀಗ ಬಿಗಿ ಪೊಲೀಸ್ ಬಂದೋಸಬಸ್ತನ್ನು ಏರ್ಪಡಿಸಲಾಗಿದೆ.